ಜಾರ್ಖಂಡ್ ಫಲಿತಾಂಶ: ಬರ್ಹೈತ್‌ನಲ್ಲಿ ಮುನ್ನಡೆ ಕಾಯ್ದುಕೊಂಡ ಸಿಎಂ ಹೇಮಂತ್ ಸೊರೆನ್; ಪ್ರಮುಖ ಅಭ್ಯರ್ಥಿಗಳಲ್ಲಿ ಯಾರಿಗೆ ಹಿನ್ನಡೆ–ಮುನ್ನಡೆ
Jharkhand Election Results: ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಿದ್ದು, ಸದ್ಯ ಎನ್‌ಡಿ ಹಾಗೂ ಇಂಡಿಯಾ ಒಕ್ಕೂಟಗಳ ನಡುವೆ ತೀವ್ರ ಪೈಪೋಟಿ ಎದುರಾಗಿದೆ. ಮುಖ್ಯಮಂತ್ರಿ ಹೇಮಂತ್ ಸೊರೆನ್ ಬರ್ಹೈತ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಯಾವೆಲ್ಲಾ ಪ್ರಮುಖ ಅಭ್ಯರ್ಥಿಗಳು ಮುನ್ನಡೆ, ಹಿನ್ನಡೆ ಸಾಧಿಸಿದ್ದಾರೆ ನೋಡಿ.
Jharkhand Election Results: ಜಾರ್ಖಂಡ್ ವಿಧಾನಸಭಾ ಚುನಾವಣೆ 2024ರ ಮತ ಎಣಿಕೆ ನಡೆಯುತ್ತಿದ್ದು, ಇಂಡಿಯಾ ಒಕ್ಕೂಟ ಹಾಗೂ ಎನ್‌ಡಿಎ ನಡುವೆ ತೀವ್ರ ಪೈಪೋಟಿ ಎದುರಾಗಿದೆ. ಈ ನಡುವೆ ಕೆಲವು ಪ್ರಮುಖ ಅಭ್ಯರ್ಥಿಗಳ ಮುನ್ನಡೆ ಸಾಧಿಸಿದ್ದಾರೆ. ಬರ್ಹೈತ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬರ್ಹೈತ್‌ನಲ್ಲಿ ಹೇಮಂತ್ ಸೊರೆನ್ ಬಿಜೆಪಿಯ ಗಮ್ಲಿಯೆಲ್ ಹೆಂಬ್ರೋಮ್ ವಿರುದ್ಧ ತಮ್ಮ ಸ್ಥಾನವನ್ನು ಗಟ್ಟಿಗೊಳಿಸುವ ಗುರಿ ಹೊಂದಿದ್ದಾರೆ. ಹೇಮಂತ್ ಪತ್ನಿ ಕಲ್ಪನಾ ಗಂಡೇ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ಸೆರೈಕೆಲಾ ಕ್ಷೇತ್ರದಲ್ಲಿ ಮಾಜಿ ಸಿಎಂ ಚಂಪೈ ಸೊರೆನ್ ಮತ್ತು ಜೆಎಂಎಂ ನಾಯಕ ಗಣೇಶ್ ಮಹಾಲಿ ನಡುವೆ ಹಣಾಹಣಿ ನಡೆಯಲಿದೆ. ಘಟ್ಸಿಲಾ ಕ್ಷೇತ್ರದಿಂದ ಸ್ಪರ್ಧಿಸಿರುವ ಸಿಎಂ ಚಂಪೈ ಸೊರೆನ್ ಅವರ ಪುತ್ರ ಹಾಗೂ ಬಿಜೆಪಿ ಅಭ್ಯರ್ಥಿ ಬಾಬುಲಾಲ್ ಸೊರೇನ್ ಹಿನ್ನಡೆಯಲ್ಲಿದ್ದಾರೆ. ಬಿಜೆಪಿಯ ಮುನಿಯಾದೇವಿ ವಿರುದ್ಧ 3000ಕ್ಕೂ ಹೆಚ್ಚು ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಜಾರ್ಖಂಡ್ ಘಟಕದ ಮುಖ್ಯಸ್ಥ ಮತ್ತು ರಾಜ್ಯದ ಮೊದಲ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ ಅವರು ಸಿಪಿಐ (ಎಂಎಲ್) ನ ರಾಜ್‌ಕುಮಾರ್ ಯಾದವ್‌ಗೆ ಸವಾಲು ಹಾಕಲು ಸಿದ್ಧರಾಗಿದ್ದಾರೆ.
ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಿಎಂ ರಘುಬರ್ ದಾಸ್ ಅವರ ಸೊಸೆ ಪೂರ್ಣಿಮಾ ಸಾಹು ಅವರು ಜೆಮ್‌ಶೆಡ್‌ಪುರ ಪೂರ್ವದಿಂದ 8000ಕ್ಕೂ ಹೆಚ್ಚು ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಇವರು ಕಾಂಗ್ರೆಸ್‌ನ ಅಜೋಯ್ ಕುಮಾರ್ ವಿರುದ್ಧ ಸಾಹು ಸ್ಪರ್ಧಿಸಿದ್ದಾರೆ.
ಎನ್‌ಡಿಎ ಅಭ್ಯರ್ಥಿ ಮತ್ತು ಜೆಡಿಯುನ ಸರಯು ರಾಯ್ ಅವರು ಜಮ್‌ಶೆಡ್‌ಪುರ ಪಶ್ಚಿಮದಲ್ಲಿ ಕಾಂಗ್ರೆಸ್‌ನ ಬನ್ನಾ ಗುಪ್ತಾ ವಿರುದ್ಧ 3000 ಕ್ಕೂ ಹೆಚ್ಚು ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಪೋಟ್ಕಾ ಕ್ಷೇತ್ರದಲ್ಲಿ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಅರ್ಜುನ್ ಮುಂಡಾ ಅವರ ಪತ್ನಿ, ಬಿಜೆಪಿ ಅಭ್ಯರ್ಥಿ ಮೀರಾ ಮುಂಡಾ ಅವರು 17,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಅವರು 2019 ರಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ 43110 ಮತಗಳನ್ನು ದಾಖಲಿಸುವ ಮೂಲಕ ಗೆದ್ದಿದ್ದ ಜೆಎಂಎಂನ ಸಂಜೀಬ್ ಸರ್ದಾರ್ ವಿರುದ್ಧ ಸ್ಪರ್ಧಿಸಿದ್ದಾರೆ.
2014 ರಿಂದ ಜಮ್ತಾರಾವನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಇರ್ಫಾನ್ ಅನ್ಸಾರಿ ಕ್ಷೇತ್ರದಲ್ಲಿ 13,000 ಮತಗಳ ಗಮನಾರ್ಹ ಮುನ್ನಡೆ ಗಳಿಸಿದ್ದಾರೆ. ಅನ್ಸಾರಿ ಅವರು ಬಿಜೆಪಿಯ ಸೀತಾ ಮುರ್ಮು ವಿರುದ್ಧ ಸ್ಪರ್ಧಿಸಿದ್ದಾರೆ, ಅವರು ಶಿಬು ಸೊರೆನ್ ಅವರ ಸೊಸೆ ಮತ್ತು ದಿವಂಗತ ದುರ್ಗಾ ಸೋರೆನ್ ಅವರ ಪತ್ನಿ.