logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Monsoon 2023: ಕರ್ನಾಟಕದಲ್ಲಿ ಎಂದಿನಿಂದ ಮುಂಗಾರು ಮಳೆ ಆರಂಭ? ಮಳೆಯ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಹವಾಮಾನ ಇಲಾಖೆ

Monsoon 2023: ಕರ್ನಾಟಕದಲ್ಲಿ ಎಂದಿನಿಂದ ಮುಂಗಾರು ಮಳೆ ಆರಂಭ? ಮಳೆಯ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಹವಾಮಾನ ಇಲಾಖೆ

Praveen Chandra B HT Kannada

Jun 05, 2023 01:57 PM IST

Monsoon 2023: ಕರ್ನಾಟಕದಲ್ಲಿ ಎಂದಿನಿಂದ ಮುಂಗಾರು ಮಳೆ ಆರಂಭ? ಮಳೆಯ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಹವಾಮಾನ ಇಲಾಖೆ

    • Karnataka Rains: ಭಾರತೀಯ ಹವಾಮಾನ ಇಲಾಖೆಯು(IMD)ಕೇರಳಕ್ಕೆ ಮುಂಗಾರು ಆಗಮನದ ಕುರಿತು ಮಹತ್ವದ ಮಾಹಿತಿ ಬಿಡುಗಡೆ ಮಾಡಿದೆ. ಜೂನ್‌ 7ರಂದು ಕೇರಳಕ್ಕೆ ಮುಂಗಾರು ಮಳೆ ಪ್ರವೇಶಿಸಲಿದ್ದು, ಬಳಿಕ ಕರ್ನಾಟಕಕ್ಕೂ ಮಾನ್ಸೂನ್‌ ಮಳೆ ಆಗಮಿಸಲಿದೆ.
Monsoon 2023: ಕರ್ನಾಟಕದಲ್ಲಿ ಎಂದಿನಿಂದ ಮುಂಗಾರು ಮಳೆ ಆರಂಭ? ಮಳೆಯ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಹವಾಮಾನ ಇಲಾಖೆ
Monsoon 2023: ಕರ್ನಾಟಕದಲ್ಲಿ ಎಂದಿನಿಂದ ಮುಂಗಾರು ಮಳೆ ಆರಂಭ? ಮಳೆಯ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಹವಾಮಾನ ಇಲಾಖೆ

ಬೆಂಗಳೂರು: ಮುಂಗಾರು ಮಳೆ ಪ್ರವೇಶ ( Monsoon)ಕ್ಕೆ ಕುರಿತಂತೆ ಹವಾಮಾನ ಇಲಾಖೆಯು ಮಹತ್ವದ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಕೇರಳಕ್ಕೆ ಈ ಬಾರಿ ಮುಂಗಾರು ಮಳೆ ಪ್ರವೇಶ ಮೂರರಿಂದ ನಾಲ್ಕು ದಿನಗಳ ಕಾಲ ವಿಳಂಬವಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ. ಹೀಗಾಗಿ ಕರ್ನಾಟಕಕ್ಕೆ ಮುಂಗಾರು ಮಳೆ ವಿಳಂಬವಾಗಲಿದೆ. ಜೂನ್‌ 4ರಂದು ಮುಂಗಾರು ಮಳೆಯು ಕೇರಳ ಪ್ರವೇಶಿಸಲಿದೆ ಎಂದು ಈ ಹಿಂದೆ ಮುನ್ಸೂಚನೆ ನೀಡಲಾಗಿತ್ತು. ಇದೀಗ ಐಎಂಡಿ ನೀಡಿರುವ ಅಪ್‌ಡೇಟ್‌ ಪ್ರಕಾರ ಜೂನ್‌ 7ರಂದು ಕೇರಳಕ್ಕೆ ಮುಂಗಾರು ಮಳೆ ಪ್ರವೇಶವಾಗಲಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ಭಾರತದ ಅತಿದೊಡ್ಡ ಬಜಾಜ್ ಪಲ್ಸರ್‌ ಮಾರುಕಟ್ಟೆಗೆ; ಪಲ್ಸರ್ NS400Z ಬೈಕ್‌ ದರ 1.85 ಲಕ್ಷ ರೂ, ವಿನ್ಯಾಸ ವಿಶೇಷ ವಿವರ ಹೀಗಿದೆ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

ಸಾಮಾನ್ಯವಾಗಿ ಜೂನ್‌ ಆರಂಭದಲ್ಲಿಯೇ ಕೇರಳಕ್ಕೆ ಮುಂಗಾರು ಮಳೆ ಆಗಮನವಾಗುತ್ತಿತ್ತು. ಆದರೆ, ಈ ಬಾರಿ ಸುಮಾರು ಏಳು ದಿನ ತಡವಾಗಿ ಮುಂಗಾರು ಮಳೆಯ ಆಗಮನವಾಗಲಿದೆ. ಕರ್ನಾಟಕಕ್ಕೆ ಮುಂಗಾರು ಮಳೆ ಪ್ರವೇಶಿಸಲು ಕೇರಳವು ಮೊದಲ ಮೆಟ್ಟಿಲಾಗಿದೆ. ಕೇರಳಕ್ಕೆ ಮುಂಗಾರು ಮಳೆ ಪ್ರವೇಶಿಸಿ ಬಳಿಕ ಕರ್ನಾಟಕಕ್ಕೆ ಆಗಮಿಸುತ್ತದೆ.

ದಕ್ಷಿಣ ಅರೇಬಿಯನ್ ಸಮುದ್ರದ ಮೇಲೆ ಪಶ್ಚಿಮ ಮಾರುತಗಳ ಪ್ರಭಾವ ಹೆಚ್ಚಾಗುತ್ತಿದೆ. ಮುಂಗಾರು ಮಳೆಯ ಆಗಮನಕ್ಕೆ ಪರಿಸ್ಥಿತಿಗಳು ಅನುಕೂಲಕರವಾಗುತ್ತಿವೆ. ಅಲ್ಲದೆ, ಪಶ್ಚಿಮ ಮಾರುತಗಳ ಆಳವು ಕ್ರಮೇಣ ಹೆಚ್ಚಾಗುತ್ತಿದೆ. ಸಮುದ್ರ ಮಟ್ಟಕ್ಕಿಂತ 2 ಕಿ.ಮೀ. ಎತ್ತರದವರೆಗೆ ಪಶ್ಚಿಮಾಭಿಮುಖವಾಗಿ ಮಾರುತಗಳು ಬೀಸುತ್ತಿವೆ. ಅರಬ್ಬಿ ಸಮುದ್ರದ ಮೇಲೆ ಮೋಡಗಳು ದಟ್ಟವಾಗುತ್ತಿವೆ ಎಂದು ಐಎಂಡಿ ಮಾಹಿತಿ ನೀಡಿದೆ.

ಕೇರಳಕ್ಕೆ ಮುಂಗಾರು ಆಗಮಿಸಿದ ಬಳಿಕ ಕರ್ನಾಟಕಕ್ಕೂ ಆಗಮಿಸುತ್ತದೆ. ಮುಖ್ಯವಾಗಿ ಕೇರಳ ಗಡಿಭಾಗದ ಜಿಲ್ಲೆಗಳಿಗೆ ಮುಂಗಾರು ಮಳೆಯ ಹೊಡೆತ ಹೆಚ್ಚಿರುತ್ತದೆ. ಬಳಿಕ ರಾಜ್ಯವ್ಯಾಪಿ ಮಳೆಯ ನಿರೀಕ್ಷೆಯಿದೆ. ಈಗಾಗಲೇ ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆಯಿಲ್ಲದೆ ಕೃಷಿಕರು ಕಂಗಾಲಾಗಿದ್ದಾರೆ. ಇತ್ತೀಚಿನ ಅಕಾಲಿಕ ಮಳೆಯು ಕೆಲವು ಕಡೆ ತಂಪೆರೆದಿದೆ. ಈ ಬಾರಿ ಮುಂಗಾರು ಮಳೆಯಲ್ಲಿ ವ್ಯತ್ಯಯವಾಗದು ಎಂದು ಈಗಾಗಲೇ ಹವಾಮಾನ ಇಲಾಖೆ ಶುಭ ಸುದ್ದಿ ನೀಡಿದೆ. ಈ ಕುರಿತ ವರದಿ ಇಲ್ಲಿದೆ.

ಆಗ್ನೇಯ ಮುಂಗಾರು ಕಳೆದ ವರ್ಷ ಮೇ 29 ರಂದು ಆಗಮಿಸಿತ್ತು. 2021 ರಲ್ಲಿ ಜೂನ್ 3 ರಂದು, 2020 ರಲ್ಲಿ ಜೂನ್ 1 ರಂದು, 2019 ರಲ್ಲಿ ಜೂನ್ 8 ರಂದು ಮತ್ತು 2018 ರಲ್ಲಿ ಮೇ 29 ರಂದು ದಕ್ಷಿಣ ರಾಜ್ಯವಾದ ಕೇರಳಕ್ಕೆ ಆಗಮಿಸಿತ್ತು.

ಈ ಬಾರಿ ವಾಯುವ್ಯ ಭಾರತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯಿದೆ.

ಪೂರ್ವ ಮತ್ತು ಈಶಾನ್ಯ, ಮಧ್ಯ ಮತ್ತು ದಕ್ಷಿಣ ಪರ್ಯಾಯ ದ್ವೀಪದಲ್ಲಿ ದೀರ್ಘಾವಧಿಯ ಸರಾಸರಿ 87 ಸೆಂಟಿಮೀಟರ್‌ಗಳಲ್ಲಿ ಶೇಕಡ 94-106 ದಷ್ಟು ಸಾಮಾನ್ಯ ಮಳೆಯಾಗುವ ನಿರೀಕ್ಷೆಯಿದೆ. ದೀರ್ಘಾವಧಿಯ ಸರಾಸರಿಯಲ್ಲಿ ಶೇಕಡಾ 90 ಕ್ಕಿಂತ ಕಡಿಮೆ ಮಳೆಯಾದರೆ ಅದನ್ನು 'ಕೊರತೆ' ಎಂದು ಪರಿಗಣಿಸಲಾಗುತ್ತದೆ. ಶೇಕಡ 90 ಮತ್ತು ಶೇಕಡ 95 ನಡುವೆ ಮಳೆಯಾದರೆ ಅದನ್ನು 'ಸಾಮಾನ್ಯಕ್ಕಿಂತ ಕಡಿಮೆ' ಎಂದು ವ್ಯಾಖ್ಯಾನಿಸಲಾಗುತ್ತದೆ. ಇದೇ ರೀತಿ, ಶೇಕಡ 105 ಮತ್ತು 110 ನಡುವೆ ಮಳೆಯಾದರೆ ಅದನ್ನು 'ಸಾಮಾನ್ಯಕ್ಕಿಂತ ಹೆಚ್ಚು' ಮತ್ತು 100 ಕ್ಕಿಂತ ಹೆಚ್ಚು ಮಳೆಯಾದರೆ ಅದನ್ನು 'ಹೆಚ್ಚುವರಿ' ಮಳೆ ಎಂದು ಕರೆಯಲಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು