logo
ಕನ್ನಡ ಸುದ್ದಿ  /  ಕರ್ನಾಟಕ  /  ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆಯರ ಶೌಚಾಲಯ ಸರಿಯಾಗಿ ಮಾಡ್ಸ್‌ರೀ ಮಹೇಶ್‌ ಜೋಷಿ; ಲೇಖಕಿಯರ ಬೇಡಿಕೆಗೆ ಭಾರೀ ಬೆಂಬಲ

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆಯರ ಶೌಚಾಲಯ ಸರಿಯಾಗಿ ಮಾಡ್ಸ್‌ರೀ ಮಹೇಶ್‌ ಜೋಷಿ; ಲೇಖಕಿಯರ ಬೇಡಿಕೆಗೆ ಭಾರೀ ಬೆಂಬಲ

Umesha Bhatta P H HT Kannada

Dec 18, 2024 07:00 AM IST

google News

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆಯರಿಗೆ ಸೂಕ್ತ ಶೌಚಾಲಯ ಕಲ್ಪಿಸಿ ಎನ್ನುವ ಒತ್ತಾಯ ಕೇಳಿ ಬಂದಿದೆ.

    • ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಆಹಾರದ ಬೇಡಿಕೆ ನಡುವೆ ಮಹಿಳೆಯರ ಶೌಚಾಲಯದ ಕಡೆಗೆ ಗಮನ ನೀಡಬೇಕು ಎನ್ನುವ ಬೇಡಿಕೆಯೂ ಲೇಖಕಿಯರ ಕಡೆಯಿಂದ ಕೇಳಿ ಬಂದಿದೆ.
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆಯರಿಗೆ ಸೂಕ್ತ ಶೌಚಾಲಯ ಕಲ್ಪಿಸಿ ಎನ್ನುವ ಒತ್ತಾಯ ಕೇಳಿ ಬಂದಿದೆ.
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆಯರಿಗೆ ಸೂಕ್ತ ಶೌಚಾಲಯ ಕಲ್ಪಿಸಿ ಎನ್ನುವ ಒತ್ತಾಯ ಕೇಳಿ ಬಂದಿದೆ.

ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎರಡು ದಿನದಲ್ಲಿ ಆರಂಭವಾಗಲಿದೆ. ಸಮ್ಮೇಳನದಲ್ಲಿ ಆಹಾರದ ವಿಚಾರದಲ್ಲೂ ಸಾಕಷ್ಟು ಚರ್ಚೆಗಳಾಗಿವೆ. ಇದರ ಜತೆಗೆ ಸಾಹಿತ್ಯ ಸಮ್ಮೇಳನಕ್ಕೆ ಬರುವ ಮಹಿಳೆಯರಿಗೆ ಸೂಕ್ತ ಶೌಚಾಲಯ ವ್ಯವಸ್ಥೆಯನ್ನು ಮಾಡಿಕೊಡಬೇಕು ಎನ್ನುವ ಒತ್ತಾಯವೂ ಕೇಳಿ ಬಂದಿದೆ. ಸಮ್ಮೇಳನದ ಅಕ್ಕಪಕ್ಕದಲ್ಲಿ ಮಹಿಳೆಯರಿಗೂ ಹೆಚ್ಚಿನ ಸಂಖ್ಯೆಯಲ್ಲಿ ಸ್ವಚ್ಛ ಶೌಚಾಲಯಗಳನ್ನು ನಿರ್ಮಿಸಿಕೊಡಬೇಕು. ಅಲ್ಲದೇ ಸ್ವಚ್ಛವಾಗಿ ಇಡಲು ಒತ್ತು ಕೊಡಬೇಕು ಎನ್ನುವ ಸಲಹೆಯನ್ನೂ ನೀಡಲಾಗಿದೆ. ಸಮ್ಮೇಳನಕ್ಕೆ ನಿತ್ಯ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಬರುತ್ತಾರೆ. ಮಳಿಗೆಯಲ್ಲಿಯೂ ಮಹಿಳೆಯರು ಇರುತ್ತಾರೆ. ಈ ಕಾರಣದಿಂದ ಇದು ಆಗಲೇಬೇಕು ಎನ್ನುವುದು ಪ್ರಮುಖ ಬೇಡಿಕೆ.

ಈ ಕುರಿತು ಲೇಖಕಿ ಹಾಗೂ ಪ್ರಕಾಶಕಿಯಾಗಿರುವ ಶಿವಮೊಗ್ಗದ ಅಕ್ಷತಾ ಹುಂಚದಕಟ್ಟೆ ಅವರು ಕನ್ನಡ ಸಾಹಿತ್ಯ ಪರಿಷತ್ತನ್ನು ಉಲ್ಲೇಖಿಸಿ ಫೇಸ್‌ಬುಕ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಇದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ನೇಳನ ಅತಿ ಮಹತ್ವದ್ದಾಗಿದ್ದು; ಆದರೆ ಪ್ರತಿ ಸಾಹಿತ್ಯಸಮ್ಮೇಳನದಲ್ಲೂ ಅತಿ ಹೆಚ್ಚು‌ ನಿರ್ಲಕ್ಷ್ಯಕ್ಕೊಳಗಾದ ಸಂಗತಿ ಯಾವುದೆಂದರೆ ಎಲ್ಲೆಲ್ಲಿಂದಲೋ ಬಂದು ಸಮ್ಮೇಳನದಲ್ಲಿ ಭಾಗವಹಿಸುವ ಮಹಿಳೆಯರಿಗೆ ಸುರಕ್ಷಿತವಾದ , ಸ್ವಚ್ಛತೆ ಇರುವ ಶೌಚಾಲಯ ವ್ಯವಸ್ಥೆ.ಅದರಲ್ಲೂ ಮಹಿಳಾ ಪುಸ್ತಕ ಮಾರಾಟಗಾರರು ಮತ್ರು ವಿವಿಧ ಶಾಲೆಗಳಿಂದ ಮಕ್ಕಳನ್ಬು ಕರೆತಂದ ಮಹಿಳಾ ಟೀಚರುಗಳು ಶೌಚಾಲಯ ವ್ಯವಸ್ಥೆಯ ಅಲಭ್ಯತೆಯಿಂದ ಅತಿಹೆಚ್ಚು ಬಳಲಬೇಕಾಗುತ್ತದೆ. ನಾನು ನೋಡಿದ ಹಾಗೆ ಮಡಿಕೇರಿಯಲ್ಲಿ ಸಮ್ಮೇಳನ ನಡೆದಾಗ ಶೌಚಾಲಯ ವ್ಯವಸ್ಥೆ ವ್ಯವಸ್ಥಿತವಾಗಿತ್ತು. ಮಂಡ್ಯ ಸಾಹಿತ್ಯ ಸಮ್ಮೇಳನ ಶೌಚಾಲಯ ವ್ಯವಸ್ಥೆ ಮಾದರಿಯಾಗಲಿ.ಕನ್ನಡತಿಯರನ್ನು ಬಳಲಿಸದೇ ಇರಲಿ ಎನ್ನುವುದು ಅಕ್ಷತಾ ಅವರ ಸಲಹೆ.

ಮಹಿಳಾ ಬರಹಗಾರ್ತಿಯಾಗಿರುವ ಶಾಂತಾ ನಾಗರಾಜ್‌ ಅವರು, ವೆಜ್ಜು ನಾನ್ವೆಜ್ಜು ಗದ್ದಲಕ್ಕಿಂತಾ ಅತಿ ಮುಖ್ಯವಾದ ವಿಷಯವನ್ನು ಪ್ರಸ್ಥಾಪಿಸಿದ್ದೀರಿ. ನಿಜಕ್ಕೂ ಇಂಥಾ ಮಾನವೀಯ ಅಗತ್ಯಗಳ ವಿಚಾರದಲ್ಲಿ ಚರ್ಚೆಯಾಗಬೇಕು. ಅದುಬಿಟ್ಟು ಬೇರೆ ವಿಷಯಗಳೇ ವಿಜೃಂಭಿಸುತ್ತಿವೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಹಾರದ ರಾಜಕಾರಣವನ್ಬು ಪ್ರಶ್ನಿಸುವ ಪ್ರಕ್ರಿಯೆಯು ಬಹಳ ಮುಖ್ಯವಾದ್ದು ಮೇಡಂ.ಅದರ ಜೊತೆ ಗೆ ಇದೂ ಮುಖ್ಯ ಅಷ್ಟೇ ಎನ್ನುವುದು ಅಕ್ಷತಾ ಅಭಿಪ್ರಾಯ.

ಹಲವರ ಬೆಂಬಲ

ಪದ್ಮಪ್ರಸಾದ್ ಎಸ್.ಪಿ ಅವರಂತೂ ಮಹಿಳೆಯರಿಗೆ ಹೆಚ್ಚು ಸ್ವಚ್ಛ ಶೌಚಾಲಯ ಗಳ ವ್ಯವಸ್ಥೆ ತುಂಬ ‌ಮುಖ್ಯ ಎಂದು ಅಭಿಪ್ರಾಯಿಸಿದರೆ, ಶೆಲ್ಲಿ ಕೂಡ್ಲಿಗಿ ಅವರು ಹಾವೇರಿ ಸಮ್ಮೇಳನದಲ್ಲಿ ಮೂಗು ಮುಚ್ಚಿಕೊಂಡು ಶೌಚಾಲಯಕ್ಕೆ ಹೋಗಿ ಬಂದ್ವಿ. ಎರಡನೇ ದಿನಕ್ಕೆ ಗೊಬ್ಬೇಳಿಸ್ತಾರೆ. ಮುಖ್ಯವಾಗಿ ಇಂತಹ ವಿಷಯಗಳ ಬಗ್ಗೆ ಆಯೋಜಕರು ಕೇರ್ ತಗೊಳಬೇಕು ಎಂಬ ಸಲಹೆ ನೀಡಿದ್ದಾರೆ. ಲೇಖಕಿ ರೇಣುಕಾ ನಿಡಗುಂದಿ ಕೂಡ ಇದು ಅತ್ಯಾವಶ್ಯಕವಾದುದು ಎಂದು ದನಿಗೂಡಿಸಿದ್ದಾರೆ. ಈ ಮೂಲಕ ಮಂಡ್ಯ ಜಿಲ್ಲಾಡಳಿತ, ವಿವಿಧ ಸಮಿತಿಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ಮಹೇಶ್‌ ಜೋಷಿ, ಮಂಡ್ಯ ಕಸಾಪ ಸಂಚಾಲಕಿ ಮೀರಾ ಶಿವಲಿಂಗಯ್ಯ ಅವರಿಗೆ ಗಂಭೀರ ಸಮಸ್ಯೆಯನ್ನು ತೆರೆದಿಡಲಾಗಿದೆ.

ಸಮಿತಿಯಿಂದ ತಯಾರಿ

ಈಗಾಗಲೇ ವೇದಿಕೆ ಸಮಿತಿಯು ಸಮ್ಮೇಳನ ನಡೆಯುವ ವೇದಿಕೆಯ ಅಕ್ಕಪಕ್ಕದಲ್ಲಿಯೇ 250 ಶೌಚಾಲಯಗಳ ನಿರ್ಮಾಣ ಮಾಡುವುದಾಗಿಯೂ ಹೇಳಿದೆ. ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರುವುದರಿಂದ ಶುಚಿತ್ವಕ್ಕೆ ಮತ್ತು ಶೌಚಾಲಯಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. 250 ಶೌಚಾಲಯ, ಅಡುಗೆ ಸಿಬ್ಬಂದಿಗಳಿಗೆ 50 ಸ್ನಾನದಗೃಹದ ವ್ಯವಸ್ಥೆ ಮಾಡಲಾಗಿದೆ ಎಂದು ಸಮಿತಿಯು ಹೇಳಿಕೊಂಡಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ