ಮರ್ಸಿಡಿಸ್‌ ಬೆಂಝ್‌ ಜಿಎಲ್‌ಇ 450 ಕಾರು ಖರೀದಿಸಿದ ಹರಿಪ್ರಿಯಾ ವಸಿಷ್ಠ ಸಿಂಹ ದಂಪತಿ; 1.4 ಕೋಟಿ ರೂ ಕಾರಲ್ಲಿದೆ ಭರ್ಜರಿ ಫೀಚರ್ಸ್‌-sandalwood news haripriya vasishta simha purchased mercedes benz gle 450 car in bengaluru price spec pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಮರ್ಸಿಡಿಸ್‌ ಬೆಂಝ್‌ ಜಿಎಲ್‌ಇ 450 ಕಾರು ಖರೀದಿಸಿದ ಹರಿಪ್ರಿಯಾ ವಸಿಷ್ಠ ಸಿಂಹ ದಂಪತಿ; 1.4 ಕೋಟಿ ರೂ ಕಾರಲ್ಲಿದೆ ಭರ್ಜರಿ ಫೀಚರ್ಸ್‌

ಮರ್ಸಿಡಿಸ್‌ ಬೆಂಝ್‌ ಜಿಎಲ್‌ಇ 450 ಕಾರು ಖರೀದಿಸಿದ ಹರಿಪ್ರಿಯಾ ವಸಿಷ್ಠ ಸಿಂಹ ದಂಪತಿ; 1.4 ಕೋಟಿ ರೂ ಕಾರಲ್ಲಿದೆ ಭರ್ಜರಿ ಫೀಚರ್ಸ್‌

ಸ್ಯಾಂಡಲ್‌ವುಡ್‌ನ ಬ್ಯೂಟಿಫುಲ್‌ ಜೋಡಿ ಹರಿಪ್ರಿಯಾ ವಸಿಷ್ಠ ಸಿಂಹ ಮನೆಗೆ ಹೊಸ ವಿಲಾಸಿ ಕಾರೊಂದು ಬಂದಿದೆ. ಮರ್ಸಿಡಿಸ್‌ ಬೆಂಝ್‌ ಜಿಎಲ್‌ಇ 450 ಕಾರಿಗೆ 1.4 ಕೋಟಿ ರೂಪಾಯಿ ಇದ್ದು, ಹಲವು ಅದ್ಧೂರಿ ಫೀಚರ್ಸ್‌ಗಳನ್ನು ಹೊಂದಿದೆ.

ಮರ್ಸಿಡಿಸ್‌ ಬೆಂಝ್‌ ಜಿಎಲ್‌ಇ 450 ಕಾರು ಖರೀದಿಸಿದ ಹರಿಪ್ರಿಯಾ ವಸಿಷ್ಠ ಸಿಂಹ ದಂಪತಿ
ಮರ್ಸಿಡಿಸ್‌ ಬೆಂಝ್‌ ಜಿಎಲ್‌ಇ 450 ಕಾರು ಖರೀದಿಸಿದ ಹರಿಪ್ರಿಯಾ ವಸಿಷ್ಠ ಸಿಂಹ ದಂಪತಿ

ಬೆಂಗಳೂರು: ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹರಿಪ್ರಿಯಾ ವಸಿಷ್ಠ ಸಿಂಹರ ಮನೆಗೆ ಈಗ ಹೊಸ ಅತಿಥಿಯ ಆಗಮನವಾಗಿದೆ. ಇವರು ಮರ್ಸಿಡಿಸ್‌ ಬೆಂಝ್‌ ಜಿಎಲ್‌ಇ 450 4 ಮ್ಯಾಟಿಕ್‌ ಕಾರು ಖರೀದಿಸಿದ್ದಾರೆ. ಹೊಸ ದುಬಾರಿ ಕಾರು ಖರೀದಿಯ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮರ್ಸಿಡಿಸ್‌ ಶೋರೂಂನಲ್ಲಿ ಹೊಸ ಕಾರಿನ ಖರೀದಿ ಪ್ರಕ್ರಿಯೆ ಇತ್ಯಾದಿಗಳನ್ನು ಒಳಗೊಂಡಿರುವ ಸುಂದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಕಾರಲ್ಲಿ ಏನೆಲ್ಲ ಫೀಚರ್‌ಗಳಿವೆ, ಏನೆಲ್ಲ ವಿಲಾಸಿ ಅಂಶಗಳಿವೆ ಎಂಬ ವಿವರವನ್ನು ತಿಳಿದುಕೊಳ್ಳೋಣ.

ಕಾರು ಖರೀದಿಸಿದ ಹರಿಪ್ರಿಯಾ ವಸಿಷ್ಠ ಸಿಂಹ ದಂಪತಿ

ಕನ್ನಡ ನಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಕಳೆದ ವರ್ಷ ಜನವರಿ 26ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಿವಾಹವಾಗಿದ್ದರು. 2022ರ ಡಿಸೆಂಬರ್‌ 3ರಂದು ಇವರಿಬ್ಬರ ಎಂಗೇಜ್‌ಮೆಂಟ್‌ ನಡೆದಿತ್ತು.

ಮರ್ಸಿಡಿಸ್‌ ಬೆಂಝ್‌ ಜಿಎಲ್‌ಇ 450 4ಮ್ಯಾಟಿಕ್‌ ಎಲ್‌ಡಬ್ಲ್ಯುಬಿ ಎನ್ನುವುದು ಮಧ್ಯಮ ಹೈಬ್ರಿಡ್‌ ಆವೃತ್ತಿ. ಅಂದರೆ, ಎಲೆಕ್ಟ್ರಿಕ್‌ ಮತ್ತು ಪೆಟ್ರೋಲ್‌ ಇಂಧನ ಚಾಲಿತ ವಾಹನವಾಗಿದೆ. ಇದರ ಬೆಂಗಳೂರು ಆನ್‌ರೋಡ್‌ ದರ 1.40 ಕೋಟಿ ರೂಪಾಯಿವರೆಗೆ ಇದೆ. ಇದು ಆಟೋಮ್ಯಾಟಿಕ್‌ ಗಿಯರ್‌ ಬಾಕ್ಸ್‌ ಆಯ್ಕೆಯಲ್ಲಿ ದೊರಕುತ್ತದೆ. ಬ್ಲ್ಯಾಕ್‌ ಮೆಟಾಲಿಕ್‌, ಬ್ಲೂ ಮೆಟಾಲಿಕ್‌, ಗ್ರೇ ಮೆಟಾಇಕ್‌, ಸಿಲ್ವರ್‌ ಮೆಟಾಲಿಕ್‌, ಪೊಲಾರ್‌ ವೈಟ್‌ ಎಂಬ ಐದು ಬಣ್ಣಗಳಲ್ಲಿ ದೊರಕುತ್ತದೆ. ಸದ್ಯ ಹರಿಪ್ರಿಯಾ ವಸಿಷ್ಠ ಸಿಂಹ ಜೋಡಿಯು ಪೋಲಾರ್‌ ವೈಟ್‌ ಬಣ್ಣದ ಕಾರನ್ನು ಖರೀದಿಸಿದ್ದಾರೆ.

ಮರ್ಸಿಡಿಸ್‌ ಬೆಂಝ್‌ ಜಿಎಲ್‌ಇ 450 4ಮ್ಯಾಟಿಕ್‌ನಲ್ಲಿ ಗಂಟೆಗೆ ಗರಿಷ್ಠ 250 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ. ಇದು 5.6 ಸೆಕೆಂಡಿನಲ್ಲಿ 0-100 ಕಿ.ಮೀ. ವೇಗ ಪಡೆದುಕೊಳ್ಳುತ್ತದೆ. ಸಿಟಿ ಮೈಲೇಜ್‌ 7.11 ಕಿ.ಮಿ. ಇದೆ. ಹೆದ್ದಾರಿಯಲ್ಲಿ 11.17 ಕಿ.ಮೀ. ಮೈಲೇಜ್‌ ದೊರಕುತ್ತದೆ. ಇದರಲ್ಲಿ 2989 ಸಿಸಿಯ 6 ಸಿಲಿಂಡರ್‌ನ 4 ಕವಾಟದ ಎಂಜಿನ್‌ ಇದೆ. ಇದು ಎಂ250 ಟರ್ಬೊಚಾರ್ಜಡ್‌ ಐ6 ಎಂಜಿನ್‌ ಆಗಿದೆ. 5800 ಆವರ್ತನಕ್ಕೆ 375 ಬಿಎಚ್‌ಪಿ ಮತ್ತು 1800-5000 ಆವರ್ತನಕ್ಕೆ 500 ಎನ್‌ಎಂ ಟಾರ್ಕ್‌ ಒದಗಿಸುತ್ತದೆ. ಎಡಬ್ಲ್ಯುಡಿ ಗಿಯರ್‌ಬಾಕ್ಸ್‌ ಇದೆ.

ಈ ಕಾರಲ್ಲಿ ಸುರಕ್ಷತೆಗೆ ಓವರ್‌ಸ್ಪೀಡ್‌ ವಾರ್ನಿಂಗ್‌, ಎಮರ್ಜೆನ್ಸಿ ಬ್ರೇಕ್‌ ಲೈಟ್‌ ಫ್ಲಾಷಿಂಗ್‌, ಫಂಕ್ಚರ್‌ ರಿಪೇರಿ ಕಿಟ್‌, ಫಾರ್ವರ್ಡ್‌ ಕೊಲಿಷನ್‌ ವಾರ್ನಿಂಗ್‌, ಆಟೋಮ್ಯಾಟಿಕ್‌ ಎಮರ್ಜೆನ್ಸಿ ಬ್ರೇಕಿಂಗ್‌, ಹೈಬೀಮ್‌ ಅಸಿಸ್ಟ್‌, ಎನ್‌ಕ್ಯಾಪ್‌ ರೇಟಿಂಗ್‌, ಬ್ಲೈಂಡ್‌ ಸ್ಪಾಟ್‌ ಡಿಟೆಕ್ಷನ್‌ ಇತ್ಯಾದಿ ಹಲವು ಸುರಕ್ಷತಾ ಫೀಚರ್‌ಗಳಿವೆ. ಒಟ್ಟು 9 ಏರ್‌ಬ್ಯಾಗ್‌ಗಳಿವೆ. ಇಂಟಿರಿಯರ್‌, ಎಕ್ಸ್‌ಟಿರಿಯರ್‌ನಲ್ಲಿ ಹಲವು ಆಕರ್ಷಕ ಫೀಚರ್‌ಗಳಿದ್ದು, ಐಷಾರಾಮಿ ಪ್ರಯಾಣಕ್ಕೆ ಸೂಕ್ತವಾದ ಎಲ್ಲಾ ಅಂಶಗಳನ್ನು ಹೊಂದಿದೆ.

ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಸಿನಿಮಾಗಳು

ಸದ್ಯ ವಸಿಷ್ಠ ಸಿಂಹ ನಟನೆಯ ಭೈರತಿ ರಣಗಲ್‌ ಸಿನಿಮಾದ ಶೂಟಿಂಗ್‌ ನಡೆಯುತ್ತಿದೆ. ಕಳೆದ ವರ್ಷ ಡೆವಿಲ್‌, ಯಧಾಃ ಯಧಾಃ ಸಿನಿಮಾಗಳಲ್ಲಿ ನಟಿಸಿದ್ದರು. ಹೆಡ್‌ಬುಷ್‌, ಒಡೆಲಾ ರೈಲ್ವೆ ಸ್ಟೇಷನ್‌, ಡಿಯರ್‌ ವಿಕ್ರಮ್‌, ಕೆಜಿಎಫ್‌ ಸೇರಿದಂತೆ ಹಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಬೆಲ್‌ ಬಾಟಮ್‌ 2, ಹ್ಯಾಪಿ ಎಂಡಿಂಗ್‌, ಲಗಾಮ್‌ ಇತ್ಯಾದಿಗಳು ನಟಿ ಹರಿಪ್ರಿಯರ ಮುಂಬರುವ ಸಿನಿಮಾಗಳು, ಅಲಾ ಇಲಾ ಎಲಾ, ಯಧಾ ಯಧಾ, ಪೆಟ್ರೊಮ್ಯಾಕ್ಸ್‌, ಕಥಾ ಸಂಗಮ, ಎಲ್ಲಿದೆ ಇಲ್ಲಿ ತನಕ, ಕುರುಕ್ಷೇತ್ರ, ಬೆಲ್‌ ಬಾಟಮ್‌ ಸೇರಿದಂತೆ ಹಲವು ಸಿನಿಮಾಗಳಲ್ಲಿ ಹರಿಪ್ರಿಯ ನಟಿಸಿದ್ದಾರೆ.