logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸಿಕ್ಕಾಪಟ್ಟೆ ಚಳಿ ಅಲ್ವಾ, ಯಾರಿಗೂ ಗೊತ್ತಾಗದಂತೆ 1 ಪೆಗ್‌ ಹಾಕೋಣ ಅಂದ್ಕೊಂಡ್ರಾ, ಸಿಕ್ಕಿ ಬೀಳ್ತೀರಿ ಹುಷಾರು, ಹೇಗಂತೀರಾ ಈ ಅಧ್ಯಯನ ವರದಿ ನೋಡಿ

ಸಿಕ್ಕಾಪಟ್ಟೆ ಚಳಿ ಅಲ್ವಾ, ಯಾರಿಗೂ ಗೊತ್ತಾಗದಂತೆ 1 ಪೆಗ್‌ ಹಾಕೋಣ ಅಂದ್ಕೊಂಡ್ರಾ, ಸಿಕ್ಕಿ ಬೀಳ್ತೀರಿ ಹುಷಾರು, ಹೇಗಂತೀರಾ ಈ ಅಧ್ಯಯನ ವರದಿ ನೋಡಿ

Umesh Kumar S HT Kannada

Dec 02, 2024 10:39 AM IST

google News

ಸಿಕ್ಕಾಪಟ್ಟೆ ಚಳಿ ಅಲ್ವಾ, ಯಾರಿಗೂ ಗೊತ್ತಾಗದಂತೆ 1 ಪೆಗ್‌ ಹಾಕೋಣ ಅಂದ್ಕೊಂಡ್ರಾ, ಸಿಕ್ಕಿ ಬೀಳ್ತೀರಿ ಹುಷಾರು, ನೀವು ಎಣ್ಣೆ ಹೊಡೀತೀರಾ ಇಲ್ವಾ ಅಂತ ನಿಮ್ಮ ಬೆರಳುಗಳನ್ನು ನೋಡಿ ಹೇಳಬಹುದಂತೆ. ಕುಡಿತಕ್ಕೂ ಬೆರಳುಗಳಿಗೂ ಸಂಬಂಧ ಇದೆಯಾ ಇಲ್ಲಿದೆ ಆ ವಿವರ.. (ಸಾಂಕೇತಿಕ ಚಿತ್ರ)

  • Alcohol Consumption: ವಿಪರೀತ ಚಳಿ ಅಲ್ವ.. ಹಾಗಂತ ಯಾರಿಗೂ ಗೊತ್ತಾಗದಂತೆ ಒಂದು ಪೆಗ್ ಹಾಕೋಣ ಅಂತ ಅಂದ್ಕೊಂಡ್ರಾ, ನೀವು ನಂಬ್ತೀರೋ ಬಿಡ್ತೀರೋ, ನೀವು ಯಾರಿಗೂ ಗೊತ್ತಾಗದಂತೆ ಮದ್ಯಪಾನ ಮಾಡಿ ಸುಬಗರಂತೆ ನಟಿಸಿದ್ರೂ ಇನ್ನು ಸಿಕ್ಕಿಬೀಳೋದು ಗ್ಯಾರೆಂಟಿ. ಅಂಗರಚನಾ ಶಾಸ್ತ್ರವನ್ನು ನಡವಳಿಕೆಯೊಂದಿಗೆ ಜೋಡಿಸುವ ಆಕರ್ಷಕ ಹೊಸ ಅಧ್ಯಯನ ಈ ವಿಚಾರದಲ್ಲಿ ನೆರವಿಗೆ ಬರುತ್ತಂತೆ!

ಸಿಕ್ಕಾಪಟ್ಟೆ ಚಳಿ ಅಲ್ವಾ, ಯಾರಿಗೂ ಗೊತ್ತಾಗದಂತೆ 1 ಪೆಗ್‌ ಹಾಕೋಣ ಅಂದ್ಕೊಂಡ್ರಾ, ಸಿಕ್ಕಿ ಬೀಳ್ತೀರಿ ಹುಷಾರು, ನೀವು ಎಣ್ಣೆ ಹೊಡೀತೀರಾ ಇಲ್ವಾ ಅಂತ ನಿಮ್ಮ ಬೆರಳುಗಳನ್ನು ನೋಡಿ ಹೇಳಬಹುದಂತೆ. ಕುಡಿತಕ್ಕೂ ಬೆರಳುಗಳಿಗೂ ಸಂಬಂಧ ಇದೆಯಾ ಇಲ್ಲಿದೆ ಆ ವಿವರ.. (ಸಾಂಕೇತಿಕ ಚಿತ್ರ)
ಸಿಕ್ಕಾಪಟ್ಟೆ ಚಳಿ ಅಲ್ವಾ, ಯಾರಿಗೂ ಗೊತ್ತಾಗದಂತೆ 1 ಪೆಗ್‌ ಹಾಕೋಣ ಅಂದ್ಕೊಂಡ್ರಾ, ಸಿಕ್ಕಿ ಬೀಳ್ತೀರಿ ಹುಷಾರು, ನೀವು ಎಣ್ಣೆ ಹೊಡೀತೀರಾ ಇಲ್ವಾ ಅಂತ ನಿಮ್ಮ ಬೆರಳುಗಳನ್ನು ನೋಡಿ ಹೇಳಬಹುದಂತೆ. ಕುಡಿತಕ್ಕೂ ಬೆರಳುಗಳಿಗೂ ಸಂಬಂಧ ಇದೆಯಾ ಇಲ್ಲಿದೆ ಆ ವಿವರ.. (ಸಾಂಕೇತಿಕ ಚಿತ್ರ)

Alcohol Consumption: ಮಳೆಯೂ ಹೆಚ್ಚು, ಚಳಿಯೂ ಹೆಚ್ಚು. ಹವಾಮಾನ ವೈಪರೀತ್ಯದ ಕಾರಣ ಏನ್ ಮಾಡಬೇಕು ಅನ್ನೋದು ಗೊತ್ತಾಗದೇ ಇರುವಂತಹ ಗೊಂದಲ, ಸ್ವೆಟರ್‌ ಹಾಕೋದಾ, ರೈನ್‌ ಕೋಟ್ ಹಾಕ್ಕೊಳ್ಳೋದಾ? ಹೌದಲ್ವ.. ಸಿಕ್ಕಾಪಟ್ಟೆ ಚಳಿಯೂ ಇದೆ. ಯಾರಿಗೂ ಗೊತ್ತಾಗದಂತೆ ಒಂದು ಪೆಗ್ ಹಾಕೋಣ ಅಂತ ಕೆಲವರಾದ್ರೂ ಅಂದ್ಕೊಂಡಿರ್ತೀರಿ ಅಲ್ವ.. ಹುಷಾರು ಸಿಕ್ಕಿ ಬೀಳ್ತೀರಿ.. ಹೇಗಂತೀರಾ, ಅದೇ ವಿಷಯದ ಬಗ್ಗೆ ಸಂಶೋಧನೆ, ಅಧ್ಯಯನ ಒಂದು ನಡೆದಿದ್ದು, ಅದರ ವಿವರ ಬಹಿರಂಗವಾಗಿದೆ. ನಿಮ್ಮ ಬೆರಳುಗಳ ಉದ್ದವನ್ನು ನೋಡಿ ನೀವು ಮದ್ಯಪಾನ ಮಾಡ್ತೀರೋ ಇಲ್ವೋ ಅಂತ ತಿಳಿಯಬಹುದಂತೆ. ಇಂಥದ್ದೊಂದು ವಿದ್ಯೆ ಬಗ್ಗೆ ನಿಮಗೆ ಗೊತ್ತಾ?

ಕೈ ಬೆರಳುಗಳನ್ನು ನೋಡಿ ಮದ್ಯಪಾನ ಮಾಡ್ತಾರಾ ಇಲ್ವಾ ಅಂತ ನಿರ್ಧರಿಸಿದ ಅಧ್ಯಯನ

ಅಮೆರಿಕನ್‌ ಜರ್ನಲ್ ಆಫ್ ಹ್ಯೂಮನ್ ಬಯಾಲಜಿಯಲ್ಲಿ ಪ್ರಕಟವಾದ ಹೊಸ ಸಂಶೋಧನೆ ಪ್ರಕಾರ, ನಿಮ್ಮ ತೋರುಬೆರಳು ಮತ್ತು ಉಂಗುರದ ಬೆರಳುಗಳ ನಡುವಿನ ಉದ್ದದ ಅನುಪಾತವು ನೀವು ಎಷ್ಟು ಆಲ್ಕೋಹಾಲ್ ಸೇವಿಸುವ ಸಾಧ್ಯತೆಯಿದೆ ಎಂದು ಊಹಿಸಬಹುದು ಎಂಬುದನ್ನು ಸೂಚಿಸುತ್ತದೆ. ವಿಜ್ಞಾನಿಗಳು "2D: 4D ಅನುಪಾತ" ಎಂದು ವ್ಯಾಖ್ಯಾನಿಸಿರುವುದರ ಮೇಲೆ ಈ ಅಧ್ಯಯನವು ಗಮನ ಕೇಂದ್ರೀಕರಿಸಿತ್ತು. ನಿಮ್ಮ ತೋರುಬೆರಳು (2D) ಮತ್ತು ಉಂಗುರದ ಬೆರಳು (4D) ನಡುವಿನ ಸಂಬಂಧ. ಈ ಅನುಪಾತವು ಕೇವಲ ಅಂಗರಚನಾಶಾಸ್ತ್ರದ ಯಾದೃಚ್ಛಿಕ ಚಮತ್ಕಾರವಲ್ಲ; ಗರ್ಭಾಶಯದಲ್ಲಿ ನೀವು ಒಡ್ಡಿಕೊಳ್ಳುವ ಟೆಸ್ಟೋಸ್ಟೆರಾನ್ ಮತ್ತು ಈಸ್ಟ್ರೊಜೆನ್ ಪ್ರಮಾಣದಿಂದ ಇದು ನಿಜವಾಗಿ ರೂಪುಗೊಂಡಿದೆ ಎನ್ನುತ್ತಿದೆ ಅಧ್ಯಯನ ವರದಿ.

ಸಾಮಾನ್ಯವಾಗಿ, ಜನನದ ಮೊದಲು ಹೆಚ್ಚಿನ ಮಟ್ಟದ ಟೆಸ್ಟೋಸ್ಟೆರಾನ್‌ಗೆ ಒಡ್ಡಿಕೊಂಡ ಜನರು ಕಡಿಮೆ 2D: 4D ಅನುಪಾತದ ಬೆರಳುಗಳನ್ನು ಹೊಂದಿರುತ್ತಾರೆ. ಅಂದರೆ ಅವರ ಉಂಗುರ ಬೆರಳು ಅವರ ತೋರು ಬೆರಳಿಗಿಂತ ಉದ್ದವಿರುತ್ತದೆ. ಆದರೆ ಹೆಚ್ಚು ಈಸ್ಟ್ರೊಜೆನ್‌ಗೆ ಒಡ್ಡಿಕೊಂಡವರ ಬೆರಳುಗಳು ಹೆಚ್ಚಿನ ಅನುಪಾತವನ್ನು ಹೊಂದಿರುತ್ತದೆ.

258 ವಿದ್ಯಾರ್ಥಿಗಳ ಕೈ ಬೆರಳುಗಳ ಅಳತೆ ತೆಗೆದುಕೊಂಡು, ಅವರ ಕುಡಿತದ ಪ್ರಮಾಣ ದಾಖಲು ಮಾಡಿ ಅಧ್ಯಯನ

ಈ ಅಧ್ಯಯನ ನಡೆಸುವುದಕ್ಕಾಗಿ ವಿವಿಗಳಲ್ಲಿ ಅಧ್ಯಯನ ನಡೆಸುತ್ತಿರುವ 22 ವರ್ಷ ವಯಸ್ಸಿನ 258 ವಿದ್ಯಾರ್ಥಿಗಳನ್ನು ( 169 ಮಹಿಳೆಯರು, 89 ಪುರುಷರು) ಸಂಶೋಧಕರು ಸಮೀಕ್ಷೆಗೆ ಒಳಪಡಿಸಿದ್ದರು. ವಿಶ್ವ ಆರೋಗ್ಯ ಸಂಸ್ಥೆ ಅಭಿವೃದ್ಧಿಪಡಿಸಿದ ಪ್ರಮಾಣಿತ ಪ್ರಶ್ನಾವಳಿಗೆ ಅನುಗುಣವಾಗಿ ಕ್ಯಾಲಿಪರ್ ಬಳಸಿಕೊಂಡು ಬೆರಳಿನ ಉದ್ದವನ್ನು ನಿಖರವಾಗಿ ಗುರುತಿಸಿಕೊಂಡ ಸಂಶೋಧಕರು, ಆಲ್ಕೋಹಾಲ್ ಯೂಸ್ ಡಿಸಾರ್ಡರ್ಸ್ ಐಡೆಂಟಿಫಿಕೇಶನ್ ಟೆಸ್ಟ್ (AUDIT) ಅನ್ನು ಬಳಸಿಕೊಂಡು ಅವರ ಆಲ್ಕೋಹಾಲ್ ಸೇವನೆಯ ಮಾದರಿಗಳನ್ನು ಮೌಲ್ಯಮಾಪನ ಮಾಡಿದರು,

ಇದರಂತೆ, ಕಡಿಮೆ 2D: 4D ಅನುಪಾತಗಳನ್ನು ಹೊಂದಿರುವ ಜನರು ಹೆಚ್ಚು ಆಲ್ಕೊಹಾಲ್ ಸೇವಿಸುವ ಸಾಧ್ಯತೆ ಕಂಡುಬಂದಿದೆ. ಪ್ರಯೋಗಕ್ಕೆ ಒಳಪಟ್ಟ 258 ವಿದ್ಯಾರ್ಥಿಗಳ ಪೈಕಿ ಕಡಿಮೆ 2D: 4D ಅನುಪಾತಗಳನ್ನು ಹೊಂದಿರುವ ಪುರುಷರು ಮತ್ತು ಮಹಿಳೆಯರು ಇಬ್ಬರೂ ಹೆಚ್ಚಿನ ಆಲ್ಕೊಹಾಲ್ ಸೇವನೆಯನ್ನು ವರದಿ ಮಾಡಿದ್ದಾರೆ ಮತ್ತು AUDIT ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ ಎಂದು ಫಲಿತಾಂಶಗಳು ಬಹಿರಂಗಪಡಿಸುತ್ತವೆ,

ಕಡಿಮೆ 2D: 4D ಅನುಪಾತಗಳನ್ನು ಹೊಂದಿರುವ ಜನರಲ್ಲಿ ಕಂಡು ಬರುವ ಅಪಾಯಕಾರಿ ಕುಡಿಯುವ ನಡವಳಿಕೆ ಪುರುಷರಲ್ಲಿ ಹೆಚ್ಚಾಗಿದೆ ಎಂದು ಅಧ್ಯಯನದ ಸಹ-ಲೇಖಕ ಜಾನ್ ಮ್ಯಾನಿಂಗ್, ಸ್ವಾನ್ಸೀಯ ಅಪ್ಲೈಡ್ ಸ್ಪೋರ್ಟ್ಸ್, ಟೆಕ್ನಾಲಜಿ, ಎಕ್ಸರ್ಸೈಸ್ ಮತ್ತು ಮೆಡಿಸಿನ್ (A-STEM) ಸಂಶೋಧನಾ ತಂಡದ ಪ್ರೊಫೆಸರ್ ಹೇಳಿದ್ದಾರೆ.

ಸರಳವಾಗಿ ಹೇಳಬೇಕು ಎಂದರೆ ತೋರು ಬೆರಳು ಉದ್ದ ಹೆಚ್ಚಾಗಿದ್ದು, ಉಂಗುರ ಬೆರಳು ಉದ್ದ ಕಡಿಮೆ ಇದ್ದರೆ ಮದ್ಯಪಾನ ಹೆಚ್ಚಾಗಿರುವ ಸಾಧ್ಯತೆ ಇರುತ್ತದೆ. ಅಂದ ಹಾಗೆ, ಇದು ಮಾಹಿತಿಗಾಗಿ ನೀಡಿದ ವರದಿಯೇ ಹೊರತು, ಇದು ಹೀಗೇ ಎಂದು ಪ್ರತಿಪಾದಿಸುವ ವಿಚಾರವಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ