Tata Curvv Coupe: ಟಾಟಾ ಕರ್ವ್ ಕೂಪ್ ಎಸ್‌ಯುವಿ ಅನಾವರಣ; ಪೆಟ್ರೋಲ್, ಡೀಸೆಲ್, ಎಲೆಕ್ಟ್ರಿಕ್ ಎಂಜಿನ್‌ಗಳಲ್ಲಿ ಈ ಕಾರು ಲಭ್ಯ
Jul 22, 2024 01:00 PM IST
Tata Curvv Coupe: ಟಾಟಾ ಕರ್ವ್ ಕೂಪ್ ಎಸ್‌ಯುವಿ ಅನಾವರಣ
- Tata Curvv Coupe SUV: ಟಾಟಾ ಮೋಟಾರ್ಸ್ ಕಂಪನಿಯು ಎಸ್‌ಯುವಿ ವಿನ್ಯಾಸದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದು, ಟಾಟಾ ಕರ್ವ್ ಐಸಿಇ ಮತ್ತು ಇವಿಯನ್ನು ಅನಾವರಣಗೊಳಿಸಿದೆ. ಅತ್ಯಾಕರ್ಷಕ ಫಿಲಾಸಫಿ, ರೂಪ ಮತ್ತು ಕಾರ್ಯ ನಿರ್ವಹಣೆ ಹೊಂದಿರುವ ಟಾಟಾ ಕರ್ವ್ ಭಾರತದ ಮೊದಲ ಎಸ್‌ಯುವಿ ಕೂಪ್ ಆಗಿದೆ.
ಬೆಂಗಳೂರು: ಭಾರತದ ಪ್ರಮುಖ ವಾಹನ ತಯಾರಕ ಕಂಪನಿ ಟಾಟಾ ಮೋಟಾರ್ಸ್ ಎಸ್‌ಯುವಿ ವಿನ್ಯಾಸದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲಿದ್ದು, ಟಾಟಾ ಕರ್ವ್ ಐಸಿಇ ಮತ್ತು ಇವಿಯನ್ನು (Tata Curvv Coupe) ಅನಾವರಣಗೊಳಿಸಿದೆ. ಅತ್ಯಾಕರ್ಷಕ ಫಿಲಾಸಫಿ, ರೂಪ ಮತ್ತು ಕಾರ್ಯ ನಿರ್ವಹಣೆ ಹೊಂದಿರುವ ಟಾಟಾ ಕರ್ವ್ ಭಾರತದ ಮೊದಲ ಎಸ್‌ಯುವಿ ಕೂಪ್ ಆಗಿದೆ. ಮೊದಲಿಗೆ ಎಲೆಕ್ಟ್ರಿಕ್ ಆವೃತ್ತಿಯು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಈ ಎಸ್‌ಯುವಿ ಕೂಪ್‌ನ ವಿಶೇಷಗಳನ್ನು ತಿಳಿದುಕೊಳ್ಳೋಣ.
ಟಾಟಾ ಕರ್ವ್ ಇವಿ ಬಿಡುಗಡೆ ಯಾವಾಗ?
ಆಗಸ್ಟ್ 7ರಂದು ಈ ಹೊಚ್ಚ ಹೊಸ ಟಾಟಾ ಕರ್ವ್ ಬಿಡುಗಡೆ ಆಗಲಿದ್ದು, ಟಾಟಾ ಮೋಟಾರ್ಸ್‌ನ ಮಲ್ಟಿ- ಪವರ್‌ಟ್ರೇನ್ ತಂತ್ರಕ್ಕೆ ಅನುಗುಣವಾಗಿ ಅನಾವರಣಗೊಳ್ಳಲಿದೆ. ವಿಶೇಷವೆಂದರೆ ಮೊದಲು ಟಾಟಾ ಕರ್ವ್ ನ ಇವಿ ಆವೃತ್ತಿ ಬಿಡುಗಡೆಯಾಗಲಿದ್ದು, ಅದರ ಬೆನ್ನಲ್ಲಿ ಶೀಘ್ರದಲ್ಲಿಯೇ ಐಸಿಐ ಆವೃತ್ತಿಗಳು ಬಿಡುಗಡೆಯಾಗಲಿವೆ.
“ಟಾಟಾ ಮೋಟಾರ್ಸ್ ಭಾರತೀಯ ಎಸ್‌ಯುವಿ ಕ್ಷೇತ್ರದ ಪ್ರವರ್ತಕನಾಗಿದೆ. ನಾವು ಸದಾ ಆಕರ್ಷಕ ವಿನ್ಯಾಸ, ಅತ್ಯುತ್ತಮ ರೋಡ್ ಪ್ರೆಸೆನ್ಸ್ ಮತ್ತು ಅತ್ಯಪೂರ್ವ ಕಾರ್ಯಕ್ಷಮತೆ ಹೊಂದಿರುವ ಕೆಟಗರಿಯಲ್ಲೇ ವಿಶೇಷವಾದ ಉತ್ಪನ್ನಗಳನ್ನು ನೀಡುತ್ತಾ ಬಂದಿದ್ದೇವೆ. ಒರಿಜಿನಲ್ ಸಿಯೆರಾ, ಸಫಾರಿ, ನೆಕ್ಸಾನ್, ಪಂಚ್ ಮತ್ತು ಹ್ಯಾರಿಯರ್ ಮಾರುಕಟ್ಟೆಯಲ್ಲಿಯೇ ವಿಶೇಷ ವಿನ್ಯಾಸದ ಎಸ್‌ಯುವಿಗಳಲ್ಲಿ ಟಾಟಾ ಗಳಿಸಿರುವ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ಈ ಪರಂಪರೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಮತ್ತು ನಮ್ಮ ಎಸ್‌ಯುವಿ ಪೋರ್ಟ್‌ಫೋಲಿಯೊವನ್ನು ಮತ್ತಷ್ಟು ಬಲಪಡಿಸಲು ನಾವು ಮಧ್ಯಮ ಎಸ್‌ಯುವಿ ವರ್ಗದಲ್ಲಿನ ಮಹತ್ವಾಕಾಂಕ್ಷಿ ವಾಹನ, ಭಾರತದ ಮೊದಲ ಎಸ್‌ಯುವಿ ಕೂಪ್ ಆಗಿರುವ ಟಾಟಾ ಕರ್ವ್ ಅನ್ನು ಅನಾವರಣಗೊಳಿಸುತ್ತಿದ್ದೇವೆ" ಎಂದು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶೈಲೇಶ್ ಚಂದ್ರ ಹೇಳಿದ್ದಾರೆ.
"ಕೂಪ್ ದೇಹ ರಚನೆಯುಳ್ಳ ಇದರ ವಿಶಿಷ್ಟ ವಿನ್ಯಾಸವು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಒದಗಿಸಲಿದೆ. ಟಾಟಾ ಕರ್ವ್ ಮಲ್ಟಿ ಪವರ್ ಟ್ರೇನ್ ಗಳಲ್ಲಿ ಲಭ್ಯವಿದ್ದು, ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಗಳಲ್ಲಿ ದೊರೆಯಲಿದೆ. ಕರ್ವ್ ಮೂಲಕ ನಾವು ಮಧ್ಯಮ ಎಸ್‌ಯುವಿ ಬಯಸುವ ಗ್ರಾಹಕರ ಅಗತ್ಯಗಳನ್ನು ಪೂರೈಸಲಿದ್ದೇವೆ" ಎಂದು ಅವರು ಹೇಳಿದ್ದಾರೆ.
ಹೇಗಿರಲಿದೆ ಟಾಟಾ ಕರ್ವ್ ಕೂಪ್?
ಟಾಟಾ ಕರ್ವ್ ಕೂಪ್ ವಿನ್ಯಾಸ
ಟಾಟಾ ಕರ್ವ್, ಆಕರ್ಷಕ ವಿನ್ಯಾಸ, ಉತ್ತಮ ಪ್ರಾಯೋಗಿಕತೆ ಮತ್ತು ಉಲ್ಲಾಸದಾಯಕ ಕಾರ್ಯಕ್ಷಮತೆಯ ಪರಿಪೂರ್ಣ ಮಿಶ್ರಣವಾಗಿದೆ. ಕರ್ವ್ ನ ಎಸ್‌ಯುವಿ ಕೂಪ್ ದೇಹ ಶೈಲಿಯು ಮಿಡ್- ಎಸ್‌ಯುವಿ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಸಾಂಪ್ರದಾಯಿಕ ಬಾಕ್ಸ್ ವಿನ್ಯಾಸಕ್ಕೆ ವ್ಯತಿರಿಕ್ತವಾಗಿದೆ.
ಇದು ದೃಢವಾದ ಏರೋ ಡೈನಾಮಿಕ್ ಥೀಮ್ ಅನ್ನು ಹೊಂದಿದ್ದು, ಮುಂಭಾಗದಲ್ಲಿ ವಿಭಿನ್ನವಾಗಿ ಕಾಣಿಸುತ್ತದೆ. ಕರ್ವ್ ನ ಇಳಿಜಾರಾದ ಮೇಲ್ಛಾವಣಿಯು ವಿಂಡ್ ರೆಸಿಸ್ಟೆನ್ಸ್ ಗುಣವನ್ನು ಹೊಂದಿದೆ. ಅದರ ದೊಡ್ಡ ಚಕ್ರಗಳು, ದೃಢವಾದ ಶೈಲಿ, ಡಿಪಾರ್ಚರ್ ಆಂಗಲ್ ಮತ್ತು ಜಾಸ್ತಿ ಇರುವ ಗ್ರೌಂಡ್ ಕ್ಲಿಯರೆನ್ಸ್ ಟಾಟಾ ಕರ್ವ್ ಗೆ ಬ್ಯಾಲೆನ್ಸ್ ಡ್ ಆದ ಲುಕ್ ಅನ್ನು ನೀಡುತ್ತದೆ.
ಟಾಟಾ ಕರ್ವ್ ಕೂಪ್ ಬಣ್ಣಗಳು
ಈ ಎಸ್‌ಯುವಿ ಕೂಪ್ ಎರಡು ಹೊಸ ಬಣ್ಣದ ಛಾಯೆಗಳಲ್ಲಿ ಬಿಡುಗಡೆ ಆಗಲಿದೆ. ಆ ಬಣ್ಣಗಳು ಹೀಗಿವೆ: ಕರ್ವ್.ಇವಿಯಲ್ಲಿ ವರ್ಚುವಲ್ ಸನ್‌ರೈಸ್ ಬಣ್ಣ ಮತ್ತು ಕರ್ವ್ ಇಸಿಇಯಲ್ಲಿ ಗೋಲ್ಡ್ ಎಸೆನ್ಸ್ ಬಣ್ಣ.
ಲಾಂಗ್ ಡ್ರೈವ್‌ಗಳಿಗೆ ಹೋಗಲು ಇಷ್ಟಪಡುವ ಭಾರತೀಯ ಕುಟುಂಬಗಳಿಗಾಗಿ ಪ್ರಾಯೋಗಿಕವಾಗಿ ವಿನ್ಯಾಸಗೊಳಿಸಲಾಗಿರುವ ಮತ್ತು ಎಸ್‌ಯುವಿ ಕೂಪ್ ವಿನ್ಯಾಸ ಹೊಂದಿರುವ ಟಾಟಾ ಕರ್ವ್ ಆಧುನಿಕ ಮತ್ತು ಅತ್ಯುತ್ತ ಇಂಟೀರಿಯರ್ ಅನ್ನು ಹೊಂದಿದೆ. ವಿಶಾಲವಾದ ಕ್ಯಾಬಿನ್ ಸ್ಪೇಸ್ ಲಭ್ಯವಿದೆ ಮತ್ತು ಎಸ್‌ಯುವಿ ಕೂಪ್ ದೇಹ ರಚನೆ ಇರುವುದರಿಂದ ಸ್ಟೋರೇಜ್ ಗೆ ಜಾಸ್ತಿ ಸ್ಥಳ ಇಲ್ಲ ಎಂದು ಭಾವಿಸಬೇಕಾಗಿಲ್ಲ.
ಅತ್ಯುತ್ತಮ- ದರ್ಜೆಯ ತಂತ್ರಜ್ಞಾನಗಳ ಏಕೀಕರಣ ಮತ್ತು ಚಂದದ ಬಣ್ಣಗಳು, ಉತ್ತಮ ಸಾಮಾಗ್ರಿಗಳು ಮತ್ತು ಉತ್ತಮ ಫಿನಿಶಿಂಗ್ ಇತ್ಯಾದಿಗಳ ಕಾರಣದಿಂದ ಈ ಕಾರಿನ ಕ್ಯಾಬಿನ್ ಸೊಗಸಾಗಿ ರೂಪುಗೊಂಡಿದೆ.
ಟಾಟಾ ಕರ್ವ್ ಕೂಪ್ ಸ್ಟೋರೇಜ್
ಇದರ ಪ್ಯಾನೋರಾಮಿಕ್ ಗ್ಲಾಸ್ ರೂಫ್ ಕ್ಯಾಬಿನ್‌ಗೆ ನೈಸರ್ಗಿಕ ಬೆಳಕು ಬೀಳಲು ಅನುವು ಮಾಡಿಕೊಡುತ್ತದೆ. ಈ ಸೌಲಭ್ಯವು ಪ್ರಯಾಣಿಕರಿಗೆ ಉಲ್ಲಾಸದಾಯಕತೆ ಮತ್ತು ಸ್ವಾತಂತ್ರ್ಯದ ಭಾವವನ್ನು ನೀಡುತ್ತದೆ. ಗ್ರಾಹಕರ ಅಗತ್ಯಗಳನ್ನು ಪೂರೈಸಲು ಬೂಟ್ ಸ್ಪೇಸ್ ಅಥವಾ ಸ್ಟೋರೇಜ್ ಜಾಗವನ್ನು ಅನ್ನು ಮರುಸಂರಚಿಸಲಾಗಿದ್ದು, ಹೆಚ್ಚು ವಸ್ತುಗಳನ್ನು ಇಡಬಹುದಾದ ಸ್ಟೋರೇಜ್ ಜಾಗ ಇದರಲ್ಲಿ ಲಭ್ಯವಿದೆ.
ಟಾಟಾ ಕರ್ವ್ ಕೂಪ್ ಎಂಜಿನ್
ಟಾಟಾ ಕರ್ವ್ ಶಕ್ತಿಯುತ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೊರೆಯುತ್ತದೆ. ಅವುಗಳ ಜೊತೆಗೆ ಕೆಟಗರಿಯಲ್ಲಿಯೇ ಉತ್ತಮ ಅನ್ನಿಸುವ ಲಾಂಗ್ ಡ್ರೈವಿಂಗ್ ರೇಂಜ್ ಒದಗಿಸುವ ಎಲೆಕ್ಟ್ರಿಕ್ ವೇರಿಯಂಟ್ ಗಳು ಲಭ್ಯವಾಗಲಿದೆ. ಇದರ ವಿಶಿಷ್ಟ ದೇಹ ರಚನಾ ಶೈಲಿಯು ಇದಕ್ಕೆ ಚುರುಕುತನ ಮತ್ತು ಅತ್ಯುತ್ತಮ ನಿರ್ವಹಣಾ ಸಾಮರ್ಥ್ಯವನ್ನು ಒದಗಿಸುತ್ತದೆ. ಆ ಕಾರಣದಿಂದ ಈ ಕೂಪ್ ಗ್ರಾಹಕರಿಗೆ ವಿಶಿಷ್ಟವಾದ ಮತ್ತು ಸ್ಪೋರ್ಟಿ ಡ್ರೈವಿಂಗ್ ಅನುಭವವನ್ನು ನೀಡುತ್ತದೆ. ಸುಧಾರಿತ ಇನ್ಫೋಟೇನ್ ಮೆಂಟ್, ದೊಡ್ಡ ಸ್ಕ್ರೀನ್ ಗಳು ಮತ್ತು ಕನೆಕ್ಟೆಡ್ ಕಾರ್ ಟೆಕ್ನಾಲನಜಿ ಹೊಂದಿರುವ ಟಾಟಾ ಕರ್ವ್ ಈ ವಿಭಾಗದಲ್ಲಿಯೇ ಹೊಚ್ಚ ಹೊಸತಾಗಿ ಪರಿಚಯಿಸಲಾಗಿರುವ ಹಲವಾರು ಫೀಚರ್ ಗಳನ್ನು ಹೊಂದಿದೆ ಮತ್ತು ಆ ಫೀಚರ್ ಗಳು ಸಾಮಾನ್ಯವಾಗಿ ಉನ್ನತ- ವಿಭಾಗದ ವಾಹನಗಳಲ್ಲಿ ಕಂಡುಬರುತ್ತದೆ. ಜೊತೆಗೆ ಇದು ಆಕ್ಟಿವ್ ಮತ್ತು ಪ್ಯಾಸಿವ್ ಸುರಕ್ಷತಾ ಫೀಚರ್ ಗಳನ್ನು ಹೊಂದಿದೆ. ಕರ್ವ್ ಅನ್ನು ಕಟ್ಟುನಿಟ್ಟಾದ ಸುರಕ್ಷತಾ ಮಾನದಂಡಗಳನ್ನು ಪೂರೈಸುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.