Gold Rate Today: ಚಿನ್ನದ ಬೆಲೆಯಲ್ಲಿ ಮುಂದುವರಿದ ಹಾವು-ಏಣಿಯಾಟ; ಬುಧವಾರ ಇಳಿಕೆಯಾಯ್ತ ಹಳದಿ ಲೋಹದ ಬೆಲೆ; ಬೆಳ್ಳಿ ಸ್ಥಿರ
Apr 03, 2024 06:00 AM IST
ಏಪ್ರಿಲ್ 3ರ ಚಿನ್ನ, ಬೆಳ್ಳಿ ದರ
- ಬಂಗಾರದ ಬೆಲೆ ಬದಲಾಗುತ್ತಲೇ ಇದೆ. ಒಂದು ದಿನ ಇಳಿಕೆಯಾದ್ರೆ, ಮತ್ತೊಂದು ದಿನ ಏರಿಕೆಯಾಗುತ್ತಿದೆ. ಕಳೆದೊಂದು ವಾರದಿಂದ ಚಿನ್ನದ ದರದಲ್ಲಿ ಹಾವು-ಏಣಿಯಾಟ ಸಾಗುತ್ತಿದೆ. ನಿನ್ನೆ (ಏಪ್ರಿಲ್ 2) ಏರಿಕೆ ಕಂಡಿದ್ದ ಹಳದಿ ಲೋಹದ ಬೆಲೆ ಇಂದು (ಏಪ್ರಿಲ್ 3) ಇಳಿಕೆಯಾಗಿದೆ. ಬೆಳ್ಳಿ ನಿನ್ನೆಯ ದರದಲ್ಲೇ ಮುಂದುವರಿದಿದೆ.
ಬೆಂಗಳೂರು: ಚಿನ್ನದ ಖರೀದಿ ಮಾಡಬೇಕು ಅಂತ ಎಷ್ಟೊಂದು ದಿನದಿಂದ ಹಣ ಕೂಡಿಸಿ ಇಟ್ಟಿದ್ದೇನೆ, ಆದರೆ ಈ ಚಿನ್ನದ ಬೆಲೆ ನೋಡಿದ್ರೆ ಹಾವು ಏಣಿಯಾಟ ಆಡ್ತಿದೆ ಅಂತ ಗೊಣಗುವ ನಿಮಗೆ ಇಂದು ಕೂಡ ಬೇಸರ ಕಾಡುವುದು ಸಹಜ. ಯಾಕಂದ್ರೆ ನಿನ್ನೆ ಏರಿಕೆಯಾಗಿ ಗಾಬರಿ ಮೂಡಿಸಿದ್ದ ಬಂಗಾರದ ಬೆಲೆ ಇಂದು ಇಳಿಕೆಯಾಗಿದೆ. ಹಾಗಂತ ನಾಳೆ ಇನ್ನಷ್ಟು ಇಳಿಕೆಯಾಗಬಹುದು ಎಂದುಕೊಂಡು ನೀವು ಚಿನ್ನ ಖರೀದಿಸಲು ತಡೆ ಹಾಕಿದ್ರೆ ಮತ್ತಷ್ಟು ಏರಿಕೆಯಾಗಬಹುದು ಜೋಪಾನ. ಕಳೆದೊಂದು ವಾರದಿಂದ ಏರಿಕೆ-ಇಳಿಕೆಯಾಗಿ ಆಭರಣ ಪ್ರಿಯರು ಗೊಂದಲಕ್ಕೆ ಸಿಲುಕಿದ್ದಾರೆ. ಅಂದ ಹಾಗೆ ಇಂದು (ಏಪ್ರಿಲ್ 3) ಬೆಳ್ಳಿ ದರ ಸ್ಥಿರವಾಗಿದೆ. ದೇಶದಾದ್ಯಂತ ಇಂದಿನ ಚಿನ್ನದ ದರ ಎಷ್ಟಿದೆ ಗಮನಿಸಿ.
22 ಕ್ಯಾರೆಟ್ ಚಿನ್ನದ ಬೆಲೆ
ಇಂದು 1 ಗ್ರಾಂ ಚಿನ್ನಕ್ಕೆ 6,335 ರೂ. ಇದೆ. ನಿನ್ನೆ 6,360 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 25 ರೂ ಕಡಿಮೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 50,680 ರೂ. ನೀಡಬೇಕು. ನಿನ್ನೆ 50,880 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 200 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನಕ್ಕೆ 63,350 ರೂ ಇದೆ. ನಿನ್ನೆ 63,600 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 250 ರೂ. ಕಡಿಮೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,33,500 ರೂ. ನೀಡಬೇಕು. ನಿನ್ನೆ 6,36,000 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 2,500 ರೂ. ಕಡಿಮೆಯಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ
24 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ 6,911 ರೂ. ಇದೆ. ನಿನ್ನೆ 6,938 ರೂ. ಇದು ಈ ದರಕ್ಕೆ ಹೋಲಿಸಿದರೆ 27 ರೂ ಕಡಿಮೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 55,288 ರೂ. ನೀಡಬೇಕು. ನಿನ್ನೆ 55,504 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 216 ರೂ. ಇಳಿಕೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 69,110 ನೀಡಬೇಕು. ನಿನ್ನೆ 69,380 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 270 ರೂ ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 6,91,100 ರೂ. ಇದೆ. ನಿನ್ನೆ 6,93,800 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 2,700 ರೂ ಕಡಿಮೆಯಾಗಿದೆ.
ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 63,350 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 69,110 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.
ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 64,330 ರೂ. 24 ಕ್ಯಾರೆಟ್‌ಗೆ 70,150 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 63,350 ರೂ. 24 ಕ್ಯಾರೆಟ್‌ಗೆ 69,110 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 63,500 ರೂ. 24 ಕ್ಯಾರೆಟ್‌ಗೆ 69,260 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 63,350 ರೂ. 24 ಕ್ಯಾರೆಟ್‌ಗೆ 69,110 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 63,350 ರೂ. ಇದ್ದರೆ, 24 ಕ್ಯಾರೆಟ್‌ಗೆ 69,110 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 63,350 ರೂ. 24 ಕ್ಯಾರೆಟ್‌ಗೆ 69,110 ರೂ. ಆಗಿದೆ.
ಬೆಳ್ಳಿ ದರ
ಇಂದು ಬೆಳ್ಳಿ ದರ ಸ್ಥಿರವಾಗಿದೆ. ಒಂದು ಗ್ರಾಂ ಬೆಳ್ಳಿಗೆ 77.50 ರೂ. ಇದೆ. 8 ಗ್ರಾಂಗೆ 620 ರೂ ಇದ್ದರೆ, 10 ಗ್ರಾಂಗೆ 775 ರೂ. ಇದೆ. 100 ಗ್ರಾಂಗೆ 7,750 ರೂ. ಹಾಗೂ 1 ಕಿಲೋಗೆ 77,500 ರೂ. ಬೆಲೆ ನಿಗದಿ ಆಗಿದೆ.