logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪರೀಕ್ಷಾ ಪೇ ಚರ್ಚಾ 2025: ವಿದ್ಯಾರ್ಥಿಗಳಷ್ಟೇ ಅಲ್ಲ ಶಿಕ್ಷಕರು, ಪಾಲಕರೂ ಭಾಗವಹಿಸಬಹುದು; ನೋಂದಾಯಿಸಲು ಡೈರೆಕ್ಟ್ ಲಿಂಕ್ ಮತ್ತು ಇತರೆ ವಿವರ

ಪರೀಕ್ಷಾ ಪೇ ಚರ್ಚಾ 2025: ವಿದ್ಯಾರ್ಥಿಗಳಷ್ಟೇ ಅಲ್ಲ ಶಿಕ್ಷಕರು, ಪಾಲಕರೂ ಭಾಗವಹಿಸಬಹುದು; ನೋಂದಾಯಿಸಲು ಡೈರೆಕ್ಟ್ ಲಿಂಕ್ ಮತ್ತು ಇತರೆ ವಿವರ

Umesh Kumar S HT Kannada

Dec 19, 2024 09:26 AM IST

google News

ಪರೀಕ್ಷಾ ಪೇ ಚರ್ಚಾ 2025: ವಿದ್ಯಾರ್ಥಿಗಳಷ್ಟೇ ಅಲ್ಲ ಶಿಕ್ಷಕರು, ಪಾಲಕರೂ ಭಾಗವಹಿಸಬಹುದು. ನೋಂದಣಿ ಶುರುವಾಗಿದೆ. ಹಿಂದಿನ ಪರೀಕ್ಷಾ ಪೇ ಚರ್ಚಾ ಮುಖ್ಯ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳ ಜತೆಗೆ ಕುಶಲೋಪರಿ ನಡೆಸಿದ ಸಂದರ್ಭದ ಫೋಟೋಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ.

  • Pariksha Pe Charcha 2025: ಪರೀಕ್ಷಾ ಪೇ ಚರ್ಚಾ 2025ರ ನೋಂದಣಿ ಶುರುವಾಗಿದ್ದು, ಜನವರಿ 14ರ ತನಕ ಹೆಸರು ನೋಂದಾಯಿಸಲು ಕಾಲಾವಕಾಶವಿದೆ. ವಿದ್ಯಾರ್ಥಿಗಳಷ್ಟೇ ಅಲ್ಲ ಶಿಕ್ಷಕರು, ಪಾಲಕರೂ ಭಾಗವಹಿಸಬಹುದು. ಆದರೆ ಎಂಸಿಕ್ಯೂ ಪ್ರಶ್ನಾವಳಿಗೆ ಉತ್ತರಿಸಬೇಕು. ನೋಂದಾಯಿಸಲು ಡೈರೆಕ್ಟ್ ಲಿಂಕ್ ಮತ್ತು ಇತರೆ ವಿವರ ಇಲ್ಲಿದೆ.

ಪರೀಕ್ಷಾ ಪೇ ಚರ್ಚಾ 2025: ವಿದ್ಯಾರ್ಥಿಗಳಷ್ಟೇ ಅಲ್ಲ ಶಿಕ್ಷಕರು, ಪಾಲಕರೂ ಭಾಗವಹಿಸಬಹುದು.  ನೋಂದಣಿ ಶುರುವಾಗಿದೆ. ಹಿಂದಿನ ಪರೀಕ್ಷಾ ಪೇ ಚರ್ಚಾ ಮುಖ್ಯ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳ ಜತೆಗೆ ಕುಶಲೋಪರಿ ನಡೆಸಿದ ಸಂದರ್ಭದ ಫೋಟೋಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ.
ಪರೀಕ್ಷಾ ಪೇ ಚರ್ಚಾ 2025: ವಿದ್ಯಾರ್ಥಿಗಳಷ್ಟೇ ಅಲ್ಲ ಶಿಕ್ಷಕರು, ಪಾಲಕರೂ ಭಾಗವಹಿಸಬಹುದು. ನೋಂದಣಿ ಶುರುವಾಗಿದೆ. ಹಿಂದಿನ ಪರೀಕ್ಷಾ ಪೇ ಚರ್ಚಾ ಮುಖ್ಯ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳ ಜತೆಗೆ ಕುಶಲೋಪರಿ ನಡೆಸಿದ ಸಂದರ್ಭದ ಫೋಟೋಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ. (GoI)

Pariksha Pe Charcha 2025: ವಿದ್ಯಾರ್ಥಿಗಳ, ಪಾಲಕರ ಮತ್ತು ಶಿಕ್ಷಕರ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಶಿಕ್ಷಣ ಸಚಿವಾಲಯ ಪ್ರತಿ ವರ್ಷ ನಡೆಸಿಕೊಡುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ಈ ಸಲವೂ ನಡೆಯಲಿದೆ. 2025ರ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ನೋಂದಣಿ ಶುರುವಾಗಿದ್ದು, ಜನವರಿ 14ರ ತನಕ ನೋಂದಾಯಿಸಿಕೊಳ್ಳಲು ಕಾಲಾವಕಾಶವಿದೆ. ನೋಂದಣಿಗಳನ್ನು ಪರಿಶೀಲಿಸಿ, ನೋಂದಾಯಿಸಿದವರ ಪೈಕಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರು ಸೇರಿ 2500 ಜನರಿಗೆ ಪರೀಕ್ಷಾ ಪೇ ಚರ್ಚೆಯಲ್ಲಿ ಭಾಗವಹಿಸುವುದಕ್ಕೆ ಸಚಿವಾಲಯವು ಅವಕಾಶ ಮಾಡಿಕೊಡುತ್ತದೆ. ಈ ಸಲದ ನೋಂದಣಿ ಡಿಸೆಂಬರ್ 14ಕ್ಕೆ ಶುರುವಾಗಿದ್ದು, ಭಾಗವಹಿಸುವ ಅವಕಾಶವನ್ನು ಒದಗಿಸುವುದಕ್ಕೆ ಸಚಿವಾಲಯವು ಸಣ್ಣ ಪ್ರಶ್ನಾವಳಿಗೆ ಉತ್ತರಿಸಬೇಕು. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಪ್ರಧಾನಿ ಮೋದಿಯವರಿಗೆ ಪ್ರಶ್ನೆಗಳನ್ನು ಸಲ್ಲಿಸಲು ಜನವರಿ 14 ರವರೆಗೆ ಆನ್‌ಲೈನ್ ಎಂಸಿಕ್ಯೂ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪರೀಕ್ಷಾ ಪೇ ಚರ್ಚೆಯ ಮುಖ್ಯ ಕಾರ್ಯಕ್ರಮವು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿದೆ. ಅದರಲ್ಲಿ ಭಾಗವಹಿಸಲು ಆಯ್ಕೆಯಾಗುವ 2500 ಜನರು ಪ್ರಧಾನ ಮಂತ್ರಿಯವರ ಜತೆಗಿನ ಸಂವಾದದಲ್ಲಿ ಭಾಗವಹಿಸಬಹುದು. ಅವರಿಗೆ ಪರೀಕ್ಷಾ ಪೇ ಚರ್ಚಾದ ಕಿಟ್ ಕೂಡ ಸಿಗಲಿದೆ ಎಂದು ಕೇಂದ್ರ ಸರ್ಕಾರ ಮೈ ಗೌ ತಾಣದಲ್ಲಿ ಪ್ರಕಟಿಸಿದೆ.

ಪರೀಕ್ಷಾ ಪೇ ಚರ್ಚಾ 2025; 8ನೇ ಆವೃತ್ತಿಯ ಕಾರ್ಯಕ್ರಮ

ಪರೀಕ್ಷಾ ಪೇ ಚರ್ಚಾ 2025 8ನೇ ಆವೃತ್ತಿಯ ಕಾರ್ಯಕ್ರಮವಾಗಿದ್ದು 6 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮತ್ತು ಪಾಲಕರು ಇದರಲ್ಲಿ ಭಾಗವಹಿಸಬಹುದು. ಭಾಗವಹಿಸುವವರು ಎಂಸಿಕ್ಯೂಗೆ ನೀಡುವ ಉತ್ತರಗಳನ್ನು ಆಧರಿಸಿ ಅವರ ಪೈಕಿ 2500 ಜನರಿಗೆ ಪರೀಕ್ಷಾ ಪೇ ಚರ್ಚಾ 2025ರಲ್ಲಿ ಭಾಗವಹಿಸುವ ಅವಕಾಶ ನೀಡಲಾಗುತ್ತದೆ. ಇದು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಪ್ರಧಾನ ಮಂತ್ರಿಯೊಂದಿಗೆ ಸಂವಹನ ನಡೆಸಲು ಅನನ್ಯ ವೇದಿಕೆಯನ್ನು ಒದಗಿಸುತ್ತದೆ.

ವಿದ್ಯಾರ್ಥಿಗಳು ಎರಡು ರೀತಿಯಲ್ಲಿ ಪರೀಕ್ಷಾ ಪೇ ಚರ್ಚಾಗೆ ನೋಂದಾಯಿಸಿ ಕೊಳ್ಳಬಹುದು. ನೇರವಾಗಿ ತಾವೇ ನೋಂದಾಯಿಸಬಹುದು. ಅಥವಾ ಶಾಲಾ ಶಿಕ್ಷಕರ ಮೂಲಕ ನೋಂದಾಯಿಸಿಕೊಳ್ಳಬಹುದು. ಇದಲ್ಲದೇ ಶಿಕ್ಷಕರು ಮತ್ತು ಪಾಲಕರು ಕೂಡ ತಮ್ಮ ಮೊಬೈಲ್‌ ನಂಬರ್ ನಮೂದಿಸಿ ಒಟಿಪಿ ದಾಖಲಿಸಿಕೊಂಡು ಎಂಸಿಕ್ಯೂ ಪ್ರಶ್ನಾವಳಿಗೆ ಉತ್ತರಿಸಬಹುದು.

ಪರೀಕ್ಷಾ ಪೇ ಚರ್ಚಾ 2025; ನೋಂದಾಯಿಸುವುದು ಹೇಗೆ

1) ಪರೀಕ್ಷಾ ಪೇ ಚರ್ಚಾ 2025ಕ್ಕೆ ಸಂಬಂಧಿಸಿದ ಅಧಿಕೃತ ವೆಬ್‌ತಾಣಕ್ಕೆ ಭೇಟಿ ಕೊಡಿ - https://innovateindia1.mygov.in

2) ಪುಟ ತೆರೆದುಕೊಂಡ ಬಳಿಕ ಅಲ್ಲಿ ಕೆಳಕ್ಕೆ ಬಂದಂತೆ “Participate As” ಎಂಬ ಶೀರ್ಷಿಕೆ ಕೆಳಗೆ ನಾಲ್ಕು ಆಯ್ಕೆಗಳಿವೆ.

  • 6 ರಿಂದ 12ನೇ ತರಗತಿ ವಿದ್ಯಾರ್ಥಿಗಳು ನೇರವಾಗಿ ನೋಂದಣಿ ಮಾಡುವುದಕ್ಕೆ ಇರುವ ನೇರ ಲಿಂಕ್‌ 
  • 6 ರಿಂದ 12ನೇ ತರಗತಿ ವಿದ್ಯಾರ್ಥಿಗಳು ಶಿಕ್ಷಕರ ಮೂಲಕ ನೋಂದಣಿ ಮಾಡಲು ಇರುವ ನೇರ ಲಿಂಕ್
  • ಶಿಕ್ಷಕರು ನೋಂದಣಿ ಮಾಡುವುದಕ್ಕೆ ಇರುವ ನೇರ ಲಿಂಕ್
  • 6 ರಿಂದ 12ನೇ ತರಗತಿಯ ಮಕ್ಕಳ ಪಾಲಕರು ನೋಂದಾಯಿಸುವುದಕ್ಕೆ ಇರುವ ನೇರ ಲಿಂಕ್

3) ಲಿಂಕ್‌ಗಳನ್ನು ಕ್ಲಿಕ್ ಮಾಡಿದ ಕೂಡಲೇ ತೆರೆದುಕೊಳ್ಳುವ ಪುಟದಲ್ಲಿ ಮೊಬೈಲ್ ನಂಬರ್ ನಮೂದಿಸಬೇಕು. ಆಗ ಒಟಿಪಿ ಬರುತ್ತದೆ. ಅದನ್ನು ದಾಖಲಿಸಿದ ಕೂಡಲೇ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ.

4) ಆ ಪುಟದಲ್ಲಿ ಹೆಸರು, ಮೊಬೈಲ್ ಸಂಖ್ಯೆ, ವಿಳಾಸ ಇತ್ಯಾದಿ ವಿವರ ದಾಖಲಿಸಿಬೇಕು. ಬಳಿಕ ಅದರ ಕೆಳಗೆ ಎಂಸಿಕ್ಯೂ ಅಥವಾ ಬಹು ಆಯ್ಕೆಯ ಪ್ರಶ್ನಾವಳಿ ಇದೆ. ಅದರಲ್ಲಿ 5 ಪ್ರಶ್ನೆಗಳಿದ್ದು ಅದಕ್ಕೆ ಉತ್ತರ ಕೊಡಬೇಕು. ಅದಾದ ಬಳಿಕ ಕೆಳಗೆ 500 ಪದಗಳಲ್ಲಿ ಪರೀಕ್ಷೆಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳಿದ್ದರೆ ಅಲ್ಲಿ ದಾಖಲಿಸಬೇಕು. ನಂತರ ಸಬ್‌ಮಿಟ್‌ ಐಕಾನ್ ಕ್ಲಿಕ್ ಮಾಡಬೇಕು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ