logo
ಕನ್ನಡ ಸುದ್ದಿ  /  Lifestyle  /  Summer Tips To Beat The Heatstroke

ಬೇಸಿಗೆಯಲ್ಲಿ ಈ ತಪ್ಪುಗಳನ್ನು ಮಾಡಬೇಡಿ.. ಬಿಸಿಲ ಬೇಗೆಯನ್ನು ತಡೆಯುವ ವಿಧಾನಗಳು ಇಲ್ಲಿವೆ

Meghana B HT Kannada

May 02, 2022 10:23 AM IST

ಬಿಸಿಲ ಬೇಗೆಯನ್ನು ತಡೆಯುವ ವಿಧಾನಗಳು

    • ಬಿಸಿಲಿನಲ್ಲಿ ತಿರುಗಿದಾಗ ಸುಸ್ತಾಗುವುದು ಸನ್‌ಸ್ಟ್ರೋಕ್‌ನ ಲಕ್ಷಣವಾಗಿರಬಹುದು. ಇತರ ಲಕ್ಷಣಗಳು ಯಾವುವು ಮತ್ತು ಚಿಕಿತ್ಸೆ ಏನು ಎಂದು ನೋಡೋಣ ಬನ್ನಿ.. 
ಬಿಸಿಲ ಬೇಗೆಯನ್ನು ತಡೆಯುವ ವಿಧಾನಗಳು
ಬಿಸಿಲ ಬೇಗೆಯನ್ನು ತಡೆಯುವ ವಿಧಾನಗಳು

ಬೇಸಿಗೆ ಬಂದಿದೆ ಮತ್ತು ಇದು ಕೆಲವು ಅಡ್ಡ ಪರಿಣಾಮಗಳನ್ನು ಸಹ ತರುತ್ತಿದೆ. ಈ ಋತುವಿನಲ್ಲಿ ಬಿಸಿ ಗಾಳಿ ಮತ್ತು ಶಾಖದ ಹೊಡೆತಕ್ಕೆ ಆಯಾಸ, ತಲೆನೋವು, ವಾಕರಿಕೆ ಮತ್ತು ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜವಾಗಿದೆ. ಆದರೆ ಬೇಸಿಗೆಯಲ್ಲಿ ನಮ್ಮ ದೇಹದಲ್ಲಿ ಕಂಡುಬರುವ ರೋಗಲಕ್ಷಣಗಳ ಮೇಲೆ ನಿಗಾ ಇಡುವುದು ಮುಖ್ಯ. ಹೀಗಾಗಿ ಹೆಚ್ಚು ತಾಪಮಾನದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕು.

ಟ್ರೆಂಡಿಂಗ್​ ಸುದ್ದಿ

ಕಡಲೆ ಬೇಳೆಯ ಪರಾಠ ಸವಿದಿದ್ದೀರಾ? ಪ್ರೋಟೀನ್‌ಯುಕ್ತ ಈ ತಿಂಡಿ ಮಕ್ಕಳ ಲಂಚ್‌ ಬಾಕ್ಸ್‌ಗೆ ಉತ್ತಮ ಆಯ್ಕೆ

ಪ್ರಾಣಿ ಆಧಾರಿತ ಪ್ರೊಟೀನ್ vs ಸಸ್ಯ ಆಧಾರಿತ ಪ್ರೊಟೀನ್; ದೇಹಕ್ಕೆ ಯಾವುದು ಉತ್ತಮ, ಇವೆರಡರ ಪ್ರಯೋಜನಗಳೇನು?

ರಾತ್ರಿ ವೇಳೆ ತಡವಾಗಿ ಊಟ ಮಾಡುವ ಅಭ್ಯಾಸ ನಿಮಗಿದೆಯಾ? ಈ ಬಗ್ಗೆ ತಜ್ಞರು ಏನಂತಾರೆ, ಇಲ್ಲಿದೆ ಮಾಹಿತಿ

International Labour Day: ಕಾರ್ಮಿಕರ ದಿನವನ್ನು ಮೇ 1 ರಂದೇ ಆಚರಿಸುವುದೇಕೆ? ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ

ನಾವು ಹೆಚ್ಚಿನ ತಾಪಮಾನಕ್ಕೆ ಒಡ್ಡಿಕೊಂಡಾಗ ನಮ್ಮ ದೇಹದಲ್ಲಿರುವ ನೀರು ಮತ್ತು ಲವಣಗಳು ಬೆವರಿನ ರೂಪದಲ್ಲಿ ಆವಿಯಾಗುತ್ತದೆ. ಇದರಿಂದ ದೇಹವು ಶಕ್ತಿ ಕಳೆದುಕೊಳ್ಳುತ್ತದೆ ಮತ್ತು ಆಲಸ್ಯವನ್ನು ಅನುಭವಿಸುತ್ತೇವೆ. 40 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚು ಬಿಸಿಲಿಗೆ ಒಡ್ಡಿಕೊಂಡಾಗ ನಮ್ಮ ಶಕ್ತಿ ಕುಂದಬಹುದು. ಹೀಗಾಗಿ ಬೇಸಿಗೆಯ ಆಯಾಸವನ್ನು ನಿರ್ಲಕ್ಷಿಸಬೇಡಿ ಎಂದು ವೈದ್ಯರು ಎಚ್ಚರಿಕೆ ನೀಡುತ್ತಾರೆ. ಫೋರ್ಟಿಸ್ ಆಸ್ಪತ್ರೆಯ ಡಾ.ಸಂದೀಪ್ ಪಾಟೀಲ್ ಅವರು ಸನ್‌ಸ್ಟ್ರೋಕ್‌ನ ಲಕ್ಷಣಗಳೇನು ಮತ್ತು ಅದನ್ನು ತಡೆಯುವ ಮಾರ್ಗಗಳನ್ನು ವಿವರಿಸುತ್ತಾರೆ.

ಸನ್‌ಸ್ಟ್ರೋಕ್‌ನ ಲಕ್ಷಣಗಳು

ದೇಹದ ಉಷ್ಣತೆ ಏರುತ್ತದೆ. ಜ್ವರ ಬಂದಂತೆ ಭಾಸವಾಗುತ್ತಿದೆ. ಎಲ್ಲವೂ ಗೊಂದಲಮಯವಾಗಿ ವಿಚಿತ್ರವೆನಿಸುತ್ತದೆ. ಬೆವರುವಿಕೆಯ ಮಾದರಿಯಲ್ಲಿ ಬದಲಾವಣೆಗಳನ್ನು ಗಮನಿಸಬಹುದು. ಇವುಗಳ ಹೊರತಾಗಿ ನಮಗೆ ತೀವ್ರ ತಲೆನೋವು ಮತ್ತು ಉಸಿರಾಟದ ತೊಂದರೆ ಉಂಟಾಗುತ್ತದೆ. ಇದೇ ರೋಗಲಕ್ಷಣಗಳು ಸನ್​ಸ್ಟ್ರೋಕ್​ನ ಲಕ್ಷಣಗಳಾಗಿವೆ. ತಕ್ಷಣವೇ ಚಿಕಿತ್ಸೆ ನೀಡದಿದ್ದರೆ ಇವು ಮಾರಣಾಂತಿಕವಾಗಬಹುದು. ಸೂರ್ಯನ ಬೆಳಕನ್ನು ನಿರ್ಲಕ್ಷಿಸುವುದರಿಂದ ಹೃದಯ, ಮೂತ್ರಪಿಂಡಗಳು, ಮೆದುಳು ಮತ್ತು ಸ್ನಾಯುಗಳಿಗೆ ಹಾನಿಯಾಗುತ್ತದೆ. ಇದರಿಂದ ಸಾವು ಸಂಭವಿಸಬಹುದು.

ತಡೆಗಟ್ಟುವ ವಿಧಾನಗಳು

* ಹೈಡ್ರೇಟೆಡ್ ಆಗಿರಬೇಕು. ಶಾಖವನ್ನು ತಡೆದುಕೊಳ್ಳಲು ಸಾಕಷ್ಟು ನೀರು, ನಿಂಬೆ ರಸ, ಹಣ್ಣಿನ ರಸಗಳು, ಮತ್ತು ಲಸ್ಸಿಗಳನ್ನು ಕುಡಿಯಿರಿ.

* ಹೊರಗೆ ಹೋಗುವಾಗ ಛತ್ರಿ, ಟೋಪಿ ಜೊತೆಗೆ ಸನ್ ಗ್ಲಾಸ್ ಬಳಸಿ.

* ಬಿಸಿ ವಾತಾವರಣದಲ್ಲಿ ಹೊರಗೆ ತಿರುಗುವುದನ್ನು ಕಡಿಮೆ ಮಾಡಬೇಕು.

* ಮಧ್ಯಾಹ್ನದ ಸಮಯದಲ್ಲಿ ಚೆನ್ನಾಗಿ ಗಾಳಿ ಇರುವ ಅಥವಾ ಹವಾನಿಯಂತ್ರಿತ ಪ್ರದೇಶಗಳಲ್ಲಿ ಇರಲು ಪ್ರಯತ್ನಿಸಿ.

* ಸಂಜೆ ವೇಳೆ ತಾಪಮಾನ ಕಡಿಮೆಯಾದಾಗ ಮಾತ್ರ ಮಕ್ಕಳು ಮತ್ತು ವೃದ್ಧರು ಹೊರಗೆ ಹೋಗಬೇಕು.

* ಪ್ರಯಾಣದ ಸಮಯದಲ್ಲಿ ತಿಳಿ ಹತ್ತಿ ಬಟ್ಟೆಯಿಂದ ತಲೆಯನ್ನು ಮುಚ್ಚಿಕೊಳ್ಳಿ.

* ಬಿಸಿಲಿಗೆ ಮರಳಿದ ನಂತರ ಸುಸ್ತಾಗುವ ಭಾವನೆ, ಮೇಲಿನ ಯಾವುದೇ ಲಕ್ಷಣಗಳು ಹೆಚ್ಚು ಹೆಚ್ಚು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು