logo
ಕನ್ನಡ ಸುದ್ದಿ  /  ಕರ್ನಾಟಕ  /  Udupi Crime: ಉಡುಪಿ ಜಿಲ್ಲೆಯ ಅದಾನಿ ವಿದ್ಯುತ್ ಸ್ಥಾವರದಲ್ಲಿ ಬೀಮ್ ಬಿದ್ದು ಕಾರ್ಮಿಕ ಸಾವು

Udupi Crime: ಉಡುಪಿ ಜಿಲ್ಲೆಯ ಅದಾನಿ ವಿದ್ಯುತ್ ಸ್ಥಾವರದಲ್ಲಿ ಬೀಮ್ ಬಿದ್ದು ಕಾರ್ಮಿಕ ಸಾವು

HT Kannada Desk HT Kannada

Jul 29, 2023 12:25 PM IST

google News

ಉಡುಪಿ ಜಿಲ್ಲೆಯಲ್ಲಿರುವ ಅದಾನಿ ವಿದ್ಯುತ್ ಸ್ಥಾವರ

    • Adani Power Plant, Udupi: ಕಬ್ಬಿಣದ ದೊಡ್ಡ ಬೀಮ್ ಕುಸಿದು ರಾಜಸ್ಥಾನ ಮೂಲದ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಉಡುಪಿ ಜಿಲ್ಲೆಯ ಅದಾನಿ ವಿದ್ಯುತ್ ಸ್ಥಾವರದಲ್ಲಿ ನಡೆದಿದೆ.
 ಉಡುಪಿ ಜಿಲ್ಲೆಯಲ್ಲಿರುವ ಅದಾನಿ ವಿದ್ಯುತ್ ಸ್ಥಾವರ
ಉಡುಪಿ ಜಿಲ್ಲೆಯಲ್ಲಿರುವ ಅದಾನಿ ವಿದ್ಯುತ್ ಸ್ಥಾವರ

ಉಡುಪಿ: ಉಡುಪಿ ಜಿಲ್ಲೆಯ ಎಲ್ಲೂರು ಬಳಿ ಕಾರ್ಯಾಚರಿಸುತ್ತಿರುವ ಅದಾನಿ ವಿದ್ಯುತ್ ಸ್ಥಾವರ (ಹಿಂದಿನ ಯುಪಿಸಿಎಲ್) ನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಕಬ್ಬಿಣದ ದೊಡ್ಡ ಬೀಮ್ ಕುಸಿದು ರಾಜಸ್ಥಾನ ಮೂಲದ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶುಕ್ರವಾರ ಈ ಘಟನೆ ಸಂಭವಿಸಿದೆ.

ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಕಾರ್ಮಿಕ ಮುಲಾರಾಮ್ (21) ಸಾವನ್ನಪ್ಪಿದ್ದಾರೆ. ಮೂವರು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶುಕ್ರವಾರ ಮಧ್ಯಾಹ್ನದ ವೇಳೆ ಕ್ರೇನ್ ಮೂಲಕ ರೋಪ್ ಕಟ್ಟಿಕೊಂಡು ಸುರಕ್ಷತಾ ಕ್ರಮವಾಗಿ 5 ಜನ ಕೆಲಸ ಮಾಡುತ್ತಿದ್ದರು. ಈ ಸಂದರ್ಭ ಕ್ರೇನ್‌ನ ರೋಪ್ ತುಂಡಾಗಿ ಕಟ್ಟಡದ ಬೀಮ್ ಒಂದು ನೆಲಕ್ಕುರುಳಿದೆ. ನಾಲ್ವರು ರೋಪ್ ಸಮೇತ ನೆಲಕ್ಕುರುಳಿದ್ದರು. ಇವರಲ್ಲಿ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆದಲ್ಲಿ ಮುಲಾರಾಮ್ ಕೊನೆಯುಸಿರೆಳೆದಿದ್ದಾರೆ. ಗಂಭೀರ ಗಾಯಗೊಂಡು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮೂರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅದಾನಿ ಸ್ಥಾವರದೊಳಗೆ ಎಫ್‌ಜಿಡಿ ಸ್ಥಾವರದ ಕಾಮಗಾರಿ ಚಾಲ್ತಿಯಲ್ಲಿತ್ತು. ಬಹುತೇಕ ಶೇ.75 ಕಾಮಗಾರಿ ಮುಕ್ತಾಯಗೊಳ್ಳುತ್ತಾ ಬಂದಿದೆ. ಅದಾನಿ ಸಂಸ್ಥೆಯು ಪವರ್ ಮೆಕ್ ಕಂಪನಿಗೆ ಈ ಕುರಿತಾದ ಗುತ್ತಿಗೆಯನ್ನು ನೀಡಿತ್ತು. ಆದರೆ ಅರ್ಧಾಂಶ ಕಾಮಗಾರಿ ವೇಳೆ ಆ ಕಂಪನಿಯು ಕೇರಳ ಮೂಲದ ಸನ್ನಿ ಮತ್ತು ವೆಲ್ ಟೆಕ್ ಎಂಬ ಸಂಸ್ಥೆಯನ್ನು ಪರ್ಯಾಯವಾಗಿ ಈ ಕಾರ್ಯಕ್ಕಾಗಿ ನೇಮಕ ಮಾಡಿತ್ತು. ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಭೇಟಿಯಿತ್ತು ಪರಿಶೀಲಿಸಿದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

(ವರದಿ: ಹರೀಶ್‌ ಮಾಂಬಾಡಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ