ಕನ್ನಡ ಸುದ್ದಿ  /  ಮನರಂಜನೆ  /  ತಿರುಮಲದಲ್ಲಿ ನಟಿ ಶ್ರೀಲೀಲಾರ ಕೆನ್ನೆ ಮುಟ್ಟಿದ ಸಂಗೀತ ನಿರ್ದೇಶಕ ಥಮನ್‌, ತಿಮ್ಮಪ್ಪನ ಸನ್ನಿಧಿಯಲ್ಲಿ ಏನಿದು ತುಂಟಾಟ, ನೆಟ್ಟಿಗರಿಂದ ಟ್ರೋಲ್‌

ತಿರುಮಲದಲ್ಲಿ ನಟಿ ಶ್ರೀಲೀಲಾರ ಕೆನ್ನೆ ಮುಟ್ಟಿದ ಸಂಗೀತ ನಿರ್ದೇಶಕ ಥಮನ್‌, ತಿಮ್ಮಪ್ಪನ ಸನ್ನಿಧಿಯಲ್ಲಿ ಏನಿದು ತುಂಟಾಟ, ನೆಟ್ಟಿಗರಿಂದ ಟ್ರೋಲ್‌

Sreeleela Thaman Visits Tirumala Viral Video: ಕರ್ನಾಟಕ ಮೂಲದ ಶ್ರೀಲೀಲಾ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಎಸ್‌ಎಸ್‌ ಥಮನ್‌ ಅಕ್ಕರೆಯಿಂದ ಶ್ರೀಲೀಲಾರ ಕೆನ್ನೆ ಚಿವುಟಿದ್ದಾರೆ. ಆದರೆ, ಈ ವಿಡಿಯೋ ಬೇರೆಯದ್ದೇ ರೀತಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ತಿರುಮಲದಲ್ಲಿ ನಟಿ ಶ್ರೀಲೀಲಾರ ಕೆನ್ನೆ ಮುಟ್ಟಿದ ಸಂಗೀತ ನಿರ್ದೇಶಕ ಥಮನ್‌
ತಿರುಮಲದಲ್ಲಿ ನಟಿ ಶ್ರೀಲೀಲಾರ ಕೆನ್ನೆ ಮುಟ್ಟಿದ ಸಂಗೀತ ನಿರ್ದೇಶಕ ಥಮನ್‌

Sreeleela Thaman In Tirumala Temple: ಕರ್ನಾಟಕ ಮೂಲದ ನಟಿ ಶ್ರೀಲೀಲಾ ಟಾಲಿವುಡ್‌ನಲ್ಲಿ ಜನಪ್ರಿಯ ನಟಿ. ತೆಲುಗು ಸಿನಿಮಾ ಪ್ರೇಕ್ಷಕರಿಗೆ ಬ್ಯೂಟಿಫುಲ್ ಹಾಗೂ ಡ್ಯಾನ್ಸಿಂಗ್ ಕ್ವೀನ್ ಶ್ರೀಲೀಲಾ ಎಂದರೆ ಅಚ್ಚುಮೆಚ್ಚು. ಶ್ರೀಲೀಲಾರಿಗೆ ಅವಕಾಶ ಕಡಿಮೆಯಾಗುತ್ತಿದೆ ಎಂದು ಹೇಳುವಾಗಲೇ ಹಲವು ಸಿನಿಮಾಗಳಲ್ಲಿ ಅವಕಾಶ ಪಡೆಯುತ್ತಿದ್ದಾರೆ. ಗುಂಟೂರು ಕಾರಂ, ಭಗವಂತ್‌ ಕೇಸರಿ, ಸ್ಕಂದ, ಧಮಕ, ಆದಿಕ್ಷೇತ್ರ, ಎಕ್ಸ್ಟ್ರಾ ಆರ್ಡಿನರಿ ಮ್ಯಾನ್‌, ಕಿಸ್‌, ಪೆಲ್ಲಿ ಸಂದ, ಉತ್ಸಾದ್‌ ಭಗಂತ್‌ ಸಿಂಗ್‌, ಬೈ ಟು ಲವ್‌, ಭರಾಟೆ ಮುಂತಾದ ಸಿನಿಮಾಗಳ ಮೂಲಕ ಶ್ರೀಲೀಲಾ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಶ್ರೀಲೀಲಾ ಇತ್ತೀಚೆಗೆ ತಿರುಪತಿ ತಿರುಮಲ ದೇಗುಲಕ್ಕೆ ಭೇಟಿ ನೀಡಿದ್ದು, ಆ ಸಂದರ್ಭದ ಒಂದು ಸಾಮಾನ್ಯ ಘಟನೆ ದೊಡ್ಡದಾಗಿ ವೈರಲ್‌ ಆಗುತ್ತಿದೆ.

ಶ್ರೀಲೀಲಾ ಕಾಲಿವುಡ್ ಎಂಟ್ರಿ

ಶ್ರೀಲೀಲಾ ಸತತ ಆರು ಚಿತ್ರಗಳ ಮೂಲಕ ತೆಲುಗು ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದಾರೆ. ಈ ನಡುವೆ ಶ್ರೀಲೀಲಾ ಕೈಯಲ್ಲಿ ಎರಡ್ಮೂರು ಚಿತ್ರಗಳಿವೆಯಂತೆ. ಇದಲ್ಲದೇ ಕಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ ಎಂಬ ಪ್ರಚಾರ ಜೋರಾಗಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಶ್ರೀಲೀಲಾಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ತಿರುಮಲ ದೇಗುಲದಲ್ಲಿ ಏನಾಯ್ತು?

ನಾಯಕಿ ಶ್ರೀಲೀಲಾ ಅವರ ಸಂಗೀತ ನಿರ್ದೇಶಕ ಎಸ್ ಎಸ್ ಥಮನ್ ಅವರೇ ಈ ವಿಡಿಯೋ ವೈರಲ್ ಆಗಲು ಕಾರಣ. ಇತ್ತೀಚೆಗೆ ಶ್ರೀಲೀಲಾ ಅವರು ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಕುಟುಂಬ ಸದಸ್ಯರೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು. ದೇಗುಲದಿಂದ ಹೊರಡುವಾಗ ಇವರಿಗೆ ಸ್ಟಾರ್‌ ನಿರ್ದೇಶಕ ಎಸ್‌ಎಸ್‌ ಥಮನ್‌ ಮಾತಿಗೆ ಸಿಕ್ಕರು.

ಟ್ರೆಂಡಿಂಗ್​ ಸುದ್ದಿ

ನೆಟ್ಟಿಗರಿಂದ ಟ್ರೋಲ್‌

ಈ ಸಂದರ್ಭದಲ್ಲಿ ಇಬ್ಬರೂ ಆತ್ಮೀಯವಾಗಿ ಶುಭಾಶಯ ಕೋರಿದರು. ಶ್ರೀಲೀಲಾ ಅವರ ಕೆನ್ನೆಯನ್ನು ಆತ್ಮೀಯವಾಗಿ ಥಮನ್‌ ಸ್ಪರ್ಶಿಸಿದರು.  ಬಳಿಕ ಶ್ರೀಲೀಲಾರ ಕೈ ಕುಲುಕಿದರು ಸಂಗೀತ ನಿರ್ದೇಶಕ ಥಮನ್‌. ಈ ದೃಶ್ಯ ಮಾಧ್ಯಮದ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಪ್ರತಿಕ್ರಿಯಿಸಿದ ನೆಟ್ಟಿಗರು ಟ್ರೋಲ್ ಮಾಡಲು ಆರಂಭಿಸಿದ್ದಾರೆ.

ದೇವಸ್ಥಾನದಲ್ಲಿ ಇದೆಂಥ ತುಂಟಾಟ ಎಂದು ನೆಟ್ಟಿಗರು ಥಮನ್‌ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಇನ್ನು ಕೆಲವರು ಥಮನ್‌ ಪರವಾಗಿ ಮಾತನಾಡುತ್ತಿದ್ದಾರೆ. ಪುಟ್ಟ ಮಕ್ಕಳನ್ನು ಪ್ರೀತಿಯಿಂದ ಹೇಗೆ ಕೆನ್ನೆ ತಟ್ಟುತ್ತೇವೆ ಅದೇ ರೀತಿ ಮುಟ್ಟಿದ್ದಾರೆ ಎಂದು ಕೆಲವರು ಥಮನ್‌ ಬೆಂಬಲಕ್ಕೆ ನಿಂತಿದ್ದಾರೆ. ಆದರೆ, ಇಂಟರ್‌ನೆಟ್‌ನಲ್ಲಿ ಕೆಟ್ಟ ಕಾಮೆಂಟ್‌ಗೆ ಬರವಿರುವುದಿಲ್ಲ. ಈ ಸಂದರ್ಭವನ್ನು ತಮಗೆ ತೋಚಿದಂತೆ ವೈರಲ್‌ ಮಾಡುತತಿದ್ದಾರೆ. ಶ್ರೀಲೀಲಾ ನಾಯಕಿಯಾಗಿದ್ದ ಹಲವು ಚಿತ್ರಗಳಿಗೆ ತಮನ್ ಸಂಗೀತ ನೀಡಿದ್ದಾರೆ.

ಮತ್ತೊಮ್ಮೆ ರವಿತೇಜ ಜೊತೆ ನಟನೆ

ಶ್ರೀಲೀಲಾ ಅಭಿನಯದ ಸ್ಕಂದ, ಭಗವಂತ ಕೇಸರಿ ಮತ್ತು ಗುಂಟೂರ್ ಕರಂ ಎಂಬ ಮೂರು ಚಿತ್ರಗಳಿಗೆ ತಮನ್ ಸಂಗೀತ ಸಂಯೋಜಿಸಿದ್ದಾರೆ. ಶ್ರೀಲೀಲಾ ಸದ್ಯ ತೆಲುಗಿನಲ್ಲಿ ನಿತಿನ್ ಜೊತೆ ರಾಬಿನ್ ಹುಡ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶ್ರೀಲೀಲಾ ಅವರು ರವಿತೇಜ ಜೊತೆ ಮತ್ತೊಮ್ಮೆ ನಟಿಸಲಿದ್ದಾರೆ.

ರವಿತೇಜ ಅಭಿನಯದ ಶ್ರೀಲೀಲಾ ಕಾಂಬೋ ಸಿನಿಮಾ "ಧಮಾಕಾ" ಸಖತ್‌ ಹಿಟ್‌ ಆಗಿತ್ತು. ರಾಬಿನ್ ಹುಡ್ ಚಿತ್ರಕ್ಕೆ ಮೊದಲು ನ್ಯಾಷನಲ್‌ ಕ್ರಶ್ ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಲಾಗಿತ್ತು. ಹಲವು ಅನಿರೀಕ್ಷಿತ ಕಾರಣಗಳಿಂದ ರಶ್ಮಿಕಾ ಈ ಚಿತ್ರದಿಂದ ಹೊರಕ್ಕೆ ಬಂದಿದ್ದರು. ಬಳಿಕ ಈ ಅವಕಾಶವನ್ನು ಶ್ರೀಲೀಲಾ ಪಡೆದುಕೊಂಡಿದ್ದರು.

ಬ್ರಾಂಡ್ ಅಂಬಾಸಿಡರ್ ಆಗಿ

ಸಿನಿಮಾಗಳಲ್ಲದೆ ಹಲವು ಬ್ರಾಂಡ್‌ಗಳಿಗೆ ಶ್ರೀಲೀಲಾ ಬ್ರಾಂಡ್ ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಲೀಲಾ ಇತ್ತೀಚೆಗೆ ನ್ಯೂಡ್ ಸ್ಕಿನ್ ಕೇರ್ ಹೈ ಗ್ಲೇಜರಿನ್ ಬ್ರಾಂಡ್‌ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ.