logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್, ಡೊನಾಲ್ಡ್ ಟ್ರಂಪ್ ನಡುವೆ ಸ್ಪರ್ಧೆ, ಥಾಯ್ಲೆಂಡ್‌ನ ನೀರಾನೆ ಮರಿಗೆ ಇಷ್ಟವಾದವರು ಇವರೇ, ವೈರಲ್ ವಿಡಿಯೋ

ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್, ಡೊನಾಲ್ಡ್ ಟ್ರಂಪ್ ನಡುವೆ ಸ್ಪರ್ಧೆ, ಥಾಯ್ಲೆಂಡ್‌ನ ನೀರಾನೆ ಮರಿಗೆ ಇಷ್ಟವಾದವರು ಇವರೇ, ವೈರಲ್ ವಿಡಿಯೋ

Umesh Kumar S HT Kannada

Nov 05, 2024 04:36 PM IST

google News

ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್, ಡೊನಾಲ್ಡ್ ಟ್ರಂಪ್ ನಡುವೆ ಸ್ಪರ್ಧೆ ಇದ್ದು, ಇವರ ನಡುವೆ ಗೆಲ್ಲೋರು ಯಾರು ಎಂಬುದು ಸದ್ಯದ ಕುತೂಹಲ. ಥಾಯ್ಲೆಂಡ್‌ನ ನೀರಾನೆ ಮರಿಗೆ ಇಷ್ಟವಾದವರು ಇವರೇ ನೋಡಿ, ವೈರಲ್ ವಿಡಿಯೋದಿಂದ ತೆಗೆದ ಚಿತ್ರ ಇದು.

  • ಅಮೆರಿಕ ಚುನಾವಣೆಯಲ್ಲಿ ಈ ಬಾರಿ ಕಮಲಾ ಹ್ಯಾರಿಸ್, ಡೊನಾಲ್ಡ್ ಟ್ರಂಪ್ ನಡುವೆ ಸ್ಪರ್ಧೆ ಇದೆ. ಇವರಲ್ಲಿ ಯಾರು ಗೆಲ್ತಾರೋ ಬಿಡ್ತಾರೋ ಗೊತ್ತಿಲ್ಲ. ಥಾಯ್ಲೆಂಡ್‌ನ ನೀರಾನೆ ಮರಿಗೆ ಇಷ್ಟವಾದವರು ಇವರೇ. ಸದ್ಯ ಈ ವೈರಲ್ ವಿಡಿಯೋ ನಾನಾ ರೀತಿಯ ಪ್ರತಿಕ್ರಿಯೆಯೊಂದಿಗೆ ಜನ ಮನಸೆಳೆದಿದೆ. ನೀವೂ ನೋಡಿ..

ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್, ಡೊನಾಲ್ಡ್ ಟ್ರಂಪ್ ನಡುವೆ ಸ್ಪರ್ಧೆ ಇದ್ದು, ಇವರ ನಡುವೆ ಗೆಲ್ಲೋರು ಯಾರು ಎಂಬುದು ಸದ್ಯದ ಕುತೂಹಲ. ಥಾಯ್ಲೆಂಡ್‌ನ ನೀರಾನೆ ಮರಿಗೆ ಇಷ್ಟವಾದವರು ಇವರೇ ನೋಡಿ, ವೈರಲ್ ವಿಡಿಯೋದಿಂದ ತೆಗೆದ ಚಿತ್ರ ಇದು.
ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್, ಡೊನಾಲ್ಡ್ ಟ್ರಂಪ್ ನಡುವೆ ಸ್ಪರ್ಧೆ ಇದ್ದು, ಇವರ ನಡುವೆ ಗೆಲ್ಲೋರು ಯಾರು ಎಂಬುದು ಸದ್ಯದ ಕುತೂಹಲ. ಥಾಯ್ಲೆಂಡ್‌ನ ನೀರಾನೆ ಮರಿಗೆ ಇಷ್ಟವಾದವರು ಇವರೇ ನೋಡಿ, ವೈರಲ್ ವಿಡಿಯೋದಿಂದ ತೆಗೆದ ಚಿತ್ರ ಇದು.

ನವದೆಹಲಿ/ಬೆಂಗಳೂರು: ಅಮೆರಿಕ ಅಧ್ಯಕ್ಷೀಯ ಚುನಾವಣೆ ನಿರ್ಣಾಯಕ ಘಟ್ಟಕ್ಕೆ ಬಂದಿದೆ. ಇಂದು (ನವೆಂಬರ್ 5) ಅಲ್ಲಿನ ಸ್ಥಳೀಯ ಕಾಲಮಾನದ ಪ್ರಕಾರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆ ತನಕ ಮತದಾನ ನಡೆಯಲಿದೆ. ಅದು ನಡುವೆಯೇ ಸಂಜೆ 5 ಗಂಟೆಗೆ ಮತಗಟ್ಟೆ ಸಮೀಕ್ಷೆ, ಮತದಾರರ ಅಭಿಪ್ರಾಯಗಳು ಕೂಡ ಪ್ರಸಾರವಾಗಲಿವೆ. ನಾಳೆ ಹೊತ್ತಿಗೆ ಗೆಲ್ಲುವವರು ಯಾರೆಂಬ ಚಿತ್ರಣ ಸಿಗಲಿದೆ. ಆದರೂ, ಜನರ ಕುತೂಹಲಕ್ಕೆ ಎಣೆ ಇಲ್ಲ. ಥಾಯ್ಲೆಂಡ್‌ನ ಮೃಗಾಲಯದ ಜನಪ್ರಿಯ ನೀರಾನೆ ಮರಿ ಮೂ ಡೆಂಗ್ ಅಮೆರಿಕ ಚುನಾವಣೆಯಲ್ಲಿ ಗೆಲ್ಲೋರು ಯಾರು ಎಂಬ ಪ್ರಶ್ನೆಗೆ ಉತ್ತರ ನೀಡಿದೆ. ಅದು ಯಾರನ್ನು ಆಯ್ಕೆ ಮಾಡಿದೆ, ಹೇಗೆ ಮಾಡಿತು ಎಂಬ ಕುತೂಹಲವೇ? ಇಲ್ಲಿದೆ ಆ ವಿವರ.

ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್, ಡೊನಾಲ್ಡ್ ಟ್ರಂಪ್ ನಡುವೆ ಸ್ಪರ್ಧೆ

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಅಧ್ಯಕ್ಷೀಯ ಅಭ್ಯರ್ಥಿಗಳಾಗಿ ಡೆಮಾಕ್ರಟಿಕ್‌ ಪಕ್ಷದಿಂದ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌, ರಿಪಬ್ಲಿಕನ್ ಪಕ್ಷದಿಂದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಕಣದಲ್ಲಿದ್ದಾರೆ. ಈ ಸಲದ ಚುನಾವಣೆಯ ಆರಂಭದಲ್ಲಿ ಅಧ್ಯಕ್ಷ ಜೋ ಬಿಡೆನ್ ಅವರು ಮತ್ತೊಮ್ಮೆ ಸ್ಪರ್ಧಿಸಲು ತಯಾರಿ ನಡೆಸಿದ್ದರು. ಆದರೆ ನಾಟಕೀಯ ವಿದ್ಯಮಾನದಲ್ಲಿ 2024ರ ಜೂನ್ 27ರಂದು ಜೋ ಬಿಡೆನ್‌ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ಬಳಿಕ ಕಳೆದ ಬೇಸಿಗೆಯಲ್ಲಿ ಅಲ್ಲಿನ ರಾಜಕೀಯ ನಾಟಕೀಯ ತಿರುವು ಪಡೆದುಕೊಂಡಿತು.

ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ನಾಮ ನಿರ್ದೇಶಿತರಾದರು. ಅದುವರೆಗೂ ಪ್ರಚಾರದಲ್ಲಿ ಹಿನ್ನಡೆ ಅನುಭವಿಸಿದ್ದ ಡೆಮಾಕ್ರಟಿಕ್ ಪಕ್ಷ ಈ ವಿದ್ಯಮಾನದೊಂದಿಗೆ ಪ್ರಚಾರದ ವಿಷಯದಲ್ಲಿ ಚೇತರಿಸಿಕೊಂಡಿತು. ಬಹಳ ಮುನ್ನಡೆ ಕಾಯ್ದುಕೊಂಡಿದ್ದ ರಿಪಬ್ಲಿಕನ್ ಪಾರ್ಟಿಗೆ ಪೈಪೋಟಿ ನೀಡಲಾರಂಭಿಸಿತು. ಇದರೊಂದಿಗೆ ಎರಡೂ ಪಕ್ಷಗಳ ಪ್ರಚಾರ ಬಲಪಡೆಯಿತು.

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನವೆಂಬರ್ ಮೊದಲ ಮಂಗಳವಾರದಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯುತ್ತದೆ. ಸ್ಪರ್ಧಿಸುವ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕೆಲವು ತಿಂಗಳು ಮುಂಚೆಯೇ ಪ್ರಾರಂಭವಾಗುತ್ತದೆ. ಈಗ ಅಂತಿಮ ಘಟ್ಟ ತಲುಪಿದ್ದು, ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ರಿಪಬ್ಲಿಕನ್ ಪಾರ್ಟಿಯ ನಾಮನಿರ್ದೇಶಿತರಾಗಿ ಡೊನಾಲ್ಡ್ ಟ್ರಂಪ್ ಮತ್ತು ಅವರ ಸಹವರ್ತಿಯಾಗಿ ಜೆ ಡಿ ವ್ಯಾನ್ಸ್, ಡೆಮಾಕ್ರಟಿಕ್ ಪಾರ್ಟಿ ನಾಮ ನಿರ್ದೇಶಿತರಾಗಿ ಕಮಲಾ ಹ್ಯಾರಿಸ್‌ ಮತ್ತು ಗವರ್ನರ್ ಟಿಮ್ ವಾಲ್ಜ್ ಕಣದಲ್ಲಿದ್ದಾರೆ.

ಏತನ್ಮಧ್ಯೆ, ಟ್ರಂಪ್ ಮತ್ತು ಹ್ಯಾರಿಸ್ ಸೋಮವಾರ ನಿರ್ಣಾಯಕ ರಾಜ್ಯಗಳಲ್ಲಿ ಪ್ರಚಾರ ಮಾಡಿದರು. ಅಮೆರಿಕದ ಅಧಿಕಾರ ಹಿಡಿಯುವುದಕ್ಕಾತಿ ಅಂತಿಮ ಸುತ್ತಿನ ಪ್ರಚಾರಕ್ಕೆ ಬಲ ತುಂಬಿದರು. ಸೋಮವಾರದ ಹೊತ್ತಿಗೆ, 78 ದಶಲಕ್ಷ ಅಮೆರಿಕನ್ನರು ತಮ್ಮ ಮತ ಚಲಾಯಿಸಿದ್ದಾರೆ. ಯುನಿವರ್ಸಿಟಿ ಆಫ್ ಫ್ಲೋರಿಡಾದ ಎಲೆಕ್ಷನ್ ಲ್ಯಾಬ್ ಅಮೆರಿಕದಾದ್ಯಂತ ಆರಂಭಿಕ ಮತ್ತು ಮೇಲ್-ಇನ್ ಮತದಾನದ ಮೇಲ್ವಿಚಾರಣೆ ಮಾಡುತ್ತಿದೆ.

ಥಾಯ್ಲೆಂಡ್‌ನ ಮರಿ ನೀರಾನೆಗೆ ಇಷ್ಟವಾದವರು ಇವರೇ

ಅಮೆರಿಕದಲ್ಲಿ ನವೆಂಬರ್ 5 ರಂದು ಅಧಿಕೃತ ಮತದಾನ ನಡೆಯುವುದಕ್ಕೆ ಮುಂಚಿತವಾಗಿ ಅಂದರೆ ನವೆಂಬರ್ 4ರಂದು ಥಾಯ್ಲೆಂಡ್‌ನ ಖಾವೋ ಖೋವ್‌ ಓಪನ್ ಮೃಗಾಲಯದ ಮರಿ ನೀರಾನೆ ಭವಿಷ್ಯ ನುಡಿದಿದೆ. ಅಮೆರಿಕ ಚುನಾವಣೆಯಲ್ಲಿ ಗೆಲ್ಲೋರು ಯಾರು ಎಂಬ ಕುತೂಹಲ ತಣಿಸುವ ಪ್ರಯತ್ನ ಇದರಲ್ಲಾಗಿದೆ ಎಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದೆ. ಈ ಮರಿ ನೀರಾನೆ ಈಗಾಗಲೇ ಹಲವು ವಿಡಿಯೋಗಳ ಮೂಲಕ ವೈರಲ್ ಆಗಿರುವ ಕಾರಣ, ಇದರ ಭವಿಷ್ಯ ಸೂಚನೆಯ ಬಗ್ಗೆ ಎಲ್ಲರಿಗೂ ಕುತೂಹಲ.

ಅಮೆರಿಕ ಚುನಾವಣೆ ಭವಿಷ್ಯ ಸೂಚಿಸಿದ ಮರಿ ನೀರಾನೆಯ ವಿಡಿಯೋ ವೈರಲ್ ಆಗಿದೆ. ಈ ಮರಿ ನೀರಾನೆಯ ಹೆಸರು ಮೂ ಡೆಂಗ್‌. ಮೃಗಾಲಯ ಸಿಬ್ಬಂದಿ ಎರಡು ಅಲಂಕಾರ ಮಾಡಿದ ಅಂದರೆ, ಸಿಹಿಗುಂಬಳ, ಕಲ್ಲಂಗಡಿ ಹಣ್ಣಿನ ಮೇಲೆ ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ಹೆಸರು ಕೆತ್ತಿದ ಕಲ್ಲಂಗಡಿ ಹಣ್ಣುಗಳನ್ನು ಆಹಾರವಾಗಿ ಇರಿಸಿದ್ದರು. ತಾಯಿ ನೀರಾನೆ ಮತ್ತು ಮರಿ ನೀರಾನೆಗಳು ಬಂದು ಈ ಹಣ್ಣುಗಳನ್ನು ತಿನ್ನಲಾರಂಭಿಸಿದವು. ಮರಿ ನೀರಾನೆ ಆಯ್ಕೆ ಯಾವುದು ಎಂಬ ಕುತೂಹಲ ಅಲ್ಲಿದ್ದವರಲ್ಲಿ ಇತ್ತು. ಮರಿ ನೀರಾನೆ ಮೂ ಡೆಂಗ್‌ ಡೊನಾಲ್ಡ್‌ ಟ್ರಂಪ್ ಎಂದು ಕೆತ್ತಿದ ಹಣ್ಣನ್ನು ತಿನ್ನಲಾರಂಭಿಸಿತು. ತಾಯಿ ನೀರಾನೆ ಕಮಲಾ ಹ್ಯಾರಿಸ್ ಎಂದು ಕೆತ್ತಿದ ಹಣ್ಣನ್ನು ತಿನ್ನಲಾರಂಭಿಸಿತು. ಸಮಬಲದ ಪೈಪೋಟಿ ಇರುವ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧ್ಯತೆ ಎಂದು ಈಗ ನಂಬಲಾಗಿದೆ. ಈ ವಿಡಿಯೋವನ್ನು ಸೋಮವಾರ ಚಿತ್ರೀಕರಿಸಿದ್ದಾಗಿ ವರದಿ ವಿವರಿಸಿದೆ.

ನೀರಾನೆ ಮರಿಯ ಭವಿಷ್ಯ ಈಗ ಟ್ರೋಲ್ ಆಗುತ್ತಿದ್ದು, ಒಬ್ಬೊಬ್ಬರು ತಮ್ಮ ತಮ್ಮ ಸೃಜನಶೀಲ ಚಿಂತನೆಯನ್ನು ಹಂಚಿಕೊಳ್ಳತೊಡಗಿದ್ದಾರೆ. ಕೆಲವರು ಕಾರ್ಟೂನ್ ರಚಿಸಿ ಶೇರ್ ಮಾಡಿದರೆ, ಇನ್ನು ಕೆಲವರು ಟ್ರಂಪ್ ಫೋಟೋ ಸೇರಿ ಅಣಕವಾಡಿದ್ದಾರೆ. ಒಟ್ಟಿನಲ್ಲಿ ನೀರಾನೆ ಮರಿಯ ವೈರಲ್ ವಿಡಿಯೋ ಸಂಚಲನ ಮೂಡಿಸಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ