ಕನ್ನಡ ಸುದ್ದಿ  /  ಕರ್ನಾಟಕ  /  Pfi Crackdown In Karnataka: ಗಲಭೆಗೆ ಸಜ್ಜಾಗಿದ್ದ ಪಿಎಫ್‌ಐ; 75ಕ್ಕೂ ಹೆಚ್ಚು ಮುಖಂಡರು ಪೊಲೀಸ್‌ ವಶಕ್ಕೆ

PFI Crackdown in Karnataka: ಗಲಭೆಗೆ ಸಜ್ಜಾಗಿದ್ದ ಪಿಎಫ್‌ಐ; 75ಕ್ಕೂ ಹೆಚ್ಚು ಮುಖಂಡರು ಪೊಲೀಸ್‌ ವಶಕ್ಕೆ

PFI Crackdown in Karnataka: ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೀದರ್​, ಚಾಮರಾಜನಗರ, ಚಿತ್ರದುರ್ಗ, ರಾಮನಗರ, ಕೊಪ್ಪಳ, ಬಳ್ಳಾರಿ, ಕೋಲಾರ, ಬೆಂಗಳೂರು ಗ್ರಾಮಾಂತರ, ಮೈಸೂರು, ವಿಜಯಪುರ ಸೇರಿ ರಾಜ್ಯಾದ್ಯಂತ ಪಿಎಫ್​​ಐ ಮುಖಂಡರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು. 75ಕ್ಕೂ ಹೆಚ್ಚು ನಾಯಕರು ಪೊಲೀಸ್‌ ವಶಕ್ಕೆ. ವಿವರ ವರದಿ ಇಲ್ಲಿದೆ.

ರಾಜ್ಯಾದ್ಯಂತ ನಿನ್ನೆ ತಡರಾತ್ರಿ, ಇಂದು ನಸುಕಿನ ವೇಳೆ ಪಿಎಫ್​ಐ (ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ) (PFI) ಮುಖಂಡರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ 45ಕ್ಕೂ ಹೆಚ್ಚು ಮುಖಂಡರನ್ನು ವಶಪಡಿಸಿಕೊಂಡಿದ್ದಾರೆ.
ರಾಜ್ಯಾದ್ಯಂತ ನಿನ್ನೆ ತಡರಾತ್ರಿ, ಇಂದು ನಸುಕಿನ ವೇಳೆ ಪಿಎಫ್​ಐ (ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ) (PFI) ಮುಖಂಡರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ 45ಕ್ಕೂ ಹೆಚ್ಚು ಮುಖಂಡರನ್ನು ವಶಪಡಿಸಿಕೊಂಡಿದ್ದಾರೆ. (SM )

ಬೆಂಗಳೂರು: ರಾಜ್ಯಾದ್ಯಂತ ಪಿಎಫ್​ಐ (ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ) (PFI) ಮುಖಂಡರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ 75ಕ್ಕೂ ಹೆಚ್ಚು ಮುಖಂಡರನ್ನು ವಶಪಡಿಸಿಕೊಂಡಿದ್ದಾರೆ.

ಕಾನೂನು & ಸುವ್ಯವಸ್ಥೆ ಎಡಿಜಿಪಿ ಅಲೋಕ್​ ಕುಮಾರ್​ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ದೇಶಾದ್ಯಂತ ಉಗ್ರಚಟುವಟಿಕೆಗಳಲ್ಲಿ ಪಿಎಫ್‌ಐ ಪಾಲ್ಗೊಂಡಿರುವುದಕ್ಕೆ ಸಾಕ್ಷ್ಯಗಳು ಸಿಕ್ಕಿರುವ ಕಾರಣ, ಎನ್‌ಐಎ ಕಾರ್ಯಾಚರಣೆ ನಡೆಸಿತ್ತು. ಇದನ್ನು ವಿರೋಧಿಸಿ ಪಿಎಫ್‌ಐ ಪ್ರತಿಭಟನೆ ಮತ್ತು ಹಿಂಸಾ ಸ್ವರೂಪದ ಗಲಭೆ ಸಂಚು ರೂಪಿಸಿದ ಕಾರಣಕ್ಕೆ ಶಾಂತಿ ಕದಡುವ ಪ್ರಯತ್ನ ಎಂದು ರಾಜ್ಯಾದ್ಯಂತ ನಿನ್ನೆ ರಾತ್ರಿ ಪೊಲೀಸ್‌ ಕಾರ್ಯಾಚರಣೆ ನಡೆದಿತ್ತು. ವಿವಿಧ ಜಿಲ್ಲೆಗಳಿಂದ 75ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರನ್ನು, ನಾಯಕರನ್ನು ರಾಜ್ಯ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಯಾವ ಜಿಲ್ಲೆಗಳಲ್ಲಿ ಪಿಎಫ್‌ಐ ನಾಯಕರ ಬಂಧನ?

ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೀದರ್​, ಚಾಮರಾಜನಗರ, ಚಿತ್ರದುರ್ಗ, ರಾಮನಗರ, ಕೊಪ್ಪಳ, ಬಳ್ಳಾರಿ, ಕೋಲಾರ, ಬೆಂಗಳೂರು ಗ್ರಾಮಾಂತರ, ಮೈಸೂರು, ವಿಜಯಪುರ ಸೇರಿ ರಾಜ್ಯಾದ್ಯಂತ ಪಿಎಫ್​​ಐ ಮುಖಂಡರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು.

ಬಾಗಲಕೋಟೆಯಲ್ಲಿ ಏನಾಗಿದೆ?

ಬಾಗಲಕೋಟೆಯಲ್ಲಿ ಕನಿಷ್ಠ 7 ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ವಿಜಯಪುರದಲ್ಲೇನಾಯಿತು?

ವಿಜಯಪುರ ನಗರದಲ್ಲಿ ಪೊಲೀಸರು ಪಿಎಫ್ಐನ ಜಿಲ್ಲಾ ಅಧ್ಯಕ್ಷ ಅಶ್ಪಾಕ್ ಜಮಖಂಡಿಯನ್ನು ಅವರ ಮನೆಯಿಂದಲೇ ಅರೆಸ್ಟ್‌ ಮಾಡಿದ್ದಾರೆ. ಪಿಎಫ್ಐ ಸಂಘಟನೆ ಹೋರಾಟ, ಹಣಕಾಸಿನ ವ್ಯವಹಾರ ಸೇರಿ ವಿವಿಧ ಚಟುವಟಿಕೆಗಳನ್ನು ಅಶ್ಫಾಕ್‌ ಜಮಖಂಡಿ ನಡೆಸುತ್ತಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬೆಳಗಾವಿಯಲ್ಲಿ ಕಾರ್ಯಾಚರಣೆ

ಬೆಳಗಾವಿಯಲ್ಲಿ ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಐವರು PFI ಮುಖಂಡರು ಪೊಲೀಸ್‌ ವಶದಲ್ಲಿದ್ದಾರೆ. ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಬಂಧಿತರವಿಚಾರಣೆ ನಡೆದಿದೆ.

ದಕ್ಷಿಣ ಕನ್ನಡದಲ್ಲೇನಾಯಿತು?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಎಫ್‌ಐನ 14 ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿದ ಪೊಲೀಸರು 10 PFI ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.

ಉಡುಪಿಯಲ್ಲಿ ಏನಾಗಿದೆ?

ಉಡುಪಿ ಜಿಲ್ಲೆಯ ಹೂಡೆ, ಕುಂದಾಪುರ, ಗಂಗೊಳ್ಳಿ, ಬೈಂದೂರಿನಲ್ಲೂ ರೇಡ್​ ಆಗಿದ್ದು PFIನ ನಾಲ್ವರು ಮುಖಂಡರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಉಳಿದ ಜಿಲ್ಲೆಗಳಲ್ಲಿ ಏನು ಕಥೆ?

ರಾಮನಗರದಲ್ಲಿ 9, ಚನ್ನಪಟ್ಟಣದಲ್ಲಿ 15, ಕೋಲಾರದಲ್ಲಿ ನವಾಜ್ ಪಾಷಾ, ವಸೀಂ‌ ಪಾಷಾ, ಸಿದ್ದಿಕ್ ಪಾಷಾ, ಅಲ್ಲಾಭಕ್ಷ್ ಇಂತಿಯಾಜ್ ಪಾಷಾ, ಶಾಬಾಜ್ ಪಾಷಾ ಸೇರಿ 6 ಪಿಎಫ್​ಐ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ, ಭದ್ರಾವತಿಯಲ್ಲಿ ಐವರು ಪಿಎಫ್​ಐ ಮುಖಂಡರನ್ನ ವಶಕ್ಕೆ ಪಡೆದಿದ್ದಾರೆ.

ಕಲಬುರಗಿಯಲ್ಲಿ PFI ಮುಖಂಡ ಹುಸೇನ್‌ ಅನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಮತ್ತಿಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ. ಹೊಸಕೋಟೆಯಲ್ಲಿ 4 ಜನ, ದೊಡ್ಡಬಳ್ಳಾಪುರದಲ್ಲಿ 3 ಮತ್ತು ವಿಜಯಪುದಲ್ಲಿ ಇಬ್ಬರ ಮನೆಗಳ ಮೇಲೆ ದಾಳಿ ನಡೆದಿದ್ದು ಒಟ್ಟು 9 ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಚಾಮರಾಜನಗರ ಜಿಲ್ಲೆಯಲ್ಲಿ PFI ಜಿಲ್ಲಾಧ್ಯಕ್ಷ ಕಪಿಲ್, ಕಾರ್ಯದರ್ಶಿ ಸುಯೇಬ್‌ರನ್ನು ವಶಕ್ಕೆ ಪಡೆಯಲಾಗಿದೆ. ರಾಯಚೂರಿನಲ್ಲೂ ಮೊಹ್ಮದ್ ಇಸ್ಮಾಯಿಲ್, ಆಸೀಂ ಸೇರಿ ಇಬ್ಬರು PFI ಕಾರ್ಯಕರ್ತರು ಪೊಲೀಸ್‌ ವಶದಲ್ಲಿದ್ದಾರೆ. ಹುಬ್ಬಳ್ಳಿಯಲ್ಲಿ 9ಕ್ಕೂ ಹೆಚ್ಚು PFI, SDPI ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ. ರಾಯಚೂರಿನಲ್ಲಿ PFI ಮಾಜಿ ಅಧ್ಯಕ್ಷ ಮೊಹಮ್ಮದ್ ಬಂಧಿಸಲಾಗಿದೆ.

ಚಿತ್ರದುರ್ಗದಲ್ಲಿ ಆರು ಕ್ರಿಮಿನಲ್‌ ಪ್ರಕರಣಗಳ ಆರೋಪಿ

ಚಿತ್ರದುರ್ಗದಲ್ಲಿ ಪಿಎಫ್​ಐ ಮುಖಂಡ ಅರ್ಫಾನ್ ಅಲಿಯನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಚಿಕ್ಕಪೇಟೆ ಬಡಾವಣೆ ನಿವಾಸಿ ಅರ್ಫಾನ್ ಅಲಿ ಶಾಂತಿ ಕದಡುವ ಕೃತ್ಯದಲ್ಲಿ ಭಾಗಿಯಾದ ಆರೋಪದಡಿ ಬಂಧಿತನಾಗಿದ್ದಾನೆ. ಈತ ಆರು ಕ್ರಿಮಿನಲ್‌ ಪ್ರಕರಣಗಳ ಆರೋಪಿ.

ಪಿಎಫ್‌ಐ ಗಲಭೆ ಸಂಚು ರೂಪಿಸಿತ್ತಾ?

ಪಿಎಫ್‌ಐ ಮೇಲೆ ನ್ಯಾಷನಲ್‌ ಇನ್‌ವೆಸ್ಟಿಗೇಶನ್‌ ಏಜೆನ್ಸಿ ಮತ್ತು ಇಡಿ ದಾಳಿ ನಡೆಸಿದ್ದನ್ನು ವಿರೋಧಿ ಪ್ರತಿಭಟನೆ, ಬಂದ್‌ಗಳನ್ನು ಪಿಎಫ್‌ಐ ಕಾರ್ಯಕರ್ತರು ನಡೆಸಿದ್ದರು. ಮಂಗಳೂರು ಮತ್ತು ಇತರೆಡೆ ಗೋ ಬ್ಯಾಕ್‌ ಎನ್‌ಐಎ ಪ್ರತಿಭಟನೆ ಕೂಡ ಆಗಿತ್ತು. ಕೇರಳದಲ್ಲಿ ಪಿಎಫ್‌ಐ ಬಂದ್‌ಗೆ ಕರೆ ಕೊಟ್ಟದ್ದು ಹೈಕೋರ್ಟ್‌ ಅಸಮಾಧಾನಕ್ಕೂ ಕಾರಣವಾಗಿತ್ತು. ಎನ್‌ಐಎ ಕಾರ್ಯಾಚರಣೆಯಿಂದಾಗಿ ಪಿಎಫ್‌ಐ ತೀವ್ರ ಅಸಮಾಧಾದಲ್ಲಿದೆ. ದಿಢೀರ್‌ ಪ್ರತಿಭಟನೆ, ಗಲಭೆ ಸಂಚು ರೂಪಿಸುತ್ತಿರುವ ಗುಪ್ತಚರ ಮಾಹಿತಿ ಲಭ್ಯವಾದ ಕಾರಣ ಪೊಲೀಸ್‌ ಕಾರ್ಯಾಚರಣೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

IPL_Entry_Point