ಎಸ್‌ಬಿಐ ಪಿಒ 2024: ಪ್ರೊಬೆಷನರಿ ಆಫೀಸರ್ಸ್ ಅಧಿಸೂಚನೆ ಪ್ರಕಟವಾಯ್ತ? ಅರ್ಹತೆ, ಅರ್ಜಿ ಶುಲ್ಕ, ವಯೋಮಿತಿ ಆಯ್ಕೆ ಪ್ರಕ್ರಿಯೆ ತಿಳಿಯಿರಿ
Oct 13, 2024 12:09 PM IST
ಎಸ್‌ಬಿಐ ಪಿಒ 2024: ಪ್ರೊಬೆಷನರಿ ಆಫೀಸರ್ಸ್ ಅಧಿಸೂಚನೆ, ಅರ್ಹತೆ, ಅರ್ಜಿ ಶುಲ್ಕ, ವಯೋಮಿತಿ ಆಯ್ಕೆ ಪ್ರಕ್ರಿಯೆ ವಿವರ
- SBI PO 2024 Notification: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಅಕ್ಟೋಬರ್‌ನಲ್ಲಿ ಎಸ್‌ಬಿಐ ಪಿಒ 2024ರ ಅಧಿಸೂಚನೆ ಪ್ರಕಟಿಸಲಿದೆ. ಎಸ್‌ಬಿಐ ಪಿಒ ಪರೀಕ್ಷೆ ದಿನಾಂಕ, ಸಿಲೇಬಸ್, ಅರ್ಹತೆಗಳು, ಆಯ್ಕೆ ಪ್ರಕ್ರಿಯೆ, ವಯೋಮಿತಿ ಸೇರಿದಂತೆ ಹೆಚ್ಚಿನ ವಿವರ ಇಲ್ಲಿದೆ.
SBI PO 2024 Notification: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಪ್ರೊಬೇಷನರಿ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅಕ್ಟೋಬರ್ 2024ರಲ್ಲಿ ಅರ್ಜಿ ಆಹ್ವಾನಿಸಲಿದೆ. ಈ ಬಾರಿ 2000ಕ್ಕೂ ಹೆಚ್ಚು ಪಿಒ ಹುದ್ದೆಗಳು ಇರುವ ನಿರೀಕ್ಷೆಯಿದೆ. ಸದ್ಯದಲ್ಲಿಯೇ ಪ್ರಕಟವಾಗಲಿರುವ ಎಸ್‌ಬಿಐ ಪಿಒ ಅಧಿಸೂಚನೆಯಲ್ಲಿ ಈ ಕುರಿತು ಸಂಪೂರ್ಣ ಮಾಹಿತಿ ದೊರಕಲಿದೆ. ಎಸ್‌ಬಿಐ ಪಿಒ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರಿಲಿಮ್ಸ್, ಮೇನ್ಸ್ ಮತ್ತು ಸಂದರ್ಶನ ಹಂತ ದಾಟಿ ಈ ಹುದ್ದೆ ಪಡೆಯಬಹುದು. ಪಿಒ ಹುದ್ದೆಗೆ ಆಯ್ಕೆಯಾದವರನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಭಾರತದ ವಿವಿಧೆಡೆ ಇರುವ ತನ್ನ ಶಾಖೆಗಳಿಗೆ ನೇಮಕ ಮಾಡಿಕೊಳ್ಳಲಿದೆ. ಸರಕಾರಿ ಉದ್ಯೋಗದ ಬಳಿಕ ಸಾಕಷ್ಟು ಉದ್ಯೋಗಾಕಾಂಕ್ಷಿಗಳು ಬ್ಯಾಂಕ್ ಹುದ್ದೆಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇದೇ ಕಾರಣಕ್ಕೆ ಎಸ್‌ಬಿಐ ಪಿಒ 2024ರ ಅಧಿಸೂಚನೆಯತ್ತ ಎಲ್ಲರೂ ಕಣ್ಣಿಟ್ಟಿದ್ದಾರೆ.
ಅರ್ಜಿ ಸಲ್ಲಿಕೆ ಹೇಗೆ?
ಎಸ್‌ಬಿಐ ಪ್ರೊಬೆಷನರಿ ಆಫೀಸರ್ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್‌ಲೈನ್ ಹೊರತುಪಡಿಸಿ ಬೇರೆ ಯಾವುದೇ ವಿಧಾನಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಅರ್ಜಿ ಸಲ್ಲಿಕೆ ಆರಂಭಿಕ ದಿನಾಂಕ ಮತ್ತು ಕೊನೆಯ ದಿನಾಂಕ ಸದ್ಯದಲ್ಲಿಯೇ ತಿಳಿಯಲಿದೆ.
ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ, ಇಡಬ್ಲ್ಯುಎಸ್, ಒಬಿಎಸ್ ಅಭ್ಯರ್ಥಿಗಳು ಇಂಟಿಮೇಷನ್ ಶುಲ್ಕಗಳು ಸೇರಿದಂತೆ ಒಟ್ಟು 750 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು. ಎಸ್‌ಸಿ, ಎಸ್‌ಟಿ, ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ವಯೋಮಿತಿ ಎಷ್ಟು?
ಎಸ್‌ಬಿಐ ಪಿಒ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ಮತ್ತು ಗರಿಷ್ಠ 30 ವರ್ಷ ವಯೋಮಿತಿ ಇರತುತದೆ. ವಿವಿಧ ಕೆಟಗರಿಯವರಿಗೆ ಸರಕಾರದ ನಿಯಮಗಳಂತೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ವಯೋಮಿತಿಯಲ್ಲಿ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇರುತ್ತದೆ. ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ ಕೆಟಗರಿಗೆ ತಕ್ಕಂತೆ 5-10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ಪಿಒ ಎಗ್ಸಾಂ ಎಷ್ಟು ಬಾರಿ ಬರೆಯಬಹುದು?
ಎಸ್‌ಬಿಐ ಪಿಒ ಎಗ್ಸಾಂ ಎಷ್ಟು ಬಾರಿ ಅಟೆಂಪ್ಟ್ ಮಾಡಬಹುದು ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಜನರಲ್/ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ 4 ಬಾರಿ, ಜನರಲ್- ಇಡಬ್ಲ್ಯುಎಸ್ ಪಿಡಬ್ಲ್ಯುಡಿ 7 ಬಾರಿ, ಒಬಿಸಿ 7 ಬಾರಿ ಪರೀಕ್ಷೆ ಬರೆಯಲು ಅವಕಾಶವಿದೆ.
ಎಸ್‌ಬಿಐ ಪಿಒ ನೇಮಕಾತಿ ಪ್ರಕ್ರಿಯೆ
ಪ್ರಿಲಿಮ್ಸ್, ಮೇನ್ ಮತ್ತು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಪ್ರೊಬೆಷನರಿ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ.
ಎಸ್‌ಬಿಐ ಪಿಒ ಸಿಲೇಬಸ್
ಲಾಜಿಕಲ್ ರೀಸನಿಂಗ್, ಇಂಗ್ಲಿಷ್ ಲ್ಯಾಂಗ್ವೇಜ್, ಕ್ವಾಂಟಿಟ್ಯೂಟಿವ್ ಆಪ್ಟಿಟ್ಯೂಡ್ ಪರೀಕ್ಷೆ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಎಸ್‌ಬಿಐ ಪಿಒ ನೇಮಕಾತಿ ಅಧಿಸೂಚನೆಯಲ್ಲಿ ಸಿಲೇಬಸ್ ಇರುತ್ತದೆ.