ಪ್ರಾದೇಶಿಕ ಭಾಷೆಗಳ ಉಳಿವಿಗೆ ಮಹತ್ವದ ಕ್ರಮವೊಂದನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಪೂರ್ವ ಪ್ರಾಥಮಿಕದಿಂದ ಐದನೇ ತರಗತಿವರೆಗೆ ಕಡ್ಡಾಯವಾಗಿ ವಿದ್ಯಾರ್ಥಿಗಳ ಮಾತೃಭಾಷೆ ಅಥವಾ ಪ್ರಾದೇಶಿಕವಾಗಿ ರಾಜ್ಯ ನಿರ್ಧರಿಸುವ ಸ್ಥಳೀಯವಾಗಿ ಅತಿಹೆಚ್ಚು ಪ್ರಚಲಿತದಲ್ಲಿರುವ ಭಾಷೆಯನ್ನೇ ಕಲಿಕೆಯ ಮಾಧ್ಯಮವನ್ನಾಗಿ ಪರಿಗಣಿಸಬೇಕಿದೆ.