PFI Crackdown In Karnataka: ಬೆಳ್ಳಂಬೆಳಗ್ಗೆಯೇ PFI ಮುಖಂಡರನ್ನೇಕೆ ಬಂಧಿಸಿದ್ರು? ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆಗೆ ಈ ವಿಡಿಯೋ ನೋಡಿ.
Sep 27, 2022 12:51 PM IST
ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ (HT File)
- PFI Crackdown In Karnataka: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು ಬೆಳ್ಳಂಬೆಳಗ್ಗೆಯೇ ಕಾರ್ಯಾಚರಣೆ ನಡೆಸಿದ ಪೊಲೀಸರು 75ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರು, ಮುಖಂಡರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಕಾರ್ಯಾಚರಣೆ ಕುರಿತು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ. ಅದರ ವರದಿ, ವಿಡಿಯೋ ಇಲ್ಲಿದೆ.
ಬೆಂಗಳೂರು: ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೀದರ್, ಚಾಮರಾಜನಗರ, ಚಿತ್ರದುರ್ಗ, ರಾಮನಗರ, ಕೊಪ್ಪಳ, ಬಳ್ಳಾರಿ, ಕೋಲಾರ, ಬೆಂಗಳೂರು ಗ್ರಾಮಾಂತರ, ಮೈಸೂರು, ವಿಜಯಪುರ ಸೇರಿ ರಾಜ್ಯಾದ್ಯಂತ ಪಿಎಫ್‌ಐ ಮುಖಂಡರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವಿಶೇಷ ಕಾರ್ಯಾಚರಣೆ ಕಾರಣ 75ಕ್ಕೂ ಹೆಚ್ಚು ನಾಯಕರು ಪೊಲೀಸ್ ವಶದಲ್ಲಿದ್ದಾರೆ.
ಎನ್‌ಐಎ ಕಾರ್ಯಾಚರಣೆ ನಡೆದ ಕೆಲವೇ ದಿನಗಳ ಬೆನ್ನಿಗೆ ಪೊಲೀಸರ ಈ ಕಾರ್ಯಾಚರಣೆ ಎಲ್ಲರಲ್ಲೂ ಕುತೂಹಲ ಉಂಟುಮಾಡಿತ್ತು. ಯಾಕೆ ಈ ದಿಢೀರ್ ಕಾರ್ಯಾಚರಣೆ? ಮತ್ತೇನಾದರೂ ಸಾಕ್ಷ್ಯಗಳು ದೊರಕಿದುವಾ? ಎಂಬಿತ್ಯಾದಿ ಸಂದೇಹಗಳು ಕಾಡಿವೆ.
ಪಿಎಫ್‌ಐ ಮತ್ತು ಎಸ್‌ಡಿಪಿಐ ಮುಖಂಡರ ಬಂಧನವು ರಾಜ್ಯದಲ್ಲಿ ಈ ಎರಡೂ ಸಂಘಟನೆಗಳ ಕಾರ್ಯಕರ್ತರಲ್ಲಿ ಮತ್ತು ಹಿತೈಷಿಗಳಲ್ಲಿ ತಲ್ಲಣವನ್ನು ಉಂಟುಮಾಡಿದೆ. ಅವರ ಆಕ್ರಮಣಕಾರಿ ನಿಲುವು ಮತ್ತು ಪ್ರತಿಭಟನೆಯ ಕುರಿತು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಮತ್ತು ಆಕ್ಷೇಪ, ಟೀಕೆಗಳು ವ್ಯಕ್ತವಾಗಿವೆ.
ಈ ನಡುವೆ, ಈ ವಿದ್ಯಮಾನದ ಕುರಿತು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದ ಹಲವು ಕಡೆ, ಪೊಲೀಸರು ಪಿಎಫ್‌ಐ ಕಾರ್ಯಕರ್ತರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಇಂದು ವಶಕ್ಕೆ ಪಡೆದಿದ್ದಾರೆ. ಇತ್ತೀಚೆಗೆ ಎನ್‌ಐಎ ಕಾರ್ಯಾಚರಣೆ ನಡೆದಾಗ ಇವರೆಲ್ಲ ಪ್ರತಿಭಟನೆ ನಡೆಸಿ, ಉದ್ವಿಗ್ನ ಪರಿಸ್ಥಿತಿ ಉಂಟುಮಾಡಿ ಶಾಂತಿ ಕದಡುವ ಪ್ರಯತ್ನ ಮಾಡಿದ್ದು. ಸಂಭಾವ್ಯ ಅಪಾಯದ ಕಾರಣ ಈ ಕ್ರಮ ಎಂದು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಅವರ ಹೇಳಿಕೆ ಪೂರ್ಣಪಾಠ ವೀಕ್ಷಿಸಲು ಕೆಳಗಿನ ವಿಡಿಯೋ ಗಮನಿಸಿ.
PFI Crackdown in Karnataka: ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೀದರ್, ಚಾಮರಾಜನಗರ, ಚಿತ್ರದುರ್ಗ, ರಾಮನಗರ, ಕೊಪ್ಪಳ, ಬಳ್ಳಾರಿ, ಕೋಲಾರ, ಬೆಂಗಳೂರು ಗ್ರಾಮಾಂತರ, ಮೈಸೂರು, ವಿಜಯಪುರ ಸೇರಿ ರಾಜ್ಯಾದ್ಯಂತ ಪಿಎಫ್‌ಐ ಮುಖಂಡರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು. 75ಕ್ಕೂ ಹೆಚ್ಚು ನಾಯಕರು ಪೊಲೀಸ್ ವಶಕ್ಕೆ. ವಿವರ ವರದಿ ಇಲ್ಲಿದೆ. PFI Crackdown in Karnataka: ಗಲಭೆಗೆ ಸಜ್ಜಾಗಿದ್ದ ಪಿಎಫ್‌ಐ; 75ಕ್ಕೂ ಹೆಚ್ಚು ಮುಖಂಡರು ಪೊಲೀಸ್ ವಶಕ್ಕೆ
A 16-year-long history PFI: ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (SIMI) ಮೇಲೆ ಸರ್ಕಾರ ನಿಷೇಧ ಹೇರಿದ ಐದು ವರ್ಷಗಳ ಬಳಿಕ ನಡೆದ ಬೆಳವಣಿಗೆ ಇದು. ನ್ಯಾಷನಲ್ ಡೆವಲಪ್‌ಮೆಂಟ್ ಫ್ರಂಟ್ ಆಫ್ ಕೇರಳ, ದ ಕರ್ನಾಟಕ ಫೋರಂ ಫಾರ್ ಡಿಗ್ನಿಟಿ ಎಂಬ ಮೂರು ಸಂಘಟನೆಗಳು ವಿಲೀನಗೊಂಡು ಪಿಎಫ್‌ಐ ರಚನೆ ಆಗಿದೆ. History of PFI: 16 ವರ್ಷಗಳ ಪಿಎಫ್‌ಐ ಇತಿಹಾಸ ಹೀಗಿದೆ ನೋಡಿ; ಪಿಎಫ್‌ಐ ಹುಟ್ಟಿಗೆ ಇದೆ 2 ಸ್ಪಷ್ಟ ಕಾರಣ; ಇಲ್ಲಿದೆ ವಿವರ
PFI in Karnataka: ಕರ್ನಾಟಕದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಹೆಜ್ಜೆ ಗುರುತು ಅವಲೋಕಿಸುವುದಾದರೆ, ಪಿಎಫ್‌ಐ ರಚನೆಯ ಐಡಿಯಾ ಹುಟ್ಟಿದ್ದೇ ಬೆಂಗಳೂರಿನಲ್ಲಿ ಎಂಬ ವರದಿಯೊಂದು ಗಮನಸೆಳೆಯುತ್ತದೆ. PFI in Karnataka: ಪಿಎಫ್‌ಐ ರಚನೆ ಐಡಿಯಾ ಹುಟ್ಟಿದ್ದೇ ಬೆಂಗಳೂರಲ್ಲಿ! SDPI ಮೊದಲು ಚುನಾವಣೆ ಎದುರಿಸಿದ್ದು ಕರ್ನಾಟಕದಲ್ಲೇ ಅಂತಿದೆ ವರದಿ!