Business News: ಒಂದಕ್ಕಿಂತ ಹೆಚ್ಚು ಕ್ರೆಡಿಟ್‌ ಕಾರ್ಡ್‌ ಬಳಸ್ತಿದ್ದೀರಾ, ಯಾವ ಬ್ಯಾಂಕಿನವರೂ ನಿಮಗೆ ಸಾಲ ಕೊಡದಿರಬಹುದು, ಎಚ್ಚರ!
ಕನ್ನಡ ಸುದ್ದಿ  /  ಜೀವನಶೈಲಿ  /  Business News: ಒಂದಕ್ಕಿಂತ ಹೆಚ್ಚು ಕ್ರೆಡಿಟ್‌ ಕಾರ್ಡ್‌ ಬಳಸ್ತಿದ್ದೀರಾ, ಯಾವ ಬ್ಯಾಂಕಿನವರೂ ನಿಮಗೆ ಸಾಲ ಕೊಡದಿರಬಹುದು, ಎಚ್ಚರ!

Business News: ಒಂದಕ್ಕಿಂತ ಹೆಚ್ಚು ಕ್ರೆಡಿಟ್‌ ಕಾರ್ಡ್‌ ಬಳಸ್ತಿದ್ದೀರಾ, ಯಾವ ಬ್ಯಾಂಕಿನವರೂ ನಿಮಗೆ ಸಾಲ ಕೊಡದಿರಬಹುದು, ಎಚ್ಚರ!

Business News: ನಿಮ್ಮ ಕ್ರೆಡಿಟ್‌ ಸ್ಕೋರ್‌ ಉತ್ತಮವಾಗಿದ್ದಲ್ಲಿ ಮಾತ್ರ ಬ್ಯಾಂಕ್‌ನಲ್ಲಿ ನಿಮಗೆ ಪರ್ಸನಲ್‌ ಲೋನ್‌, ಹೋಂ ಲೋನ್‌, ಕಾರ್‌ ಲೋನ್‌ ಹೀಗೆ ನಿಮಗೆ ಅವಶ್ಯಕತೆಯಿರುವ ಲೋನ್‌ ಕೊಡುತ್ತಾರೆ. ಒಂದು ವೇಳೆ ನಿಮ್ಮ ಕ್ರೆಡಿಟ್‌ ಸ್ಕೋರ್‌ ಕಡಿಮೆ ಇದ್ದಲ್ಲಿ ಖಂಡಿತ ನಿಮಗೆ ಲೋನ್‌ ದೊರೆಯುವುದಿಲ್ಲ.

ಒಂದಕ್ಕಿಂತ ಹೆಚ್ಚು ಕ್ರೆಡಿಟ್‌ ಕಾರ್ಡ್‌ಗಳಿರುವುದು ಕ್ರೆಡಿಟ್‌ ಸ್ಕೋರ್‌ ಮೇಲೆ ಪರಿಣಾಮ ಬೀರುತ್ತದೆ
ಒಂದಕ್ಕಿಂತ ಹೆಚ್ಚು ಕ್ರೆಡಿಟ್‌ ಕಾರ್ಡ್‌ಗಳಿರುವುದು ಕ್ರೆಡಿಟ್‌ ಸ್ಕೋರ್‌ ಮೇಲೆ ಪರಿಣಾಮ ಬೀರುತ್ತದೆ (PC: Unsplash)

Business News: ಯಾವುದಾದ್ರೂ ವಸ್ತುವನ್ನು ಖರೀದಿಸಲು ನಿಮಗೆ ಆಸೆ ಆದಾಗ, ಜೇಬಿನಲ್ಲಿ ದುಡ್ಡು ಇಲ್ಲದೆ ಕ್ರೆಡಿಟ್‌ ಕಾರ್ಡ್‌ ಇದ್ದರೂ, ನೀವು ಇಷ್ಟಪಟ್ಟ ವಸ್ತು ನಿಮ್ಮ ಕೈ ಸೇರಿದಂತೆ. ಆದರೆ ನಿಗದಿತ ಸಮಯದಲ್ಲಿ ನೀವು ಪಡೆದ ಸಾಲ ಮರುಪಾವತಿ ಮಾಡದಿದ್ದರೆ ಅದರಿಂದ ಸಮಸ್ಯೆ ಕಟ್ಟಿಟ್ಟ ಬುತ್ತಿ. ಬಡ್ಡಿ, ಚಕ್ರಬಡ್ಡಿ ಅಂತ ನೀವು ಖರ್ಚು ಮಾಡಿದ್ದಕ್ಕಿಂತ ಎರಡರಷ್ಟು ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

ಕ್ರೆಡಿಟ್‌ ಕಾರ್ಡ್‌ಗಳನ್ನು ನಮಗೆ ಅಗತ್ಯ ಬಿದ್ದಾಗ ಸಾಲ ಕೊಡುವ ಮಿತ್ರ ಎಂದೇ ಹೇಳಬಹುದು. ನೀವು ಯಾವುದಾದರೂ ವಸ್ತುವನ್ನು ಖರೀದಿಸಬೇಕು, ಆದರೆ ನಿಮಗೆ ಯಾರೂ ಸಾಲ ಕೊಡುವುದಿಲ್ಲ ಎಂದಾಗ ಬ್ಯಾಂಕ್‌, ಕೆಲವೊಂದು ಷರತ್ತುಗಳನ್ನು ವಿಧಿಸಿ ನೀವು ಖರೀದಿಸಿದ ವಸ್ತುಗಳಿಗೆ ಹಣ ಕಟ್ಟುತ್ತದೆ ( ನಿಮ್ಮ ಬಳಿ ಕ್ರೆಡಿಟ್‌ ಕಾರ್ಡ್‌ ಇದ್ದರೆ). ಆದರೆ ಬ್ಯಾಂಕ್‌ ಷರತ್ತಿನಂತೆ ನೀವು ಅವಧಿಗೆ ತಕ್ಕಂತೆ ಸಾಲ ವಾಪಸ್‌ ನೀಡದಿದ್ದಲ್ಲಿ ನಿಮಗೆ ಸಮಸ್ಯೆ ಮಾತ್ರ ತಪ್ಪುವುದಿಲ್ಲ. ಆದ್ದರಿಂದ ಕ್ರೆಡಿಟ್‌ ಕಾರ್ಡ್‌ ಬಳಸುವಾಗ ನೀವು ಬಹಳ ಜಾಗರೂಕರಾಗಿರಬೇಕು. ಕೆಲವರಂತೂ ಒಂದಕ್ಕಿಂತ ಹೆಚ್ಚು ಕ್ರೆಡಿಟ್‌ ಕಾರ್ಡ್‌ ಹೊಂದಿರುತ್ತಾರೆ. 2-3 ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವವರು ಆಯಾ ಬ್ಯಾಂಕುಗಳ ಕ್ರೆಡಿಟ್‌ ಕಾರ್ಡ್‌ ಪಡೆಯುತ್ತಾರೆ. ಆದರೆ ಒಂದಕ್ಕಿಂತ ಹೆಚ್ಚು ಕ್ರೆಡಿಟ್‌ ಕಾರ್ಡ್‌, ನಿಮ್ಮ ಕ್ರೆಡಿಟ್‌ ಸ್ಕೋರ್‌ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಸಾಲ ಪಡೆಯಲು ಕ್ರೆಡಿಟ್‌ ಸ್ಕೋರ್‌ ಅಗತ್ಯ

ಬ್ಯಾಂಕಿನಲ್ಲಿ ನೀವು ಲೋನ್‌ ಪಡೆಯಲು ಹೋದಾಗ ಅವರು ಮೊದಲು ಗಮಿನಿಸುವುದು ನಿಮ್ಮ ಕ್ರೆಡಿಟ್‌ ಸ್ಕೋರನ್ನು. ನಿಮಗೆ ಸಾಲ ನೀಡಿದರೆ ಅದು ಖಂಡಿತ ವಾಪಸ್‌ ಬರುವುದೋ ಇಲ್ಲವೋ ಎಂಬುದನ್ನು ತಿಳಿಯಲು ಬ್ಯಾಂಕಿನವರು ನಿಮ್ಮ ಕ್ರೆಡಿಟ್‌ ಸ್ಕೋರ್‌ ಗಮನಿಸುತ್ತಾರೆ. ಒಂದು ವೇಳೆ ನಿಮ್ಮ ಕ್ರೆಡಿಟ್‌ ಸ್ಕೋರ್‌ ಉತ್ತಮವಾಗಿದ್ದಲ್ಲಿ ಮಾತ್ರ ಪರ್ಸನಲ್‌ ಲೋನ್‌, ಹೋಂ ಲೋನ್‌, ಕಾರ್‌ ಲೋನ್‌ ಹೀಗೆ ನಿಮಗೆ ಅವಶ್ಯಕತೆಯಿರುವ ಲೋನ್‌ ಕೊಡುತ್ತಾರೆ. ಒಂದು ವೇಳೆ ನಿಮ್ಮ ಕ್ರೆಡಿಟ್‌ ಸ್ಕೋರ್‌ ಕಡಿಮೆ ಇದ್ದಲ್ಲಿ ಖಂಡಿತ ನಿಮಗೆ ಲೋನ್‌ ದೊರೆಯುವುದಿಲ್ಲ. ನೀವು 2 ಅಥವಾ 3 ಕ್ರೆಡಿಟ್‌ ಕಾರ್ಡ್‌ಗಳನ್ನು ಹೊಂದಿದ್ದಲ್ಲಿ ಅದರಿಂದ ನಿಮಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಬಹುದು.

  • ನೀವು ಎರಡೂ ಕ್ರೆಡಿಟ್‌ ಕಾರ್ಡ್‌ ಮೂಲಕ ಸಾಲ ಪಡೆದಿದ್ದಲ್ಲಿ ಎರಡರಲ್ಲೂ ಸೂಕ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡಲು ಸಾಧ್ಯವಾಗದಿದ್ದಲ್ಲಿ , ನಿಮ್ಮ ಕ್ರೆಡಿಟ್‌ ಸ್ಕೋರ್‌ ಕಡಿಮೆ ಆಗುತ್ತದೆ.
  • ನಿಮಗೆ ಬ್ಯಾಂಕುಗಳಿಂದ ಎಷ್ಟು ಕ್ರೆಡಿಟ್‌ ಕಾರ್ಡ್‌ಗಳನ್ನು ನೀಡಲಾಗಿದೆ? ನೀವು ಅವನ್ನು ಬಳಸುತ್ತಿದ್ದೀರಾ ಎಂಬುದನ್ನು ಪರಿಗಣಿಸಲಾಗುತ್ತದೆ. ಮಿತಿ ಮೀರಿದರೆ ಅದು ಖಂಡಿತ ಅಪಾಯ, ನಿಮ್ಮ ಕ್ರೆಡಿಟ್‌ ಸ್ಕೋರ್‌ ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ ನೀವು ಅವಶ್ಯಕತೆ ತಕ್ಕಂತೆ ಬಳಸಿದರೆ ನಿಮ್ಮ ಕ್ರೆಡಿಟ್‌ ಸ್ಕೋರ್‌ ಉತ್ತಮವಾಗಿರುತ್ತದೆ.
  • ನಿಮ್ಮ ಕ್ರೆಡಿಟ್‌ ಕಾರ್ಡ್‌ನ ಅವಧಿಯನ್ನೂ ನೀವು ಗಮನಿಸಬೇಕು. ಕಡಿಮೆ ಅವಧಿಯ ಕ್ರೆಡಿಟ್‌ ಕಾರ್ಡ್‌ ಇದ್ದಲ್ಲಿ ನಿಮ್ಮ ಕ್ರೆಡಿಟ್‌ ಸ್ಕೋರ್‌ ಕೂಡಾ ಕಡಿಮೆ ಆಗುತ್ತದೆ. ಹೆಚ್ಚು ಅವಧಿ ಇದ್ದಲ್ಲಿ ಕ್ರೆಡಿಟ್‌ ಸ್ಕೋರ್‌ ಉತ್ತಮವಾಗಿರುತ್ತದೆ.
  • ನೀವು ಯಾವ ರೀತಿಯ ಸಾಲಗಳನ್ನು ಪಡೆದಿದ್ದೀರ ಎಂಬುದು ಕೂಡಾ ನಿಮ್ಮ ಕ್ರೆಡಿಟ್‌ ಸ್ಕೋರ್‌ ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಒಂದು ಕ್ರೆಡಿಟ್‌ ಕಾರ್ಡಿನಲ್ಲಿ ಇನ್ಸ್ಟಾಲ್‌ಮೆಂಟ್‌ ಲೋನ್‌ ಮತ್ತೊಂದರಲ್ಲಿ ಅಡಮಾನದ ಸಾಲ ಹೀಗೆ ವಿವಿಧ ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸಿ ಸಾಲ ಪಡೆಯುವುದು ಕೂಡಾ ನಿಮ್ಮ ಕ್ರೆಡಿಟ್‌ ಸ್ಕೋರ್‌ ಕುಸಿಯಲು ಕಾರಣವಾಗಬಹುದು.

ಕ್ರೆಡಿಟ್‌ ಸ್ಕೋರ್‌ ಉತ್ತಮವಾಗಿರಲು ಏನು ಮಾಡಬೇಕು?

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನೀವು ನಿಮ್ಮ ಕ್ರೆಡಿಟ್‌ ಸ್ಕೋರ್‌ ಹೆಚ್ಚಿಸಲು ಆದ್ಯತೆ ಕೊಡಿ. ನೀವು ಒಂದಕ್ಕಿಂದ ಹೆಚ್ಚು ಕ್ರೆಡಿಟ್‌ ಕಾರ್ಡ್‌ ಹೊಂದಿದ್ದಲ್ಲಿ ಎಲ್ಲದರಲ್ಲೂ ಏಕಕಾಲಕ್ಕೆ ಸಾಲ ಪಡೆಯಬೇಡಿ. ಒಂದು ಅಥವಾ ಎರಡು ಕಾರ್ಡ್‌ಗಳನ್ನು ನಿಯಮಿತವಾಗಿ ಬಳಸಿ. ಆಗ್ಗಾಗ್ಗೆ ನಿಮ್ಮ ಸಾಲ ಮರುಪಾವತಿಯ ಮೇಲ್ವಿಚಾರಣೆ ಮಾಡಿ. ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನಿಯಮಿತವಾಗಿ ಪರಿಶೀಲಿಸಿ ಹಾಗೂ ನಿಮ್ಮ ಕ್ರೆಡಿಟ್ ಕಾರ್ಡ್‌ಗಳಲ್ಲಿ 30% ಕ್ರೆಡಿಟ್ ಬಳಕೆಯ ಮಿತಿಗಿಂತ ಕಡಿಮೆ ಇರುವುದನ್ನು ಖಚಿತಪಡಿಸಿಕೊಳ್ಳಿ.

Whats_app_banner