logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Closing Bell: ನಿಫ್ಟಿ 21,850, ಸೆನ್ಸೆಕ್ಸ್‌ ಪಾಯಿಂಟ್ಸ್‌ ಗಳಿಸುವ ಮೂಲಕ ಇಳಿಕೆ ಕಂಡ ಭಾರತದ ಷೇರು ಮಾರುಕಟ್ಟೆ

Closing Bell: ನಿಫ್ಟಿ 21,850, ಸೆನ್ಸೆಕ್ಸ್‌ ಪಾಯಿಂಟ್ಸ್‌ ಗಳಿಸುವ ಮೂಲಕ ಇಳಿಕೆ ಕಂಡ ಭಾರತದ ಷೇರು ಮಾರುಕಟ್ಟೆ

Rakshitha Sowmya HT Kannada

Mar 19, 2024 04:13 PM IST

google News

ನೀರಸ ಅಂತ್ಯ ಕಂಡ ಭಾರತೀಯ ಷೇರು ಮಾರುಕಟ್ಟೆ

  • Closing Bell: ಸಾಕಷ್ಟು ನಿರೀಕ್ಷೆಗಳೊಂದಿಗೆ ಆರಂಭ ಕಂಡಿದ್ದ ಭಾರತದ ಷೇರು ಮಾರುಕಟ್ಟೆ ನೀರಸ ಅಂತ್ಯದ ಮೂಲಕ ವಹಿವಾಟು ಮುಗಿಸಿದೆ. ಬಜಾಜ್ ಫೈನಾನ್ಸ್, ಬಜಾಜ್ ಆಟೋ, ಕೋಟಕ್ ಮಹೀಂದ್ರಾ ಬ್ಯಾಂಕ್, ಹಿಂಡಾಲ್ಕೊ ಇಂಡಸ್ಟ್ರೀಸ್ ಮತ್ತು ಭಾರ್ತಿ ಏರ್‌ಟೆಲ್ ಲಾಭ ಗಳಿಸಿದ ಷೇರುಗಳಾಗಿವೆ. 

ನೀರಸ ಅಂತ್ಯ ಕಂಡ ಭಾರತೀಯ ಷೇರು ಮಾರುಕಟ್ಟೆ
ನೀರಸ ಅಂತ್ಯ ಕಂಡ ಭಾರತೀಯ ಷೇರು ಮಾರುಕಟ್ಟೆ

ಬೆಂಗಳೂರು: ಜಾಗತಿಕ ತಲ್ಲಣಗಳ ನಡುವೆ ಕೊಂಚ ಏರಿಕೆಯೊಂದಿಗೆ ವಹಿವಾಟು ಆರಂಭಿಸಿದ್ದ ಭಾರತದ ಷೇರು ಮಾರುಕಟ್ಟೆ ನೀರಸ ಅಂತ್ಯ ಕಂಡಿದೆ. ಭಾರತೀಯ ಇಕ್ವಿಟಿ ಸೂಚ್ಯಂಕಗಳು ಇಂದು ಮಾರ್ಚ್ 19, ಮಂಗಳವಾರದಂದು ನಿಫ್ಟಿ 21800 ನಲ್ಲಿ ಕ್ಷೇತ್ರಗಳಾದ್ಯಂತ ಮಾರಾಟದ ಮಧ್ಯೆ ಶೇ 1ರಷ್ಟು ಕುಸಿತ ಕಂಡಿದೆ.

ಭಾರತದ ಷೇರುಪೇಟೆಯ ಸಂವೇದಿ ಸೂಚ್ಯಂಕಗಳಲ್ಲಿ ಒಂದಾದ ಗಿಫ್ಟ್‌ ನಿಫ್ಟಿಯು 22,057ರಲ್ಲಿ ವಹಿವಾಟು ಆರಂಭಿಸಿತ್ತು. ಟಾಟಾ ಕನ್ಸ್‌ಲ್ಟೆನ್ಸಿ ಸರ್ವೀಸ್‌, ಟಾಟಾ ಸ್ಟೀಲ್‌, ಎಚ್‌ಇ ಇನ್ಫ್ರಾ ಎಂಜಿನಿಯರಿಂಗ್, ಪರದೀಪ್ ಫಾಸ್ಫೇಟ್ಸ್‌ ಷೇರುಗಳು ಇಂದು ಗಮನ ಕೇಂದ್ರೀಕರಿಸಿದ್ದವು. ನಿಫ್ಟಿಯಲ್ಲಿ ಟಿಸಿಎಸ್, ಬಿಪಿಸಿಎಲ್, ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್, ಸಿಪ್ಲಾ ಮತ್ತು ಬ್ರಿಟಾನಿಯಾ ಇಂಡಸ್ಟ್ರೀಸ್ ಸೇರಿದಂತೆ ನಿಫ್ಟಿಯಲ್ಲಿ ಅತಿ ಹೆಚ್ಚು ನಷ್ಟ ಕಂಡು ಬಂದರೆ, ಬಜಾಜ್ ಫೈನಾನ್ಸ್, ಬಜಾಜ್ ಆಟೋ, ಕೋಟಕ್ ಮಹೀಂದ್ರಾ ಬ್ಯಾಂಕ್, ಹಿಂಡಾಲ್ಕೊ ಇಂಡಸ್ಟ್ರೀಸ್ ಮತ್ತು ಭಾರ್ತಿ ಏರ್‌ಟೆಲ್ ಲಾಭ ಗಳಿಸಿದವು.

ಹೆಲ್ತ್‌ಕೇರ್, ಐಟಿ, ಎಫ್‌ಎಂಸಿಜಿ, ಕ್ಯಾಪಿಟಲ್ ಗೂಡ್ಸ್, ತೈಲ ಮತ್ತು ಅನಿಲ, ಪವರ್ ಶೇ 1-2 ರಷ್ಟು ಕುಸಿತದೊಂದಿಗೆ ಎಲ್ಲಾ ವಲಯದ ಸೂಚ್ಯಂಕಗಳು ಕೆಂಪು ಬಣ್ಣದಲ್ಲಿ ಕೊನೆಗೊಂಡವು. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ 1 ಪ್ರತಿಶತದಷ್ಟು ಕುಸಿದಿವೆ. ವಿನಿಮಯ ಮಾಹಿತಿಯ ಪ್ರಕಾರ ಸೋಮವಾರ 30-ಷೇರುಗಳ ಬಿಎಸ್‌ಇ ಬೆಂಚ್‌ಮಾರ್ಕ್ 104.99 ಪಾಯಿಂಟ್‌ಗಳು ಅಥವಾ ಶೇ 0.14 ರಷ್ಟು ಏರಿಕೆಯಾಗಿ 72,748.42 ಕ್ಕೆ ಸ್ಥಿರವಾಯಿತು. ಎನ್‌ಎಸ್‌ಇ ನಿಫ್ಟಿ 32.35 ಪಾಯಿಂಟ್‌ಗಳು ಅಥವಾ ಶೇ 0.15 ರಷ್ಟು ಏರಿಕೆಯಾಗಿ 22,055.70 ಕ್ಕೆ ತಲುಪಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಸೋಮವಾರ 2,051.09 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ