logo
ಕನ್ನಡ ಸುದ್ದಿ  /  Karnataka  /  Kcet 2022 Revised Result To Be Released Today; How To Check, Download Result Here Is The Detail

KCET 2022 revised result: ಸಿಇಟಿ ಪರಿಷ್ಕೃತ ಫಲಿತಾಂಶ ಇಂದು ಪ್ರಕಟ ಸಾಧ್ಯತೆ; ಚೆಕ್‌ ಮಾಡೋದು ಹೇಗೆ? ಇಲ್ಲಿದೆ ವಿವರ

HT Kannada Desk HT Kannada

Oct 01, 2022 12:04 PM IST

ಇಂಜಿನಿಯರಿಂಗ್ ಆಕಾಂಕ್ಷಿಗಳಿಗೆ ಕೆಸಿಇಟಿಯ ಪರಿಷ್ಕೃತ ಶ್ರೇಣಿಯನ್ನು ಅಕ್ಟೋಬರ್ 1 ರಂದು ಕೆಇಎ ಬಿಡುಗಡೆ ಮಾಡಲಿದೆ. (ಸಾಂಕೇತಿಕ ಚಿತ್ರ)

  • KCET 2022 revised result: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ಕೆಇಎ (KEA) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಷ್ಕೃತ ಫಲಿತಾಂಶಗಳನ್ನು ಇಂದು ಬಿಡುಗಡೆ ಮಾಡಲಿದೆ. KCET 2022 ರ ಪರಿಷ್ಕೃತ ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ? ಇಲ್ಲಿದೆ ಮಾಹಿತಿ. 

ಇಂಜಿನಿಯರಿಂಗ್ ಆಕಾಂಕ್ಷಿಗಳಿಗೆ ಕೆಸಿಇಟಿಯ ಪರಿಷ್ಕೃತ ಶ್ರೇಣಿಯನ್ನು ಅಕ್ಟೋಬರ್ 1 ರಂದು ಕೆಇಎ ಬಿಡುಗಡೆ ಮಾಡಲಿದೆ. (ಸಾಂಕೇತಿಕ ಚಿತ್ರ)
ಇಂಜಿನಿಯರಿಂಗ್ ಆಕಾಂಕ್ಷಿಗಳಿಗೆ ಕೆಸಿಇಟಿಯ ಪರಿಷ್ಕೃತ ಶ್ರೇಣಿಯನ್ನು ಅಕ್ಟೋಬರ್ 1 ರಂದು ಕೆಇಎ ಬಿಡುಗಡೆ ಮಾಡಲಿದೆ. (ಸಾಂಕೇತಿಕ ಚಿತ್ರ) (HT)

ರಾಜ್ಯದಲ್ಲಿ ಜೂನ್‌ನಲ್ಲಿ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದ ವಿದ್ಯಾರ್ಥಿಗಳು, ಶನಿವಾರ ಅಂದರೆ ಇಂದು ಕೆಸಿಇಟಿಯಲ್ಲಿ ತಮ್ಮ ಪರಿಷ್ಕೃತ ಶ್ರೇಯಾಂಕಗಳನ್ನು ಪರಿಶೀಲಿಸಬಹುದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪರಿಷ್ಕೃತ ಫಲಿತಾಂಶಗಳನ್ನು KEA ಯ ಅಧಿಕೃತ ವೆಬ್‌ಸೈಟ್ kea.kar.nic.in ಅಥವಾ cetonline.karnataka.gov.in ನಲ್ಲಿ ಬಿಡುಗಡೆ ಮಾಡಲಿದೆ.

ಟ್ರೆಂಡಿಂಗ್​ ಸುದ್ದಿ

Hassan Sex Scandal: ಬಿಜೆಪಿ ನಾಯಕನಿಗೆ ನಾನು ಮೊದಲು ಪೆನ್‌ಡ್ರೈವ್ ಕೊಟ್ಟಿದ್ದು, ಕಾಂಗ್ರೆಸ್‌ನವರಿಗೆ ಕೊಟ್ಟಿಲ್ಲ; ಕಾರ್ ಚಾಲಕನ ಹೇಳಿಕೆ

Hassan Sex Scandal: ಜೆಡಿಎಸ್‌ನಿಂದ ಪ್ರಜ್ವಲ್ ರೇವಣ್ಣ ಅಮಾನತು, ಅಶ್ಲೀಲ ವಿಡಿಯೋ ಹಗರಣ ನಾಚಿಕೆಗೇಡಿನ ಸಂಗತಿ ಎಂದ ಹೆಚ್‌ಡಿ ಕುಮಾರಸ್ವಾಮಿ

ಬೆಂಗಳೂರು ಹವಾಮಾನ; ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಶಿಯಸ್ ಆಸುಪಾಸು, ರಣಬಿಸಿಲು, ಬಿಸಿಗಾಳಿ ಹೆಚ್ಚಳ, ಮಳೆಯ ಮಾತು ದೂರ

ಗೌರಿಬಿದನೂರು: ಸತ್ಯಮ್ಮ ದೇವಿ ದೇವಸ್ಥಾನಕ್ಕೆ ಕಾಣಿಕೆ ಕೊಡದ ದಲಿತ ಮಹಿಳೆ ಶವಸಂಸ್ಕಾರಕ್ಕೆ ಅಡ್ಡಿ, ಅಧಿಕಾರಿಗಳ ಮಧ್ಯಪ್ರವೇಶ

ಸುಮಾರು 2.2 ಲಕ್ಷ ವಿದ್ಯಾರ್ಥಿಗಳು ಕೆಸಿಇಟಿ ಪರೀಕ್ಷೆಗೆ ಹಾಜರಾಗಿದ್ದಾರೆ. ಪರೀಕ್ಷಾ ಸಂಸ್ಥೆಯು ಜೂನ್ 22 ರಂದು ತಾತ್ಕಾಲಿಕ ಉತ್ತರ ಕೀಗಳನ್ನು ಬಿಡುಗಡೆ ಮಾಡಿತು. ಎಲ್ಲಾ ಎಂಜಿನಿಯರಿಂಗ್ ಆಕಾಂಕ್ಷಿಗಳು ಜೂನ್ 16 ಮತ್ತು ಜೂನ್ 17 ರಂದು ಕೆಸಿಇಟಿ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದರು.

"ಕರ್ನಾಟಕದ ಗೌರವಾನ್ವಿತ ನ್ಯಾಯಾಲಯದ ಆದೇಶಗಳ ಪ್ರಕಾರ ಪರಿಷ್ಕೃತ UGCET 2022 ಫಲಿತಾಂಶವನ್ನು 01-01-2022 ರಂದು ಪ್ರಕಟಿಸಲಾಗುವುದು" ಎಂದು ಅಧಿಕೃತ ಅಧಿಸೂಚನೆ  ಹೇಳಿದೆ.

ಪರಿಷ್ಕೃತ KCET 2022 ಫಲಿತಾಂಶ ಚೆಕ್‌ ಮಾಡುವುದು ಹೇಗೆ?

ಸ್ಟೆಪ್‌ 1: ಕೆಇಎಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ.

ಸ್ಟೆಪ್‌ 2: ಅದರ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶದ ಲಿಂಕ್ ಕಾಣಿಸಿಕೊಳ್ಳುತ್ತದೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿ. ಅಭ್ಯರ್ಥಿಗಳಿಗೆ ಫಲಿತಾಂಶ ತೆರೆದ ತಕ್ಷಣ ಲಿಂಕ್ ಲಭ್ಯವಾಗಲಿದೆ. ಆದ್ದರಿಂದ, ಅವರು ನಿಯತವಾಗಿ ವೆಬ್‌ಸೈಟ್ ಅನ್ನು ಪರಿಶೀಲಿಸುವ ಅಗತ್ಯವಿದೆ.

ಸ್ಟೆಪ್‌ 3: ಪರೀಕ್ಷೆಗೆ ಹಾಜರಾಗಿರುವ ವಿದ್ಯಾರ್ಥಿಗಳು ತಮ್ಮ ಲಾಗಿನ್ ವಿವರಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು.

ಸ್ಟೆಪ್‌ 4: ವಿದ್ಯಾರ್ಥಿಗಳು ನಮೂದಿಸಿದ ವಿವರಗಳನ್ನು ಸಲ್ಲಿಸಿದ ತಕ್ಷಣ, ಅವರು ಪರದೆಯ ಮೇಲೆ ತಮ್ಮ ಫಲಿತಾಂಶಗಳನ್ನು ನೋಡಲು ಸಾಧ್ಯವಾಗುತ್ತದೆ.

ಸ್ಟೆಪ್‌ 5: ವಿದ್ಯಾರ್ಥಿಗಳು ಫಲಿತಾಂಶವನ್ನು ಡೌನ್‌ಲೋಡ್ ಮಾಡಬಹುದು ಅಥವಾ ಭವಿಷ್ಯದ ಉಲ್ಲೇಖಕ್ಕಾಗಿ ಅದರ ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು.

KCET ಎಕ್ಸಾಂ 2022

ಪ್ರತಿ ವರ್ಷ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ರಾಜ್ಯ ಕಾಲೇಜುಗಳಿಂದ ವಿವಿಧ ಕೋರ್ಸ್‌ಗಳಲ್ಲಿ ಇಂಜಿನಿಯರಿಂಗ್ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸುತ್ತದೆ. ಪರೀಕ್ಷೆಯಲ್ಲಿ ಕಾಣಿಸಿಕೊಂಡ ನಂತರ, ವಿದ್ಯಾರ್ಥಿಗಳು ತಮ್ಮ ಶ್ರೇಯಾಂಕಗಳ ಆಧಾರದ ಮೇಲೆ ವಿವಿಧ ಯುಜಿ ಕೋರ್ಸ್‌ಗಳಾದ ಎಂಜಿನಿಯರಿಂಗ್, ಕೃಷಿ, ಆರ್ಕಿಟೆಕ್ಚರ್ ಇತ್ಯಾದಿಗಳಿಗೆ ದಾಖಲಾಗಬಹುದು. ಈ ಪ್ರವೇಶ ಪರೀಕ್ಷೆಯ ನಂತರ ವಿದ್ಯಾರ್ಥಿಗಳು ಸರ್ಕಾರಿ ಹಾಗೂ ಖಾಸಗಿ ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದು.

ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ 2020-21ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ತೇರ್ಗಡೆಯಾಗಿರುವ ವಿದ್ಯಾರ್ಥಿಗಳು ಗಳಿಸಿದ ಶೇಕಡ 50 ಮತ್ತು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿರುವ ಶೇಕಡ 50 ಅಂಕಗಳನ್ನು ಪರಿಗಣಿಸಿ ಹೊಸದಾಗಿ ರ್‍ಯಾಂಕ್ ಪಟ್ಟಿ ಸಿದ್ಧಪಡಿಸಬೇಕುʼʼ ಎಂದು ಕೆಇಎಗೆ ರಾಜ್ಯ ಹೈಕೋರ್ಟ್‌ ಆದೇಶ ನೀಡಿತ್ತು. ವಿವರ ಓದಿಗೆ - KCET row: ಕೆಇಎ ಆದೇಶ ರದ್ದು, ಹೊಸ ರ್‍ಯಾಂಕ್ ಪಟ್ಟಿ ಪ್ರಕಟಿಸಲು ಹೈಕೋರ್ಟ್‌ ಸೂಚನೆ, ಪುನಾರವರ್ತಿತ ವಿದ್ಯಾರ್ಥಿಗಳಿಗೆ ಜಯ

ಪುನರಾವರ್ತಿತರಿಗೆ ಕಳೆದ ಸಲವೇ ಸಿಕ್ಕಿತ್ತಲ್ಲ ಅವಕಾಶ? ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA)ದ ತೀರ್ಮಾನ ಸರಿ ಇದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ವಿಕಾಸಸೌಧದಲ್ಲಿ ಸಭೆ ನಡೆಸಿದ ವೇಳೆ ಸಮರ್ಥಿಸಿದ್ದಾರೆ. ಸಿಇಟಿ(CET) ರ್ಯಾಂಕಿಂಗ್‌ ಸಮಸ್ಯೆ (Karnataka CET Problem) ವಿಚಾರದಲ್ಲಿ ಪ್ರತಿಭಟನೆ ನಡೆಯುತ್ತಿರುವ ಕಾರಣ ಅವರು ಸಭೆ ನಡೆಸಿದ್ದರು. Karnataka CET Problem: ಪುನರಾವರ್ತಿತರಿಗೆ ಸಿಕ್ಕಿತ್ತಲ್ಲ ಅವಕಾಶ? ಉನ್ನತ ಸಚಿವರ ಸಹಜ ಮಾತು

    ಹಂಚಿಕೊಳ್ಳಲು ಲೇಖನಗಳು