logo
ಕನ್ನಡ ಸುದ್ದಿ  /  ಜೀವನಶೈಲಿ  /  International Labour Day: ಕಾರ್ಮಿಕರ ದಿನವನ್ನು ಮೇ 1 ರಂದೇ ಆಚರಿಸುವುದೇಕೆ? ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ

International Labour Day: ಕಾರ್ಮಿಕರ ದಿನವನ್ನು ಮೇ 1 ರಂದೇ ಆಚರಿಸುವುದೇಕೆ? ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ

Reshma HT Kannada

Apr 30, 2024 06:17 PM IST

ಕಾರ್ಮಿಕರ ದಿನವನ್ನು ಮೇ 1 ರಂದೇ ಆಚರಿಸುವುದೇಕೆ?

    • ಶ್ರಮಿಕ ವರ್ಗವನ್ನು ಗುರುತಿಸುವ ಹಾಗೂ ಗೌರವಿಸುವ ಉದ್ದೇಶದಿಂದ ಪ್ರತಿವರ್ಷ ಮೇ 1 ರಂದು ಅಂತರರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆ ಹೇಗೆ ಬಂತು, ಇದರ ಇತಿಹಾಸ, ಮಹತ್ವ ತಿಳಿಯಿರಿ.
ಕಾರ್ಮಿಕರ ದಿನವನ್ನು ಮೇ 1 ರಂದೇ ಆಚರಿಸುವುದೇಕೆ?
ಕಾರ್ಮಿಕರ ದಿನವನ್ನು ಮೇ 1 ರಂದೇ ಆಚರಿಸುವುದೇಕೆ?

ಕಾರ್ಮಿಕರು ಹಾಗೂ ಕಾರ್ಮಿಕ ವರ್ಗವನ್ನು ದೇಶದ ಪ್ರಬಲ ಶಕ್ತಿ ಎಂದರೂ ತಪ್ಪಾಗಲಿಕ್ಕಿಲ್ಲ. ದೇಶದ ಅಭಿವೃದ್ಧಿಯಲ್ಲಿ ಇವರ ಪಾತ್ರ ಬಹಳ ಮಹತ್ವದ್ದು. ಒಂದು ದೇಶ ಹಾಗೂ ರಾಜ್ಯ ತನ್ನದೇ ಆದ ಮೂಲಸೌಕರ್ಯ, ಅಭಿವೃದ್ಧಿ ಹಾಗೂ ಆರ್ಥಿಕತೆಯಿಂದ ನಿರ್ಮಿಸಲ್ಪಡುತ್ತದೆ. ಕಾರ್ಮಿಕ ವರ್ಗದವರು ದೇಶದ ಅಭಿವೃದ್ಧಿಗೆ ಬೇರುಗಳಂತೆ ಭದ್ರವಾಗಿರುವವರು. ಇವರು ದೇಶ ಹಾಗೂ ಪ್ರಪಂಚಕ್ಕೆ ಧನಾತ್ಮಕ ಬದಲಾವಣೆಗಳನ್ನು ಆರಂಭಿಸಲು ಮೂಲಭೂತ ಮಟ್ಟದಲ್ಲಿ ಕೆಲಸ ಮಾಡುತ್ತಾರೆ. ಯಾವುದೇ ದೇಶಕ್ಕೆ ಕಾರ್ಮಿಕರು ಹಾಗೂ ಕಾರ್ಮಿಕ ವರ್ಗದವರು ಬೆನ್ನೆಲುಬಾಗಿರುವುದು ಬಹಳ ಮುಖ್ಯ. ಆ ಕಾರಣಕ್ಕೆ ಕಾರ್ಮಿಕರ ಬಗ್ಗೆ ಸದಾ ದೇಶ ಹಾಗೂ ಜನರು ಗಮನ ಹರಿಸಬೇಕು. ಅವರ ಯೋಗಕ್ಷೇಮದ ನಿಗಾ ವಹಿಸಬೇಕು. ಅವರ ಸಮಸ್ಯೆಗಳಿಗೆ ಕಿವಿಯಾಗಬೇಕು.

ಟ್ರೆಂಡಿಂಗ್​ ಸುದ್ದಿ

Kitchen Tips: ನಿಮ್ಮ ಅಡುಗೆಮನೆ ಜಿರಳೆಗಳ ಸಾಮ್ರಾಜ್ಯವಾಗಿದ್ಯಾ? ಜಿರಳೆ ಕಾಟದಿಂದ ಮುಕ್ತಿ ಪಡೆಯಲು ಇಲ್ಲಿದೆ ಸಿಂಪಲ್‌ ಟಿಪ್ಸ್‌

Relationship guide: ಮದುವೆಯಾದ ಆರಂಭದ ದಿನಗಳಲ್ಲಿ ದಾಂಪತ್ಯ ಜೀವನ ಹೇಗಿರಬೇಕು? ಸುಖ ಸಂಸಾರಕ್ಕೆ ದಂಪತಿಗಳು ಪಾಲಿಸಬೇಕಾದ ನಿಯಮಗಳಿವು

ಎಸ್ಎಸ್‌ಎಲ್‌ಸಿ, ಪಿಯುಸಿ ಅನುತೀರ್ಣರಾಗಿ ಮುಂದೆ ಓದಲು ಇಷ್ಟಾ ಇಲ್ವಾ? ಆಸಕ್ತರಿಗಾಗಿ ಕೇಶ ವಿನ್ಯಾಸ ತರಬೇತಿ ಆರಂಭ

Parkinson Disease: ಪಾರ್ಕಿನ್ಸನ್‌ ಕಾಯಿಲೆಗೂ ನಿದ್ದೆಗೂ ಇದೆ ಸಂಬಂಧ; ನಿದ್ದೆ ಕಡಿಮೆಯಾದ್ರೆ ಸಮಸ್ಯೆ ಉಲ್ಬಣವಾಗಬಹುದು ಎಚ್ಚರ

ಶ್ರಮಿಕ ವರ್ಗದ ಮಹತ್ವ ಹಾಗೂ ಅವರ ಅಗತ್ಯವನ್ನು ತಿಳಿಸುವ ಹಾಗೂ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರತಿವರ್ಷ ಮೇ 1 ರಂದು ಅಂತರರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ಆದರೆ ಈ ದಿನ ಆಚರಣೆಯ ಹಿಂದಿನ ಇತಿಹಾಸ ಹಾಗೂ ದಿನದ ಮಹತ್ವ ಹಲವರಿಗೆ ತಿಳಿದಿಲ್ಲ. ಈ ಕುರಿತ ವಿವರ ಇಲ್ಲಿದೆ.

ಅಂತರರಾಷ್ಟ್ರೀಯ ಕಾರ್ಮಿಕ ದಿನ ಯಾವಾಗ?

ಪ್ರತಿವರ್ಷ ಮೇ 1 ರಂದು ಅಂತರರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಕಾರ್ಮಿಕರ ದಿನ ಬುಧವಾರ ಬಂದಿದೆ.

ಅಂತರರಾಷ್ಟ್ರೀಯ ಕಾರ್ಮಿಕರ ದಿನದ ಇತಿಹಾಸ

1886ರಲ್ಲಿ ಅಮೆರಿಕದಲ್ಲಿ ದೊಡ್ಡ ಪ್ರತಿಭಟನೆ ನಡೆಯಿತು. ಅಲ್ಲಿ ಕಾರ್ಮಿಕರು ದಿನದ ಕೆಲಸವನ್ನು 8 ಗಂಟೆಗಳ ಕಾಲ ನಿಗದಿ ಪಡಿಸಲು ಒತ್ತಾಯಿಸಿದರು. ಆದರೆ ಈ ಪ್ರತಿಭಟನೆ ಮುಂದುವರಿಯಿತು. ಇದರಲ್ಲಿ ಹಲವರು ಗಾಯಗೊಂಡರು. ಈ ಘಟನೆಯನ್ನು ಹೇಮಾರ್ಕೆಟ್‌ ಅಫೇರ್‌ ಎಂದು ಕರೆಯಲಾಯಿತು. ಇದು ಅಂತರರಾಷ್ಟ್ರೀಯ ಕಾರ್ಮಿಕರ ದಿನ ಆಚರಣೆಗೆ ನಾಂದಿಯಾಯಿತು. 1889ರಲ್ಲಿ ಯುರೋಪಿನ ಹಲವು ಸಮಾಜವಾದಿ ಪಕ್ಷಗಳು ಒಟ್ಟಾಗಿ ಮೇ 1 ಅನ್ನು ಅಂತರರಾಷ್ಟ್ರೀಯ ಕಾರ್ಮಿಕ ದಿನವನ್ನಾಗಿ ಆಚರಿಸಲು ನಿರ್ಧರಿಸಿದವು. ಅಂದಿನಿಂದ ಇಲ್ಲಿಯವರೆಗೆ ಪ್ರತಿ ವರ್ಷ ಈ ದಿನದಂದು ವಿಶ್ವ ಕಾರ್ಮಿಕ ದಿನವನ್ನು ಆಚರಿಸಲಾಗುತ್ತಿದೆ.

ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಮಹತ್ವ

ಸಮಾಜ ಮತ್ತು ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರು ಮತ್ತು ಕಾರ್ಮಿಕ ವರ್ಗದ ಕೊಡುಗೆಗಳನ್ನು ಗುರುತಿಸಿ, ಗೌರವಿಸುವ ಮಹತ್ವವನ್ನು ಅಂತರರಾಷ್ಟ್ರೀಯ ಕಾರ್ಮಿಕ ದಿನ ಒತ್ತಿ ಹೇಳುತ್ತದೆ. ಇದು ಕಾರ್ಮಿಕರು ತಮ್ಮ ಹಕ್ಕುಗಳ ಬಗ್ಗೆ ಹೇಳಬೇಕು ಎಂದು ಒತ್ತಾಯಿಸುತ್ತದೆ. ಕಾರ್ಮಿಕರು ಹೆಚ್ಚಾಗಿ ಷೋಷಣೆಗೆ ಒಳಗಾಗುತ್ತಾರೆ. ಆದರೆ ಕಾರಣಕ್ಕೆ ತಮ್ಮನ್ನು ನಾವು ರಕ್ಷಿಸಿಕೊಳ್ಳಲು ತಮ್ಮ ಹಕ್ಕುಗಳನ್ನು ತಿಳಿದಿರುವುದು ಮುಖ್ಯವಾಗಿದೆ. ಇದು ಕಾರ್ಮಿಕರ ಕೆಲಸ ಹಾಗೂ ಜೀವನವನ್ನು ಅಭಿವೃದ್ಧಿ ಪಡಿಸಲು ಸಮಾಜದ ಎಲ್ಲರೂ ಕೈಜೋಡಿಸಬೇಕು ಎಂದು ಒತ್ತಾಯಿಸುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು