logo
ಕನ್ನಡ ಸುದ್ದಿ  /  Lifestyle  /  Mental Health: Are You Having Problem With Mental Health? How To Know It?

Mental health: ನಿಮ್ಮನ್ನು ಕಾಡುತ್ತಿರುವುದು ಮಾನಸಿಕ ಸಮಸ್ಯೆಯೇ? ಇದನ್ನು ಅರಿಯುವುದು ಹೇಗೆ?

Reshma HT Kannada

Mar 05, 2023 09:26 PM IST

ಮಾನಸಿಕ ಆರೋಗ್ಯ

    • Mental health: ಹಲವರಿಗೆ ತಮ್ಮೊಳಗಿನ ತುಮುಲಗಳಿಗೆ ಮಾನಸಿಕ ಸಮಸ್ಯೆಗಳೇ ಕಾರಣ ಎನ್ನುವುದೂ ಅರಿವಾಗುವುದಿಲ್ಲ. ಆದರೆ ಮಾನಸಿಕ ಸಮಸ್ಯೆಗಳನ್ನು ಆರಂಭದಲ್ಲೇ ಗುರುತಿಸಿ ಗುಣಪಡಿಸಿಕೊಳ್ಳುವುದು ಅವಶ್ಯ. ಹಾಗಾದರೆ ನಮ್ಮನ್ನು ಮಾನಸಿಕ ಸಮಸ್ಯೆ ಕಾಡುತ್ತಿದೆ ಎಂದು ಅರಿತುಕೊಳ್ಳುವುದು ಹೇಗೆ?
ಮಾನಸಿಕ ಆರೋಗ್ಯ
ಮಾನಸಿಕ ಆರೋಗ್ಯ

ಇಂದಿನ ಯುವಜನರಲ್ಲಿ ಆತಂಕ, ಒತ್ತಡ, ಭಯದಂತಹ ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿವೆ. ನಮಗೇ ಅರಿವಿಲ್ಲದೆ, ಕಾರಣಗಳೇ ತಿಳಿಯದೆ ಭಯ, ಆತಂಕದಿಂದ ಮನಸ್ಸು ತೊಳಲಾಡುತ್ತಿರುತ್ತದೆ. ಹಾಗಾದರೆ ಈ ಸಮಸ್ಯೆಗಳಿಗೆ ಕಾರಣವೇನು ಎಂದು ಹುಡುಕುತ್ತಾ ಹೊರಟರೆ ಅದಕ್ಕೆ ಉತ್ತರ ಸಿಗುವುದಿಲ್ಲ.

ಟ್ರೆಂಡಿಂಗ್​ ಸುದ್ದಿ

ಏರ್ ಕೂಲರ್ ಕಾರ್ಯಕ್ಷಮತೆ ಸುಧಾರಿಸಲು ಈ 5 ಟ್ರಿಕ್ಸ್ ಅನುಸರಿಸಿ; ಎಸಿ ಇಲ್ಲದೆಯೂ ಕೋಣೆ ಕೂಲ್ ಆಗುತ್ತೆ ನೋಡಿ

Menstrual Cramp: ಹೊಕ್ಕುಳ ಮೇಲೆ ಕೊಬ್ಬರಿಎಣ್ಣೆ ಹಾಕಿದರೆ ಮುಟ್ಟಿನ ನೋವು ಕಡಿಮೆಯಾಗುತ್ತೆ; ಅಮ್ಮನ ಮಾತು ಕೇಳಿಸಿಕೊಳ್ಳಿ

ಸೀಲಿಂಗ್ ಮತ್ತು ಎಕ್ಸಾಸ್ಟ್ ಫ್ಯಾನ್‌ ಸ್ವಚ್ಛಗೊಳಿಸುವ ಸರಳ ವಿಧಾನ; ಈ ಟಿಪ್ಸ್ ಅನುಸರಿಸಿದ್ರೆ ನಿಮ್ಮ ಫ್ಯಾನ್ ಹೆಚ್ಚು ಬಾಳಿಕೆ ಬರುತ್ತೆ

Coconut Water: ಬಿಸಿಲಿನ ತಾಪ ನೀಗಿಸುವ ಎಳನೀರು ಹೊಳೆಯುವ ಚರ್ಮಕ್ಕೂ ವರ; ತ್ವಚೆಯ ಅಂದ, ಆರೈಕೆಗೆ ಇದನ್ನು ಹೀಗೆ ಬಳಸಿ

ಹಲವರಿಗೆ ತಮ್ಮೊಳಗಿನ ತುಮುಲಗಳಿಗೆ ಮಾನಸಿಕ ಸಮಸ್ಯೆಗಳೆ ಕಾರಣ ಎನ್ನುವುದೂ ಅರಿವಾಗುವುದಿಲ್ಲ. ಆದರೆ ಮಾನಸಿಕ ಸಮಸ್ಯೆಗಳನ್ನು ಆರಂಭದಲ್ಲೇ ಗುರುತಿಸಿ ಗುಣಪಡಿಸಿಕೊಳ್ಳುವುದು ಅವಶ್ಯ. ಹಾಗಾದರೆ ನಮ್ಮನ್ನು ಕಾಡುತ್ತಿರುವುದು ಮಾನಸಿಕ ಸಮಸ್ಯೆಯೇ ಎಂದು ಅರಿತುಕೊಳ್ಳುವುದು ಹೇಗೆ?

ಆಗಾಗ್ಗೆ ಮನಸ್ಸು ಚಂಚಲವಾಗುವುದು

ನಿಮ್ಮ ಮನಸ್ಸು ಪದೇ ಪದೇ ಗೊಂದಲಕ್ಕೆ ಒಳಗಾಗುವುದು, ಚಂಚಲವಾಗುವುದು ಆಗುತ್ತಿದ್ದರೆ ನೀವು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದೀರಿ ಎಂದು ಅರ್ಥ. ನಿಮ್ಮ ಅಸಹಜ ಮಾನಸಿಕ ಸ್ಥಿತಿಗೆ ಕಾರಣಗಳು ನಿಮಗೆ ಅರಿವಾಗದೇ ಇರಬಹುದು. ಇದು ನೀವು ಬಹಳ ದೀರ್ಘಕಾಲದಿಂದ ಈ ಸಮಸ್ಯೆಯನ್ನು ಎದುರಿಸಿಕೊಂಡು ಬರುತ್ತಿದ್ದರೂ ನೀವು ಇದನ್ನು ಅಲ್ಲಗೆಳೆದಿರಬಹುದು. ಕಾರಣವಿಲ್ಲದೇ ಅತಿಯಾಗಿ ಕೋಪ ಮಾಡಿಕೊಳ್ಳುವುದು, ಪದೇ ಪದೇ ಅಳುವುದು ನಿಮ್ಮ ಮಾನಸಿಕ ಸ್ಥಿತಿಯ ಅಸಮತೋಲನವನ್ನು ತೋರಿಸುತ್ತದೆ.

ಸಮಾಜದಿಂದ ದೂರವಿರಲು ಪ್ರಯತ್ನಿಸುವುದು

ಜನರೊಂದಿಗೆ ಬೆರೆಯಲು ಹಿಂಜರಿಯುವುದು, ಹೊರಗಡೆ ಓಡಾಡುವುದನ್ನು ತಪ್ಪಿಸುವುದು, ಸಾಮಾಜಿಕ ಚಟುವಟಿಕೆಗಳಿಂದ ದೂರವಿರುವುದು, ಸಾಮಾಜಿಕ ಸಂಪರ್ಕದಿಂದ ದೂರವಿರುವುದು ಮಾನಸಿಕ ಅನಾರೋಗ್ಯದ ಬಹು ದೊಡ್ಡ ಲಕ್ಷಣ. ಸಾಮಾಜಿಕವಾಗಿ ಹಾಗೂ ಜನರಿಂದ ದೂರವಿರುವುದು ಮಾನಸಿಕ ಸಮಸ್ಯೆಗೆ ಕಾರಣವಾಗಬಹುದು.

ಹಸಿವಿನ ಸ್ಥಿತಿಯಲ್ಲಿ ಬದಲಾವಣೆ

ಮಾನಸಿಕ ಸ್ಥಿತಿಯ ಬದಲಾವಣೆ ಎನ್ನುವುದು ಹಸಿವಿನ ಬದಲಾವಣೆಗೂ ಕಾರಣವಾಗುತ್ತದೆ. ಇದು ನಮ್ಮ ಜೀರ್ಣಂಗ ವ್ಯವಸ್ಥೆಯ ಬದಲಾವಣೆಗೂ ಕಾರಣವಾಗುತ್ತದೆ. ನೀವು ಸಂತೃಪ್ತಿಯಿಂದ ಊಟ ಮಾಡಲು ಸಾಧ್ಯವಾಗದೇ ಇರಬಹುದು. ನಿಮಗೆ ಹಸಿವಾಗದೇ ಇರಬಹುದು. ಆರಂಭದಲ್ಲಿ ಇದು ಸಮಸ್ಯೆ ಎನ್ನಿಸದೇ ಇರಬಹುದು. ಆದರೆ ಸಮಯ ಕಳೆದಂತೆ ದೀರ್ಘಕಾಲದ ಮಾನಸಿಕ ಸಮಸ್ಯೆಗೆ ಕಾರಣವಾಗಬಹುದು.

ಪರಿಸ್ಥಿತಿಗೆ ಕಟ್ಟು ಬಿದ್ದಂತಹ ಸ್ಥಿತಿ

ಕೆಲ ಮಂದಿ ಯಾವುದೇ ದೈಹಿಕ, ಮಾನಸಿಕ ಅಘಾತಗಳಿಂದ ಬೇಗನೆ ಹೊರ ಬರುತ್ತಾರೆ ಹಾಗೂ ಜೀವನ ಬಂದಂತೆ ಮುಂದೆ ಸಾಗುತ್ತಾರೆ. ಆದರೆ ಇನ್ನೂ ಕೆಲವರಿಗೆ ಇಂತಹ ಸ್ಥಿತಿಯಿಂದ ಹೊರಬರುವುದು ಹಾಗೂ ಪರಿಸ್ಥಿತಿಯನ್ನು ಎದುರಿಸುವುದು ಬಹಳ ಕಷ್ಟವಾಗಬಹುದು. ನಿಮ್ಮ ಮನಸ್ಸನ್ನು ಪ್ರಚೋದನೆ ಮಾಡುವಂತಹ ಘಟನೆಗಳು ಪದೇ ಪದೇ ನಡೆಯುತ್ತಿದ್ದರೆ ಅಂತಹವುಗಳಿಂದ ದೂರ ಇರುವುದು ಉತ್ತಮ.

ಸದಾ ಪಶ್ಚಾತ್ತಾಪದ ಭಾವನೆ ಮೂಡುವುದು

ಮಾನಸಿಕ ಅಸಮತೋಲನ ಎನ್ನುವುದು ಮನುಷ್ತನ ಆತ್ಮವಿಶ್ವಾಸವನ್ನು ಕುಗ್ಗಿಸುವ ಕೆಲಸ ಮಾಡುತ್ತದೆ. ಬಹಳ ಸಮಯದಿಂದಲೂ ಮಾನಸಿಕ ಸಮಸ್ಯೆ ಎದುರಿಸುತ್ತಿರುವವರು ಕೊನೆ ಕೊನೆಗೆ ತಮ್ಮ ಸಾಮರ್ಥ್ಯದ ಮೇಲೆ ತಾವೇ ಪ್ರಶ್ನೆ ಮಾಡಿಕೊಳ್ಳಲು ಆರಂಭಿಸುತ್ತಾರೆ. ಕಾರಣವಿಲ್ಲದೇ ತಮ್ಮ ತಮ್ನನ್ನು ತಾವು ನಿಂದಿಸಿಕೊಳ್ಳುತ್ತಾರೆ.

ಹೆಚ್ಚುವ ಭಯ, ಆತಂಕ

ಮೊದ ಮೊದಲು ಕಾಡುವ ಭಯ, ಆತಂಕ ಎಲ್ಲವೂ ಸಹಜವಾಗಿಯೇ ಇರುತ್ತದೆ. ಆದರೆ ಬರ ಬರುತ್ತಾ ಈ ಎಲ್ಲಾ ಅಂಶಗಳು ಮನುಷ್ಯನ ಸಕಾರಾತ್ಮಕ ಭಾವನೆಗಳನ್ನು ಕೊಲ್ಲುತ್ತಾ ಬರುತ್ತವೆ. ಅಲ್ಲದೇ ಮನಸ್ಸಿನಲ್ಲಿ ನಕಾರಾತ್ಮಕ ಭಾವನೆಗಳು ತುಂಬುವಂತೆ ಮಾಡುತ್ತವೆ. ಅಲ್ಲದೇ ಇದರಿಂದ ಸಣ್ಣ ಪುಟ್ಟ ವಿಷಯಗಳ ಬಗ್ಗೆಯೂ ಚಿಂತಿಸುವಂತೆ ಮಾಡಿ ಇನ್ನಷ್ಟು ಧೃತಿಗೆಡುವಂತೆ ಮಾಡುತ್ತದೆ.

ನಿಯಂತ್ರಣಕ್ಕೆ ಸಿಗದ ಮನಸ್ಸು

ಮಾನಸಿಕ ಅಸಮತೋಲನದಿಂದ ತಲ್ಲಣಗೊಂಡಿರುವ ಮನಸ್ಸು ಯಾವುದೇ ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗದಂತೆ ಮಾಡುತ್ತದೆ. ಓದುವುದು, ಬರೆಯುವುದು, ಕಚೇರಿ ಕೆಲಸ ಹೀಗೆ ಯಾವುದೇ ವಿಷಯವಿರಲಿ ಅದರ ಮೇಲೆ ಗಮನ ಹರಿಸುವುದು ಕಷ್ಟವಾಗುವಂತೆ ಮಾಡುತ್ತದೆ. ಸರಳ ವಿಷಯಗಳನ್ನು ಮರೆಯುವಂತೆ ಮಾಡಿ ಗೊಂದಲ ಸೃಷ್ಟಿಯಾಗುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು