logo
ಕನ್ನಡ ಸುದ್ದಿ  /  ಕರ್ನಾಟಕ  /  ಲಂಗ ದಾವನ್ಯಾಗ ಮಸ್ತ ಕಾಣತಿ ಲಾವಣ್ಯ.. ಅಂತ ಏನರ ಚುಡಾಯಿಸುದ ಮಾಡಿದ್ರ ಸೀದಾ ಗಡೀಪಾರು ಅಷ್ಟ: ಧಾರವಾಡ ಪೊಲೀಸ್ ಎಚ್ಚರಿಕೆ ಕೂಡ ವೈರಲ್‌

ಲಂಗ ದಾವನ್ಯಾಗ ಮಸ್ತ ಕಾಣತಿ ಲಾವಣ್ಯ.. ಅಂತ ಏನರ ಚುಡಾಯಿಸುದ ಮಾಡಿದ್ರ ಸೀದಾ ಗಡೀಪಾರು ಅಷ್ಟ: ಧಾರವಾಡ ಪೊಲೀಸ್ ಎಚ್ಚರಿಕೆ ಕೂಡ ವೈರಲ್‌

Umesh Kumar S HT Kannada

Nov 17, 2024 05:58 PM IST

google News

ಲಂಗ ದಾವನ್ಯಾಗ ಮಸ್ತ ಕಾಣತಿ ಲಾವಣ್ಯ.. ಅಂತ ಏನರ ಚುಡಾಯಿಸುದ ಮಾಡಿದ್ರ ಸೀದಾ ಗಡೀಪಾರು ಅಷ್ಟ ಎಂದು ಧಾರವಾಡ ಪೊಲೀಸ್ ಎಚ್ಚರಿಕೆ ಕೂಡ ವೈರಲ್‌ ಆಗಿದೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್‌ (ಎಡಚಿತ್ರ). ಬಲ ಚಿತ್ರದಲ್ಲಿ ಚುಡಾಯಿಸುವುದಕ್ಕೆ ಸಂಬಂಧಿಸಿದ ಮೆಟಾ ಎಐ ರಚಿತ ಚಿತ್ರವನ್ನು ಸಾಂದರ್ಭಿಕವಾಗಿ ಬಳಸಲಾಗಿದೆ.

  • ಹಳೇಹುಬ್ಬಳ್ಳಿ ಪ್ರದೇಶದಲ್ಲಿ ಬಾಲಕಿಯನ್ನು ಚುಡಾಯಿಸಿದ ಪ್ರಕರಣದ ಬೆನ್ನಿಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಪುಂಡರಿಗೆ ಕಡಕ್ ಎಚ್ಚರಿಕೆ ನೀಡಿದ್ದಾರೆ. “ಲಂಗ ದಾವನ್ಯಾಗ ಮಸ್ತ ಕಾಣತಿ ಲಾವಣ್ಯ.. ಅಂತ ಏನರ ಚುಡಾಯಿಸುದ ಮಾಡಿದ್ರ ಸೀದಾ ಗಡೀಪಾರು ಅಷ್ಟ” ಎಂದು ಧಾರವಾಡ ಪೊಲೀಸ್ ನೀಡಿರುವ ಎಚ್ಚರಿಕೆ ಕೂಡ ವೈರಲ್‌ ಆಗಿದೆ. ಅದರ ವಿವರ ಇಲ್ಲಿದೆ.

ಲಂಗ ದಾವನ್ಯಾಗ ಮಸ್ತ ಕಾಣತಿ ಲಾವಣ್ಯ.. ಅಂತ ಏನರ ಚುಡಾಯಿಸುದ ಮಾಡಿದ್ರ ಸೀದಾ ಗಡೀಪಾರು ಅಷ್ಟ ಎಂದು ಧಾರವಾಡ ಪೊಲೀಸ್ ಎಚ್ಚರಿಕೆ ಕೂಡ ವೈರಲ್‌ ಆಗಿದೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್‌ (ಎಡಚಿತ್ರ). ಬಲ ಚಿತ್ರದಲ್ಲಿ ಚುಡಾಯಿಸುವುದಕ್ಕೆ ಸಂಬಂಧಿಸಿದ ಮೆಟಾ ಎಐ ರಚಿತ ಚಿತ್ರವನ್ನು ಸಾಂದರ್ಭಿಕವಾಗಿ ಬಳಸಲಾಗಿದೆ.
ಲಂಗ ದಾವನ್ಯಾಗ ಮಸ್ತ ಕಾಣತಿ ಲಾವಣ್ಯ.. ಅಂತ ಏನರ ಚುಡಾಯಿಸುದ ಮಾಡಿದ್ರ ಸೀದಾ ಗಡೀಪಾರು ಅಷ್ಟ ಎಂದು ಧಾರವಾಡ ಪೊಲೀಸ್ ಎಚ್ಚರಿಕೆ ಕೂಡ ವೈರಲ್‌ ಆಗಿದೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್‌ (ಎಡಚಿತ್ರ). ಬಲ ಚಿತ್ರದಲ್ಲಿ ಚುಡಾಯಿಸುವುದಕ್ಕೆ ಸಂಬಂಧಿಸಿದ ಮೆಟಾ ಎಐ ರಚಿತ ಚಿತ್ರವನ್ನು ಸಾಂದರ್ಭಿಕವಾಗಿ ಬಳಸಲಾಗಿದೆ.

ಹುಬ್ಬಳ್ಳಿ: ಹಳೇಹುಬ್ಬಳ್ಳಿಯಲ್ಲಿ ಬಾಲಕಿಯನ್ನು ಚುಡಾಯಿಸಿದ ಪ್ರಕರಣದ ಬೆನ್ನಿಗೆ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರ್‌ ಶಶಿಕುಮಾರ್‌ ಅವರು, “ಲಂಗ ದಾವನ್ಯಾಗ ಮಸ್ತ ಕಾಣತಿ ಲಾವಣ್ಯ.. ಅಂತ ಏನರ ಹೆಣ್ಣುಮಕ್ಕಳನ್ನು ಚುಡಾಯಿಸುದ ಮಾಡಿದ್ರ ಸೀದಾ ಗಡೀಪಾರು ಅಷ್ಟ” ಎಂದು ಪುಂಡರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು ತಮ್ಮ ಹೇಳಿಕೆಯ ವಿಡಿಯೋವನ್ನು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲೂ ಶೇರ್ ಮಾಡಿದ್ದಾರೆ. ಆ ವಿಡಿಯೋ ವೈರಲ್ ಆಗಿದ್ದು, ಅನೇಕರು ಅದಕ್ಕೆ ಸ್ಪಂದಿಸಿದ್ದಾರೆ. ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಅವರ ವಿಡಿಯೋ ಹೇಳಿಕೆ ಎಕ್ಸ್ ತಾಣದಲ್ಲಿ ನಿನ್ನೆ (ನವೆಂಬರ್ 16) ರಾತ್ರಿ ಅಪ್ಲೋಡ್ ಆಗಿದ್ದು, 40ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. 90ಕ್ಕೂ ಹೆಚ್ಚು ರೀಟ್ವೀಟ್ ಆಗಿದ್ದು, ಅನೇಕರು ಪ್ರತಿಕ್ರಿಯೆಯನ್ನೂ ಕೊಟ್ಟಿದ್ಧಾರೆ.

ಪೊಲೀಸ್ ಆಯಕ್ತರ ಟ್ವೀಟ್‌ನಲ್ಲಿತ್ತು - ಲಂಗ ದಾವನ್ಯಾಗ ಮಸ್ತ ಕಾಣತಿ ಲಾವಣ್ಯ.. ಹಾಡಿನ ಸಾಲು

ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಟ್ವೀಟ್‌ನಲ್ಲಿ “ಲಂಗ ದಾವನ್ಯಾಗ ಮಸ್ತ ಕಾಣತಿ ಲಾವಣ್ಯ.. ನಿನ್ನ ಫೋನ್ ನಂಬರ್ ಕೊಟ್ರ ಬರ್ತತಿ ಪುಣ್ಯ.. ಅಷ್ಟ.. ಅಂತಾವ ಹಾಡು ಕೇಳಿ ಅದನ್ನ ಅಲ್ಲಿಗೆ ಬಿಡ್ರಿ.. ಅದನ್ನ ಬಿಟ್ಟು ಏನರ ಹೆಣ್ಣುಮಕ್ಕಳನ್ನು ಚುಡಾಯಿಸುದ ಆಗ್ಲಿ, ಕಾಡಿಸುದ ಆಗ್ಲಿ, ಮಾಡಿದ್ರ ಕೇಸ್, ರೌಡಿಶೀಟ್ ಹಾಕಸ್ಕೊಂಡ ಹುಬ್ಬಳ್ಳಿ-ಧಾರವಾಡದಿಂದ ಸೀದಾ ಗಡೀಪಾರು ಆಗ್ತೀರಿ” ಎಂಬ ಎಚ್ಚರಿಕೆ ಸಾಲುಗಳಿದ್ದವು. ಇದು ಅನೇಕರು ಇದರತ್ತ ಗಮನಹರಿಸುವಂತೆ ಮಾಡಿದೆ.

ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳನ್ನು ಚುಡಾಯಿಸುವಂತಹ ಘಟನೆಗಳು ನಡೆದಲ್ಲಿ ಪೋಷಕರು ದೂರು ನೀಡಲು ಹಿಂಜರಿದರೆ ಪೊಲೀಸ್ ಇಲಾಖೆಯಿಂದಲೇ ಸು-ಮೋಟೋ (ಸ್ವಯಂ ಪ್ರೇರಿತ) ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಲಾಗುವುದು. ಇಂತಹ ಘಟನೆಗಳು ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.

ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹೇಳಿಕೆ ಇಷ್ಟು

ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಅವರು ವಿಡಿಯೋ ಹೇಳಿಕೆಯಲ್ಲಿ ಹೇಳಿರುವುದು ಇಷ್ಟು- "ಎಲ್ಲಾದ್ರೂ ಈ ತರ ಹೆಣ್ಣು ಮಕ್ಕಳಿಗೆ, ಮಕ್ಕಳಿಗೆ ತೊಂದರೆ ಕೊಡುವಂಥವರು ಯಾರಾದ್ರೂ ಕಂಡು ಬಂದ್ರೆ ಅಂಥ ಮಾಹಿತಿಯನ್ನ ನಮ್ಮ ಪೊಲೀಸರಿಗೆ ಸಾರ್ವಜನಿಕರು ತಿಳಿಸಬೇಕು ಎಂದು ಕೇಳಿಕೊಳ್ಳುತ್ತೇವೆ. ಈ ತರ ಯಾರು ಈ ರೋಡ್ ರೋಮಿಯೋಗಳ ತರ ಬೀದಿ ಬೀದಿಯಲ್ಲಿ ಸುತ್ತುತ್ತಾರೆ, ಹೆಣ್ಣು ಮಕ್ಕಳಿಗೆ ತೊಂದರೆ ಕೊಡ್ತಾರೆ ಅಂಥವರದ್ದು ಪ್ರತಿ ಸ್ಟೇಷನ್‌ನಲ್ಲಿ ಒಂದು ಪಟ್ಟಿಯನ್ನು ತಯಾರಿಸಿ ಅವರ ಮೇಲೆ ರೌಡಿ ಶೀಟ್ ಓಪನ್ ಮಾಡುವಂಥದ್ದು ಮತ್ತೆ ಕಾಲ ಕಾಲಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂಥದ್ದು ನಡೆಯುತ್ತೆ. ಅದೂ ಅಲ್ಲದೆ ಅವರನ್ನು ಠಾಣೆಗೆ ಕರೆಯಿಸಿಕೊಂಡು ಎಚ್ಚರಿಕೆ ನೀಡುವ ಕೆಲಸವೂ ಆಗುತ್ತದೆ. ಯಾವುದೇ ಮನೆ ಇರಲಿ ಅಲ್ಲಿ ಅಪ್ಪ, ಅಮ್ಮ, ಅಕ್ಕ, ತಂಗಿ, ಅಣ್ಣ, ತಮ್ಮ ಇದ್ದೇ ಇರ್ತಾರಲ್ಲ. ಹೆಣ್ಣು ಮಕ್ಕಳೂ ಇರ್ತಾರೆ. ಹಾಗಾಗಿ, ಅವರು ಯಾರೂ ಪುಂಡರ ಈ ಕೃತ್ಯಗಳನ್ನು ಬೆಂಬಲಿಸುವುದಿಲ್ಲ. ಈ ರೀತಿ ಘಟನೆಗಳಾದ ಕೂಡಲೇ ಪೊಲೀಸರ ಗಮನಕ್ಕೆ ತನ್ನಿ. ಬಾಲಕಿಯರ ವಿಚಾರದಲ್ಲಿ ಈ ಘಟನೆಗಳಾದರೆ ಸುಮ್ಮನೆ ಕೂರಬೇಡಿ. ಪೊಲೀಸ್ ಠಾಣೆಗೆ ಬಂದು ದೂರು ಕೊಡಿ. ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಸೋಷಿಯಲ್ ಮೀಡಿಯಾ ಪ್ರತಿಕ್ರಿಯೆ ಹೀಗಿದೆ

ಚನ್ನಯ್ಯ ಕರುನಾಡಿಗ ಎಂಬುವವರು “ಅಂತ ಅಶ್ಲೀಲ ಹಾಡು ಗಳನ್ನು ನಿಷೇಧ ಮಾಡುವ ಯೋಜನೆ ತನ್ನಿ.... ನಿಮಗೆ ಪುಣ್ಯ ಬರುತ್ತೆ... ಇಂಥ ಅಶ್ಲೀಲ ಹಾಡುಗಳಿಂದ ಸಮಾಜದ ಸ್ವಾಸ್ಥ್ಯ ಹಾಳು ಆಗುತ್ತಿದೆ” ಎಂದಿದ್ದಾರೆ.

ಕಾರ್ತಿಕ್ ಬಿ,ಕೆ ಎಂಬುವವರು ಪ್ರತಿಕ್ರಿಯಿಸುತ್ತ, “ಮೊದಲು ಕಿತ್ತೋಗಿರೋ ಈ ಜಾನಪದ ಹಾಡುಗಳನ್ನು ಯೂಟ್ಯೂಬ್ ಚಾನೆಲ್ ಗಳಿಂದ ಹೊರಗಡೆ ಹಾಕಿ.. ಇಂತಹ ಅಡ್ಮಿನ್ ವಿರುದ್ಧ ಕ್ರಮ ತೆಗೆದುಕೊಳ್ಳಿ.. ಹಳೆಯ ಜಾನಪದ ವಿಡಿಯೋಗಳನ್ನು ಮಾತ್ರ ಹಾಗೆ ಬಿಡಿ ಅದರಲ್ಲಿ ಬಹಳಷ್ಟು ಅರ್ಥವಿದೆ..” ಎಂದಿದ್ದಾರೆ.

ಆಕ್ಸಿಡೆಂಟಲ್ ಭಕ್ತ ಎನ್ನುವ ವ್ಯಕ್ತಿ, ಯಾರಾದ್ರೂ ಲಂಗ ದಾವನ್ಯಾಗ ಮಸ್ತ ಕಾಣತಿ ಲಾವಣ್ಯ ಹಾಡು ಹುಡುಕ್ತಾ ಇದ್ದೀರಾ ಹಾಗಾದ್ರೆ ಇಲ್ಲಿದೆ ನೋಡಿ ಎಂದು ಯೂಟ್ಯೂಬ್ ಲಿಂಕ್ ಶೇರ್ ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ