logo
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರು ಮುಡಾ ಹಗರಣದ ಮೂಲ 50:50 ಅನುಪಾತದ ಎಲ್ಲಾ ನಿವೇಶನಗಳ ಜಪ್ತಿ: ಹಗರಣದ ಬಳಿಕ ಮಹತ್ವದ ತೀರ್ಮಾನ ಕೈಗೊಂಡ ಪ್ರಾಧಿಕಾರ

ಮೈಸೂರು ಮುಡಾ ಹಗರಣದ ಮೂಲ 50:50 ಅನುಪಾತದ ಎಲ್ಲಾ ನಿವೇಶನಗಳ ಜಪ್ತಿ: ಹಗರಣದ ಬಳಿಕ ಮಹತ್ವದ ತೀರ್ಮಾನ ಕೈಗೊಂಡ ಪ್ರಾಧಿಕಾರ

Umesha Bhatta P H HT Kannada

Nov 07, 2024 05:33 PM IST

google News

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆದಿರುವ 50:50 ಅನುಪಾತದ ಬದಲಿ ನಿವೇಶನಗಳನ್ನು ಜಪ್ತಿ ಮಾಡಲು ಮುಡಾ ಮುಂದಾಗಿದೆ.

    • ತೀವ್ರ ವಿವಾದಕ್ಕೆ ಗುರಿಯಾಗಿರುವ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಬದಲಿ ನಿವೇಶನ ಹಂಚಿಕೆ ಕುರಿತು ಮಹತ್ವದ ನಿರ್ಣಯವನ್ನು ಮುಡಾ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆದಿರುವ 50:50 ಅನುಪಾತದ ಬದಲಿ ನಿವೇಶನಗಳನ್ನು ಜಪ್ತಿ ಮಾಡಲು ಮುಡಾ ಮುಂದಾಗಿದೆ.
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆದಿರುವ 50:50 ಅನುಪಾತದ ಬದಲಿ ನಿವೇಶನಗಳನ್ನು ಜಪ್ತಿ ಮಾಡಲು ಮುಡಾ ಮುಂದಾಗಿದೆ.

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಹೆಸರಿನಲ್ಲಿ ಬದಲಿ ನಿವೇಶನ ನೀಡಿರುವ ವಿಚಾರ ಭಾರೀ ಸದ್ದು ಮಾಡಿದ ನಂತರ ಎಚ್ಚೆತ್ತುಕೊಂಡಿರುವ ಮುಡಾ ಆಡಳಿತ ಮಂಡಳಿ, 50:50 ಅನುಪಾತದ ಅಡಿಯಲ್ಲಿ ನೀಡಿರುವ ಎಲ್ಲಾ ನಿವೇಶನಗಳನ್ನು ಜಪ್ತಿ ಮಾಡಲು ನಿರ್ಣಯಿಸಿದೆ. ಈಗಾಗಲೇ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಪಿ ಎನ್ ದೇಸಾಯಿ ವರದಿ ಬಂದ ನಂತರ ಜಪ್ತಿಯ ವರದಿ ಅಂಗೀಕರಿಸಲು ತೀರ್ಮಾನ ಮಾಡಲಾಗಿದೆ. ಇದರಿಂದ 50:50 ಅನುಪಾತದ ಅಡಿಯಲ್ಲಿ 900 ಕ್ಕೂ ಅಧಿಕ ನಿವೇಶನಗಳನ್ನು ವಿತರಿಸಲಾಗಿದ್ದು, ಅವುಗಳನ್ನು ಜಪ್ತಿ ಮಾಡಲಾಗುತ್ತದೆ. ಮುಡಾ ಅಧ್ಯಕ್ಷರೂ ಆಗಿರುವ ಮೈಸೂರು ಡಿಸಿ ಲಕ್ಷ್ಮಿಕಾಂತ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ಈ ಮಹತ್ವದ ತೀರ್ಮಾನ ಕೈಗೊಂಡಿದೆ.

ನಿವೇಶನ ವಾಪಾಸ್‌ಗೆ ಸರ್ವಸಮ್ಮತ ನಿರ್ಣಯ: ಹರೀಶ್‌ ಗೌಡ

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕೆ.ಹರೀಶ್‌ ಗೌಡ. 50:50 ಅನುಪಾತದಡಿ ನೀಡಿರುವ ನಿವೇಶನಗಳ ಜಪ್ತಿಗೆ ಎಲ್ಲಾ ಸದಸ್ಯರು ಒಪ್ಪಿದ್ದಾರೆ. ನ್ಯಾಯಮೂರ್ತಿ ದೇಸಾಯಿ ಆಯೋಗದ ವರದಿ ಬಂದ ನಂತರ ವರದಿಯ ಮೇಲೆ ಈ ಕ್ರಮ ತೆಗೆದುಕೊಳ್ಳೊಣ ಎಂದು ಅಧ್ಯಕ್ಷರು ಹೇಳಿದ್ದಾರೆ. ಮುಡಾ ಸ್ವಚ್ಚವಾಗಬೇಕೆಂಬುದು ಎಲ್ಲರ ಅಭಿಪ್ರಾಯವಾಗಿದೆ ಎಂದು ತಿಳಿಸಿದರು.

2020 ರಿಂದ 50:50 ಅನುಪಾತದ ಅಡಿಯಲ್ಲಿ ಸೈಟಗಳನ್ನು ಹಂಚಿಕೆ ಮಾಡಲಾಗಿದೆ. ಕೆಲವೊಂದು ಪ್ರಕರಣದಲ್ಲಿ ಪರಿಹಾರ ಪಡೆದಿದ್ದರು ಸಹ ಅದಕ್ಕೂ 50:50 ಅನುಪಾತದಡಿ ನಿವೇಶನ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡು‌ ಸಭೆಯಲ್ಲಿ ನಾನು ಮಾತನಾಡಿದ್ದೇನೆ. ಕಳೆದ ಬಾರಿ ನಡೆದ ಸಭೆಯಲ್ಲೂ ಈ ಬಗ್ಗೆ ಚರ್ಚೆ ಮಾಡಲಾಗಿತ್ತು. ಆದರೆ ಅದರ ದಾಖಲೀಕರಣ ಆಗಿಲ್ಲ. ಹೀಗಾಗಿ ಅದರ ದಾಖಲೀಕರಣ ಮಾಡದ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲು ಮಾಡಿ ಸರ್ಕಾರಕ್ಕೆ ಶಿಸ್ತು ಕ್ರಮಕ್ಕೆ ಪತ್ರ ಬರೆಯಲು ನಿರ್ಧರಿಸಲಾಗಿದೆ. ನಾನು ಸಹ ಬಹಳಷ್ಟು ದಾಖಲೆಗಳನ್ನು ಸಂಗ್ರಹಿಸಿದ್ದೇನೆ ಎಂದು ಶಾಸಕ ಕೆ. ಹರೀಶ್ ಗೌಡ ಹೇಳಿದರು.

ವರದಿ ನಂತರ ಕ್ರಮ: ಶ್ರೀವತ್ಸ

ಮುಡಾದ ಸಾಮಾನ್ಯ ಸಭೆ ಮುಗಿದ ಮಾತನಾಡಿದ ಬಿಜೆಪಿ ಶಾಸಕ ಟಿ.ಎಸ್‌. ಶ್ರೀವತ್ಸ, 50-50 ಅನುಪಾತದ ಸೈಟ್ ರದ್ದು ಮಾಡಬೇಕು ಎಂದು ಮನವಿ ಮಾಡಿದೆ. ದೇಸಾಯಿ ಆಯೋಗ ತನಿಖೆ ಮಾಡುತ್ತಿದೆ. ಅವರು ವರದಿ ಏನು ಕೊಡುತ್ತಾರೆ. ಅವರು ಏನು ತೀರ್ಮಾನ ಮಾಡುತ್ತಾರೆ ನೋಡೋಣ ಎಂದು ಅಧ್ಯಕ್ಷರು ಹೇಳಿದ್ದಾರೆ ಎಂದರು.

ಮಾಧ್ಯಮದವರನ್ನು ಹೊರಗಿಟ್ಟು ಮುಡಾ ಸಭೆ ನಡೆಸಲಾಗುತ್ತಿದೆ. ಮಾಧ್ಯಮದವರನ್ನು ಒಳಗಿಟ್ಟು ಸಭೆ ನಡೆಸಬೇಕು ಎಂದು ಮನವಿ ಮಾಡಿದ್ದೇನೆ. ಮಾಧ್ಯಮದವರು ಇದ್ದರೆ ಭಯವಾದರೂ ಇರುತ್ತದೆ ಎಂಬ ಕಾರಣಕ್ಕೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ಕಾನೂನಾತ್ಮಕವಾಗಿ ನೀಡಿ: ಜಿಟಿ ದೇವೇಗೌಡ

ನಾವೆಲ್ಲರೂ 50:50 ಅನುಪಾತ ವಾಪಾಸ್ ಪಡೆಯಬೇಕು. 50:50 ಅನುಪಾತದಲ್ಲಿ ಅಕ್ರಮವಾಗಿರುವುದನ್ನು ರದ್ದು ಮಾಡಬೇಕು. ಕಾನೂನುನಾತ್ಮಕವಾಗಿ ಇರುವವರಿಗೆ ನೀಡಬೇಕು. ಮೊದಲು ಆಯೋಗದ ತನಿಖಾ ವರದಿ ಬರಲಿ. ನಂತರ ನಿರ್ಧಾರ ಮಾಡೋಣ ಎಂಬ ಒಮ್ಮತದ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಜೆಡಿಎಸ್‌ ಶಾಸಕ ಜಿ ಟಿ ದೇವೇಗೌಡ ಹೇಳಿದರು.

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಕಚೇರಿಯಲ್ಲೇ ನಡೆದ ಸಭೆಯಲ್ಲಿ ಮುಡಾ ಕಚೇರಿ ಒಳಗಡೆಯೇ ಮಾಂಸದೂಟ ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡಿದರು.

ಚಿಕನ್, ಮಟನ್, ಫಿಶ್, ಕಬಾಬ್, ಮೊಟ್ಟೆ ಸೇರಿದಂತೆ ವಿವಿಧ ಬಗೆಯ ಮಾಂಸದ ಊಟ ಸವಿದರು, ಮುಡಾ ಹಗರಣದ ವಿವಾದದ ನಡುವೆಯೂ ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಬಾಡೂಟ ಸವಿದು ಮೋಜಿನ ಕುರಿತು ಚರ್ಚೆ ನಡೆಯಿತು.

ಮುಡಾ ಸಭೆ ಮುಗಿದ ನಂತರ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ಚನಾಥ್ , ಇಂದು ವೆಜ್ ಮತ್ತು ನಾನ್ ವೆಜ್ ಊಟ ಇತ್ತು. ನಾನು ಕಾರ್ತಿಕಮಾಸದಲ್ಲಿ ನಾನ್ ವೆಜ್ ತಿನ್ನೋದಿಲ್ಲ.ಹೀಗಾಗಿ ವೆಜ್ ಊಟ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ