ರಾತ್ರಿ ವೇಳೆ ಸೌತೆಕಾಯಿ ಸೇವಿಸುತ್ತೀರಾ: ಇದು ಆರೋಗ್ಯಕ್ಕೆ ಹಾನಿಕಾರಕ, ಈ ತರಕಾರಿ ತಿನ್ನುವ ಸರಿಯಾದ ಸಮಯ ಯಾವುದು- ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  ರಾತ್ರಿ ವೇಳೆ ಸೌತೆಕಾಯಿ ಸೇವಿಸುತ್ತೀರಾ: ಇದು ಆರೋಗ್ಯಕ್ಕೆ ಹಾನಿಕಾರಕ, ಈ ತರಕಾರಿ ತಿನ್ನುವ ಸರಿಯಾದ ಸಮಯ ಯಾವುದು- ಇಲ್ಲಿದೆ ಮಾಹಿತಿ

ರಾತ್ರಿ ವೇಳೆ ಸೌತೆಕಾಯಿ ಸೇವಿಸುತ್ತೀರಾ: ಇದು ಆರೋಗ್ಯಕ್ಕೆ ಹಾನಿಕಾರಕ, ಈ ತರಕಾರಿ ತಿನ್ನುವ ಸರಿಯಾದ ಸಮಯ ಯಾವುದು- ಇಲ್ಲಿದೆ ಮಾಹಿತಿ

ಸೌತೆಕಾಯಿಯು ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ತೂಕ ಇಳಿಸುವುದರಿಂದ ಹಿಡಿದು ತ್ವಚೆ ಹೊಳೆಯುವಂತೆ ಮಾಡುವವರೆಗೆ ಇದರಿಂದ ಹಲವಾರು ಪ್ರಯೋಜನಗಳಿವೆ. ಆದರೆ, ರಾತ್ರಿ ವೇಳೆ ಸೌತೆಕಾಯಿ ತಿನ್ನುವುದು ಆರೋಗ್ಯಕ್ಕೆ ಉತ್ತಮವಲ್ಲ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

ರಾತ್ರಿ ವೇಳೆ ಸೌತೆಕಾಯಿ ತಿನ್ನುವುದು ಆರೋಗ್ಯಕ್ಕೆ ಉತ್ತಮವಲ್ಲ, ಯಾಕೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ರಾತ್ರಿ ವೇಳೆ ಸೌತೆಕಾಯಿ ತಿನ್ನುವುದು ಆರೋಗ್ಯಕ್ಕೆ ಉತ್ತಮವಲ್ಲ, ಯಾಕೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. (Shutterstock)

ಸೌತೆಕಾಯಿಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಹೀಗಾಗಿ ಬಹುತೇಕ ಮಂದಿ ತಮ್ಮ ಆಹಾರದಲ್ಲಿ ಸೌತೆಕಾಯಿಯನ್ನು ಸೇರಿಸುತ್ತಾರೆ. ಸೌತೆಕಾಯಿಯನ್ನು ಸಲಾಡ್ ಮಾಡಿ ಅಥವಾ ಹಾಗೆಯೇ ಕತ್ತರಿಸಿ ಸೇವಿಸುತ್ತಾರೆ. ಅದರಲ್ಲೂ ನಾನ್ ವೆಜ್ ಇದ್ದರಂತೂ ಸೌತೆಕಾಯಿ ಬೇಕೆ ಬೇಕು. ಸೌತೆಕಾಯಿಯನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ಅಗತ್ಯ ಖನಿಜಗಳು ಮತ್ತು ಜೀವಸತ್ವಗಳು ದೊರೆಯುತ್ತವೆ. ಅಲ್ಲದೆ ದೇಹವನ್ನು ಹೈಡ್ರೀಕರಿಸುವಲ್ಲಿಯೂ ಸೌತೆಕಾಯಿ ಬಹಳ ಪ್ರಯೋಜನಕಾರಿಯಾಗಿದೆ. ಹಾಗಂತ ಸೌತೆಕಾಯಿಯನ್ನು ರಾತ್ರಿಯಲ್ಲಿ ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮವಲ್ಲ ಎಂದು ಪರಿಗಣಿಸಲಾಗಿದೆ. ಹಗಲಿನಲ್ಲಿ ಸೌತೆಕಾಯಿ ಸೇವಿಸುವುದರಿಂದ ಅನೇಕ ಪ್ರಯೋಜನಗಳು ಸಿಗುತ್ತವೆ. ಆದರೆ, ರಾತ್ರಿ ಹೊತ್ತಿನಲ್ಲಿ ಸೇವಿಸುವುದು ಅಪಾಯಕಾರಿಯಾಗಿದೆ ಎನ್ನಲಾಗಿದೆ.

ರಾತ್ರಿ ವೇಳೆ ಸೌತೆಕಾಯಿಯನ್ನು ತಿನ್ನಬಾರದು ಎಂದು ಹೇಳಲಾಗಿದೆ. ಬಹುತೇಕ ಮಂದಿ ರಾತ್ರಿ ವೇಳೂ ಸೌತೆಕಾಯಿ ಸೇವಿಸುತ್ತಾರೆ. ಮೊದಲೇ ತಿಳಿಸಿದಂತೆ ನಾನ್ ವೆಜ್ ಇದ್ದಾಗಲಂತೂ ಹಲವರಿಗೆ ಸೌತೆಕಾಯಿ ಬೇಕೇ ಬೇಕು. ಆದರೆ, ರಾತ್ರಿ ಸೌತೆಕಾಯಿ ತಿನ್ನುವುದರಿಂದ ಅನೇಕ ರೀತಿಯ ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ರಾತ್ರಿ ಸೌತೆಕಾಯಿ ತಿನ್ನುವುದರಿಂದ ಆಗುವ ಅನಾನುಕೂಲಗಳೇನು ಮತ್ತು ಸೌತೆಕಾಯಿ ತಿನ್ನಲು ಸರಿಯಾದ ಸಮಯ ಯಾವುದು ಎಂಬ ಬಗ್ಗೆ ಇಲ್ಲಿ ತಿಳಿಯಬಹುದು.

ಸೌತೆಕಾಯಿ ಅಂದ್ರೆ ನಿಮಗೆ ತುಂಬಾ ಇಷ್ಟ ಅಂತಾದರೆ ಅಥವಾ ಆರೋಗ್ಯ ಪ್ರಯೋಜನಕ್ಕಾಗಿ ತಿನ್ನುವವರಾದರೆ ಹಗಲಿನಲ್ಲೇ ಸೇವಿಸುವುದು ಒಳಿತು. ಸಲಾಡ್ ಮಾಡಿಯಾಗಲಿ ಅಥವಾ ಹಾಗೆಯೇ ಸೇವಿಸಬಹುದು. ಸೌತೆಕಾಯಿಯನ್ನು ತಿನ್ನುವುದರಿಂದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ದೇಹವು ಸಾಕಷ್ಟು ನೀರು ಮತ್ತು ಇತರ ಅಗತ್ಯ ಖನಿಜಗಳನ್ನು ಪಡೆಯುತ್ತದೆ.

ರಾತ್ರಿ ವೇಳೆ ಸೌತೆಕಾಯಿಯನ್ನು ಏಕೆ ತಿನ್ನಬಾರದು?

ರಾತ್ರಿ ವೇಳೆ ಸೌತೆಕಾಯಿ ತಿನ್ನುವುದನ್ನು ಆದಷ್ಟು ಕಡಿಮೆ ಮಾಡಬೇಕು. ಯಾಕೆಂದರೆ ಸೌತೆಕಾಯಿ ಜೀರ್ಣವಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ರಾತ್ರಿ ವೇಳೆ ಇದನ್ನು ತಿನ್ನುವುದರಿಂದ ಹೊಟ್ಟೆ ಉಬ್ಬರ ಅಥವಾ ಇತ್ಯಾದಿ ಹೊಟ್ಟೆ ಸಮಸ್ಯೆಗೆ ಕಾರಣವಾಗಬಹುದು. ರಾತ್ರಿ ವೇಳೆ ಸೌತೆಕಾಯಿ ಸೇವಿಸುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಮತ್ತು ಆಮ್ಲೀಯತೆ ಉಂಟಾಗುತ್ತದೆ. ಕೆಲವರಿಗೆ ಜೀರ್ಣಕ್ರಿಯೆಯೂ ಹದಗೆಡುತ್ತದೆ. ವಿಶೇಷವಾಗಿ ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿ ವೇಳೆ ಸೌತೆಕಾಯಿಯನ್ನು ತಿನ್ನಲೇಬಾರದು. ಇದು ಜೀರ್ಣಕ್ರಿಯೆಗೆ ಸಮಸ್ಯೆಯುಂಟಾಗಿ ನಿದ್ದೆಗೆ ಭಂಗವುಂಟಾಗಬಹುದು. ರಾತ್ರಿಯೆಲ್ಲಾ ಹೊಟ್ಟೆ ನೋವಿನ ಸಮಸ್ಯೆಯಿಂದ ಒದ್ದಾಡಬಹುದು.

ಸೌತೆಕಾಯಿ ತಿನ್ನಲು ಸರಿಯಾದ ಸಮಯ ಯಾವುದು?

ಬೆಳಗ್ಗೆ ವೇಳೆ ಸೌತೆಕಾಯಿ ಸೇವಿಸುವುದು ಉತ್ತಮ ಎಂದು ಪರಿಗಣಿಸಲಾಗಿದೆ. ಬೆಳಗ್ಗಿನ ಉಪಹಾರದ ನಂತರ ಮತ್ತು ಊಟದ ಮೊದಲು ಸಹ ಸೌತೆಕಾಯಿಯನ್ನು ತಿನ್ನಬಹುದು. ಆದರೆ, ಅತಿಯಾಗಿ ತಿನ್ನುವುದು ಒಳ್ಳೆಯದಲ್ಲ. ಸೌತೆಕಾಯಿಯನ್ನು ಊಟಕ್ಕೆ ಅರ್ಧ ಘಂಟೆಯ ಮೊದಲು ತಿನ್ನಬೇಕು. ಜೀರ್ಣಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುವುದರಿಂದ ಊಟಕ್ಕೆ ಮುಂಚಿತವಾಗಿ ಸೇವಿಸಿ, ಸ್ವಲ್ಪ ಸಮಯದ ನಂತರ ಊಟ ಮಾಡಬೇಕು.

ಸೌತೆಕಾಯಿ ಸೇವಿಸುವುದರ ಆರೋಗ್ಯ ಪ್ರಯೋಜನಗಳು

ಸೌತೆಕಾಯಿಯನ್ನು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ. ಸೌತೆಕಾಯಿಯನ್ನು ತಿನ್ನುವುದರಿಂದ ಚಯಾಪಚಯ ಕ್ರಿಯೆ ಸುಧಾರಿಸುತ್ತಾದೆ. ಇದರಿಂದ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಸೌತೆಕಾಯಿಯಲ್ಲಿ ಶೇ. 95 ರಷ್ಟು ನೀರು ಇರುವುದರಿಂದ ದೇಹವನ್ನು ತೇವಾಂಶದಿಂದ ಇಡಲು ಸಹಕಾರಿಯಾಗಿದೆ. ತೂಕ ನಷ್ಟಕ್ಕೆ ಸೌತೆಕಾಯಿ ಕೂಡ ಪರಿಣಾಮಕಾರಿ. ಸೌತೆಕಾಯಿಯಲ್ಲಿ ವಿಟಮಿನ್ ಸಿ, ಬೀಟಾ ಕ್ಯಾರೋಟಿನ್ ಮತ್ತು ಆಂಟಿ-ಆಕ್ಸಿಡೆಂಟ್‌ಗಳು ಇದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಕ್ಯಾಲ್ಸಿಯಂ ಅಂಶ ಕೂಡ ಇರುವುದರಿಂದ, ಇದು ಮೂಳೆಗಳನ್ನು ಬಲಪಡಿಸುವಲ್ಲಿ ಸಹಕಾರಿಯಾಗಿದೆ.

Whats_app_banner