logo
ಕನ್ನಡ ಸುದ್ದಿ  /  Karnataka  /  Mangaluru News Tigers Fight In Pilikula Biological Park Netravathi Named Tigress Dies Mgb

Mangaluru Tiger: ಪಿಲಿಕುಳದಲ್ಲಿ ಹುಲಿಗಳ ಕಾಳಗ; 15 ವರ್ಷದ ಹೆಣ್ಣು ಹುಲಿ ನೇತ್ರಾವತಿ ಸಾವು

HT Kannada Desk HT Kannada

Jun 07, 2023 04:17 PM IST

ಮೃತಪಟ್ಟ 15 ವರ್ಷದ ಹೆಣ್ಣು ಹುಲಿ ನೇತ್ರಾವತಿ

    • Pilikula Tiger: ಜೂನ್‌ 6 ರಂದು ರೇವಾ ಎಂಬ 6 ವರ್ಷದ ಗಂಡು ಹುಲಿ ಮತ್ತು ನೇತ್ರಾವತಿ ನಡುವೆ ನಡೆದ ಕಚ್ಚಾಟದಲ್ಲಿ ನೇತ್ರಾವತಿ ಗಂಭೀರವಾಗಿ ಗಾಯಗೊಂಡಿತ್ತು. ಶುಶ್ರೂಷೆ ಬಳಿಕ ನೇತ್ರಾವತಿ ಸಹಜ ಸ್ಥಿತಿಗೆ ಮರಳುತ್ತಿದ್ದು, ನೀರು ಮತ್ತು ಆಹಾರ ಸೇವಿಸುತಿತ್ತು, ಆದರೆ ಈ ದಿನ ಬೆಳಗ್ಗೆ ವೈದ್ಯಾಧಿಕಾರಿ ಶುಶೂಷೆ ನೀಡುತ್ತಿರುವಾಗಲೇ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿತು. 
ಮೃತಪಟ್ಟ 15 ವರ್ಷದ ಹೆಣ್ಣು ಹುಲಿ ನೇತ್ರಾವತಿ
ಮೃತಪಟ್ಟ 15 ವರ್ಷದ ಹೆಣ್ಣು ಹುಲಿ ನೇತ್ರಾವತಿ

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಹುಲಿಗಳ ನಡುವೆ ನಡೆದ ಕಾಳಗದಲ್ಲಿ ಗಾಯಗೊಂಡಿದ್ದ 15 ವರ್ಷದ ನೇತ್ರಾವತಿ ಹೆಸರಿನ ಹುಲಿಯು ಇಂದು (ಜೂನ್​ 7, ಬುಧವಾರ) ಬೆಳಗ್ಗೆ ಅಸುನೀಗಿತು.

ಟ್ರೆಂಡಿಂಗ್​ ಸುದ್ದಿ

Hassan Sex scandal; ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಸಂಚಲನ, ಬಿಜೆಪಿ ನಾಯಕ ದೇವರಾಜೇ ಗೌಡ ತುರ್ತು ರಹಸ್ಯ ಪತ್ರ ವೈರಲ್, 5 ಅಂಶಗಳು

Drought: ಕರಾವಳಿ ಜಿಲ್ಲೆಗಳಲ್ಲಿ ಏರಿದ ತಾಪಮಾನ, ನದಿಗಳಲ್ಲಿ ಕಡಿಮೆಯಾದ ನೀರಸೆಲೆ

Hassan Sex Scandal: ಲೈಂಗಿಕ ಹಗರಣ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಯಾರು?, ಶಿಕ್ಷಣ, ಆಸ್ತಿ ಮತ್ತು ಇತರೆ 5 ಅಂಶಗಳ ವಿವರ

Breaking News: ಜೆಡಿಎಸ್‌ನಿಂದ ಪ್ರಜ್ವಲ್‌ ರೇವಣ್ಣ ಉಚ್ಚಾಟನೆ, ಮಾಜಿ ಪ್ರಧಾನಿ ದೇವೇಗೌಡ ಆದೇಶ

ಜೂನ್‌ 6 ರಂದು ರೇವಾ ಎಂಬ 6 ವರ್ಷದ ಗಂಡು ಹುಲಿ ಮತ್ತು ನೇತ್ರಾವತಿ ನಡುವೆ ನಡೆದ ಕಚ್ಚಾಟದಲ್ಲಿ ನೇತ್ರಾವತಿ ಗಂಭೀರವಾಗಿ ಗಾಯಗೊಂಡಿತ್ತು. ರೇವಾ ಗಂಡು ಹುಲಿಯು ಬೆದೆಗೆ ಬಂದಿರುದರಿಂದ ನೇತ್ರಾವತಿ ಸಂಪರ್ಕಕ್ಕೆ ಬಂದಾಗ ಹೆಣ್ಣು ಹುಲಿಯು ರೇವಾನ ಮೇಲೆರಗಿತ್ತು. ಇಬ್ಬರಲ್ಲಿ ನಡೆದ ಕಚ್ಚಾಟವನ್ನು ಸ್ಥಳದಲ್ಲಿದ್ದ ಅಧಿಕಾರಿ ಸಿಬ್ಬಂದಿಗಳು ಹತೋಟಿಗೆ ತಂದು ಕೂಡಲೆ ಗೂಡಿನ ಒಳಗೆ ಸೇರಿಸುವಲ್ಲಿ ಯಶಸ್ವಿಯಾದರು.

ಪಿಲಿಕುಳದ ವೈದ್ಯಾಧಿಕಾರಿ, ವೈಜ್ಞಾನಿಕ ಅಧಿಕಾರಿಗಳು ಶುಶ್ರೂಷೆ ನಡೆಸಿದ ಪರಿಣಾಮ ನೇತ್ರಾವತಿ ಸಹಜ ಸ್ಥಿತಿಗೆ ಮರಳುತ್ತಿದ್ದು, ನೀರು ಮತ್ತು ಆಹಾರ ಸೇವಿಸುತಿತ್ತು, ಆದರೆ ಈ ದಿನ ಬೆಳಗ್ಗೆ ವೈದ್ಯಾಧಿಕಾರಿ ಶುಶೂಷೆ ನೀಡುತ್ತಿರುವಾಗಲೇ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿತು.

ನೇತ್ರಾವತಿ (15ವರ್ಷ) ಮತ್ತು ರೇವಾ (6ವರ್ಷ) ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಜನಿಸಿದ ಹುಲಿಗಳಾಗಿವೆ. ನೇತ್ರಾವತಿ ದೇಹದಲ್ಲಿ ಮೇಲ್ನೋಟಕ್ಕೆ ಗಾಯಗಳಿದ್ದು, ಹೋರಾಟದ ತೀವ್ರತೆಯಿಂದ ಹೃದಯಾಘಾತ ಅಗಿರಬಹುದೆಂದು ಅಭಿಪ್ರಾಯ ಪಡಲಾಗಿದೆ. ಆಂತರಿಕ ಗಾಯ ಮತ್ತು ಕಾರಣಗಳನ್ನು ಮರಣೋತ್ತರ ಪರೀಕ್ಷೆಯಿಂದ ತಿಳಿಯಲಾಗುವುದು. ರೇವಾನಿಗೆ ಸಣ್ಣಪುಟ್ಟ ಗಾಯಗಳಗಿದ್ದು ಅಪಾಯದಿಂದ ಪಾರಾಗಿದೆ. ಪಿಲಿಕುಳದಲ್ಲಿ ಈಗ 8 ಹುಲಿಗಳು ಇವೆ ಎಂದು ಪಿಲಿಕುಳ ಜೈವಿಕ ಉದ್ಯಾನವನ ಮಂಗಳೂರು ಇದರ ನಿರ್ದೇಶಕ ಹೆಚ್‌. ಜೆ. ಭಂಡಾರಿ ತಿಳಿಸಿದ್ದಾರೆ.‘

ವರದಿ: ಹರೀಶ ಮಾಂಬಾಡಿ, ಮಂಗಳೂರು

ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ಹುಲಿ ಗದ್ದಲ

ಕರ್ನಾಟಕದಲ್ಲಿ ಹುಲಿ ಗದ್ದಲ ಜೋರಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಹೊಂದಿಕೊಂಡ ಮೈಸೂರಿನ ಹಳ್ಳಿಗಳಲ್ಲಿ ಹುಲಿ ಹೆಜ್ಜೆ ಕಾಣಿಸಿಕೊಂಡಿದೆ. ಚಿಕ್ಕಮಗಳೂರು ಜಿಲ್ಲೆ ಭದ್ರಾ ಅರಣ್ಯದಂಚಿನ ಗ್ರಾಮದಲ್ಲಿ ಮಹಿಳೆ ಮೇಲೆ ಹುಲಿ ದಾಳಿ ಮಾಡಿ ಗಾಯಗೊಳಿಸಿದೆ. ಎರಡೂ ಕಡೆ ಆತಂಕದ ವಾತಾವರಣವಿದೆ.

ಚಿಕ್ಕಮಗಳೂರು ತಾಲ್ಲೂಕಿನ ಮುಳ್ಳಯ್ಯನಗಿರಿ ತಪ್ಪಲಿನ ಪಂಡರವಳ್ಳಿಯ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೇಲೆ ಹುಲಿ ದಾಳಿ ಮಾಡಿ ಗಾಯಮಾಡಿದೆ. ನಾಗರಹೊಳೆ ಉದ್ಯಾನವನದಂಚಿನ ಗ್ರಾಮಗಳ ಜಮೀನುಗಳಲ್ಲಿ ಕಳೆದ ಮುರ್ನಾಲ್ಕು ತಿಂಗಳಿನಿಂದ ಆಗಾಗ್ಗೆ ಹುಲಿಹೆಜ್ಜೆ ಕಾಣಿಸಿಕೊಳ್ಳುತ್ತಿದ್ದರೆ, ಇದೀಗ ತಾಲೂಕಿನ ಹನಗೋಡಿನ ಜಮೀನಿನಲ್ಲಿ ಮತ್ತೆ ಹುಲಿ ಹೆಜ್ಜೆ ಕಾಣಿಸಿಕೊಂಡಿದ್ದು, ರೈತರು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್​ ಮಾಡಿ

    ಹಂಚಿಕೊಳ್ಳಲು ಲೇಖನಗಳು