Yoga Poses for Back Pain: ಆಗ್ಗಾಗ್ಗೆ ಕಾಡುವ ಬೆನ್ನುನೋವಿಗೆ ಈ ಯೋಗಾಸನಗಳ ಮೂಲಕ ಗುಡ್ ಬೈ ಹೇಳಿ
Oct 11, 2022 04:51 PM IST
ಬೆನ್ನು ನೋವಿಗೆ ಯೋಗಾಸನ
- ಸಿಂಹನಾರಿ ಭಂಗಿಯು ಬೆನ್ನು ನೋವನ್ನು ಕಡಿಮೆ ಮಾಡುವುದಲ್ಲದೆ ಒತ್ತಡವನ್ನು ಕಡಿಮೆ ಮಾಡುತ್ತದೆ. ನಿಮ್ಮ ದೇಹವು ಹೊಟ್ಟೆಯವರೆಗೂ ನೆಲಕ್ಕೆ ತಾಕುವಂತೆ ಮಲಗಿ, ನಂತರ ಎರಡೂ ಕೈಗಳನ್ನು ಮುಂಚಕ್ಕೆ ಚಾಚಿ, ಎದೆಯಿಂದ ತಲೆಯ ಭಾಗವನ್ನು ಮೇಲಕ್ಕೆ ಎತ್ತಿ. ಇದೇ ಭಂಗಿಯಲ್ಲಿ ಸ್ವಲ್ಪ ಸೆಕೆಂಡ್‌ಗಳ ಕಾಲ ಇರಿ.
ಆಗ್ಗಾಗ್ಗೆ ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ಬೆನ್ನು ನೋವು ಕೂಡಾ ಒಂದು. ಬಹಳ ಹೊತ್ತು ನಿಂತರೂ ಬೆನ್ನು ನೋವು, ಕೂತರೂ ಬೆನ್ನು ನೋವು ಕಾಡುತ್ತದೆ. ಕೆಲವರಿಗೆ ಇದು ತಾತ್ಕಾಲಿಕವಾಗಿದ್ದರೆ ಇನ್ನೂ ಕೆಲವರಿಗೆ ದೀರ್ಘಾವಧಿಯವರೆಗೆ ಕಾಡುತ್ತದೆ. ಆದರೆ ಕೆಲವೊಂದು ಯೋಗ ಭಂಗಿಗಳ ಮೂಲಕ ಬೆನ್ನು ನೋವನ್ನು ಕಡಿಮೆ ಮಾಡಿಕೊಳ್ಳಬಹುದು.
ಈ ಯೋಗ, ದೇಹಕ್ಕೆ ಸಾಕಷ್ಟು ವಿಶ್ರಾಂತಿ ನೀಡುತ್ತದೆ. ಅಲ್ಲದೆ ಬೆನ್ನು ಬಲಗೊಳ್ಳುತ್ತದೆ. ಆದ್ದರಿಂದಲೇ ಪ್ರತಿದಿನ ಸ್ವಲ್ಪ ಸಮಯ ಯೋಗ ಮಾಡುವುದು ಒಳ್ಳೆಯದು. ಬೆನ್ನು ನೋವನ್ನು ಕಡಿಮೆ ಮಾಡಲು ಇಲ್ಲಿ ತಿಳಿಸಿರುವ ಯೋಗದ ಭಂಗಿಗಳನ್ನು ಪ್ರಯತ್ನಿಸಿ ನೋಡಿ.
1. ಮಾರ್ಜರಿಯಾಸನ (ಬೆಕ್ಕಿನ ಭಂಗಿ)
ಮಾರ್ಜರಿಯಾಸನ ಮಾಡುವುದರಿಂದ ನಿಮ್ಮ ಬೆನ್ನು ಮೂಳೆ ನೇರವಾಗುತ್ತದೆ. ಈ ಆಸನ ನಿಮ್ಮ ದೇಹ, ಭುಜಗಳು ಮತ್ತು ಕುತ್ತಿಗೆಯನ್ನು ಹಿಗ್ಗಿಸುತ್ತದೆ. ಬೆಕ್ಕುಗಳ ಕುಳಿತುಕೊಳ್ಳುವಂತೆ ಎರಡು ಕೈಗಳನ್ನು ಮುಂದೆ ಇಟ್ಟು ಕಾಲುಗಳನ್ನು ಹಿಂದಕ್ಕೆ ಚಾಚಿ. ಒಮ್ಮೆ ಬೆನ್ನನ್ನು ಮೇಲಕ್ಕೆ ಉಬ್ಬಿಸುವುದು ಹಾಗೂ ಕೆಳಕ್ಕೆ ಬಾಗಿಸುವುದು ಮಾಡಬೇಕು. ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯಲಿದೆ.
2. ಅಧೋಮುಖ ಸ್ವಾನಾಸನ
ಅಧೋಮುಖ ಸ್ವಾನಾಸನ ಮಾಡುವುದರಿಂದ ಕೂಡಾ ಬೆನ್ನು ನೋವು ಕಡಿಮೆ ಆಗುತ್ತದೆ. ಈ ಆಸನದಿಂದ ದೇಹದ ತೂಕವನ್ನು ಕೂಡಾ ಕಡಿಮೆಗೊಳಿಸಬಹುದು. ಬೆನ್ನಿನ ಮೂಳೆಯನ್ನು ಬಲಪಡಿಸುವಲ್ಲಿ ಈ ಆಸನ ಬಹಳ ಉಪಯೋಗಕಾರಿ
3. ತ್ರಿಕೋನಾಸನ
ಬೆನ್ನು ನೋವು, ಕುತ್ತಿಗೆ ನೋವು ಇರುವವರು ಈ ತ್ರಿಕೋನಾಸನದ ಮೂಲಕ ಪರಿಹಾರ ಪಡೆಯಬಹುದು. ಇದು ನಿಮ್ಮ ಬೆನ್ನುಮೂಳೆ, ಸೊಂಟ ಮತ್ತು ತೊಡೆ, ಭುಜಗಳು, ಎದೆ ಮತ್ತು ಕಾಲುಗಳನ್ನು ಬಲಪಡಿಸುತ್ತದೆ. ಎಲ್ಲಕ್ಕಿಂತಲೂ ಈ ಆಸನವು ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.
4. ಸಿಂಹನಾರಿ ಭಂಗಿ
ಸಿಂಹನಾರಿ ಭಂಗಿಯು ಬೆನ್ನು ನೋವನ್ನು ಕಡಿಮೆ ಮಾಡುವುದಲ್ಲದೆ ಒತ್ತಡವನ್ನು ಕಡಿಮೆ ಮಾಡುತ್ತದೆ. ನಿಮ್ಮ ದೇಹ ಹೊಟ್ಟೆಯವರೆಗೂ ನೆಲಕ್ಕೆ ತಾಕುವಂತೆ ಮಲಗಿ, ನಂತರ ಎರಡೂ ಕೈಗಳನ್ನು ಮುಂಚಕ್ಕೆ ಚಾಚಿ, ಎದೆಯಿಂದ ತಲೆಯ ಭಾಗವನ್ನು ಮೇಲಕ್ಕೆ ಎತ್ತಿ. ಇದೇ ಭಂಗಿಯಲ್ಲಿ ಸ್ವಲ್ಪ ಸೆಕೆಂಡ್‌ಗಳ ಕಾಲ ಇರಿ.
5. ಭುಜಂಗಾಸನ (ಕೋಬ್ರಾ ಪೋಸ್)
ಭುಜಂಗಾಸನದಿಂದ ನಿಮ್ಮ ಎದೆ, ಹೊಟ್ಟೆ ಮತ್ತು ಭುಜಗಳಿಗೆ ಪ್ರಯೋಜನ ದೊರೆಯುತ್ತದೆ. ಈ ಭಂಗಿಯು ನಿಮ್ಮ ಬೆನ್ನುಮೂಳೆಯನ್ನು ಬಲಪಡಿಸುತ್ತದೆ. ಇದು ಸಾಮಾನ್ಯವಾಗಿ ಬೆನ್ನುನೋವಿನೊಂದಿಗೆ ಒತ್ತಡ ಮತ್ತು ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕಚೇರಿಯಲ್ಲಿ ಹೆಚ್ಚು ಕಾಲ ಕುಳಿತು ಕೆಲಸ ಮಾಡುವವರಿಗೆ ಈ ಯೋಗ ಭಂಗಿಗಳು ಬಹಳ ಉಪಯುಕ್ತವಾಗಿದೆ. ಸಮಸ್ಯೆ ಇದ್ದಾಗ ಈ ಭಂಗಿಗಳನ್ನು ಮಾಡುವ ಬದಲಿಗೆ ಪ್ರತಿದಿನ ಇಂತಿಷ್ಟು ಸಮಯ ವ್ಯಾಯಾಮ ಮಾಡಲು ಪ್ರಯತ್ನಿಸಿ.