YouTube Shopping: 10 ಸಾವಿರ ಸಬ್‌ಸ್ಕ್ರೈಬರ್ಸ್ ಇರೋ ಚಾನೆಲ್‌ಗಳಿಗೆ ಹಣ ಗಳಿಸಲು ಇನ್ನೊಂದು ಫೀಚರ್‌ ನೀಡಿದ ಯೂಟ್ಯೂಬ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Youtube Shopping: 10 ಸಾವಿರ ಸಬ್‌ಸ್ಕ್ರೈಬರ್ಸ್ ಇರೋ ಚಾನೆಲ್‌ಗಳಿಗೆ ಹಣ ಗಳಿಸಲು ಇನ್ನೊಂದು ಫೀಚರ್‌ ನೀಡಿದ ಯೂಟ್ಯೂಬ್‌

YouTube Shopping: 10 ಸಾವಿರ ಸಬ್‌ಸ್ಕ್ರೈಬರ್ಸ್ ಇರೋ ಚಾನೆಲ್‌ಗಳಿಗೆ ಹಣ ಗಳಿಸಲು ಇನ್ನೊಂದು ಫೀಚರ್‌ ನೀಡಿದ ಯೂಟ್ಯೂಬ್‌

ಯೂಟ್ಯೂಬ್‌ ಚಾನೆಲ್‌ಗಳ ಮೂಲಕ ಹಣ ಗಳಿಕೆ ಮಾಡುವವರಿಗೆ ಇದೀಗ ಹೊಸ ಫೀಚರ್‌ ಇನ್ನಷ್ಟು ಗಳಿಕೆಗೆ ನೆರವಾಗಲಿದೆ. ಇದೀ ಯೂಟ್ಯೂಬ್‌ ಶಾಪಿಂಗ ಭಾರತದಲ್ಲೂ ಲಭ್ಯವಿದೆ. ಇದರಲ್ಲಿ ಹೇಗೆ ಹಣ ಗಳಿಕೆ ಮಾಡಬಹುದು ಎಂದು ನೋಡೋಣ.

ಯೂಟ್ಯೂಬ್‌ ಶಾಪಿಂಗ್‌
ಯೂಟ್ಯೂಬ್‌ ಶಾಪಿಂಗ್‌ (Unsplash)

ಯೂಟ್ಯೂಬ್‌ ಇದೀಗ ಭಾರತದ ಕ್ರಿಯೆಟರ್‌ಗಳಿಗೆ ಹಣ ಗಳಿಕೆ ಹೆಚ್ಚಿಸಿಕೊಳ್ಳಲು ಹೊಸ ಆಯ್ಕೆಯನ್ನು ನೀಡಿದೆ. ಈಗಾಗಲೇ ಯೂಟ್ಯೂಬ್‌ನಲ್ಲಿ ಮಾನಿಟೈಜ್‌ ಮಾಡಿಕೊಳ್ಳಲು ಹಲವು ವಿಧಾನಗಳು ಇವೆ. ಇವುಗಳಲ್ಲಿ ಪ್ರಮುಖ ವಿಧಾನ ಜಾಹೀರಾತು ಆದಯ. ಇದರೊಂದಿಗ ಯೂಟ್ಯೂಬ್‌ ಪ್ರೀಮಿಯಂ, ಬ್ರ್ಯಾಂಡ್‌ ಕನೆಕ್ಟ್‌ ಮತ್ತು ಚಾನೆಲ್‌ ಮೆಂಬರ್‌ಶಿಪ್‌, ಸೂಪರ್‌ ಥ್ಯಾಂಕ್ಸ್‌, ಸೂಪರ್‌ ಚಾಟ್‌, ಸೂಪರ್‌ ಸ್ಟ್ರಿಕರ್ಸ್‌ ಇತ್ಯಾದಿಗಳಿಂದಲೂ ಆದಾಯ ಗಳಿಸಲು ಸಾಧ್ಯವಿದೆ. ಇದೀಗ ಈ ಪಟ್ಟಿಗೆ ಹೊಸದೊಂದು ಆಯ್ಕೆಯಾಗಿದೆ. ಆದರೆ, ಯೂಟ್ಯೂಬ್‌ ಶಾಪಿಂಗ್‌ ಫೀಚರ್‌ ನಿಮ್ಮದಾಗಿಸಿಕೊಳ್ಳಲು ಕನಿಷ್ಠ 10 ಸಾವಿರ ಫಾಲೋವರ್ಸ್‌ಗಳನ್ನು ನೀವು ಹೊಂದಿರಬೇಕು. ಭಾರತ ಸೇರಿದಂತೆ ಹಲವು ದೇಶಗಳಿಗೆ ಈ ಫೀಚರ್‌ ಪರಿಚಯಿಸಲಾಿದೆ. ಅಮೆರಿಕ, ದಕ್ಷಿಣ ಕೊರಿಯಾ,ವಿಯೆಟ್ನಾಂ, ಇಂಡೋನೇಷ್ಯಾ, ಥೈಲಾಂಡ್‌ಗಳಲ್ಲಿಯೂ ಈ ಫೀಚರ್‌ ಇದೆ. ಕನ್ನಡ ಯೂಟ್ಯೂಬರ್‌ಗಳೂ ಈ ಫೀಚರ್‌ನ ಸದುಪಯೋಗ ಮಾಡಿಕೊಳ್ಳಬಹುದು.

ಯೂಟ್ಯೂಬ್‌ ಶಾಪಿಂಗ್‌ ಹೇಗೆ ಕೆಲಸ ಮಾಡುತ್ತದೆ?

ಈ ಫೀಚರ್‌ನ ನೆರವಿನಿಂದ ಯೂಟ್ಯೂಬ್‌ ಕ್ರಿಯೆಟರ್‌ಗಳೂ ತಮ್ಮ ವಿಡಿಯೋದಲ್ಲಿ ನಿರ್ದಿಷ್ಟ ಇಕಾಮರ್ಸ್‌ನ ಪ್ರಾಡಕ್ಟ್‌ಗಳನ್ನು ಟ್ಯಾಗ್‌ ಮಾಡಬಹುದು. ನಿಮ್ಮ ಚಾನೆಲ್‌ನ ವೀಕ್ಷಕರು ವಿಡಿಯೋ ನೋಡುವಾಗ ನೀವು ಟ್ಯಾಗ್‌ ಮಾಡಿದ ಪ್ರಾಡಕ್ಟ್‌ಗಳನ್ನು ರಿಟೇಲರ್‌ ಸ್ಟೋರ್‌ಗಳಿಂದ ಖರೀದಿಸಿದಾಗ ಕ್ರಿಯೆಟರ್‌ಗಳಿ ಆ ಮಾರಾಟದಲ್ಲಿ ಕಮಿಷನ್‌ ದೊರಕುತ್ತದೆ. ಈಗಾಗಲೇ ಅಸ್ತಿತ್ವದಲ್ಲಿರುವ ಅಫಿಲಿಯೇಟ್‌ ಮಾರುಕಟ್ಟೆಗೆ ಇದು ಹೊಸ ಸೇರ್ಪಡೆಯಾಗಲಿದೆ. ಈಗಾಗಲೇ ಯೂಟ್ಯೂಬ್‌ನಲ್ಲಿ ತಮ್ಮ ಸ್ವಂತ ಇ ಸ್ಟೋರ್‌ ಮಾಡುವ ಆಯ್ಕೆ ಇದೆ. ಇದರ ವಿಸ್ತರಿತ ರೂಪವಾಗಿ ಬೇರೆ ಇಕಾಮರ್ಸ್‌ ತಾಣಗಳಿಂದಲೂ ಕಮಿಷನ್‌ ಪಡೆಯುವ ಅವಕಾಶ ದೊರಕಲಿದೆ.

ಯಾವೆಲ್ಲ ಯೂಕಾಮರ್ಸ್‌ ತಾಣಗಳು ಪಾಲುದಾರರಾಗಿವೆ?

ಸದ್ಯ ಈ ಫೀಚರ್‌ ಫ್ಲಿಪ್‌ಕಾರ್ಟ್‌ ಮತ್ತು ಮೈಂತ್ರಾ ಇ ಕಾಮರ್ಸ್‌ ತಾಣಗಳ ಜತೆ ಮಾತ್ರ ಕನೆಕ್ಟ್‌ ಆಗಿದೆ. ಯೂಟ್ಯೂಬ್‌ ಚಾನೆಲ್‌ ನಿರ್ದಿಷ್ಟ ಮಾನದಂಡ ಪೂರೈಸಿದ ನಂತರ ಯೂಟ್ಯೂಬ್‌ ಶಾಪಿಂಗ್‌ ಫೀಚರ್‌ ಪಡೆಯಲು ಅರ್ಹತೆ ಪಡೆಯುತ್ತಾರೆ. ನೀವು ಮಾಡುವ ವಿಡಿಯೋಗಳಲ್ಲಿ ಮೈಂತ್ರಾ ಅಥವಾ ಫ್ಲಿಪ್‌ಕಾರ್ಟ್‌ ಪ್ರಾಡಕ್ಟ್‌ಗಳನ್ನು ಟ್ಯಾಗ್‌ ಮಾಡಬಹುದು. ಆಸಕ್ತರು ಆ ಲಿಂಕ್‌ ಕ್ಲಿಕ್‌ ಮಾಡಿ ಖರೀದಿಸಿದರೆ ನಿಮಗೆ ಕಮಿಷನ್‌ ದೊರಕುತ್ತದೆ.

ಯೂಟ್ಯೂಬ್‌ ಶಾಪಿಂಗ್:‌ ಅರ್ಹತಾ ಮಾನದಂಡಗಳು

  1. ನೀವು ಯೂಟ್ಯೂಬ್‌ ಪಾಟ್ನರ್‌ ಪ್ರೋಗ್ರಾಂ ಚಾನೆಲ್‌ ಹೊಂದಿರಬೇಕು.
  2. ಕನಿಷ್ಠ 10 ಸಾವಿರ ಸಬ್‌ಸ್ಕ್ರೈಬರ್ಸ್‌ ಇರಬೇಕು. ಈಗಾಗಲೇ 1 ಸಾವಿರ ಚಂದಾದಾರರು ಮತ್ತು 4 ಸಾವಿರ ಗಂಟೆ ವಾಚ್‌ ಅವರ್ಸ್‌ ಪಡೆದಿದ್ದರೆ ಸಾಲದು. ನಿಮ್ಮ ಚಂದಾದಾರರು 10 ಸಾವಿರಕ್ಕೆ ತಲುಪಿದ ಬಳಿಕ ಈ ಫೀಚರ್‌ ಆನ್‌ ಆಗುತ್ತದೆ.
  3. ನೀವು ಭಾರತ, ಅಮೆರಿಕ ದಕ್ಷಿಣ ಕೊರಿಯಾ, ಇಂಡೋನೇಷ್ಯಾ, ಥೈಲಾಂಡ್‌ ಅಥವಾ ವಿಯೆಟ್ನಾಂ ಮೂಲದವರಾಗಿರಬೇಕು.
  4. ನಿಮ್ಮದು ಮ್ಯೂಸಿಕ್‌ ಅಥವಾ ಅಫೀಶಿಯಲ್‌ ಆರ್ಟಿಸ್ಟ್‌ ಚಾನೆಲ್‌ ಆಗಿರಬಾರದು.
  5. ನಿ್ಮ ಚಾನೆಲ್‌ ಮೇಡ್‌ ಫಾರ್‌ ಕಿಡ್ಸ್‌ ಆಗಿರಬಾರದು. ಕೆಲವು ಅಥವಾ ಯಾವುದೇ ವಿಡಿಯೋಗಳು ಈ ರೀತಿ ಮಾರ್ಕ್‌ ಆಗಿರಬಾರದು.

ಇದನ್ನೂ ಓದಿ: ಅಬ್ಬಬ್ಬಾ ಯೂಟ್ಯೂಬ್‌ನಿಂದ ಇಷ್ಟು ಗಳಿಕೆಯೇ? ಹ್ಯಾಕರ್‌ಗಳ ಕೆಂಗಣ್ಣಿಗೆ ಗುರಿಯಾದ ರಣವೀರ್‌ ಸಂಪತ್ತಿನ ವಿವರ, ಪ್ರಧಾನಿ ಮೋದಿ ಭೇಷ್‌ ಅಂದಿದ್ರು!

ಹಳೆಯ ವಿಡಿಯೋಗಳಿಗೂ ಟ್ಯಾಗ್‌ ಮಾಡಬಹುದು

ಹೌದು, ನೀವು ಈ ಹಿಂದೆ ಅಪ್ಲೋಡ್‌ ಮಾಡಿರುವ ವಿಡಿಯೋಗಳಲ್ಲಿಯೂ ಅಥವಾ ಲೈವ್‌ ಸ್ಟ್ರೀಮ್‌ಗಳಲ್ಲಿಯೂ ಈ ರೀತಿ ಪ್ರಾಡಕ್ಟ್‌ಗಳನ್ನು ಟ್ಯಾಗ್‌ ಮಾಡಬಹುದು. ತಮ್ಮ ಅಚ್ಚುಮೆಚ್ಚಿನ ಕ್ರಿಯೆಟರ್‌ಗಳ ನೀಡುವ ವಿಮರ್ಶೆ ಓದಿದ ಬಳಿಕ ಯೂಟ್ಯೂಬ್‌ ವೀಕ್ಷಕರು ಆ ಲಿಂಕ್‌ ಕ್ಲಿಕ್‌ ಮಾಡಿ ಖರೀದಿಸಿದರೆ ಕಮಿಷನ್‌ ದೊರಕುತ್ತದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.