logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Electric Scooter: ಭಾರತದಲ್ಲಿ ಅತ್ಯಧಿಕ ಮೈಲೇಜ್‌ ನೀಡುವ ಎಲೆಕ್ಟ್ರಿಕ್‌ ಸ್ಕೂಟರ್‌; ಒಂದು ಫುಲ್‌ ಚಾರ್ಜ್‌ಗೆ 300 ಕಿಮಿ ರೇಂಜ್‌

Electric scooter: ಭಾರತದಲ್ಲಿ ಅತ್ಯಧಿಕ ಮೈಲೇಜ್‌ ನೀಡುವ ಎಲೆಕ್ಟ್ರಿಕ್‌ ಸ್ಕೂಟರ್‌; ಒಂದು ಫುಲ್‌ ಚಾರ್ಜ್‌ಗೆ 300 ಕಿಮಿ ರೇಂಜ್‌

Praveen Chandra B HT Kannada

Dec 12, 2024 11:48 AM IST

google News

Electric scooter: ಭಾರತದಲ್ಲಿ ಅತ್ಯಧಿಕ ಮೈಲೇಜ್‌ ನೀಡುವ ಎಲೆಕ್ಟ್ರಿಕ್‌ ಸ್ಕೂಟರ್‌

    • Electric scooter: ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸುವ ಸಮಯದಲ್ಲಿ ಬಳಕೆದಾರರು ಎಷ್ಟು ರೇಂಜ್‌(ಮೈಲೇಜ್‌) ನೀಡುತ್ತದೆ ಎಂದು ಗಮನಿಸುತ್ತಾರೆ. ನೀವು ಕೂಡ ಅತ್ಯುತ್ತಮ ರೇಂಜ್‌ನ ಸ್ಕೂಟರ್‌ ಹುಡುಕುವಿರಾ? ಭಾರತದಲ್ಲಿ ಮಾರಾಟವಾಗುತ್ತಿರುವ ಕೊಮಾಕಿ ವೆನಿಸ್‌ ಅಲ್ಟ್ರಾ ಸ್ಪೋರ್ಟ್‌ (komaki venice Ultra Sport) ನಿಮಗೆ ಸೂಕ್ತವಾಗಬಹುದು.
Electric scooter: ಭಾರತದಲ್ಲಿ ಅತ್ಯಧಿಕ ಮೈಲೇಜ್‌ ನೀಡುವ ಎಲೆಕ್ಟ್ರಿಕ್‌ ಸ್ಕೂಟರ್‌
Electric scooter: ಭಾರತದಲ್ಲಿ ಅತ್ಯಧಿಕ ಮೈಲೇಜ್‌ ನೀಡುವ ಎಲೆಕ್ಟ್ರಿಕ್‌ ಸ್ಕೂಟರ್‌

Komaki venice Ultra Sport: ಭಾರತದಲ್ಲಿ ಈಗ ಅನೇಕ ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಆದ್ಯತೆ ನೀಡುತ್ತಿದ್ದಾರೆ. ವಿಶೇಷವಾಗಿ ಎಲೆಕ್ಟ್ರಿಕ್‌ ಸ್ಕೂಟರ್‌ಗಳಿಗೆ ಬೇಡಿಕೆ ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ. ಗ್ರಾಹಕರನ್ನು ಆಕರ್ಷಿಸಲು ವಿವಿಧ ಆಟೋಮೊಬೈಲ್ ಕಂಪನಿಗಳು ಶ್ರಮಿಸುತ್ತಿವೆ. ಆದಾಗ್ಯೂ, ಚಾರ್ಜಿಂಗ್ ಸಮಸ್ಯೆಗಳ ದೃಷ್ಟಿಯಿಂದ ಅನೇಕ ಗ್ರಾಹಕರು ಹೆಚ್ಚು ರೇಂಜ್‌(ಮೈಲೇಜ್‌) ನೀಡುವ ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ಖರೀದಿಸಲು ಒಲವು ತೋರುತ್ತಿದ್ದಾರೆ. ನೀವು ಕೂಡ ಇದೇ ರೀತಿಯ ಹೆಚ್ಚು ರೇಂಜ್‌ ನೀಡುವ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸಲು ಬಯಸಿದ್ದೀರಾ? ಹಾಗಾದರೆ, ನಿಮಗೆ ಕೊಮಕಿ ವೆನಿಸ್‌ ಅಲ್ಟ್ರಾ ಸ್ಪೋರ್ಟ್‌ ಸೂಕ್ತವಾಗಬಹುದು. ನೀವು ಈ ಸ್ಕೂಟರ್‌ನಲ್ಲಿ ಬೆಂಗಳೂರಿನಿಂದ ಹೊರಟರೆ ಮೈಸೂರು, ಮಡಿಕೇರಿ ಅಥವಾ ಮುಳ್ಳಯ್ಯನಗಿರಿ, ಅಥವಾ ಬೆಂಗಳೂರಿನಿಂದ ವಯನಾಡು, ಬೆಂಗಳೂರಿನಿಂದ ಭದ್ರಾ ವನ್ಯಜೀವಿಧಾಮ, ಬೆಂಗಳೂರಿನಿಂದ ನಾಗರಹೊಳೆ, ಬೆಂಗಳೂರಿನಿಂದ ಊಟಿ, ಬೆಂಗಳೂರಿನಿಂದ ತಿರುಪತಿ, ಬೆಂಗಳೂರಿನಿಂದ ಬೇಳೂರು ಸೇರಿದಂತೆ 300 ಕಿ.ಮೀ. ದೂರವಿರುವ ಯಾವುದೇ ಸ್ಥಳಕ್ಕೂ ಯಾವುದೇ ಸ್ಥಳದಿಂದ ಹೋಗಬಹುದು. ಮುನ್ನೂರು ಕಿಮೀ ದೂರಕ್ಕೆ ಹೋಗುವುದಾದರೆ ವಾಪಸ್‌ ಬರುವಾಗ ಮತ್ತೆ ಸ್ಕೂಟರ್‌ ಚಾರ್ಜ್‌ ಮಾಡಬೇಕು. ಹೌದು, ನಾವು ಹೇಳುತ್ತಿರುವುದು ಸುಳ್ಳಲ್ಲ. ಈ ಕೊಮಾಕಿ ವೆನಿಸ್‌ ಆಲ್ಟ್ರಾ ಸ್ಕೂಟರ್‌ 300 ಕಿ.ಮೀ. ರೇಂಜ್‌ ಹೊಂದಿದೆ. ಒಮ್ಮೆ ಫುಲ್‌ ಚಾರ್ಜ್‌ ಮಾಡಿದರೆ ಅಷ್ಟು ದೂರಕ್ಕೆ ಆರಾಮವಾಗಿ ಪ್ರಯಾಣಿಸಬಹುದು.

ಕೊಮಾಕಿ ವೆನಿಸ್‌ ಸ್ಕೂಟರ್‌ ಬಗ್ಗೆ

ಈ ಕೊಮಾಕಿ ವೆನಿಸ್ ಎಲೆಕ್ಟ್ರಿಕ್ ಸ್ಕೂಟರ್‌ ಮೂರು ವರ್ಷನ್‌ಗಳಲ್ಲಿ ಲಭ್ಯವಿದೆ. ವೆನಿಸ್ ಸ್ಪೋರ್ಟ್ ಕ್ಲಾಸಿಕ್, ವೆನಿಸ್ ಸ್ಪೋರ್ಟ್, ವೆನಿಸ್ ಅಲ್ಟ್ರಾ ಸ್ಪೋರ್ಟ್ ಆಯ್ಕೆಗಳಲ್ಲಿ ದೊರಕುತ್ತದೆ. ಕಂಪನಿಯು ಇವುಗಳನ್ನು ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್‌ ಎಂದು ಪ್ರಚಾರ ಮಾಡುತ್ತಿದೆ. ಟಾಪ್ ಎಂಡ್ ಇವಿ ವೆನಿಸ್ ಅಲ್ಟ್ರಾ ಸ್ಪೋರ್ಟ್ ಬಗ್ಗೆ ತಿಳಿಯೋಣ. ಇದು ರಿಮೂವ್‌ ಮಾಡಬಹುದಾದ ಬ್ಯಾಟರಿ ಪ್ಯಾಕ್‌ ಹೊಂದಿದೆ. 0-100 ರಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡಲು 4 ಗಂಟೆ 55 ನಿಮಿಷ ಬೇಕು. ಪೋರ್ಟಬಲ್ ಚಾರ್ಜ್‌ನೊಂದಿಗೆ 4 ಗಂಟೆಗಳಲ್ಲಿ 0-90 ಪ್ರತಿಶತದಷ್ಟು ಚಾರ್ಜಿಂಗ್ ಪೂರ್ಣಗೊಳ್ಳುತ್ತದೆ ಎಂದು ಕಂಪನಿ ತಿಳಿಸಿದೆ.

ವೆನಿಸ್ ಅಲ್ಟ್ರಾ ಸ್ಪೋರ್ಟ್ ಅಲ್ಟ್ರಾ ಬ್ರೈಟ್ ಫುಲ್ ಎಲ್ಇಡಿ ಲೈಟಿಂಗ್ ಸೆಟಪ್, 3000 ವ್ಯಾಟ್ ಹಬ್ ಮೋಟರ್, 50 ಆಂಪಿಯರ್ ಕಂಟ್ರೋಲರ್, ಡ್ಯುಯಲ್ ಸೀಟ್, ಡ್ಯುಯಲ್ ಸೈಡ್ ಫುಟ್‌ರೆಸ್ಟ್, ಸೇಫ್ ಫಾರ್ ರೈಡ್ - ಸೂಪರ್ ಸ್ಟ್ರಾಂಗ್ ಸ್ಟೀಲ್ ಫ್ರೇಮ್, ಸಿಬಿಎಸ್ ಡಬಲ್ ಡಿಸ್ಕ್, ಕೀಲೆಸ್. ಪ್ರವೇಶ-ನಿಯಂತ್ರಣ, TFT ಪರದೆ, ಆನ್‌ಬೋರ್ಡ್ ನ್ಯಾವಿಗೇಷನ್, ಸೌಂಡ್ ಸಿಸ್ಟಮ್, ಕರೆ ಮಾಡುವ ಫೀಚರ್‌ ಸೇರಿದಂತೆ ಸಾಕಷ್ಟು ವಿಶೇಷಗಳನ್ನ ಹೊಂದಿದೆ.

ಈ ಎಲೆಕ್ಟ್ರಿಕ್ ಸ್ಕೂಟರ್ 3 ಗಿಯರ್‌ ಮೋಡ್‌ಗಳನ್ನು ಹೊಂದಿದೆ. ಅವುಗಳೆಂದರೆ ಇಕೋ, ಸ್ಪೋರ್ಟ್ ಮತ್ತು ಟರ್ಬೊ. ಈ ವೆನಿಸ್ ಅಲ್ಟ್ರಾ ಸ್ಪೋರ್ಟ್ ನ ವ್ಯಾಪ್ತಿಯು 300 ಕಿ.ಮೀ. ಇದ. ಗರಿಷ್ಠ ವೇಗ ಗಂಟೆಗೆ 80 ಕಿ.ಮೀ. ಸಾಗಬಹುದು. ಕಂಪನಿಯು ಬ್ಯಾಟರಿಯ ಮೇಲೆ 3 ವರ್ಷ ಅಥವಾ 30,000 ಸಾವಿರ ಕಿಮೀ ವಾರಂಟಿಯನ್ನು ಸಹ ನೀಡುತ್ತಿದೆ.

"ನಾವು ಉತ್ತಮ ಭವಿಷ್ಯದತ್ತ ಗಮನಹರಿಸುತ್ತೇವೆ. ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಕುರಿತು ಮಿತಿಗಳನ್ನು ತೊಡೆದು ಹಾಕಲು ಬಯಸಿದ್ದೇವೆ. ನಮ್ಮ ವೆನಿಸ್ ಶ್ರೇಣಿಯ ಸ್ಕೂಟರ್‌ಗಳು ಪರಿಸರ ಸ್ನೇಹಿ ತಂತ್ರಜ್ಞಾನದಲ್ಲಿ ಕ್ರಾಂತಿಕಾರಿ ಎಂದು ನಾವು ನಂಬುತ್ತೇವೆ. ಈ ಸ್ಕೂಟರ್‌ಗಳು ಸಾಂಪ್ರದಾಯಿಕ ನೋಟ, ಉತ್ತಮ ಚಾಲನೆ, ಶಕ್ತಿ, ಉತ್ತಮ ಕಾರ್ಯಕ್ಷಮತೆ, "ಎಂದು ಕೊಮಾಕಿ ಕಂಪನಿ ತಿಳಿಸಿದೆ. ಈ ಕಂಪನಿಯು ದೇಶಾದ್ಯಂತ 1000 ಕ್ಕೂ ಹೆಚ್ಚು ಡೀಲರ್‌ಶಿಪ್ ಶೋರೂಮ್‌ಗಳು ಮತ್ತು ಸೇವಾ ಪಾಲುದಾರರನ್ನು ಹೊಂದಿದೆ.

ಈ ಕೊಮಾಕಿ ವೆನಿಸ್ ಅಲ್ಟ್ರಾ ಸ್ಪೋರ್ಟ್ ಸ್ಕೂಟರ್‌ನ ಎಕ್ಸ್ ಶೋ ರೂಂ ಬೆಲೆ 1,67,500 ರೂಪಾಯಿ ಇದೆ. ಇದಲ್ಲದೆ, ಕಂಪನಿಯು ಗ್ರಾಹಕರಿಗೆ ಸ್ಯಾಕ್ರಮೆಂಟಲ್ ಗ್ರೀನ್ ಜೊತೆಗೆ ಅನೇಕ ಬಣ್ಣದ ಆಯ್ಕೆಗಳನ್ನು ಸಹ ನೀಡುತ್ತಿದೆ.

ಇದು ಯಾವ ದೇಶದ ಕಂಪನಿ?

ಸಾಕಷ್ಟು ಜನರು ಕೊಮಕಿ ಕಂಪನಿಯ ಹೆಸರು ಕೇಳದೆ ಇರಬಹುದು. ಇದು ಜಪಾನ್‌ ಮೂಲಕದ ಎಲೆಕ್ಟ್ರಿಕ್‌ ವೆಹಿಕಲ್‌ ಕಂಪನಿಯಾಗಿದೆ. ಭಾರತದಲ್ಲಿ ಕೆಎಲ್‌ಬಿ ಕೊಮಕಿ ಪ್ರೈವೇಟ್‌ ಲಿಮಿಟೆಡ್‌ ಕೊಮಕಿ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಈ ಕಂಪನಿಯು ದೆಹಲಿ ಎನ್‌ಸಿಆರ್‌ನಲ್ಲಿ ಇವಿ ನಿರ್ಮಾಣ ಘಟಕ ಹೊಂದಿದೆ. ಕರ್ನಾಟಕದಲ್ಲಿಯೂ ಕೊಮಕಿ ಸ್ಕೂಟರ್‌ಗಳು ಮಾರಾಟವಾಗುತ್ತವೆ. Komaki ಸ್ಕೂಟರ್‌ ನಿಯರ್‌ಮೀ ಎಂದು ಹುಡುಕಿ ನಿಮ್ಮ ಊರಿನ ಸಮೀಪದಲ್ಲಿ ಈ ಇಸ್ಕೂಟರ್‌ ಇರುವುದೇ ಹುಡುಕಿ ನೋಡಬಹುದು. ಯಾವುದೇ ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ಖರೀದಿಸುವ ಮೊದಲು ಟೆಸ್ಟ್‌ ರೈಡ್‌ ಮಾಡಿ ನೋಡಿ. ಈಗಾಗಲೇ ಯಾರಾದರ ಸ್ಕೂಟರ್‌ ಖರೀದಿಸಿದ್ದರೆ ಅವರ ಅಭಿಪ್ರಾಯಗಳನ್ನು ಪಡೆಯಿರಿ. ಆನ್‌ಲೈನ್‌ನಲ್ಲಿ ವಿಮರ್ಶೆಗಳನ್ನು ಓದಲು ಮರೆಯಬೇಡಿ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ