ಜಾರ್ಖಂಡ್ ಫಲಿತಾಂಶ: ಜೆಎಂಎಂ ನೇತೃತ್ವದ ಇಂಡಿಯಾ ಒಕ್ಕೂಟಕ್ಕೆ 50 ಸೀಟುಗಳ ಮುನ್ನಡೆ; ಮತ್ತೆ ಸಿಎಂ ಆಗ್ತಾರಾ ಹೇಮಂತ್ ಸೊರೆನ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಜಾರ್ಖಂಡ್ ಫಲಿತಾಂಶ: ಜೆಎಂಎಂ ನೇತೃತ್ವದ ಇಂಡಿಯಾ ಒಕ್ಕೂಟಕ್ಕೆ 50 ಸೀಟುಗಳ ಮುನ್ನಡೆ; ಮತ್ತೆ ಸಿಎಂ ಆಗ್ತಾರಾ ಹೇಮಂತ್ ಸೊರೆನ್

ಜಾರ್ಖಂಡ್ ಫಲಿತಾಂಶ: ಜೆಎಂಎಂ ನೇತೃತ್ವದ ಇಂಡಿಯಾ ಒಕ್ಕೂಟಕ್ಕೆ 50 ಸೀಟುಗಳ ಮುನ್ನಡೆ; ಮತ್ತೆ ಸಿಎಂ ಆಗ್ತಾರಾ ಹೇಮಂತ್ ಸೊರೆನ್

Jharkhand Election Results: ಜಾರ್ಖಂಡ್ ವಿಧಾನಸಭಾ ಚುನಾವಣೆ 2024ರ ಮತ ಎಣಿಕೆ ಅಂತಿಮ ಘಟ್ಟದಲ್ಲಿದ್ದು, ಜೆಎಂಎಂ ನೇತೃತ್ವದ ಇಂಡಿಯಾ ಒಕ್ಕೂಟ 50 ಸೀಟುಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇದೀಗ ಹಾಲಿ ಸಿಎಂ ಹೇಮಂತ್ ಸೊರೆನ್ ಜಾರ್ಖಂಡ್‌ನಲ್ಲಿ ಮತ್ತೆ ಮುಖ್ಯಮಂತ್ರಿಯಾಗ್ತಾರ ಎನ್ನುವ ಪ್ರಶ್ನೆ ಜನರಲ್ಲಿ ಮೂಡಿದೆ.

ಹೇಮಂತ್ ಸೊರೆನ್
ಹೇಮಂತ್ ಸೊರೆನ್

Jharkhand Election Results: ಜಾರ್ಖಂಡ್ ರಾಜ್ಯದ 6ನೇ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಸಾಗುತ್ತಿದ್ದು, ಸದ್ಯದ ಟ್ರೆಂಡ್‌ ಗಮನಿಸಿದರೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ನೇತೃತ್ವದ ಇಂಡಿಯಾ ಒಕ್ಕೂಟ ಮುನ್ನಡೆ ಸಾಧಿಸುವ ಎಲ್ಲಾ ಸಾಧ್ಯತೆಗಳು ಗೋಚರವಾಗುತ್ತಿದೆ. ಇಂಡಿಯಾ ಒಕ್ಕೂಟವು ಈಗಾಗಲೇ 50 ಸ್ಥಾನಗಳಲ್ಲಿ ಮುಂದಿದೆ. ಸೆರೆಕೆಲ್ಲಾ ಕ್ಷೇತ್ರದಿಂದ ಸ್ಪರ್ಧಿಸಿರುವ ಹೇಮಂತ್ ಸೊರೆನ್‌ 8,000 ಮತಗಳ ಅಂತರದಲ್ಲಿ ಮುಂದೆ ಸಾಗಿದ್ದಾರೆ. ರಾಜ್ಯದಲ್ಲಿ ಬಹುತೇಕ ಬಿಜೆಪಿಗೆ ಹಿನ್ನಡೆಯಾಗಲಿದೆ.

ಜಾರ್ಖಂಡ್ ಚುನಾವಣೆಯ ಆರಂಭಿಕ ಟ್ರೆಂಡ್‌ಗಳ ಪ್ರಕಾರ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಭಾರತ 50 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 28 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಈಗಿನ ಟ್ರೆಂಡ್ ಮುಂದುವರಿದು ಜಾರ್ಖಂಡ್ ರಾಜ್ಯದಲ್ಲಿ ಜೆಎಂಎಂ ನೇತೃತ್ವದ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿಯಾಗಿ ಹಾಲಿ ಸಿಎಂ ಆಗಿರುವ ಹೇಮಂತ್ ಸೊರೆನ್ ಅವರೇ ಅಧಿಕಾರ ವಹಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ.

ಒಂದು ವೇಳೆ ಜೆಎಂಎಂ ಪಕ್ಷ ಗೆಲುವು ಸಾಧಿಸಿದರೆ ಮುಂದಿನ 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೆನ್ ಮುಖ್ಯಮಂತ್ರಿಯಾಗಿ ಮುಂದುವರಿಯುವ ಸಾಧ್ಯತೆ ಇದೆ. ಜಾರ್ಖಂಡ್ ವಿಧಾನಸಭೆಯಲ್ಲಿ 41 ಬಹುಮತದ ಸೀಟುಗಳಾಗಿವೆ.

ಎಕ್ಸಿಟ್‌ ಪೋಲ್‌ನಲ್ಲಿ ಬಹುತೇಕ ಮಾಧ್ಯಮಗಳು ಬಿಜೆಪಿಗೆ ಬಹುಮತ ಸಿಗುವ ಸಾಧ್ಯತೆಯನ್ನು ವ್ಯಕ್ತಪಡಿಸಿದ್ದವು. ಆದರೆ ಈಗ ಎಕ್ಸಿಟ್ ಪೋಲ್ ಫಲಿತಾಂಶ ಸುಳ್ಳಾಗಿ ಜೆಎಂಎಂಗೆ ಬಹುಮತ ಸಿಗುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ.

2019ರ ಚುನಾವಣೆಯಲ್ಲಿ ಸ್ಪರ್ಧಿಸಿ ಸಿಎಂ ಆಗಿದ್ದ ಹೇಮಂತ್ ಸೊರೈನ್ ಕೇವಲ ದಿನಗಳಲ್ಲಿ ಭೂ ಹಗರಣದಲ್ಲಿ ಸಿಲುಕಿ ಜೈಲು ಪಾಲಾಗುತ್ತಾರೆ. ಅವರ ನಂತರ ಚಂಪೈ ಸೊರೈನ್ ಮುಖ್ಯಮಂತ್ರಿ ಗುದ್ದುಗೆ ಏರುತ್ತಾರೆ. ಆದರೆ 2024ರ ವಿಧಾನಸಭಾ ಚುನಾವಣೆಗೆ ಕೆಲವು ದಿನಗಳಿರುವಾಗ ಜೆಎಂಎಂ ಪಕ್ಷ ತೊರೆದ ಅವರು ಬಿಜೆಪಿ ಸೇರುತ್ತಾರೆ.

ಜಾರ್ಖಂಡ್ ವಿಧಾನಸಭಾ ಕ್ಷೇತ್ರಕ್ಕೆ ನವೆಂಬರ್ 13 ಹಾಗೂ ನವೆಂಬರ್ 20ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. 2025 ಜನವರಿಯಲ್ಲಿ 5ನೇ ವಿಧಾನಸಭೆಯ ಅವಧಿ ಮುಗಿಯುತ್ತದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.