logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಜಗತ್ತಿನ ಅತ್ಯಧಿಕ ಮಾಲಿನ್ಯವಿರುವ ನಗರ ದೆಹಲಿ ಅಲ್ಲ; ಹೊಸ ನಗರದ ಹೆಸರು ಕೇಳಿ ಪಾಕ್‌ಗೆ ಬೇಸರ

ಜಗತ್ತಿನ ಅತ್ಯಧಿಕ ಮಾಲಿನ್ಯವಿರುವ ನಗರ ದೆಹಲಿ ಅಲ್ಲ; ಹೊಸ ನಗರದ ಹೆಸರು ಕೇಳಿ ಪಾಕ್‌ಗೆ ಬೇಸರ

Praveen Chandra B HT Kannada

Oct 22, 2024 05:07 PM IST

google News

ಲಾಹೋರ್‌ನಲ್ಲಿ ಹೊಗೆ ವಾತಾವರಣದ ನಡುವೆ ಬಾಲಕನೊಬ್ಬ ಶಾಲೆಗೆ ಹೋಗುತ್ತಿರುವುದು. ಸಂಗ್ರಹ ಚಿತರ

  • Air Quality Index 394ಕ್ಕೆ ತಲುಪಿರುವ ಕಾರಣ ಜಗತ್ತಿನ ಅತ್ಯಧಿಕ ಮಾಲಿನ್ಯವಿರುವ ನಗರವಾಗಿ ಪಾಕಿಸ್ತಾನದ ಲಾಹೋರ್‌ ಹೊರಹೊಮ್ಮಿದೆ. ಸಾಂಸ್ಕೃತಿಕ ರಾಜಧಾನಿಯಲ್ಲಿ ಮಾಲಿನ್ಯ ಕಡಿಮೆ ಮಾಡಲು ಕ್ರಮಕೈಗೊಳ್ಳುವುದಾಗಿ ಪಾಕಿಸ್ತಾನ ತಿಳಿಸಿದೆ.

ಲಾಹೋರ್‌ನಲ್ಲಿ ಹೊಗೆ ವಾತಾವರಣದ ನಡುವೆ ಬಾಲಕನೊಬ್ಬ ಶಾಲೆಗೆ ಹೋಗುತ್ತಿರುವುದು. ಸಂಗ್ರಹ ಚಿತರ
ಲಾಹೋರ್‌ನಲ್ಲಿ ಹೊಗೆ ವಾತಾವರಣದ ನಡುವೆ ಬಾಲಕನೊಬ್ಬ ಶಾಲೆಗೆ ಹೋಗುತ್ತಿರುವುದು. ಸಂಗ್ರಹ ಚಿತರ (REUTERS)

ಬೆಂಗಳೂರು: ಜಗತ್ತಿನ ಅತ್ಯಧಿಕ ಮಾಲಿನ್ಯದ ನಗರ ಯಾವುದೆಂದರೆ ದೆಹಲಿಯತ್ತ ನೋಡಬೇಡಿ. ಇದೀಗ ಬಿಡುಗಡೆಯಾದ ವಾಯುಗುಣಮಟ್ಟ ಸೂಚ್ಯಂಕದಲ್ಲಿ ಜಗತ್ತಿನ ಅತ್ಯಂತ ಕಲುಷಿತ ನಗರ ಎಂಬ ಹಣೆಪಟ್ಟಿ ಪಾಕಿಸ್ತಾನದ ಸಾಂಸ್ಕೃತಿಕ ಕೇಂದ್ರವಾದ ಲಾಹೋರ್‌ಗೆ ದೊರಕಿದೆ. ಏರ್‌ ಕ್ವಾಲಿಟಿ ಇಂಡೆಕ್ಸ್‌ 394 ಎನ್ನುವುದು ಅಪಾಯಕಾರಿ ಮಟ್ಟ. ಈ ಮಾಲಿನ್ಯದಲ್ಲಿ ಕೆಮ್ಮು, ಉಸಿರಾಟದ ತೊಂದರೆಗಳು, ಕಣ್ಣಿನ ಕಿರಿಕಿರಿ ಸೇರಿದಂತೆ ಹಲವು ಆರೋಗ್ಯ ಅಪಾಯಗಳು ಉಂಟಾಗುತ್ತವೆ. ನಗರದ ಅಸಂಖ್ಯಾತ ನಿವಾಸಿಗಳಿಗೆ ಚರ್ಮದ ಸೋಂಕಿಗೂ ಕಾರಣವಾಗುತ್ತದೆ.

ಎಕ್ಯುಐ ಎನ್ನುವುದು ಗಾಳಿಯಲ್ಲಿನ ವಿವಿಧ ಮಾಲಿನ್ಯಕಾರಕಗಳ ಸಾಂದ್ರತೆಯ ಅಳತೆಯಾಗಿದೆ. ಎಕ್ಯುಐ100ಕ್ಕಿಂತ ಹೆಚ್ಚು ಅನಾರೋಗ್ಯಕರ ಮತ್ತು 150 ಕ್ಕಿಂತ ಹೆಚ್ಚು "ಅತ್ಯಂತ ಅನಾರೋಗ್ಯಕರ" ಎಂದು ಪರಿಗಣಿಸಲಾಗುತ್ತದೆ. ಬೆಳೆಗಳ ಅವಶೇಷಗಳ ಸುಡುವಿಕೆ, ಕೈಗಾರಿಕೆಗಳಿಂದ ಹೊರಬರುವ ಹೊಗೆ ಇತ್ಯಾದಿಗಳು ಈ ಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗಿದೆ. "ಇದೀಗ ಈ ಕುರಿತು ರೈತರಿಗೆ ಶಿಕ್ಷಣ ನೀಡಲು, ಪರ್ಯಾಯ ವಿಧಾನಗಳ ಕುರಿತು ಮಾಹಿತಿ ನೀಡಲು ಸೂಪರ್‌ ಸೀಡರ್‌ಗಳ ಬಳಕೆಯನ್ನು ಉತ್ತೇಜಿಸಲು ಆಂಟಿ ಸ್ಮಾಗ್‌ ಸ್ಕ್ವಾಡ್‌ ಆರಂಭಿಸಿದೆ.

"ನಿನ್ನೆ (ಮಂಗಳವಾರ) ಲಾಹೋರ್ ಅನ್ನು ವಿಶ್ವದ ಅತ್ಯಂತ ಕಲುಷಿತ ನಗರವೆಂದು ಘೋಷಿಸಲಾಗಿದೆ. ಈ ವಿಷಯವನ್ನು ಪರಿಹರಿಸಲು ನಾವು ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದೇವೆ. ಈಗ ನಾವು ನಗರದಲ್ಲಿ ಕೃತಕ ಮಳೆಗೆ ಯೋಜಿಸುತ್ತಿದ್ದೇವೆ" ಎಂದು ಪಂಜಾಬ್ ಮಾಹಿತಿ ಸಚಿವ ಅಜ್ಮಾ ಬೊಖಾರಿ ಲಾಹೋರ್‌ನಲ್ಲಿ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮಾಲಿನ್ಯ ಕಡಿಮೆ ಮಾಡಲು ಪಾಕ್‌ ಏನು ಕ್ರಮ ಕೈಗೊಳ್ಳುತ್ತಿದೆ?

- ಕೃತಕ ಮಳೆ: ಹೊಗೆಯ ಪ್ರಭಾವವನ್ನು ತಗ್ಗಿಸಲು ಕೃತಕ ಮಳೆ ಉಂಟುಮಾಡಲು ಯೋಜಿಸಲಾಗಿದೆ

- ಆಂಟಿಸ್ಮಾಗ್ ಸ್ಕ್ವಾಡ್: ರೈತರಿಗೆ ಶಿಕ್ಷಣ ನೀಡುವುದು ಮತ್ತು ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸುವುದು

- ಪರಿಸರ ಶಿಕ್ಷಣ: ಪ್ರಾಂತ್ಯದ ಪಠ್ಯಕ್ರಮದಲ್ಲಿ ಸೇರಿಸಲಾಗಿದೆ

- ಹವಾಮಾನ ರಾಜತಾಂತ್ರಿಕತೆ: ಟ್ರಾನ್ಸ್‌ಬಾರ್ಡರ್ ಸ್ಮಾಗ್ ಸಮಸ್ಯೆಗಳನ್ನು ಪರಿಹರಿಸಲು ಭಾರತದೊಂದಿಗೆ ಸಹಯೋಗ ಮಾಡಲು ಯೋಜಿಸಲಾಗಿದೆ.

ಈ ರೀತಿ ಕ್ರಮ ಕೈಗೊಂಡರೆ ಇದರ ಪರಿಣಾಮ 8-10 ವರ್ಷಗಳಲ್ಲಿ ಗೋಚರಿಸಲಿದೆ ಎಂದು ಪಂಜಾಬ್ ಹಿರಿಯ ಸಚಿವ ಮರಿಯುಮ್ ಔರಂಗಜೇಬ್ ಹೇಳಿದ್ದಾರೆ. ಇದೇ ಸಮಯದಲ್ಲಿ ಬೆಳೆಗಳ ಅವಶೇಷ ಸುಡಬೇಡಿ ಎಂದು ರೈತರನ್ನು ಒತ್ತಾಯಿಸಿದ್ದಾರೆ. ಈ ಹೊಗೆಯು ಬೆಳಗಳು ಮತ್ತು ಮಕ್ಕಳ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ