logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Weather: ಧಾರವಾಡ, ಚಿಂತಾಮಣಿ, ದಾವಣಗೆರೆಯಲ್ಲಿ ಕನಿಷ್ಠ ತಾಪಮಾನ ಕುಸಿತ, ಹೆಚ್ಚಿದ ಚಳಿ: ಕರ್ನಾಟಕದ ಇತರೆಡೆ ಹೇಗಿದೆ

Karnataka Weather: ಧಾರವಾಡ, ಚಿಂತಾಮಣಿ, ದಾವಣಗೆರೆಯಲ್ಲಿ ಕನಿಷ್ಠ ತಾಪಮಾನ ಕುಸಿತ, ಹೆಚ್ಚಿದ ಚಳಿ: ಕರ್ನಾಟಕದ ಇತರೆಡೆ ಹೇಗಿದೆ

Umesha Bhatta P H HT Kannada

Dec 29, 2023 06:37 AM IST

google News

ಧಾರವಾಡದಲ್ಲಿ ಬೆಳಿಗ್ಗೆಯೇ ಚಳಿಯ ವಾತಾವರಣ ಕೊಂಚ ಅಧಿಕವಾಗಿಯೇ ಇದೆ.

    • Weather Updates ಕರ್ನಾಟಕದ ಕರಾವಳಿ ಭಾಗ ಹೊರತುಪಡಿಸಿದರೆ ಬಹುತೇಕ ಕಡೆ ಕನಿಷ್ಠ ತಾಪಮಾನ ಕಡಿಮೆಯೇ ಇತ್ತು. ಧಾರವಾಡ, ದಾವಣಗೆರೆಯಲ್ಲಿ ಕುಸಿತ ಕಂಡು ಬಂದಿತು.
ಧಾರವಾಡದಲ್ಲಿ ಬೆಳಿಗ್ಗೆಯೇ ಚಳಿಯ ವಾತಾವರಣ ಕೊಂಚ ಅಧಿಕವಾಗಿಯೇ ಇದೆ.
ಧಾರವಾಡದಲ್ಲಿ ಬೆಳಿಗ್ಗೆಯೇ ಚಳಿಯ ವಾತಾವರಣ ಕೊಂಚ ಅಧಿಕವಾಗಿಯೇ ಇದೆ.

ಬೆಂಗಳೂರು: ಧಾರವಾಡ, ಚಿಂತಾಮಣಿ ಹಾಗೂ ದಾವಣಗೆರೆಯಲ್ಲಿ ಕನಿಷ್ಠ ತಾಪಮಾನದಲ್ಲಿ ಕುಸಿತ ಕಂಡು ಚಳಿಯ ವಾತಾವರಣ ಹೆಚ್ಚಿದೆ. ವಿಜಯಪುರದಲ್ಲಿ ಯಥಾರೀತಿ ಕನಿಷ್ಠ ತಾಪಮಾನ ದಾಖಲಾಗಿದ್ದು. ಅಲ್ಲಿಯೂ ಬೆಳಗಿನ ಚಳಿ ಪ್ರಮಾಣ ಅಧಿಕವಾಗಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಂಡ್ಯ, ಚಾಮರಾಜನಗರ, ಹಾಸನ ಭಾಗದಲ್ಲೂ ಚಳಿ ವಾತಾವರಣವೇ ಇದ್ದರೆ, ಬೆಂಗಳೂರು, ಮೈಸೂರು ಕನಿಷ್ಠ ಉಷ್ಣಾಂಶದಲ್ಲಿ ಕೊಂಚ ಏರಿಕೆಯಾಗಿ ಚಳಿ ಕಡಿಮೆಯಾಗಿದೆ.

ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕೇಂದ್ರವು ನೀಡಿರುವ ಮುನ್ಸೂಚನೆ ಪ್ರಕಾರ ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಕನಿಷ್ಠ ತಾಪಮಾನದ ಪ್ರಮಾಣವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗಬಹುದು.

ವಿಜಯಪುರ ಕನಿಷ್ಠ

ಗುರುವಾರದಂದು ವಿಜಯಪುರದಲ್ಲಿಯೇ ಕರ್ನಾಟಕದಲ್ಲಿಯೇ ಅತಿ ಕಡಿಮೆ ಅಂದರೆ 10.5 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶವು ಕಂಡು ಬಂದಿತು. ಈ ಭಾಗದಲ್ಲಿ ಬೆಳಗಿನ ಚಳಿ ಪ್ರಮಾಣ ಸತತ ಎರಡು ತಿಂಗಳಿನಿಂದ ಇದೇ ಪ್ರಮಾಣದಲ್ಲಿದೆ. ಹೆಚ್ಚಿನ ಸಮತಟ್ಟಾದ ಪ್ರದೇಶದ ಕಾರಣದಿಂದ ಈ ಭಾಗದಲ್ಲಿ ಚಳಿ ಅಧಿಕವಾಗಿದೆ.

ಧಾರವಾಡದಲ್ಲಿ ಕನಿಷ್ಠ ತಾಪಮಾನದಲ್ಲಿ ಕುಸಿತ ಕಂಡು ಬಂದು ಚಳಿ ಪ್ರಮಾಣ ಹೆಚ್ಚೇ ಇತ್ತು. ಗುರುವಾರ ಧಾರವಾಡದಲ್ಲಿ ದಾಖಲಾದ ಕನಿಷ್ಠ ಉಷ್ಣಾಂಶದ ಪ್ರಮಾಣ 11.4 ಡಿಗ್ರಿ ಸೆಲ್ಸಿಯಸ್‌. ಗದಗ, ಬಾಗಲಕೋಟೆ ಹಾಗೂ ಹಾವೇರಿಯಲ್ಲಿ ತಲಾ 14 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ತಾಪಮಾನ ಕಂಡು ಬಂದಿತು.

ಬೀದರ್‌ನಲ್ಲಿ 14.4 ಡಿಗ್ರಿ, ಬೆಳಗಾವಿ ವಿಮಾನ ನಿಲ್ದಾಣದಲ್ಲಿ 15.4 ಡಿಗ್ರಿ, ಕೊಪ್ಪಳದಲ್ಲಿ 15.7 ಡಿಗ್ರಿ, ಬೆಳಗಾವಿ ನಗರದಲ್ಲಿ 17.5 ಡಿಗ್ರಿ, ಕಲಬುರಗಿ ಹಾಗೂ ರಾಯಚೂರಿನಲ್ಲಿ ತಲಾ 18 ಡಿಗ್ರಿ ಸೆಲ್ಸಿಯಸ್‌ನ್ಟು ಕನಿಷ್ಠ ತಾಪಮಾನವಿತ್ತು.

ದಾವಣಗೆರೆಯಲ್ಲಿ ಕುಸಿತ

ದಕ್ಷಿಣ ಭಾಗದಲ್ಲಿ ಚಿಂತಾಮಣಿಯಲ್ಲಿ 13.1 ಡಿಗ್ರಿ ಹಾಗೂ ದಾವಣಗೆರೆಯಲ್ಲಿ 13.5 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ತಾಪಮಾನ ಕಂಡು ಬಂದಿತು. ದಾವಣಗೆರೆ ಭಾಗದಲ್ಲೂ ಕೆಲ ದಿನಗಳಿಂದ ಚಳಿ ಪ್ರಮಾಣ ಕೊಂಚ ಹೆಚ್ಚೇ ಇದೆ.

ಚಿಕ್ಕಮಗಳೂರಿನಲ್ಲಿ ಯಥಾರೀತಿ 14 ಡಿಗ್ರಿ, ಕೋಲಾರದ ಚಿಕ್ಕನಹಳ್ಳಿಯಲ್ಲಿ 14.4 ಡಿಗ್ರಿ, ಹಾಸನದಲ್ಲಿ 14.6 ಡಿಗ್ರಿ, ಶಿವಮೊಗ್ಗದಲ್ಲಿ 15 ಡಿಗ್ರಿ, ಚಿತ್ರದುರ್ಗದಲ್ಲಿ 15.2 ಡಿಗ್ರಿ, ಮಂಡ್ಯದಲ್ಲಿ 15.3 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು.

ಚಾಮರಾಜನಗರ ಹಾಗೂ ಮಡಿಕೇರಿಯಲ್ಲಿ 16.3 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾದರೆ, ಮೈಸೂರಿನಲ್ಲಿ 19 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿತ್ತು.

ಕರಾವಳಿ ಭಾಗದ ಕಾರವಾರ ಹಾಗೂ ಮಂಗಳೂರು ವಿಮಾನ ನಿಲ್ದಾಣ ಭಾಗದಲ್ಲಿ 21.6 ಡಿಗ್ರಿ, ಮಂಗಳೂರಿನ ಪಣಂಬೂರಿನಲ್ಲಿ 20.3 ಡಿಗ್ರಿ, ಹೊನ್ನಾವರದಲ್ಲಿ 22.6 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶವಿತ್ತು.

ಬೆಂಗಳೂರು ಹವಾಮಾನ

ಬೆಂಗಳೂರು ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಗರಿಷ್ಣ ಹಾಗೂ ಕನಿಷ್ಠ ಉಷ್ಣಾಂಶದ ಪ್ರಮಾಣ ಗುರುವಾರ ಯಥಾರೀತಿಯಾಗಿತ್ತು. ಬೆಂಗಳೂರು ನಗರ ಪ್ರದೇಶದಲ್ಲಿ ಕನಿಷ್ಠ ಉಷ್ಣಾಂಶವು 17.4 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದರೆ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತಮುತ್ತ 15.4 ಡಿಗ್ರಿ, ಎಚ್‌ಎಎಲ್‌ ವಿಮಾನ ನಿಲ್ದಾಣದ ಸುತ್ತುಮುತ್ತಲ ಪ್ರದೇಶದಲ್ಲಿ 16 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶವಿತ್ತು.

ಮುಂದಿನ 48 ಗಂಟೆಗಳಲ್ಲಿ ಅಂದರೆ ಭಾನುವಾರ ಬೆಳಿಗ್ಗೆವರೆಗೆ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವವೇ ಮಂಜು ಮುಸುಕಿದ, ದಟ್ಟ ಮಂಜು ಕವಿದ ವಾತಾವರಣವಿರಲಿದೆ. ನಗರ ಹಾಗೂ ಸುತ್ತಮುತ್ತಲ ಭಾಗದಲ್ಲಿ ಗರಿಷ್ಠ ಉಷ್ಣಾಂಶವು 28 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಉಷ್ಣಾಂಶವು 16 ಡಿಗ್ರಿ ಸೆಲ್ಸಿಯಸ್‌ನಷ್ಟು ಇರಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರವು ತಿಳಿಸಿದೆ.

===

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ