logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ದೆಹಲಿ ಮಾಲಿನ್ಯ: ನವದೆಹಲಿಯನ್ನು ಆವರಿಸಿದ ದಟ್ಟ ಹೊಗೆ, ಗೋಚರ ಪ್ರಮಾಣ ಇಳಿಕೆ, ಉಸಿರಾಟಕ್ಕೂ ಸಮಸ್ಯೆ ತಂದಿಟ್ಟ ಮಾಲಿನ್ಯದ ಹೊದಿಕೆ

ದೆಹಲಿ ಮಾಲಿನ್ಯ: ನವದೆಹಲಿಯನ್ನು ಆವರಿಸಿದ ದಟ್ಟ ಹೊಗೆ, ಗೋಚರ ಪ್ರಮಾಣ ಇಳಿಕೆ, ಉಸಿರಾಟಕ್ಕೂ ಸಮಸ್ಯೆ ತಂದಿಟ್ಟ ಮಾಲಿನ್ಯದ ಹೊದಿಕೆ

Umesh Kumar S HT Kannada

Nov 19, 2024 11:29 AM IST

google News

ದೆಹಲಿಯ ಕರ್ತವ್ಯ ಪಥದ ಒಂದು ನೋಟ (ನವೆಂಬರ್ 18)ದ ಚಿತ್ರವನ್ನು ಸಾಂಕೇತಿಕವಾಗಿ ಬಳಸಲಾಗಿದೆ.

  • ದೆಹಲಿ ಮಾಲಿನ್ಯ: ರಾಷ್ಟ್ರ ರಾಜಧಾನಿ ದೆಹಲಿಯನ್ನಾವರಿಸಿದ ದಟ್ಟ ಹೊಗೆಯ ಕಾರಣ ಗೋಚರ ಪ್ರಮಾಣ ಇಳಿಕೆಯಾಗಿದೆ. ಉಸಿರಾಟಕ್ಕೂ ಸಮಸ್ಯೆ ತಂದಿಟ್ಟ ಮಾಲಿನ್ಯದ ಹೊದಿಕೆ, ಎಲ್ಲರೂ ಮಾಸ್ಕ್‌ ಧರಿಸುವಂತೆ ಮಾಡಿದೆ. ದೆಹಲಿ ಮಾಲಿನ್ಯಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿ ಇಲ್ಲಿದೆ.

ದೆಹಲಿಯ ಕರ್ತವ್ಯ ಪಥದ ಒಂದು ನೋಟ (ನವೆಂಬರ್ 18)ದ ಚಿತ್ರವನ್ನು ಸಾಂಕೇತಿಕವಾಗಿ ಬಳಸಲಾಗಿದೆ.
ದೆಹಲಿಯ ಕರ್ತವ್ಯ ಪಥದ ಒಂದು ನೋಟ (ನವೆಂಬರ್ 18)ದ ಚಿತ್ರವನ್ನು ಸಾಂಕೇತಿಕವಾಗಿ ಬಳಸಲಾಗಿದೆ. (Photo by Sajjad HUSSAIN / AFP)

ನವದೆಹಲಿ: ಭಾರತದ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ಸತತ ಎರಡನೇ ದಿನವಾದ ಮಂಗಳವಾರವೂ (ನವೆಂಬರ್ 19) ಗಂಭೀರವಾಗಿದ್ದು “ಸೀವಿಯರ್ ಪ್ಲಸ್‌” ಕೆಟಗರಿಯಲ್ಲಿದೆ. ನಗರವನ್ನು ಆವರಿಸಿದ ಹೊಗೆಯು ಗೋಚರ ಪ್ರಮಾಣವನ್ನು ಕಡಿಮೆ ಮಾಡಿದೆ. ವಾಯು ಮಾಲಿನ್ಯ ಅಪಾಯಕಾರಿ ಮಟ್ಟವನ್ನು ತಲುಪಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ಇಂದು ಬೆಳಿಗ್ಗೆ 8 ಗಂಟೆಯ ವೇಳೆಗೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 488 ರಷ್ಟಿದ್ದು, ಇದು 'ತೀವ್ರ ಪ್ಲಸ್' ವಿಭಾಗದಲ್ಲಿದೆ. ಈ ರೀತಿ ಎಕ್ಯೂಐ ಸನ್ನಿವೇಶದಲ್ಲಿ ಗಾಳಿಯು ಆರೋಗ್ಯಕ್ಕೆ ಹಾನಿ ಉಂಟುಮಾಡುವಂಥದ್ದು ಎಂದು ಪರಿಗಣಿಸಲಾಗುತ್ತದೆ. ಇದು ವಿಶೇಷವಾಗಿ ಮಕ್ಕಳು, ವಯೋವೃದ್ಧರು ಮತ್ತು ಉಸಿರಾಟ, ಹೃದಯದ ಸಮಸ್ಯೆ ಇರುವಂಥವರಿಗೆ ಸಮಸ್ಯೆಯನ್ನು ಉಂಟುಮಾಡುತ್ತದೆ ಎಂದು ಎಎನ್‌ಐ ವರದಿ ಮಾಡಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಅಪಾಯಕಾರಿ ಹಂತದಲ್ಲಿದೆ ದೆಹಲಿ ಮಾಲಿನ್ಯ

ದೆಹಲಿಯ ಭಿಕಾಜಿ ಕಾಮಾ ಪ್ಲೇಸ್‌ ಸುತ್ತಮುತ್ತ ಇಂದು ಬೆಳಗ್ಗೆ ದಟ್ಟ ಹೊಗೆ ಆವರಿಸಿಕೊಂಡಿತ್ತು. ಅದೇ ರೀತಿ, ದೆಹಲಿಯಲ್ಲಿ ಹೊಗೆಯ ನಡುವೆ ರೈಲುಗಳ ಸಂಚಾರ ಮುಂದುವರೆದಿದೆ. ನವದೆಹಲಿ ರೈಲ್ವೆ ನಿಲ್ದಾಣದ ದೃಶ್ಯಗಳು ಈ ಪ್ರದೇಶವನ್ನು ಆವರಿಸಿರುವ ಮಬ್ಬು ಪದರವನ್ನು ತೋರಿಸುತ್ತವೆ. ಹೊಗೆಯ ಪರಿಣಾಮ 22 ರೈಲುಗಳು ತಡವಾಗಿ ಚಲಿಸುತ್ತಿವೆ. 9 ರೈಲುಗಳನ್ನು ಮರು ನಿಗದಿಪಡಿಸಲಾಗಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.

ಈ ನಡುವೆ, ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ದುರ್ಬಲ ಗುಂಪು, ಅಪಾಯದ ಉದ್ಯೋಗಗಳಲ್ಲಿರುವ ಜನರ ಆರೋಗ್ಯ ರಕ್ಷಣೆಗೆ ಜಾಗೃತಿ ಮೂಡಿಸುವುದಕ್ಕೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಸರ್ಕಾರಗಳು ಕ್ರಮ ತೆಗೆದುಕೊಳ್ಳಬೇಕು. ವಾಯುಮಾಲಿನ್ಯ ಎದುರಿಸುವುದಕ್ಕೆ ತಂತ್ರಗಳು ಸೇರಿ, ಹವಾಮಾನ ಬದಲಾವಣೆಯ ಕಾರಣ ಆರೋಗ್ಯದ ಮೇಲಾಗುವ ಪರಿಣಾಮಗಳನ್ನು ಎದುರಿಸಲು ಜಿಲ್ಲಾ ಮತ್ತು ನಗರ ಮಟ್ಟದಲ್ಲಿ ವಿವರವಾದ ಕ್ರಿಯಾ ಯೋಜನೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ.

ಕರ್ತವ್ಯ ಪಥ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರು ತಮ್ಮ ಬೆಳಗಿನ ನಡಿಗೆಯ ದಿನಚರಿಯನ್ನು ನಿರ್ವಹಿಸುವುದನ್ನು ಮತ್ತು ದಟ್ಟವಾದ ಹೊಗೆಯ ಪದರದ ಸುತ್ತಲೂ ಸೈಕಲ್ ಸವಾರಿ ಮಾಡುವುದು ಕಂಡುಬಂದಿದೆ. ಮಾಲಿನ್ಯದ ಮಟ್ಟವು ಹೆಚ್ಚಾಗಿರುವುದರಿಂದ, ಕಾಳಿಂದಿ ಕುಂಜ್ ಮತ್ತು ಓಖ್ಲಾ ಬ್ಯಾರೇಜ್ ಬಳಿ ನದಿಯ ಕೆಲವು ಭಾಗಗಳಲ್ಲಿ ವಿಷಕಾರಿ ನೊರೆಯ ದಟ್ಟವಾದ ನೊರೆ ತೇಲುತ್ತಿರುವ ದೃಶ್ಯವೂ ಗಮನಸೆಳೆದಿದೆ.

ದೆಹಲಿ ಮಾಲಿನ್ಯ: ಆನ್‌ಲೈನ್ ಪಾಠ, ಶಿಕ್ಷಣ ಸಂಸ್ಥೆಗಳಿಗೆ ರಜೆ

ರಾಷ್ಟ್ರ ರಾಜಧಾನಿಯಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟದ ಮಧ್ಯೆ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ನವೆಂಬರ್ 22ರ ತನಕ ಆನ್‌ಲೈನ್ ಕ್ಲಾಸ್ ನಡೆಸುವುದಾಗಿ ಘೋಷಿಸಿದೆ. ಇನ್ನೊಂದೆಡೆ, ಹರಿಯಾಣದಲ್ಲಿ ವಿಶೇಷವಾಗಿ ಗುರುಗ್ರಾಮ ಜಿಲ್ಲೆಯಲ್ಲಿ ಅಲ್ಲಿನ ಜಿಲ್ಲಾಡಳಿತವು ಪಿಯುಸಿ ತನಕದ ತರಗತಿಗಳಿಗೆ ನವೆಂಬರ್ 19 ರಿಂದ 23 ರ ತನಕ ಅಥವಾ ಮುಂದಿನ ಆದೇಶದ ತನಕ ಶಾಲೆಗಳಿಗೆ ರಜೆ ಘೋಷಿಸಿದೆ.

ಈ ನಡುವೆ, ದೆಹಲಿ ಸರ್ಕಾರವು ವಾಯು ಪರಿಸ್ಥಿತಿಯನ್ನು "ವೈದ್ಯಕೀಯ ತುರ್ತುಸ್ಥಿತಿ" ಎಂದು ಘೋಷಿಸಿದೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಂಸ್ಥೆಗಳನ್ನು ಒತ್ತಾಯಿಸಿದೆ. ನಗರದ ಗಾಳಿಯ ಮೇಲೆ ಪರಿಣಾಮ ಬೀರುವ ಎರಡು ಪ್ರಮುಖ ಅಂಶಗಳು ಹವಾಮಾನ ಪರಿಸ್ಥಿತಿ ಗಮನಿಸಬೇಕು ಮತ್ತು ಕಸ ಸುಡುವಿಕೆ ಮಾಡಬಾರದು ಎಂದು ಸೂಚಿಸಿದೆ.

ಇನ್ನೊಂದೆಡೆ, ಮುಂಬೈ, ದೆಹಲಿ ಮತ್ತು ಉತ್ತರ ಭಾರತದ ಭಾಗಗಳು ಸೇರಿ ಹಲವಾರು ನಗರಗಳಲ್ಲಿ ಗಾಳಿಯ ಗುಣಮಟ್ಟವು ಹದಗೆಟ್ಟಿದೆ, ಇದು ತೀವ್ರ ಮಟ್ಟವನ್ನು ತಲುಪಿದೆ ಮತ್ತು ಆರೋಗ್ಯದ ಅಪಾಯಗಳ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ. ದೆಹಲಿ ಮಾಲಿನ್ಯ ಮಟ್ಟವು 'ತೀವ್ರ' ವಾಗಿರುವ ಕಾರಣ, ಕೋರ್ಟ್ ಆವರಣದಲ್ಲಿ ವ್ಯಾಜ್ಯಗಳು ಮತ್ತು ವಕೀಲರು ಮಾಸ್ಕ್‌ ಧರಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಆರೋಗ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೋಮವಾರ ಸಲಹೆ ನೀಡಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ