PFI in Karnataka: ಪಿಎಫ್‌ಐ ರಚನೆ ಐಡಿಯಾ ಹುಟ್ಟಿದ್ದೇ ಬೆಂಗಳೂರಲ್ಲಿ! SDPI ಮೊದಲು ಚುನಾವಣೆ ಎದುರಿಸಿದ್ದು ಕರ್ನಾಟಕದಲ್ಲೇ ಅಂತಿದೆ ವರದಿ!
PFI in Karnataka: ಕರ್ನಾಟಕದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಹೆಜ್ಜೆ ಗುರುತು ಅವಲೋಕಿಸುವುದಾದರೆ, ಪಿಎಫ್‌ಐ ರಚನೆಯ ಐಡಿಯಾ ಹುಟ್ಟಿದ್ದೇ ಬೆಂಗಳೂರಿನಲ್ಲಿ ಎಂಬ ವರದಿಯೊಂದು ಗಮನಸೆಳೆಯುತ್ತದೆ.
ಬೆಂಗಳೂರು: ಅಂದು 2006 ಡಿಸೆಂಬರ್ 19. ಬೆಂಗಳೂರಿನಲ್ಲಿ ಒಂದು ಸಭೆ ನಡೆದಿತ್ತು. ಅಲ್ಲಿ ಮೂರು ಇಸ್ಲಾಮಿಕ್ ಸಂಘಟನೆಗಳ ವಿಲೀನವೇ ಮಾತುಕತೆಯ ಅಜೆಂಡಾ ಆಗಿತ್ತು. ನ್ಯಾಷನಲ್ ಡೆವಲಪ್‌ಮೆಂಟ್ ಫ್ರಂಟ್ ಆಫ್ ಕೇರಳ (ಎನ್‌ಡಿಎಫ್), ದ ಕರ್ನಾಟಕ ಫೋರಂ ಫಾರ್ ಡಿಗ್ನಿಟಿ ಇವೇ ಆ ಮೂರು ಸಂಘಟನೆಗಳು.
ಹೀಗೆ, ಬಹಳ ಚಿಂತನೆ ನಡೆಸಿದ ಬಳಿಕ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ರಚನೆಯ ತೀರ್ಮಾನವನ್ನು ಮೂರು ಸಂಘಟನೆಗಳ ನಾಯಕರು ತೆಗೆದುಕೊಂಡರು. ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ಮೇಲೆ ನಿಷೇಧ ಹೇರಿದ ನಂತರ ಮತ್ತು ಎನ್‌ಡಿಎಫ್‌ನ ರಾಜಕೀಯ ಹಿನ್ನಡೆಯ ವಿಚಾರ ತೀವ್ರ ಚರ್ಚೆಗೆ ಒಳಗಾಗಿತ್ತು ಎಂದು ದ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಸಿಮಿ ಮತ್ತು ಎನ್‌ಡಿಎಫ್
ಅನೇಕ ರಾಜ್ಯಗಳಲ್ಲಿ ಸರಣಿ ಬಾಂಬ್ ಸ್ಫೋಟದ ನಂತರ ಸಿಮಿಯನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು. ಈ ವಿಚಾರವನ್ನು ಸಿಪಿಐ(ಎಂ) ಮತ್ತು ಬಿಜೆಪಿ ಎರಡೂ ಗಂಭೀರವಾಗಿ ತೆಗೆದುಕೊಂಡಿದ್ದವು. ಕೇರಳದಲ್ಲಿ ಎನ್‌ಡಿಎಫ್ ಮತ್ತು ಸಿಮಿ ನಂಟನ್ನು ಉಲ್ಲೇಖಿಸಿ, ಈ ಸಂಘಟನೆ ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುತ್ತದೆ ಎಂದು ಆರೋಪಿಸಿ ಎನ್‌ಡಿಎಫ್ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕು ಎಂದು ಸಿಪಿಐ (ಎಂ) ಮತ್ತು ಬಿಜೆಪಿ ಬಲವಾಗಿ ಆಗ್ರಹಿಸಿದ್ದವು. ಇದು ಈ ಇಸ್ಲಾಮಿಕ್ ಸಂಘಟನೆಗಳ ನಾಯಕರಿಗೆ ತಲೆನೋವು ಉಂಟುಮಾಡಿತ್ತು.
ಹೀಗೆ ಪಿಎಫ್ಐ ಹುಟ್ಟಿನಿಂದಲೂ ಸಿಮಿಯ ಹೊಸ ರೂಪ ಎಂದೇ ಬಿಂಬಿತವಾಗಿದೆ. ಇದಕ್ಕೆ ಕಾರಣ ಅದರ ನಾಯಕರೆಲ್ಲರೂ ಸಿಮಿಯ ನಾಯಕರಾಗಿದ್ದುದು.
ಎಸ್‌ಡಿಪಿಐ ಮೊದಲು ಸ್ಪರ್ಧಿಸಿದ್ದೇ ಕರ್ನಾಟಕದಲ್ಲಿ!
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸ್ಥಾಪನೆ ಆಗಿ, ಮೂರು ವರ್ಷಗಳ ಬಳಿಕ, ಸೋಷಿಯಲ್ ಡೆಮಾಕ್ರಟಿಕ್ ಫಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಜನ್ಮ ಪಡೆದಿದೆ. ರಾಜಕೀಯ ಪಕ್ಷವಾಗಿ ಎಸ್‌ಡಿಪಿಐ ಮೊಟ್ಟ ಮೊದಲ ಚುನಾವಣೆಯನ್ನು ಕರ್ನಾಟಕದಲ್ಲೇ ಎದುರಿಸಿದ್ದು! ಎಂಬ ದಾಖಲೆ ಇದೆ.
ಹಿಂದು ಕಾರ್ಯಕರ್ತರ ಹತ್ಯೆ ಪ್ರಕರಣದ ನಂಟು
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಇತ್ತೀಚೆಗೆ ನಡೆದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಪಿಎಫ್‌ಐ ಮತ್ತು ಎಸ್‌ಡಿಪಿಐ ಕೈವಾಡ ಇದೆ ಎಂಬ ಆರೋಪವನ್ನು ಕರ್ನಾಟಕ ಎಡಿಜಿಪಿ ಅಲೋಕ್ ಕುಮಾರ್ ಉಲ್ಲೇಖಿಸಿದ್ದರು. ಈ ಕೇಸ್‌ನಲ್ಲಿ ಇದುವರೆಗೆ ಒಟ್ಟು 10 ಜನರನ್ನು ಬಂಧಿಸಲಾಗಿದೆ.
ಬೆಂಗಳೂರು ಶಿವಾಜಿನಗರದಲ್ಲಿ ಆರೆಸ್ಸೆಸ್ ಸ್ವಯಂ ಸೇವಕ ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಪಿಎಫ್‌ಐ ಬೆಂಗಳೂರು ಜಿಲ್ಲಾ ಅಧ್ಯಕ್ಷ ಅಜೀಂ ಷರೀಫ್ ಸೇರಿ ಐವರನ್ನು ಪೊಲೀಸರು 2016ರಲ್ಲಿ ಬಂಧಿಸಿದ್ದಾರೆ.
ಬೆಂಗಳೂರಿನ ಡಿಜೆಹಳ್ಳಿ ಪ್ರದೇಶದಲ್ಲಿ 2020ರ ಆಗಸ್ಟ್ 11ರಂದು ಸಂಭವಿಸಿದ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟಿದ್ದರು. ಈ ಹಿಂಸಾರದಲ್ಲಿ ಪಿಎಫ್‌ಐ ಕೈವಾಡ ಇದೆ ಎಂದು ಕರ್ನಾಟಕ ಪೊಲೀಸರು ಆರೋಪಿಸಿದ್ದಾರೆ.
ಇದಲ್ಲದೆ, ಈ ವರ್ಷ ಫೆಬ್ರವರಿಯಲ್ಲಿ ಉಡುಪಿಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ಹುಡುಗಿಯರು ಹಿಜಾಬ್ ಧರಿಸಿ ಹೋಗಲು ಅವಕಾಶ ನೀಡಬೇಕು ಎಂದು ವಿವಾದ ಸೃಷ್ಟಿ ಮಾಡಿದ ಪ್ರಕರಣದಲ್ಲೂ ಪಿಎಫ್‌ಐ ಮುನ್ನೆಲೆಯಲ್ಲಿದೆ.
A 16-year-long history PFI: ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (SIMI) ಮೇಲೆ ಸರ್ಕಾರ ನಿಷೇಧ ಹೇರಿದ ಐದು ವರ್ಷಗಳ ಬಳಿಕ ನಡೆದ ಬೆಳವಣಿಗೆ ಇದು. ನ್ಯಾಷನಲ್ ಡೆವಲಪ್‌ಮೆಂಟ್ ಫ್ರಂಟ್ ಆಫ್ ಕೇರಳ, ದ ಕರ್ನಾಟಕ ಫೋರಂ ಫಾರ್ ಡಿಗ್ನಿಟಿ ಎಂಬ ಮೂರು ಸಂಘಟನೆಗಳು ವಿಲೀನಗೊಂಡು ಪಿಎಫ್‌ಐ ರಚನೆ ಆಗಿದೆ. History of PFI: 16 ವರ್ಷಗಳ ಪಿಎಫ್‌ಐ ಇತಿಹಾಸ ಹೀಗಿದೆ ನೋಡಿ; ಪಿಎಫ್‌ಐ ಹುಟ್ಟಿಗೆ ಇದೆ 2 ಸ್ಪಷ್ಟ ಕಾರಣ; ಇಲ್ಲಿದೆ ವಿವರ