logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Covid Updates: ಕೋವಿಡ್‌ ಜೆಎನ್‌ 1 ಉಪತಳಿ ಕರ್ನಾಟಕದಲ್ಲೇ ಅಧಿಕ: 1200 ಪ್ರಕರಣ ದಾಖಲು 215

Covid Updates: ಕೋವಿಡ್‌ ಜೆಎನ್‌ 1 ಉಪತಳಿ ಕರ್ನಾಟಕದಲ್ಲೇ ಅಧಿಕ: 1200 ಪ್ರಕರಣ ದಾಖಲು 215

Umesha Bhatta P H HT Kannada

Jan 14, 2024 02:05 PM IST

ಭಾರತದಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದಿದೆ.

    • Covid News ಭಾರತದಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದಿದೆ. ಆದರೆ ಜೆಎನ್‌ 1 ಪ್ರಕರಣಗಳು 1200 ದಾಟಿದ್ದು, ಇದರಲ್ಲಿ ಕರ್ನಾಟಕದಲ್ಲಿಯೇ ಜೆಎನ್‌ 1 ಉಪತಳಿ ಪ್ರಕರಣ ಹೆಚ್ಚಿವೆ. 
ಭಾರತದಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದಿದೆ.
ಭಾರತದಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದಿದೆ.

ದೆಹಲಿ: ದೇಶದಲ್ಲಿ ಕೋವಿಡ್‌ನ ಉಪತಳಿ ಜೆಎನ್‌ 1 ನ ಪ್ರಕರಣಗಳು ಕರ್ನಾಟಕದಲ್ಲಿಯೇ ಅತ್ಯಧಿಕ ಕಂಡು ಬಂದಿವೆ. ಈವರೆಗೂ ಇಡೀ ದೇಶದಲ್ಲಿ 1200 ಪ್ರಕರಣಗಳು ವರದಿಯಾಗಿದ್ದು. ಹಲವರು ಗುಣಮುಖರಾಗಿದ್ದಾರೆ. ಹತ್ತು ರಾಜ್ಯಗಳಲ್ಲಿ ಇದ್ದ ಜೆಎನ್‌ 1ನ ಪ್ರಕರಣಗಳು 17 ರಾಜ್ಯಗಳಿಗೆ ವಿಸ್ತರಣೆಯಾಗಿದೆ. ಹೊಸದಾಗಿ ಈಶಾನ್ಯ ರಾಜಗಳಲ್ಲಿ ಒಂದಾದ ನಾಗಾಲ್ಯಾಂಡ್‌ನಲ್ಲೂ ಜೆಎನ್‌ 1 ಪ್ರಕರಣ ಕಂಡು ಬಂದಿದೆ.

ಟ್ರೆಂಡಿಂಗ್​ ಸುದ್ದಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

ಸುಮಾರು ಒಂದೂವರೆ ತಿಂಗಳಿನಿಂದ ಭಾರತದ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ಜೆಎನ್‌ 1 ತಳಿ ಕಾಣಿಸಿಕೊಂಡಿದ್ದು. ಕಲವರು ಮೃತಪಟ್ಟಿದ್ದಾರೆ. ಈ ಪ್ರಕರಣಗಳ ಸಂಖ್ಯೆ ಭಾರತದಲ್ಲಿ ಏರಿಕೆಯಾಗಿದ್ದು. ಈವರೆಗೂ 1,200 ಪ್ರಕರಣಗಳು ಕಂಡು ಬಂದಿವೆ ಇಂಡಿಯನ್‌ ಸಾರ್ಸ್‌ ಕೋವಿಡ್‌-2 ಜಿನೋಮಿಕ್ಸ್‌ ಇನ್ಸೋರ್ಟಿಯಮ್‌ (INSACOG) ತನ್ನ ವರದಿಯಲ್ಲಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮುನ್ನೆಚ್ಚರಿಕೆಯನ್ನು ವಹಿಸಿದ್ದು, ಎಲ್ಲಾ ರಾಜ್ಯಗಳ ಆರೋಗ್ಯ ಇಲಾಖೆಗಳು ಗಮನ ಹರಿಸಬೇಕು. ಪ್ರಕರಣ ಅಧಿಕ ಇರುವ ಭಾಗದಲ್ಲಿ ಜಾಗೃತಿ ಸೇರಿದಂತೆ ಮುಂಜಾಗ್ರತ ಕ್ರಮ ವಹಿಸಬೇಕು ಎಂದು ಸೂಚನೆಗಳನ್ನು ನೀಡಲಾಗಿದೆ.

ಜೆಎನ್‌ 1 ತಳಿಯ ಪ್ರಕರಣಗಳಲ್ಲಿ ಕರ್ನಾಟಕದಲ್ಲಿಯೇ ಅತ್ಯಧಿಕ ಮಂದಿಗೆ ಸೋಂಕು ತಗುಲಿರುವುದು ಕಂಡು ಬಂದಿದೆ. ಈವರೆಗೂ ಕರ್ನಾಟಕದಲ್ಲಿ 215 ಮಂದಿಗೆ ಜೆಎನ್‌ 1 ಸೋಂಕು ತಗುಲಿದೆ. ಮಹಾರಾಷ್ಟ್ರ ಹಾಗೂ ಕೇರಳವನ್ನು ಹಿಂದಿಕ್ಕಿ ಈಗ ಆಂಧ್ರಪ್ರದೇಶದಲ್ಲೂ ಈ ಪ್ರಕರಣಗಳು ಹೆಚ್ಚಾಗಿವೆ. ಆಂಧ್ರಪ್ರದೇಶದಲ್ಲಿ (189), ಮಹಾರಾಷ್ಟ್ರ (170), ಕೇರಳ (154), ಪಶ್ಚಿಮ ಬಂಗಾಲ (96), ಗೋವಾ (90), ತಮಿಳುನಾಡು (88), ಗುಜರಾತ್ (76),ತೆಲಂಗಾಣ ಹಾಗೂ ರಾಜಸ್ಥಾನ ತಲಾ (32), ಛತ್ತೀಸಗಢ (25), ದೆಹಲಿ (16(, ಉತ್ತರ ಪ್ರದೇಶದಲ್ಲಿ ಏಳು, ಹರಿಯಾಣದಲ್ಲಿ ಐದು, ಒಡಿಶಾದಲ್ಲಿ ಮೂರು, ಉತ್ತರಾಖಂಡ ಹಾಗಾ ನಾಗಾಲ್ಯಾಂಡ್‌ನಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ ಎಂದು ಪಿಟಿಐ ವರದಿ ಮಾಡಿದೆ.

ಭಾರತ ಮಾತ್ರವಲ್ಲದೇ ಹಲವು ದೇಶಗಳಲ್ಲೂ ಜೆಎನ್‌ 1 ಪ್ರಕರಣಗಳು ಹೆಚ್ಚಾಗಿವೆ. ಈ ತಳಿ ಬೇಗನೇ ಹರಡಿದರೂ ಅಷ್ಟಾಗಿ ಹಾನಿ ಮಾಡದು. ಯಾರೂ ಆತಂಕಕ್ಕೆ ಒಳಗಾಗುವ ಪ್ರಮೇಯವಿಲ್ಲ. ಹಾಗೆಂದು ನಿರ್ಲಕ್ಷ್ಯ ಮಾಡಬಾರದು ಎನ್ನುವುದು ಆರೋಗ್ಯ ಇಲಾಖೆಯ ಸಲಹೆ.

ಕೋವಿಡ್‌ ಪ್ರಕರಣ ಇಳಿಕೆ

ಭಾರತದಲ್ಲಿ ಕೋವಿಡ್‌ ಸಕ್ರಿಯ ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದಿದೆ. 24 ಗಂಟೆ ಅವಧಿಯೊಳಗೆ ಹೊಸದಾಗಿ 395 ಪ್ರಕರಣಗಳು ಕಂಡಿದ್ದು. ಇಬ್ಬರು ಮೃತಪಟ್ಟಿದ್ದಾರೆ.

ಈಗಲೂ ಭಾರತದಲ್ಲಿ 3,075 ಕೋವಿಡ್‌ ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ ಮಹಾರಾಷ್ಟ್ರದಲ್ಲಿಯೇ ಅತ್ಯಧಿಕ 86 ಪ್ರಕರಣಗಳು ಒಂದೇ ದಿನದಲ್ಲಿ ವರದಿಯಾಗಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ