logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Cbse Exams: ಫೆ 15 ರಿಂದ ಸಿಬಿಎಸ್‌ಇ 10, 12 ನೇ ತರಗತಿ ಪರೀಕ್ಷೆ ಆರಂಭ, ಟೈಮ್‌ಟೇಬಲ್ ಡೌನ್‌ಲೋಡ್ ಮಾಡಿಕೊಳ್ಳಲು ಡೈರೆಕ್ಟ್ ಲಿಂಕ್ ಇಲ್ಲಿದೆ

CBSE Exams: ಫೆ 15 ರಿಂದ ಸಿಬಿಎಸ್‌ಇ 10, 12 ನೇ ತರಗತಿ ಪರೀಕ್ಷೆ ಆರಂಭ, ಟೈಮ್‌ಟೇಬಲ್ ಡೌನ್‌ಲೋಡ್ ಮಾಡಿಕೊಳ್ಳಲು ಡೈರೆಕ್ಟ್ ಲಿಂಕ್ ಇಲ್ಲಿದೆ

Umesh Kumar S HT Kannada

Nov 21, 2024 08:47 PM IST

google News

ಸಿಬಿಎಸ್‌ಇ ಪರೀಕ್ಷೆ: ಸಿಬಿಎಸ್‌ಇ 10, 12 ನೇ ತರಗತಿ ಪರೀಕ್ಷೆಗಳು ಫೆ 15 ರಿಂದ ಆರಂಭವಾಗಲಿವೆ. ಇದಕ್ಕೆ ಸಂಬಂಧಿಸಿದ ಟೈಮ್‌ಟೇಬಲ್ ಪ್ರಕಟವಾಗಿದೆ.

  • ಸಿಬಿಎಸ್‌ಇ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳು 2025ರ ಫೆ.15ರಿಂದ ನಡೆಯಲಿವೆ. ಇದಕ್ಕೆ ಸಂಬಂಧಿಸಿದ ಸಿಬಿಎಸ್‌ಇ ಡೇಟ್‌ಶೀಟ್‌ 2025 ಪ್ರಕಟವಾಗಿದೆ. ಟೈಮ್‌ಟೇಬಲ್ ಡೌನ್‌ಲೋಡ್ ಮಾಡಿಕೊಳ್ಳಲು ಡೈರೆಕ್ಟ್ ಲಿಂಕ್ ಮತ್ತು ವಿವರ ಇಲ್ಲಿದೆ.

ಸಿಬಿಎಸ್‌ಇ ಪರೀಕ್ಷೆ: ಸಿಬಿಎಸ್‌ಇ 10, 12 ನೇ ತರಗತಿ ಪರೀಕ್ಷೆಗಳು ಫೆ 15 ರಿಂದ ಆರಂಭವಾಗಲಿವೆ. ಇದಕ್ಕೆ ಸಂಬಂಧಿಸಿದ ಟೈಮ್‌ಟೇಬಲ್ ಪ್ರಕಟವಾಗಿದೆ.
ಸಿಬಿಎಸ್‌ಇ ಪರೀಕ್ಷೆ: ಸಿಬಿಎಸ್‌ಇ 10, 12 ನೇ ತರಗತಿ ಪರೀಕ್ಷೆಗಳು ಫೆ 15 ರಿಂದ ಆರಂಭವಾಗಲಿವೆ. ಇದಕ್ಕೆ ಸಂಬಂಧಿಸಿದ ಟೈಮ್‌ಟೇಬಲ್ ಪ್ರಕಟವಾಗಿದೆ.

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್‌ಇ)ನ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳು 2025ರ ಫೆ.15ರಿಂದ ನಡೆಯಲಿವೆ. ಹತ್ತನೇ ತರಗತಿ ಪರೀಕ್ಷೆಗಳು ಮಾರ್ಚ್ 18ರಂದು ಮುಗಿದರೆ, 12ನೇ ತರಗತಿ ಪರೀಕ್ಷೆ 2025ರ ಏಪ್ರಿಲ್ 4ರಂದು ಕೊನೆಗೊಳ್ಳಲಿದೆ ಎಂದು ಸಿಬಿಎಸ್‌ಇ ಮಂಡಳಿ ತಿಳಿಸಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ಇದೇ ಮೊದಲ ಸಲ 86 ದಿನ ಮುಂಚಿತವಾಗಿ ಪರೀಕ್ಷಾ ದಿನಾಂಕ ಪ್ರಕಟಿಸಿರುವಂಥದ್ದು. 40 ಸಾವಿರ ವಿಷಯ ಸಂಯೋಜನೆ ಗಮನದಲ್ಲಿಟ್ಟುಕೊಂಡು 2 ಪರೀಕ್ಷೆಗಳ ನಡುವೆ ಸಾಕಷ್ಟು ಅಂತರವನ್ನು ನೀಡಲಾಗಿದೆ. ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸನ್ಯಮ್ ಭಾರದ್ವಾಜ್ ತಿಳಿಸಿದ್ದಾರೆ. ಸಿಬಿಎಸ್‌ಇ 10 ಮತ್ತು 12ನೇ ತರಗತಿ ಪ್ರಾಯೋಗಿಕ ಪರೀಕ್ಷೆ ದಿನಾಂಕಗಳನ್ನು ಈ ಹಿಂದೆಯೇ ಪ್ರಕಟಿಸಲಾಗಿದೆ. ಅದರಂತೆ, 10ನೇ ತರಗತಿ ಪ್ರಾಯೋಗಿಕ ಪರೀಕ್ಷೆ 2025ರ ಜನವರಿ 1ರಿಂದ ಹಾಗೂ 12ನೇ ತರಗತಿ ಪ್ರಾಯೋಗಿಕ ಪರೀಕ್ಷೆ ಫೆ.15ರಿಂದ ನಡೆಯಲಿವೆ.

ಸಿಬಿಎಸ್‌ಇ ಡೇಟ್‌ಶೀಟ್‌ 2025 ಬಿಡುಗಡೆ, ಬೋರ್ಡ್ ಪರೀಕ್ಷೆ ದಿನಾಂಕ ಪ್ರಕಟ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಸಿಬಿಎಸ್‌ಇ ಡೇಟ್‌ಶೀಟ್ 2025 ಅನ್ನು ಬಿಡುಗಡೆ ಮಾಡಿದೆ. ಸಿಬಿಎಸ್‌ಇ 10, 12 ನೇ ತರಗತಿ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, 10th, 12th ಬೋರ್ಡ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಸಿಬಿಎಸ್‌ಇಯ ಅಧಿಕೃತ ವೆಬ್‌ಸೈಟ್ cbse.gov.in ನಲ್ಲಿ ಮೂಲಕ ಸಂಪೂರ್ಣ ಡೇಟ್‌ಶೀಟ್ ಅನ್ನು ಪರಿಶೀಲಿಸಬಹುದು. ಡೇಟ್‌ಶೀಟ್ ಪ್ರಕಾರ, ಹತ್ತನೇ ತರಗತಿ ಪರೀಕ್ಷೆಗಳು ಫೆಬ್ರವರಿ 15ಕ್ಕೆ ಶುರುವಾಗಿ ಮಾರ್ಚ್ 18ರಂದು ಮುಗಿಯಲಿದೆ. 12ನೇ ತರಗತಿ ಪರೀಕ್ಷೆ 2025ರ ಫೆಬ್ರವರಿ 15ರಂದು ಶುರುವಾಗಿ ಏಪ್ರಿಲ್ 4ರಂದು ಕೊನೆಗೊಳ್ಳಲಿದೆ. ಈ ಎರಡೂ ಪರೀಕ್ಷೆಗಳು ಒಂದೇ ಪಾಳಿಯಲ್ಲಿ ಅಂದರೆ ಬೆಳಗ್ಗೆ 10.30 ರಿಂದ ಅಪರಾಹ್ನ 1.30 ರ ತನಕ ನಡೆಯಲಿದೆ.

ಸಿಬಿಎಸ್‌ಇ 10, 12ನೇ ತರಗತಿ ಬೋರ್ಡ್‌ ಪರೀಕ್ಷೆ ಟೈಮ್‌ಟೇಬಲ್‌ ಡೌನ್‌ಲೋಡ್ ಮಾಡುವುದು ಹೇಗೆ

ಸಿಬಿಎಸ್‌ಇ 10,12ನೇ ತರಗತಿ ಬೋರ್ಡ್‌ ಪರೀಕ್ಷೆ ಟೈಮ್‌ ಟೇಬಲ್ ಡೌನ್‌ಲೋಡ್ ಮಾಡುವುದಕ್ಕೆ ಅನುಸರಿಸಬೇಕಾದ ಹಂತಗಳಿವು.

1) ಸಿಬಿಎಸ್‌ಇ 10ನೇ ತರಗತಿ ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆ ಬರೆಯುವವರು ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್‌ cbse.gov.in ಗೆ ಭೇಟಿ ನೀಡಬೇಕು

2) ಹೋಮ್‌ ಪೇಜ್‌ನಲ್ಲಿ ಸಿಬಿಎಸ್‌ಇ ಡೇಟ್‌ಶೀಟ್‌ 2025 ಫಾರ್ ಕ್ಲಾಸ್‌ 10, 12 (CBSE Datesheet 2025 for Class 10, 12) ಎಂಬುದರ ಮೇಲೆ ಕ್ಲಿಕ್ ಮಾಡಬೇಕು.

3) ಹೊಸ ಪಿಡಿಎಫ್‌ ಫೈಲ್ ತೆರೆದುಕೊಳ್ಳುತ್ತದೆ. ಅದರಲ್ಲಿ ಸಿಬಿಎಸ್‌ಇ 10,12ನೇ ತರಗತಿ ಬೋರ್ಡ್‌ ಪರೀಕ್ಷೆ ಟೈಮ್‌ ಟೇಬಲ್ ವಿವರ ಇದೆ.

4) ಆ ಪಿಡಿಎಫ್‌ ಫೈಲ್ ಅನ್ನು ಡೌನ್‌ಲೋಡ್ ಮಾಡಿಕೊಂಡು, ಪ್ರಿಂಟ್ ಮಾಡಿಟ್ಟುಕೊಂಡರೆ ಮುಂದಿನ ಅಗತ್ಯಗಳಿಗೆ ಬಳಸಬಹುದು.

ಈ ಬಾರಿ ಸಿಬಿಎಸ್‌ಇ 10 ಮತ್ತು 12ನೇ ತರಗತಿ ಬೋರ್ಡ್‌ ಪರೀಕ್ಷೆಗಳನ್ನು ದೇಶ ಮತ್ತು ವಿದೇಶಗಳಲ್ಲಿ ಇರುವ ಸಿಬಿಎಸ್‌ಇ ನೋಂದಾಯಿತ 8000 ಶಾಲೆಗಳ 44 ವಿದ್ಯಾರ್ಥಿಗಳು ಬರೆಯುವ ಸಾಧ್ಯತೆ ಇದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ