logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ತಿರುಪತಿ ಪ್ರಸಾದಕ್ಕೆ ಮೀನೆಣ್ಣೆ, ಹಂದಿಕೊಬ್ಬು, ಗೋಮಾಂಸದ ಕೊಬ್ಬು ಬಳಸಿದ್ರು; ಧರ್ಮರಕ್ಷಣ ಮಂಡಳಿ ಸ್ಥಾಪನೆಗೆ ಸಕಾಲ ಎಂದ ಪವನ್ ಕಲ್ಯಾಣ್

ತಿರುಪತಿ ಪ್ರಸಾದಕ್ಕೆ ಮೀನೆಣ್ಣೆ, ಹಂದಿಕೊಬ್ಬು, ಗೋಮಾಂಸದ ಕೊಬ್ಬು ಬಳಸಿದ್ರು; ಧರ್ಮರಕ್ಷಣ ಮಂಡಳಿ ಸ್ಥಾಪನೆಗೆ ಸಕಾಲ ಎಂದ ಪವನ್ ಕಲ್ಯಾಣ್

Umesh Kumar S HT Kannada

Sep 20, 2024 01:12 PM IST

google News

ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿ ಮಾಂಸ ಬಳಕೆ ವಿಚಾರಕ್ಕೆ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಪ್ರತಿಕ್ರಿಯಿಸಿದ್ದಾರೆ.

  • ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿ ಮಾಂಸ ಬಳಕೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ತಿರುಪತಿ ಪ್ರಸಾದಕ್ಕೆ ಮೀನೆಣ್ಣೆ, ಹಂದಿಕೊಬ್ಬು, ಗೋಮಾಂಸದ ಕೊಬ್ಬು ಬಳಸಿದ್ರು ಎಂದು ಬೇಸರ ವ್ಯಕ್ತಪಡಿಸಿದ್ರು. ಅಲ್ಲದೆ, ಸನಾತನ ಧರ್ಮರಕ್ಷಣ ಮಂಡಳಿ ಸ್ಥಾಪನೆಗೆ ಸಕಾಲ ಎಂದು ಪ್ರತಿಪಾದಿಸಿದ್ದು ಯಾಕೆ ಎಂಬ ವಿವರ ಇಲ್ಲಿದೆ.

ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿ ಮಾಂಸ ಬಳಕೆ ವಿಚಾರಕ್ಕೆ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಪ್ರತಿಕ್ರಿಯಿಸಿದ್ದಾರೆ.
ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿ ಮಾಂಸ ಬಳಕೆ ವಿಚಾರಕ್ಕೆ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಪ್ರತಿಕ್ರಿಯಿಸಿದ್ದಾರೆ.

ತಿರುಮಲ: ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿ ಕೊಬ್ಬು ಬಳಸಿರವುದು ಸದ್ಯ ವ್ಯಾಪಕ ಚರ್ಚೆಗೆ ಒಳಗಾಗಿದ್ದು, ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್‌ ಚಂದ್ರಬಾಬು ನಾಯ್ಡು ಈ ವಿಚಾರವಾಗಿ ಮೊದಲು ಹೇಳಿಕೆ ನೀಡಿದ್ದರು. ಅದರಿಂದಲೇ ಈ ವಿಚಾರ ಹೆಚ್ಚು ಗಮನಸೆಳೆಯಿತು. ಈಗ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಕೂಡ ಬಹಳ ಸ್ಪಷ್ಟವಾಗಿ ತಿರುಪತಿ ಪ್ರಸಾದಕ್ಕೆ ಮೀನೆಣ್ಣೆ, ಹಂದಿಕೊಬ್ಬು, ಗೋಮಾಂಸದ ಕೊಬ್ಬು ಬಳಸಿದ್ರು ಎಂದು ಹೇಳಿದ್ದು, ಸನಾತನ ಧರ್ಮ ಸಂರಕ್ಷಣ ಮಂಡಳಿ ಸ್ಥಾಪನೆಗೆ ಸಕಾರ ಎಂದು ಪ್ರತಿಪಾದಿಸಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಸನಾತನ ಧರ್ಮದ ಸಂರಕ್ಷಣೆಗೆ ಮಂಡಳಿ ರಚಿಸಬೇಕು ಎಂದು ಆಗ್ರಹಿಸಿದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್‌, ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ತಿರುಮಲ ತಿರುಪತಿ ದೇವಸ್ಥಾನದ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನ ಅವಶೇಷಗಳಿದ್ದವು ಎಂಬ ಲ್ಯಾಬ್ ವರದಿಗಳು ಬೆಳಕಿಗೆ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್, ಪ್ರಸಾದ ತಯಾರಿಕೆಗೆ ಬಳಸುವ ತುಪ್ಪದ ಜೊತೆಗೆ ಮೀನಿನ ಎಣ್ಣೆ, ಹಂದಿ ಕೊಬ್ಬು ಮತ್ತು ಗೋಮಾಂಸದ ಕೊಬ್ಬನ್ನು ಬೆರೆಸಿರುವುದು ತಿಳಿದು ತೀವ್ರ ಬೇಸರವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಭಾರತದ ದೇವಾಲಯಗಳ ಸಮಸ್ಯೆ ಪರಿಹರಿಸಲು ಸನಾತನ ಧರ್ಮರಕ್ಷಣ ಮಂಡಳಿ ಅಗತ್ಯ

ವೈಸಿಪಿ ಸರ್ಕಾರ ರಚಿಸಿರುವ ಟಿಟಿಡಿ ಮಂಡಳಿಯು ಹಲವು ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗಿದೆ. ಈಗ ಆಗಿರುವ ಲೋಪಗಳ ವಿಚಾರದಲ್ಲಿ ಸಾಧ್ಯವಾದಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪವನ್ ಕಲ್ಯಾಣ್‌ ಘೋಷಿಸಿದರು.

ಮತ್ತೊಂದೆಡೆ, ಇದು ದೇವಾಲಯಗಳನ್ನು ಅಪವಿತ್ರಗೊಳಿಸುವುದು, ದೇವಾಲಯಗಳ ಭೂಮಿ ಸಮಸ್ಯೆ ಮತ್ತು ಇತರ ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳ ಕಡೆಗೆ ಬೆಳಕು ಚೆಲ್ಲಿದೆ. ಭಾರತದಾದ್ಯಂತ ಇರುವ ದೇವಾಲಯಗಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಲು ರಾಷ್ಟ್ರಮಟ್ಟದಲ್ಲಿ 'ಸನಾತನ ಧರ್ಮ ಸಂರಕ್ಷಣಾ ಮಂಡಳಿ' ಸ್ಥಾಪಿಸುವ ಸಮಯ ಬಂದಿದೆ ಎಂದು ಪವನ್ ಕಲ್ಯಾಣ್‌ ತಮ್ಮ ಟ್ವೀಟ್‌ನಲ್ಲಿ ಪ್ರತಿಪಾದಿಸಿದ್ದಾರೆ.

ರಾಷ್ಟ್ರಮಟ್ಟದಲ್ಲಿ ನೀತಿ ನಿರೂಪಕರು, ಧಾರ್ಮಿಕ ಮುಖಂಡರು, ನ್ಯಾಯಾಂಗ, ನಾಗರಿಕರು ಮತ್ತು ಮಾಧ್ಯಮಗಳು ಈ ವಿಷಯದ ಬಗ್ಗೆ ಚರ್ಚೆ ನಡೆಸಬೇಕು. ಸನಾತನ ಧರ್ಮವನ್ನು ಯಾವುದೇ ರೂಪದಲ್ಲಿ ಅಪವಿತ್ರಗೊಳಿಸುವುದಕ್ಕೆ ಅವಕಾಶ ನೀಡದಂತೆ ನಾವೆಲ್ಲರೂ ಒಂದಾಗಬೇಕು ಎಂದು ನಾನು ಭಾವಿಸುತ್ತೇನೆ ಎಂದು ಪವನ್ ಕಲ್ಯಾಣ್‌ ಹೇಳಿಕೊಂಡಿದ್ದಾರೆ.

ತನಿಖಾಧಿಕಾರಿ ನಿಷ್ಠಾವಂತ ಮುಸ್ಲಿಂ, ತಪ್ಪಿದ್ದರೆ ವೆಂಕಟೇಶ್ವರ ಸ್ವಾಮಿ ಶಿಕ್ಷೆ ನೀಡಲಿ: ಭೂಮನ ರೆಡ್ಡಿ

ತಿರುಮಲ ಲಡ್ಡು ಪ್ರಸಾದದ ಮೇಲಿನ ಆರೋಪಕ್ಕೆ ಟಿಟಿಡಿ ಮಾಜಿ ಅಧ್ಯಕ್ಷ ಭೂಮನ ಕರುಣಾಕರ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಆರೋಪ ಮಾಡುವವರು ಹೇಳಿದ್ದು ಸುಳ್ಳಾದರೆ ಅವರು ವೆಂಕಟೇಶ್ವರ ಸ್ವಾಮಿಯ ಕೋಪಕ್ಕೆ ಗುರಿಯಾಗುವುದು ಖಚಿತ. ಸ್ವಾಮಿ ಭಕ್ತಿ ಇಲ್ಲದವರೇ ಇಂತಹ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ.

ಕರಿಮುಲ್ಲಾ ಷರೀಫ್ ಎಂಬ ವಿಚಾರಣಾ ಅಧಿಕಾರಿ ನೀಡಿದ ವರದಿಯ ಆಧಾರದ ಮೇಲೆ ಈ ಆರೋಪಗಳನ್ನು ಮಾಡಲಾಗುತ್ತಿದೆ. ಇಲ್ಲದಿದ್ದರೆ ಚಂದ್ರಬಾಬು ಇಂತಹ ಆರೋಪ ಮಾಡುತ್ತಿರಲಿಲ್ಲ ವೆಂಕಟೇಶ್ವರ ಸ್ವಾಮಿ ಪ್ರಸಾದದ ವಿರುದ್ಧ ನಿಷ್ಠಾವಂತ ಮುಸ್ಲಿಂ ಅಧಿಕಾರಿಯನ್ನು ತನಿಖಾ ಅಧಿಕಾರಿಯಾಗಿ ನೇಮಿಸಿ ಅವರ ಪರವಾಗಿ ವರದಿ ತರಲಾಗಿದೆ. ಸ್ವಾಮಿ ಭಕ್ತರು ಹೀಗೆ ಮಾಡಬೇಡಿ, ಈ ವರದಿ ಅರ್ಥಹೀನ ಎಂದು ಭೂಮನ ಆರೋಪಿಸಿದ್ದಾರೆ.

ಯಾವುದೇ ಪ್ರಮಾಣಕ್ಕೂ ಸಿದ್ಧ ಎಂದ ನಾರಾ ಲೋಕೇಶ್‌: ತಿರುಪತಿ ಲಡ್ಡು ಪ್ರಸಾದದ ವಿಚಾರದಲ್ಲಿ ವೈ.ವಿ.ಸುಬ್ಬಾರೆಡ್ಡಿ ಎಸೆದ ಸವಾಲು ಸ್ವೀಕರಿಸಲು ಸಿದ್ಧ ಎಂದು ಸಚಿವ ನಾರಾ ಲೋಕೇಶ್ ಹೇಳಿದ್ದಾರೆ. ವೈಎಸ್‌ಆರ್‌ಸಿಪಿಯವರ ಆಡಳಿತದಲ್ಲಿ ಶ್ರೀಸಾಮಾನ್ಯರು ದೇವರ ಮೊರೆ ಹೋಗದಂತೆ ತಡೆದಿದ್ದರು. ಎಲ್ಲ ಬೆಲೆಗಳನ್ನು ಗಗನಮುಖಿಯಾಗಿಸಿ ಈಗ ಪ್ರಮಾಣ ಮಾಡೋದಕ್ಕೆ ಸಿದ್ದರಾಗಿದ್ದಾರೆ. ವರದಿಗಳು ಬಂದರೂ ಇನ್ನೂ ಏಕೆ ಭಯಪಡಬೇಕು ಎಂದು ಲೋಕೇಶ್ ಕೇಳಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ