logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಜಾರ್ಖಂಡ್‌ನಲ್ಲಿ ಜೆಎಂಎಂ ಗೆಲುವಿಗೆ ಗ್ಯಾರಂಟಿ ಯೋಜನೆಗಳು ಕಾರಣವೇ? ಇಲ್ಲಿದೆ ಇಂಡಿಯಾ ಬ್ಲಾಕ್‌ ಘೋಷಿಸಿದ ಸಪ್ತ ಗ್ಯಾರಂಟಿಗಳ ವಿವರ

ಜಾರ್ಖಂಡ್‌ನಲ್ಲಿ ಜೆಎಂಎಂ ಗೆಲುವಿಗೆ ಗ್ಯಾರಂಟಿ ಯೋಜನೆಗಳು ಕಾರಣವೇ? ಇಲ್ಲಿದೆ ಇಂಡಿಯಾ ಬ್ಲಾಕ್‌ ಘೋಷಿಸಿದ ಸಪ್ತ ಗ್ಯಾರಂಟಿಗಳ ವಿವರ

Reshma HT Kannada

Nov 23, 2024 03:06 PM IST

google News

ಜೆಎಂಎಂ ನೇತೃತ್ವದ ಇಂಡಿಯಾ ಒಕ್ಕೂಟ

    • Jharkhand Election Results: ಜಾರ್ಖಂಡ್‌ ವಿಧಾನಸಭಾ ಚುನಾವಣೆ 2024ರ ಮತ ಎಣಿಕೆ ಅಂತಿಮ ಘಟ್ಟಕ್ಕೆ ತಲುಪಿದ್ದು, ರಾಜ್ಯದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಜೆಎಂಎಂ ನೇತೃತ್ವದ ಇಂಡಿಯಾ ಒಕ್ಕೂಟಕ್ಕೆ ಬಹುತೇಕ ಗೆಲುವು ಖಚಿತವಾಗಿದೆ. ಈ ನಡುವೆ ಇಂಡಿಯಾ ಒಕ್ಕೂಟದ ಗ್ಯಾರಂಟಿ ಯೋಜನೆಗಳು ಪಕ್ಷದ ಕೈ ಹಿಡಿತಾ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.
ಜೆಎಂಎಂ ನೇತೃತ್ವದ ಇಂಡಿಯಾ ಒಕ್ಕೂಟ
ಜೆಎಂಎಂ ನೇತೃತ್ವದ ಇಂಡಿಯಾ ಒಕ್ಕೂಟ

Jharkhand Election Results: ಜಾರ್ಖಂಡ್ ರಾಜ್ಯದ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲು ಕ್ಷಣಗಣನೆ ಆರಂಭವಾಗಿದ್ದು, ಬಹುತೇಕ ರಾಜ್ಯದಲ್ಲಿ ಜೆಎಂಎಂ ನೇತೃತ್ವದ ಇಂಡಿಯಾ ಮೈತ್ರಿಕೂಟ ಗೆಲುವು ಸಾಧಿಸುವುದು ಖಚಿತವಾಗಿದೆ. ಒಟ್ಟು 81 ವಿಧಾನಸಭಾ ಕ್ಷೇತ್ರಗಳಿಗೆ 2 ಹಂತಗಳಲ್ಲಿ ಮತದಾನ ನಡೆದಿತ್ತು. ಇದರಲ್ಲಿ 50ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ ಇಂಡಿಯಾ ಒಕ್ಕೂಟ. ಜಾರ್ಖಂಡ್ ವಿಧಾನಸಭಾ ಕ್ಷೇತ್ರದ 5ನೇ ಅವಧಿಯು ಜನವರಿ 2025ಕ್ಕೆ ಮುಕ್ತಾಯವಾಗಲಿದೆ.

ಹಾಲಿ ಸಿಎಂ ಹೇಮಂತ್ ಸೊರೆನ್ ನೇತೃತ್ವದ ಜೆಎಂಎಂ ಪಕ್ಷ ಮತ್ತೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಈ ನಡುವೆ ಬುಡಕಟ್ಟು ಪ್ರಾಬಲ್ಯದ ಜಾರ್ಖಂಡ್‌ನಲ್ಲಿ ಗ್ಯಾರಂಟಿ ಸ್ಕೀಮ್‌ಗಳು ವರ್ಕೌಟ್ ಆಗಿವೆ ಎಂದು ಹೇಳಲಾಗುತ್ತಿವೆ. ಹೇಮಂತ್ ಸೊರೆನ್ ಅವರ ಜೆಎಂಎಂ ಪಕ್ಷದ ಮೈಯಾ ಸಮ್ಮಾನ್ ಸೇರಿದಂತೆ ಕೆಲವು ಗ್ಯಾರಂಟಿಗಳು ರಾಷ್ಟ್ರೀಯ ಪಕ್ಷ ಬಿಜೆಪಿ ಸೋಲಿಗೆ ಕಾರಣವಾಗಿವೆ ಎಂದು ಹೇಳಲಾಗುತ್ತಿದೆ. ಇಂಡಿಯಾ ಒಕ್ಕೂಟದ ಜೆಎಂಎಂ, ಕಾಂಗ್ರೆಸ್‌, ಆರ್‌ಜೆಡಿ, ಸಿಪಿಐ ಪಕ್ಷಗಳು ಸೇರಿ ಜಾರ್ಖಂಡ್‌ನಲ್ಲಿ ಒಟ್ಟು 7 ಗ್ಯಾರಂಟಿ ಯೋಜನೆಗಳನ್ನ ಘೋಷಿಸಿದ್ದವು.

ಇಂಡಿಯಾ ಒಕ್ಕೂಟ ಘೋಷಿಸಿದ್ದ ಗ್ಯಾರಂಟಿಗಳು ಎಲ್ಲಾ ವರ್ಗದವರನ್ನು ಗಮನದಲ್ಲಿಟ್ಟುಕೊಂಡಂತೆ ಕಾಣುತ್ತದೆ. ಇದರಲ್ಲಿ ಮೈಯಾ ಸಮ್ಮಾನ್‌ ಯೋಜನೆಯ ಹಣವನ್ನು 1000 ದಿಂದ 2500ಕ್ಕೆ ಹೆಚ್ಚಳ ಮಾಡಿರುವುದು ಮಹಿಳಾ ಮತದಾರರು ಖುಷಿ ಪಡಲು ಕಾರಣವಾಗಿದೆ. ಮಾತ್ರವಲ್ಲ ಜಾರ್ಖಂಡ್‌ನಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದ್ದು ಮೈಯಾ ಸಮ್ಮಾನ್ ಯೋಜನೆ ಇಂಡಿಯಾ ಒಕ್ಕೂಟಕ್ಕೆ ಪ್ಲಸ್ ಆಗಿದೆ ಎಂಬ ಮಾತು ಕೇಳಿಬರುತ್ತಿದೆ.

ಇಂಡಿಯಾ ಒಕ್ಕೂಟ ಘೋಷಿಸಿದ್ದ 7 ಗ್ಯಾರಂಟಿಗಳು

  • 1932 ಆಧಾರಿತ ಖತಿಯಾನ್ ಗ್ಯಾರಂಟಿ
  • ಸರ್ಣಾ ಧರ್ಮ ಸಂಹಿತೆಯನ್ನು ಜಾರಿಗೊಳಿಸುವುದು
  • ಮೈಯಾ ಸಮ್ಮಾನ್ ಯೋಜನೆ: ಮೈಯಾ ಸಮ್ಮಾನ್ ಯೋಜನೆ ರಾಜ್ಯದಲ್ಲಿ ಮೊದಲಿನಿಂದಲೂ ಜಾರಿಯಲ್ಲಿತ್ತು. ಇದು ಮಾತೆಯರಿಗೆ 1000 ರೂ ನೀಡುವ ಯೋಜನೆಯಾಗಿತ್ತು. ಆದರೆ ಇಂಡಿಯಾ ಒಕ್ಕೂಟ ಈ ಬಾರಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಇದನ್ನು 2,500ರೂಗೆ ಹೆಚ್ಚಳ ಮಾಡುವುದಾಗಿ ಘೋಷಿಸಿತ್ತು.
  • ಮೂರನೆಯದು ‘ಸಾಮಾಜಿಕ ನ್ಯಾಯದ ಖಾತರಿ’. ST - ಶೇ 28, SC - ಶೇ 12, OBC - ಶೇ27 ರಷ್ಟು ಮೀಸಲಾತಿ ನೀಡಲಾಗುವುದಾಗಿ ಜೆಎಂಎಂ ನೇತೃತ್ವದ ಪಕ್ಷಗಳು ಘೋಷಿಸಿದ್ದವು.

    ಇದನ್ನೂ ಓದಿ: Jairam Mahato: ಯಾರು ಈ ಟೈಗರ್‌ ಜೈರಾಮ್‌ ಮಹತೋ? ಜಾರ್ಖಂಡ್‌ ಚುನಾವಣೆ ವೇಳೆ ಹೀರೋ ಆದ ಯುವ ನಾಯಕ
  • ನಾಲ್ಕನೆಯದು- ‘ಆಹಾರ ಭದ್ರತೆ ಗ್ಯಾರಂಟಿ’. ಪ್ರತಿ ವ್ಯಕ್ತಿಗೆ 7 ಕೆಜಿಯಂತೆ ಪಡಿತರ ವಿತರಣೆಯ ಭರವಸೆ.
  • ಐದನೆಯದು- ‘ಉದ್ಯೋಗ ಮತ್ತು ಆರೋಗ್ಯ ಭದ್ರತೆಯ ಖಾತರಿ’. ರಾಜ್ಯದ 10 ಲಕ್ಷದಷ್ಟು ಯುವಕರಿಗೆ ಉದ್ಯೋಗ ಭರವಸೆ, 15ಲಕ್ಷದವರೆಗೆ ಆರೋಗ್ಯ ವಿಮೆ.
  • ಆರನೇ ಯೋಜನೆ ಶಿಕ್ಷಣ ಖಾತರಿ
  • 7ನೇ ಯೋಜನೆ ‘ರೈತ ಕಲ್ಯಾಣ ಖಾತರಿ’. ಎಂಎಸ್‌ಪಿಯನ್ನು 2,400 ರೂ.ನಿಂದ 3,000 ರೂ.ಗೆ ಹೆಚ್ಚಿಸುವುದು.

ಈ ನಡುವೆ ಬಿಪಿಜೆ ಪಕ್ಷವು ತಾವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಕಲ್ಯಾಣ ಯೋಜನೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಪ್ರಾಮಖ್ಯ ನೀಡುವುದಾಗಿ ಹೇಳಿತ್ತು. ಇದರೊಂದಿಗೆ ಮಹಿಳಾ ಸುರಕ್ಷತೆಯ ಬಗ್ಗೆ ಗಮನ ಹರಿಸುವುದಾಗಿ ಬಿಜೆಪಿ ಹೇಳಿತ್ತು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ