logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Jharkhand Results: ಜಾರ್ಖಂಡ್‌ ಚುನಾವಣೆಯಲ್ಲಿ ಜೆಎಂಎಂ ಮುನ್ನಡೆಗೆ ಮೈಯಾ ಸಮ್ಮಾನ್ ಯೋಜನೆ ಸಾಥ್‌, ಮಹಿಳಾ ಮತದಾರರು ಖುಷ್‌

Jharkhand Results: ಜಾರ್ಖಂಡ್‌ ಚುನಾವಣೆಯಲ್ಲಿ ಜೆಎಂಎಂ ಮುನ್ನಡೆಗೆ ಮೈಯಾ ಸಮ್ಮಾನ್ ಯೋಜನೆ ಸಾಥ್‌, ಮಹಿಳಾ ಮತದಾರರು ಖುಷ್‌

Reshma HT Kannada

Nov 23, 2024 12:30 PM IST

google News

ಜೆಜೆಎಂ ಪಕ್ಷದ ಗೆಲುವಿಗೆ ಅಸ್ತ್ರವಾಗುತ್ತಾ ಮೈಯಾ ಸಮ್ಮಾನ್ ಯೋಜನೆ?

  • Jharkhand Election Results: ಜಾರ್ಖಂಡ್ ಚುನಾವಣಾ ಫಲಿತಾಂಶ 2024ರ ಸದ್ಯದ ಸ್ಥಿತಿಯ ಪ್ರಕಾರ ಜೆಎಂಎಂ ನೇತೃತ್ವದ ಇಂಡಿಯಾ ಬ್ಲಾಕ್ ಮುಂಚೂಣಿಯಲ್ಲಿದ್ದು, ಬಿಜೆಪಿ ಹಿನ್ನೆಡೆ ಸಾಧಿಸಿದೆ. ಜೆಜೆಎಂ ಗೆಲುವಿಗೆ ಮೈಯಾ ಸಮ್ಮಾನ್ ಯೋಜನೆ ಅಸ್ತ್ರವಾಯ್ತು ಎಂಬ ಮಾತುಗಳು ಇದೀಗ ಕೇಳಿ ಬರುತ್ತಿದೆ. 

 ಜೆಜೆಎಂ ಪಕ್ಷದ ಗೆಲುವಿಗೆ ಅಸ್ತ್ರವಾಗುತ್ತಾ ಮೈಯಾ ಸಮ್ಮಾನ್ ಯೋಜನೆ?
ಜೆಜೆಎಂ ಪಕ್ಷದ ಗೆಲುವಿಗೆ ಅಸ್ತ್ರವಾಗುತ್ತಾ ಮೈಯಾ ಸಮ್ಮಾನ್ ಯೋಜನೆ?

Jharkhand Election Results: ಬುಡಕಟ್ಟು ಪ್ರಾಬಲ್ಯ ಇರುವ ಜಾರ್ಖಂಡ್‌ ರಾಜ್ಯದ 6ನೇ ವಿಧಾಸಭಾ ಚುನಾವಣೆಯಲ್ಲಿ ಜೆಎಂಎಂ ನೇತೃತ್ವದ ಇಂಡಿಯಾ ಬ್ಲಾಕ್ ಅಧಿಕಾರ ಬರುವ ಸಾಧ್ಯತೆ ಗೋಚರವಾಗುತ್ತಿದೆ. ಈಗಾಗಲೇ ಜಾರ್ಖಂಡ್‌ನಲ್ಲಿ ಜೆಜೆಎಂ ಪಕ್ಷ ಆಡಳಿತ ನಡೆಸುತ್ತಿದೆ. ಈ ಬಾರಿ ಬಿಜೆಪಿ ಪಕ್ಷವು ಗೆಲುವಿನ ಪತಾಕೆ ಹಾರಿಸಬಹುದು ಎಂದು ಅಂದಾಜಿಸಲಾಗಿತ್ತು, ಎಕ್ಸಿಟ್‌ ಪೋಲ್ ಫಲಿತಾಂಶಗಳು ಬಿಜೆಪಿ ಪರವಾಗಿದ್ದವು. ಆದರೆ ಇಂದಿನ ಫಲಿತಾಂಶ ಲೆಕ್ಕಾಚಾರ ನೋಡುವುದಾದರೆ ಬಿಜೆಪಿ ಹಿನ್ನಡೆ ಸಾಧಿಸಿದೆ.

ಜೆಎಂಎಂ ಮುನ್ನಡೆ ಸಾಧಿಸಲು ಮೈಯಾ ಸಮ್ಮಾನ್ ಎನ್ನುವ ಯೋಜನೆ ಕಾರಣ ಎಂದು ಹೇಳಲಾಗುತ್ತಿದೆ. ಇದು ಮಹಿಳೆಯರಿಗೆ ಸಂಬಂಧಿಸಿದ ಯೋಜನೆಯಾಗಿದ್ದು ನೇರವಾಗಿ ಇದರ ಪ್ರಯೋಜನಗಳನ್ನು ಮಹಿಳೆಯರು ಪಡೆಯುತ್ತಾರೆ.

ಜಾರ್ಖಂಡ್‌ನ 81 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಎಂಎಂ (ಜಾರ್ಖಂಡ್ ಮುಕ್ತಿ ಮೋರ್ಚಾ) ನೇತೃತ್ವದ ಇಂಡಿಯಾ ಒಕ್ಕೂಟ 51ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ಚುನಾವಣಾ ಆಯೋಗದ ವೆಬ್‌ಸೈಟ್ ತೋರಿಸುತ್ತದೆ.

ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಮೈತ್ರಿಕೂಟ 28 ಸ್ಥಾನಗಳಲ್ಲಿ ಮುಂದಿದೆ. ಎಣಿಕೆಯಾದ ಸುಮಾರು ಶೇ 15 ಮತಗಳಿಗೆ ಜೆಎಂಎಂ ನೇತೃತ್ವದ ಮೈತ್ರಿಕೂಟವು ಶೇ 43.8 ಮತ್ತು ಬಿಜೆಪಿ ನೇತೃತ್ವದ ಮೈತ್ರಿಕೂಟ ಶೇ 37.2 ರಷ್ಟು ಮತಗಳನ್ನು ಹೊಂದಿದೆ.

ಬಿಜೆಪಿ ಈ ಬಾರಿ ಜಾರ್ಖಂಡ್‌ನಲ್ಲಿ ಮತದಾರರನ್ನು ಸೆಳೆಯಲು ಸಲುವಾಗಿ ಸಾಕಷ್ಟು ಪ್ರಚಾರ ಕಾರ್ಯ ಮಾಡಿದ್ದರೂ ಕೂಡ ಗೆಲುವಿನ ಹಾದಿ ಹಿಡಿಯುವುದು ಕಷ್ಟವಾಗಿದೆ. ಬುಡಕಟ್ಟು-ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಸಂತಾಲ್ ಪರಗಣ ಕ್ಷೇತ್ರದಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ.

ಟ್ರೆಂಡ್‌ಗಳ ಪ್ರಕಾರ, ಮಾಜಿ ಮುಖ್ಯಮಂತ್ರಿ ಅರ್ಜುನ್ ಮುಂಡಾ ಅವರ ಪತ್ನಿ ಮೀರಾ ಮುಂಡಾ 11,000 ಮತಗಳಿಂದ ಮುನ್ನಡೆ ಸಾಧಿಸಿದ ಪೋಟ್ಕಾದಂತಹ ಕೆಲವು ಸ್ಥಾನಗಳನ್ನು ಹೊರತುಪಡಿಸಿ ಗ್ರಾಮೀಣ ಪ್ರದೇಶಗಳಲ್ಲಿ ಬಿಜೆಪಿ ಕಳಪೆ ಪ್ರದರ್ಶನ ತೋರಿದೆ.

ಚುನಾವಣೆಗೆ ವಾರಗಳ ಮೊದಲು ಜೆಎಂಎಂ ತೊರೆದು ಬಿಜೆಪಿ ಸೇರಿದ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್, ಸರೈಕೆಲಾದಲ್ಲಿ ಅವರ ಹಿಂದಿನ ಪಕ್ಷದ ಗಣೇಶ್ ಮಹಾಲಿ ಅವರೊಂದಿಗೆ ನೆಕ್‌ ಟು ನೆಕ್ ಫೈಟ್ ಹೊಂದಿದ್ದಾರೆ.

ಈ ಫೆಬ್ರವರಿಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಗೀತಾ ಕೋಡಾ ಅವರು ಜಗನ್ನಾಥಪುರದಲ್ಲಿ ಕಾಂಗ್ರೆಸ್‌ನ ಸೋನಾ ರಾಮ್ ಸಿಂಕು ಅವರ ವಿರುದ್ಧ 4,000 ಕ್ಕೂ ಹೆಚ್ಚು ಮತಗಳಿಂದ ಹಿನ್ನಡೆಯಲ್ಲಿದ್ದಾರೆ.

ಜೆಜೆಎಂ ಪಕ್ಷದ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಅವರ ಪತ್ನಿ ಕಲ್ಪನಾ ಸೊರೆನ್ ತಮ್ಮ ಪ್ರತಿಸ್ಪರ್ಧಿಗಳಿಗಿಂತ ಮುಂದಿದ್ದರೆ, ಹೇಮಂತ್ ಅವರ ಸಹೋದರ ಬಸಂತ್ ಸಂತಾಲ್ ಪರಗಣದಲ್ಲಿ ಪಕ್ಷದ ಭದ್ರಕೋಟೆಯಾದ ದುಮ್ಕಾದಿಂದ ಹಿಂದುಳಿದಿದ್ದಾರೆ.

ಜೆಎಂಎಂ ತಾನು ಸ್ಪರ್ಧಿಸಿದ್ದ 43 ಸ್ಥಾನಗಳಲ್ಲಿ 29ರಲ್ಲಿ ಮುಂದಿದೆ, ಅದರ ಮಿತ್ರಪಕ್ಷ ಕಾಂಗ್ರೆಸ್ 29 ಸ್ಥಾನಗಳಲ್ಲಿ 14ರಲ್ಲಿ, ಆರ್‌ಜೆಡಿ ಸ್ಪರ್ಧಿಸಿದ ಆರು ಸ್ಥಾನಗಳಲ್ಲಿ ಐದರಲ್ಲಿ ಮತ್ತು ಸಿಪಿಐ (ಎಂಎಲ್) ಮೂರು ಸ್ಥಾನಗಳಲ್ಲಿ ಎರಡರಲ್ಲಿ ಮುಂದಿದೆ.

81 ವಿಧಾನಸಭಾ ಸ್ಥಾನಗಳಲ್ಲಿ ಸುಮಾರು 47 ಸ್ಥಾನಗಳಲ್ಲಿ ಅಧಿಕಾರ ಹೊಂದಿರುವ ಜೆಎಂಎಂನ ಬುಡಕಟ್ಟು-ಮುಸ್ಲಿಂ ಮತಬ್ಯಾಂಕ್ ಅನ್ನು ಸೆಳೆಯಲು ಬಿಜೆಪಿ ವಿಫಲವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

ಕಲ್ಪನಾ ಸೊರೆನ್ ಅವರು ತಮ್ಮ ಪಕ್ಷದ ಕಾರ್ಯಕ್ಷಮತೆಗೆ ಪ್ರಮುಖ ಅಂಶವಾಗಿದ್ದರು, ಮಹಿಳಾ ಮತದಾರರೊಂದಿಗೆ ಗಮನಾರ್ಹ ಮುನ್ನಡೆ ಸಾಧಿಸಿದರು ಮತ್ತು ಮೈಯಾ ಸಮ್ಮಾನ್ ಯೋಜನೆಯನ್ನು ಬಗ್ಗೆ ಆಕೆ ತಮ್ಮ ಪ್ರಚಾರಗಳಲ್ಲಿ ಒತ್ತಿ ಹೇಳಿದ್ದರು.

81 ವಿಧಾನಸಭಾ ಸ್ಥಾನಗಳಲ್ಲಿ, 68 ರಲ್ಲಿ ಮಹಿಳಾ ಮತದಾರರು ಪುರುಷರಿಗಿಂತ ಹೆಚ್ಚಿದ್ದಾರೆ ಮತ್ತು ಒಟ್ಟಾರೆ ಮಹಿಳೆಯರ ಮತದಾನದ ಶೇಕಡಾವಾರು ಪ್ರಮಾಣವು ಪುರುಷರಿಗಿಂತ ಹೆಚ್ಚಾಗಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ