Dominique Pelicot trial: 50 ಪುರುಷರು, 10 ವರ್ಷಗಳ ಕಾಲ ಅತ್ಯಾಚಾರ; ಮಾಜಿ ಪತ್ನಿಗೆ ಕ್ರೂರ ಹಿಂಸೆ ನೀಡಿದ ವ್ಯಕ್ತಿಗೆ ಕಠಿಣ ಶಿಕ್ಷೆ
Dec 19, 2024 05:44 PM IST
Dominique Pelicot: 50 ಪುರುಷರು, 10 ವರ್ಷಗಳ ಕಾಲ ಅತ್ಯಾಚಾರ ಮಾಡಿಸಿದ ವ್ಯಕ್ತಿಗೆ ಶಿಕ್ಷೆ
- Dominique Pelicot: ತನ್ನ ಮಾಜಿ ಪತ್ನಿಗೆ ಕ್ರೂರ ಹಿಂಸೆ ನೀಡಿರುವ ವ್ಯಕ್ತಿಯೊಬ್ಬನಿಗೆ ಫ್ರಾನ್ಸ್ ನ್ಯಾಯಾಲಯವು ಫ್ರೆಂಚ್ ಕಾನೂನಿಡಿ ಇರುವ ಗರಿಷ್ಠ ಶಿಕ್ಷೆಯನ್ನು ವಿಧಿಸಿ ಗುರುವಾರ ತೀರ್ಪು ನೀಡಿದೆ. ತನ್ನ ಮಾಜಿ ಪತ್ನಿಯನ್ನು ಅತ್ಯಾಚಾರ ಮಾಡಲು ಆನ್‌ಲೈನ್‌ನಲ್ಲಿ ಅತ್ಯಾಚಾರಿಗಳನ್ನು ನೇಮಕ ಮಾಡಿಕೊಂಡಿರುವುದಾಗಿ ಡೊಮಿನಿಕ್ ಪೆಲಿಕಾಟ್ ಒಪ್ಪಿಕೊಂಡಿದ್ದಾನೆ.
Dominique Pelicot: ತನ್ನ ಮಾಜಿ ಪತ್ನಿಗೆ ಕ್ರೂರ ಹಿಂಸೆ ನೀಡಿರುವ ವ್ಯಕ್ತಿಯೊಬ್ಬನಿಗೆ ಫ್ರಾನ್ಸ್ ನ್ಯಾಯಾಲಯವು ಫ್ರೆಂಚ್ ಕಾನೂನಿಡಿ ಇರುವ ಗರಿಷ್ಠ ಶಿಕ್ಷೆಯನ್ನು ವಿಧಿಸಿ ಗುರುವಾರ ತೀರ್ಪು ನೀಡಿದೆ. ಸುಮಾರು ಒಂದು ದಶಕಗಳ ಕಾಲ ತನ್ನ ಮಾಜಿ ಪತ್ನಿಗೆ ಡ್ರಗ್ಸ್ ನೀಡಿ ಅಪರಿಚಿತರಿಂದ ಅತ್ಯಾಚಾರ ಮಾಡಿಸುತ್ತಿದ್ದ ಆರೋಪ ಈತನ ಮೇಲಿತ್ತು. ಡ್ರಗ್ಸ್‌ನಿಂದ ತನ್ನ ಮಾಜಿ ಪತ್ನಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವಾಗ ಆನ್‌ಲೈನ್‌ನಿಂದ ನೇಮಕ ಮಾಡಿಕೊಂಡ ಅತ್ಯಾಚಾರಿಗಳಿಂದ ಅತ್ಯಾಚಾರ ಮಾಡಿಸುತ್ತಿದ್ದನು. ಇಂತಹ ವಿಕೃತ, ವಿಚಿತ್ರ ಕ್ರೌರ್ಯ ಮೆರೆದ ಡೊಮಿನಿಕ್ ಪೆಲಿಕಾಟ್‌ಗೆ ಇಂದು ಫ್ರಾನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಫ್ರಾನ್ಸ್‌ನ ಅವಿಗ್ನಾನ್‌ನಲ್ಲಿರುವ ನ್ಯಾಯಾಲಯದ ಪ್ರಮುಖ ನ್ಯಾಯಾಧೀಶ ರೋಜರ್ ಅರಾಟಾ ಅವರು ಅಪರಾಧಿ ಪೆಲಿಕಾಟ್ ಮತ್ತು ಇತರೆ 50 ಜನರ ವಿರುದ್ಧ ಇಂದು ತೀರ್ಪು ನೀಡಿದ್ದಾರೆ. ಈ ಪ್ರಕರಣ ಫ್ರಾನ್ಸ್ ಮಾತ್ರವಲ್ಲದೆ ಜಗತ್ತಿನ ಗಮನ ಸೆಳೆದಿದೆ. "ನೀನು ಕ್ರೂರ ಅತ್ಯಾಚಾರಿ ಎಂದು ಸಾಬೀತಾಗಿದೆ. 72 ವರ್ಷ ವಯಸ್ಸಿನ ನೀನು ಇನ್ನು ಜೈಲಿನಲ್ಲಿಯೇ ಉಳಿದ ಜೀವನ ಕಳೆಯಬೇಕು" ಎಂದು ಹೇಳಿದ ನ್ಯಾಯಾಧೀಶರು ಜೈಲು ಶಿಕ್ಷೆಯ ತೀರ್ಪು ಪ್ರಕಟಿಸಿದರು. 20 ವರ್ಷಗಳ ಕಾಲ ನ್ಯಾಯಾಲಯ ಶಿಕ್ಷೆ ವಿಧಿಸಿದ ಬಳಿಕ ಅಪರಾಧಿಯು ಕೋರ್ಟ್ ಮುಂದೆ ಕಣ್ಣೀರಿಟ್ಟಿದ್ದಾನೆ.
20,000 ಫೋಟೋಗಳು ಮತ್ತು ವೀಡಿಯೊಗಳು
2020ರಲ್ಲಿ ಬೇರೊಂದು ಪ್ರಕರಣದಲ್ಲಿ ಡೊಮಿನಿಕ್ ಪೆಲಿಕಾಟ್‌ನನ್ನು ಬಂಧಿಸಲಾಗಿತ್ತು. ಆ ಸಂದರ್ಭದಲ್ಲಿ ಈ ಪ್ರಕರಣ ಬಹಿರಂಗವಾಗಿತ್ತು. ಬೇರೊಂದು ಪ್ರಕರಣದ ತನಿಖೆಯ ಸಂದರ್ಭದಲ್ಲಿ ಆತನ ಕಂಪ್ಯೂಟರ್ ಡ್ರೈವ್‌ನಲ್ಲಿದ್ದ 20,000 ಕ್ಕೂ ಹೆಚ್ಚು ಫೋಟೋಗಳು ಮತ್ತು ವೀಡಿಯೊಗಳು ಪೊಲೀಸರ ಕಣ್ಣಿಗೆ ಕಾಣಿಸಿದೆ. ಈ ಸಂದರ್ಭದಲ್ಲಿ ಈತನ ದುಷ್ಕೃತ್ಯ ಬೆಳಕಿಗೆ ಬಂದಿದೆ. "ಈ ಅಪರಾಧಿ ಸಿಕ್ಕಿಬಿದ್ದದ್ದು ಸೂಪರ್‌ಮಾರ್ಕೆಟ್‌ನಲ್ಲಿ. ಅಲ್ಲಿ ಮಹಿಳೆಯರು ಉಡುಗೆ ಬದಲಾಯಿಸುವ ಕೊಠಡಿಯಲ್ಲಿ ಈತ ಕ್ಯಾಮೆರಾ ಇಟ್ಟಿದ್ದ. ಈ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಈತನ ಇತರೆ ಅಪರಾಧಗಳು ಬೆಳಕಿಗೆ ಬಂದವು" ಎಂದು ಗಾರ್ಡಿಯನ್ ವರದಿ ಮಾಡಿದೆ.
"ನನ್ನ ಅಪರಾಧವನ್ನು ಒಪ್ಪಿಕೊಳ್ಳುತ್ತಿದ್ದೇನೆ. ನನ್ನ ಕುಟುಂಬಕ್ಕೆ ಮಾಡಿದ ಈ ತೊಂದರೆಗೆ ವಿಷಾಧಿಸುತ್ತೇನೆ. ನಾನು ಅವರ ಕ್ಷಮೆ ಕೇಳುತ್ತಿದ್ದೇನೆ. ನನ್ನ ಕ್ಷಮೆಯನ್ನು ಸ್ವೀಕರಿಸಿ" ಎಂದು ಡೊಮಿನಿಕ್ ಪೆಲಿಕಾಟ್ ನ್ಯಾಯಾಲಯಕ್ಕೆ ನೀಡಿದ ಅಂತಿಮ ಹೇಳಿಕೆಯಲ್ಲಿ ತಿಳಿಸಿದ್ದಾನೆ.