logo
ಕನ್ನಡ ಸುದ್ದಿ  /  Karnataka  /  Mysuru News Jds Leader Hd Kumaraswamy Campaign In Hanur Polling For Party Candidate Election News In Kannada Rst

Karnataka Election 2023: ಪಂಚರತ್ನ ಯೋಜನೆಯ ಮೂಲಕ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುತ್ತೇನೆ; ಹನೂರಿನಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮತಯಾಚನೆ

HT Kannada Desk HT Kannada

May 06, 2023 10:54 PM IST

ಕುಮಾರಸ್ವಾಮಿ

    • ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಜೆಡಿಎಸ್‌ ಅಭ್ಯರ್ಥಿ ಮಂಜುನಾಥ್ ಪರ ಮತಯಾಚನೆ ಮಾಡಿದ ಎಚ್‌.ಡಿ.ಕುಮಾರಸ್ವಾಮಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆಯ ಮೂಲಕ ಜನಸಾಮಾನ್ಯರ ಕಷ್ಟ ನೀಗಿಸುತ್ತೇವೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ. 
ಕುಮಾರಸ್ವಾಮಿ
ಕುಮಾರಸ್ವಾಮಿ

ಚಾಮರಾಜನಗರ (ಹನೂರು): ಕರ್ನಾಟಕ ವಿಧಾನಸಭಾ ಚುನಾವಣೆಯ ಕೊನೆಯ ಹಂತದ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿವೆ. ಎಲ್ಲಾ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಮತಯಾಚಿಸುವುದು ಸಾಮಾನ್ಯವಾಗಿದೆ.

ಟ್ರೆಂಡಿಂಗ್​ ಸುದ್ದಿ

Bangalore Crime: ಬೆಂಗಳೂರಲ್ಲಿ ತಾಯಿ ಮಗಳ ಜಗಳ, ಮಗಳನ್ನು ಕೊಂದಳಾ ತಾಯಿ, ತಲಾಖ್ ನೀಡಿಯೂ ಪತ್ನಿ ಕೊಲೆ

Vijayanagara News: ಮಾಜಿ ಡಿಸಿಎಂ ಎಂ.ಪಿ.ಪ್ರಕಾಶ್‌ ಪತ್ನಿ ರುದ್ರಾಂಬ ನಿಧನ

Ramanagar News: ಮೇಕೆದಾಟಿನಲ್ಲಿ ಈಜಲು ಹೋಗಿ ಮೂವರು ಯುವತಿಯರು ಸೇರಿ ಐವರ ದುರ್ಮರಣ

Railway News: ಬೆಂಗಳೂರು ಬಿಲಾಸ್‌ಪುರಕ್ಕೆ ವಿಶೇಷ ಬೇಸಿಗೆ ರೈಲು, ಮೇ ತಿಂಗಳ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಹನೂರು ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಮಂಜುನಾಥ್ ಪರ ಮತಯಾಚನೆ ಮಾಡಿದರು.

ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿದ ಅವರು, ʼಕಳೆದ ಬಾರಿ ಹನೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲನ್ನು ಕಂಡರೂ ಮಂಜುನಾಥ್ ಅವರು ಎದೆಗುಂದದೆ ಮತ್ತೊಮ್ಮೆ ನಿಮ್ಮ ಬಳಿ ಮತ ಬೇಡಲು ಬಂದಿದ್ದಾರೆ. ಸೋತರೂ ಕೂಡ ಕಳೆದ ಐದು ವರ್ಷದಲ್ಲಿ ಜನಪರ ಕೆಲಸಗಳನ್ನು ಮಾಡುತ್ತಲೇ ಬಂದಿದ್ದಾರೆ. ಜನರ ನಾಡಿಮಿಡಿತವನ್ನು ಅರಿತಿದ್ದಾರೆ. ಹಾಗಾಗಿ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಹೆಚ್ಚಿನ ಮತಗಳ ಮೂಲಕ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ʼಜನಸಾಮಾನ್ಯರ ಕಷ್ಟಗಳನ್ನು ನೀಗಿಸುವುದಕ್ಕಾಗಿಯೇ ಪಂಚರತ್ನ ಯೋಜನೆ ಇರುವುದು. ಪಂಚರತ್ನ ಯೋಜನೆಯ ಮುಖಾಂತರ ನಿಮ್ಮೆಲ್ಲರ ಕಷ್ಟಗಳನ್ನು ಬಗೆಹರಿಸಲು ಶ್ರಮಿಸಲಾಗುವುದು. ಮತದಾರರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು ಎಂದ ಕುಮಾರಣ್ಣ ʼಹನೂರು ಕ್ಷೇತ್ರದಲ್ಲಿ ನಮ್ಮ ಪಕ್ಷವನ್ನು ಗೆಲ್ಲಿಸಿದ್ದೇ ಆದಲ್ಲಿ ಹನೂರು ಕ್ಷೇತ್ರವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡುವುದು ನನ್ನ ಜವಾಬ್ದಾರಿʼ ಎಂದು ಕುಮಾರಸ್ವಾಮಿ ಕ್ಷೇತ್ರದ ಜನರಿಗೆ ಆಶ್ವಾಸನೆ ಕೊಟ್ಟರು.

ಹನೂರಿನಲ್ಲಿ ಎಚ್‌ಡಿಕೆ ಹೆಲಿಕಾಪ್ಟರ್ ತಪಾಸಣೆ; ಪೈಲೆಟ್ ಗರಂ

ಮತಪ್ರಚಾರಕ್ಕಾಗಿ ಹನೂರು ಪಟ್ಟಣಕ್ಕೆ ಆಗಮಿಸಿದ ಎಚ್‌ಡಿಕೆ ಹೆಲಿಕಾಪ್ಟರನ್ನು ಚುನಾವಣಾ ಆಯೋಗದವರು ತಪಾಸಣೆಗೊಳಪಡಿಸಿದರು.

ಎಚ್.ಡಿ. ಕುಮಾರಸ್ವಾಮಿ ಹೆಲಿಕಾಪ್ಟರ್‌ನಿಂದ ಇಳಿಯುತ್ತಿದ್ದಂತೆ ಧಾವಿಸಿದ ಚುನಾವಣಾ ಆಯೋಗದವರು ಹೆಲಿಕಾಪ್ಟರ್‌ನ ಪ್ರತಿಯೊಂದು ಭಾಗವನ್ನು ಕೂಲಂಕಶವಾಗಿ ತಪಾಸಣೆಗೆ ಒಳಪಡಿಸಿದರು.

ಆಗ ಪೈಲೆಟ್ ʼಎಷ್ಟು ಬಾರಿ ಹೆಲಿಕಾಪ್ಟರ್ ಅನ್ನು ಪರಿಶೀಲನೆ ಮಾಡುತ್ತೀರಾʼ? ಎಂದು ಚುನಾವಣಾ ಆಯೋಗದವರ ವಿರುದ್ಧ ಗರಂ ಆದರು. ಕೆಲ ಹೊತ್ತಿನ ಕಾಲ ತಪಾಸಣೆ ನಡೆಸಿದ ಬಳಿಕ ಶಂಕಿತವಾಗಿ ಏನು ಪತ್ತೆಯಾಗಲಿಲ್ಲ ಎಂದು ಹೇಳಿ ಹೊರನಡೆದರು.

ಇದನ್ನೂ ಓದಿ

JDS Bengaluru Manifesto: ಜೆಡಿಎಸ್‌ನಿಂದ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಪ್ರಣಾಳಿಕೆ ಬಿಡುಗಡೆ, ಪ್ರತಿವಾರ್ಡ್‌ನಲ್ಲೂ ಆಸ್ಪತ್ರೆ

ಕರ್ನಾಟಕ ವಿಧಾನಸಭೆ ಚುನಾವಣೆ (Karnataka Election)ಗಾಗಿ ಹೆಚ್‌ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಪಕ್ಷವು ಬೆಂಗಳೂರು ಮಹಾನಗರಕ್ಕೆ (JDS Bengaluru Manifesto) ಪ್ರತ್ಯೇಕ ಪ್ರಣಾಳಿಕೆ ಪ್ರಕಟಿಸಿದೆ.

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Election)ಗಾಗಿ ಹೆಚ್‌ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಪಕ್ಷವು ಬೆಂಗಳೂರು ಮಹಾನಗರಕ್ಕೆ (JDS Bengaluru Manifesto) ಪ್ರತ್ಯೇಕ ಪ್ರಣಾಳಿಕೆ ಪ್ರಕಟಿಸಿದೆ. ಆ ಪ್ರಣಾಳಿಕೆಯಲ್ಲಿ ಬೆಂಗಳೂರಿಗೆ ಭರಪೂರ ಕೊಡುಗೆ ಘೋಷಿಸಲಾಗಿದೆ. ಮಾಜಿ ಪ್ರಧಾನಮಂತ್ರಿಗಳಾದ ಹೆಚ್‌ಡಿ ದೇವೇಗೌಡರು ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ಬೆಂಗಳೂರು ಮಹಾನಗರದ ಜನತಾ ಪ್ರಣಾಳಿಕೆ ಬಿಡುಗಡೆ ಮಾಡಿದರು. ಪ್ರಣಾಳಿಕೆ ಸಮಿತಿ ಸದಸ್ಯರಾದ ಕುಪೇಂದ್ರ ರೆಡ್ಡಿ ಅವರು,ಕೆ.ಎನ್.ತಿಪ್ಪೇಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಸರವಣ, ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಬೆಂಗಳೂರು ನಗರದ ಜೆಡಿಎಸ್ ಅಧ್ಯಕ್ಷ ಹೆಚ್‌ಎಂ ರಮೇಶ್ ಗೌಡ ಮುಂತಾದವರು ಹಾಜರಿದ್ದರು.

    ಹಂಚಿಕೊಳ್ಳಲು ಲೇಖನಗಳು