logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Jharkhand Elections: ಸೊರೆನ್‌ ಕುಟುಂಬದ ಹಿಡಿತ, ಬಿಜೆಪಿ ಬಲದ ನಡುವೆ ಹೋರಾಟದ ಜಾರ್ಖಂಡ್ ವಿಧಾನಸಭೆ ಚುನಾವಣೆ ಕಣದಲ್ಲಿರುವ ಪ್ರಮುಖರು ಯಾರು

Jharkhand Elections: ಸೊರೆನ್‌ ಕುಟುಂಬದ ಹಿಡಿತ, ಬಿಜೆಪಿ ಬಲದ ನಡುವೆ ಹೋರಾಟದ ಜಾರ್ಖಂಡ್ ವಿಧಾನಸಭೆ ಚುನಾವಣೆ ಕಣದಲ್ಲಿರುವ ಪ್ರಮುಖರು ಯಾರು

Umesha Bhatta P H HT Kannada

Nov 20, 2024 05:47 PM IST

google News

ಜಾರ್ಖಂಡ್‌ ವಿಧಾನಸಭೆ ಚುನಾವಣೆ ಶಿಬು ಹೇಮಂತ್‌ ಸೊರೆನ್‌ ಕುಟುಂಬದ ಜತೆಗೆ ಬಿಜೆಪಿಯ ಮೋದಿ ಹಾಗೂ ಬಾಬುಲಾಲ್‌ ಮರಾಂಡಿ ಜೋಡಿ ನಡುವಿನ ಚುನಾವಣೆ ಎನ್ನುವಂತಾಗಿದೆ.

  • Jharkhand Politics: ಜಾರ್ಖಂಡ್‌ ರಾಜ್ಯ ವಿಧಾನಸಭೆಗೆ ಐದು ಬಾರಿ ಚುನಾವಣೆ ನಡೆದಿದ್ದರೂ ಯಾರಿಗೂ ಈವರೆಗೂ ಬಹುಮತ ಬಂದಿಲ್ಲ.ಮಿತ್ರ ಪಕ್ಷಗಳ ಸಹಕಾರದೊಂದಿಗೆ ಅಧಿಕಾರವನ್ನು ಜೆಎಂಎಂ ಹಾಗೂ ಬಿಜೆಪಿ ಪಡೆದಿವೆ. ಈ ಬಾರಿ ಚುನಾವಣೆ ಕಣ ಚಿತ್ರಣ ಹೀಗಿದೆ.

ಜಾರ್ಖಂಡ್‌ ವಿಧಾನಸಭೆ ಚುನಾವಣೆ ಶಿಬು ಹೇಮಂತ್‌ ಸೊರೆನ್‌ ಕುಟುಂಬದ ಜತೆಗೆ ಬಿಜೆಪಿಯ ಮೋದಿ ಹಾಗೂ ಬಾಬುಲಾಲ್‌ ಮರಾಂಡಿ ಜೋಡಿ ನಡುವಿನ ಚುನಾವಣೆ ಎನ್ನುವಂತಾಗಿದೆ.
ಜಾರ್ಖಂಡ್‌ ವಿಧಾನಸಭೆ ಚುನಾವಣೆ ಶಿಬು ಹೇಮಂತ್‌ ಸೊರೆನ್‌ ಕುಟುಂಬದ ಜತೆಗೆ ಬಿಜೆಪಿಯ ಮೋದಿ ಹಾಗೂ ಬಾಬುಲಾಲ್‌ ಮರಾಂಡಿ ಜೋಡಿ ನಡುವಿನ ಚುನಾವಣೆ ಎನ್ನುವಂತಾಗಿದೆ.

ರಾಂಚಿ: ಬಿಹಾರದಿಂದ ಪ್ರತ್ಯೇಕ ರಾಜ್ಯವಾಗಿ ರೂಪುಗೊಂಡರೂ ರಾಜಕೀಯವಾಗಿ ಆ ರಾಜ್ಯದ ಪ್ರಭಾವವನ್ನು ಇನ್ನೂ ಉಳಿಸಿಕೊಂಡಿರುವ ಆದಿವಾಸಿಗಳೊಂದಿಗೆ ಗುಡ್ಡಗಾಡು ಪ್ರದೇಶವನ್ನೇ ಹೆಚ್ಚು ಹೊಂದಿರುವ ಜಾರ್ಖಂಡ್‌ ರಾಜ್ಯ ಸೋರೇನ್‌ ಕುಟುಂಬದ ರಾಜಕೀಯ ಅಸ್ತಿತ್ವದ ತವರು. ಇಲ್ಲಿ ಐದು ಬಾರಿ ವಿಧಾನಸಭೆ ಚುನಾವಣೆ ನಡೆದಿದ್ದರೆ ಯಾರಿಗೂ ಈವರೆಗೂ ಬಹುಮತ ದೊರೆತಿಲ್ಲ. ಮೈತ್ರಿ ಪಕ್ಷಗಳ ಬೆಂಬಲದೊಂದಿಗೆ ಮೂರು ಬಾರಿ ಬಿಜೆಪಿ ಇನ್ನೆರಡು ಬಾರಿ ಜಾರ್ಖಂಡ್‌ ಮುಕ್ತಿ ಮೋರ್ಚಾ ಅಧಿಕಾರ ಹಿಡಿದಿದೆ. ಅದರಲ್ಲೂ ಜಾರ್ಖಂಡ್‌ ರಾಜ್ಯದಲ್ಲಿ ಶಿಬು ಸೋರೇನ್‌ ನೇತೃತ್ವದ ಜಾರ್ಖಂಡ್‌ ಮುಕ್ತಿ ಮೋರ್ಚಾ, ಅವರೊಂದಿಗೆ ಕಾಂಗ್ರೆಸ್‌, ಆರ್‌ಜೆಡಿ ಸಹಿತ ಮಿತ್ರಪಕ್ಷಗಳಿದ್ದರೆ, ಎದುರಾಳಿಯಾಗಿ ಬಿಜೆಪಿ, ಜೆಡಿಯು ಸಹಿತ ಹಲವು ಮಿತ್ರ ಪಕ್ಷಗಳಿವೆ. ಈಗಾಗಲೇ ಜೆಎಂಎಂನ ಕುಟುಂಬ ರಾಜಕಾರಣದ ಪ್ರಭಾವಳಿ, ಭ್ರಷ್ಟಾಚಾರದ ಆರೋಪಗಳಿಗೆ ಸಿಲುಕಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ,.

2000 ರಲ್ಲಿ ಬಿಹಾರದಿಂದ ರಾಜ್ಯವನ್ನು ಪ್ರತ್ಯೇಕಗೊಳಿಸಿದ ನಂತರ ಏಳು ರಾಜಕಾರಣಿಗಳು ಜಾರ್ಖಂಡ್‌ನ ಮುಖ್ಯಮಂತ್ರಿಯಾಗಿದ್ದಾರೆ, ಆದರೆ ಒಬ್ಬರೇ ರಘುಬರ್ ದಾಸ್ ಈ ಸ್ಥಾನದಲ್ಲಿ ನಿರಂತರ ಐದು ವರ್ಷಗಳ ಕಾಲ ಇದ್ದರು. ರಾಜ್ಯದಲ್ಲಿ ಇದುವರೆಗೆ ಆಯ್ಕೆಯಾಗಿರುವ ಐದು ವಿಧಾನಸಭೆಗಳಲ್ಲಿ ಯಾವುದೇ ಪಕ್ಷ ಸ್ವಂತ ಬಹುಮತ ಗಳಿಸಿಲ್ಲ. ಬಿಜೆಪಿ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ರಾಜ್ಯದಲ್ಲಿ ಪ್ರಬಲ ರಾಜಕೀಯ ರಾಜಕೀಯ ಪಕ್ಷಗಳಾಗಿ ಉಳಿದಿದಿದ್ದರೆ ಕಾಂಗ್ರೆಸ್‌ ಸಹಿತ ಇತರ ಪಕ್ಷಗಳ ಅಸ್ತಿತ್ವವೂ ಇದೆ.

ಸೋರೆನ್‌ ಕುಟುಂಬದ ಹಿಡಿತ

ಜಾರ್ಖಂಡ್‌ ಪ್ರತ್ಯೇಕ ರಾಜ್ಯ ಆಗಬೇಕು ಎನ್ನುವ ಹೋರಾಟದ ಮುಂಚೂಣಿಯಲ್ಲಿದ್ದವರು ಪ್ರಮುಖ ಆದಿವಾಸಿ ನಾಯಕ ಶಿಬು ಸೊರೆನ್‌.ನಿರಂತರ ಹೋರಾಟಗಳ ಮೂಲಕವೇ ಬೆಳೆದು ತಮ್ಮದೇ ಪಕ್ಷದೊಂದಿಗೆ ಅಧಿಕಾರ ಹಿಡಿದವರು ಶಿಬು ಸೊರೆನ್‌. ಸಂಸದರಾಗಿ, ಕೇಂದ್ರದಲ್ಲಿ ಸಚಿವರಾಗಿಯೂ ಕೆಲಸ ಮಾಡಿದ ನಂತರ ಜಾರ್ಖಂಡ್‌ನ ಸಿಎಂ ಆಗಿ ಮೂರು ಬಾರಿ ಕೆಲಸ ಮಾಡಿದವರು. ಆದರೆ ಪೂರ್ಣಾವಧಿ ಅಧಿಕಾರ ಅವರಿಗೆ ಸಿಗಲಿಲ್ಲ. 

ಅವರ ನಂತರ ಪುತ್ರ ಹೇಮಂತ್‌ ಸೊರೆನ್‌ ಕೂಡ ಮೂರು ಬಾರಿ ಸಿಎಂ ಆಗಿದ್ದಾರೆ. ಸಿಎಂ ಆಗಿದ್ದಾಗಲೇ ಜೈಲಿಗೆ ಹೋಗಿದ್ದರಿಂದ ಅಧಿಕಾರ ತ್ಯಜಿಸಿ ಈಗ ಮತ್ತೆ ಸಿಎಂ ಆಗಿದ್ದಾರೆ.

 ಅವರ ಜೈಲು ಅವಧಿಯಲ್ಲಿ ಸಿಎಂ ಆಗಿದ್ದ ಚಂಪೈ ಸೊರೆನ್‌ ಪಕ್ಷ ತ್ಯಜಿಸಿ ಬಿಜೆಪಿ ಸೇರಿದ್ದಾರೆ. ಸೊರೆನ್‌ ನಂತರ ಅವರ ಪುತ್ರರು, ಸೊಸೆಯಂದಿರೂ ಶಾಸಕರಾಗಿದ್ದಾರೆ.

ಈ ಬಾರಿಯೂ ಅವರ ಕುಟುಂಬದ ಮೂವರು ಕಣದಲ್ಲಿದ್ದಾರೆ. ಬರ್ಹೈತ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮುಖ್ಯಮಂತ್ರಿ ಹೇಮಂತ್ ಸೊರೆನ್, ಗಂಡೆಯಿಂದ ಅವರ ಪತ್ನಿ ಕಲಾಪನಾ ಸೊರೆನ್ ಮತ್ತು ಅವರ ಸಹೋದರ ಬಸಂತ್ ಸೊರೆನ್ ಪ್ರಮುಖರು. ಬಿಜೆಪಿಯಲ್ಲಿರುವ ಸೊರೆನ್‌ ಸೊಸೆ ಸೀತಾ ಸೊರೆನ್ ಕೂಡ ಕಣದಲ್ಲಿದ್ದಾರೆ.

ಬಿಜೆಪಿ ಭ್ರಷ್ಟಾಚಾರ ಸಂಕಷ್ಟ

ಬಿಜೆಪಿ ಇಲ್ಲಿ ಹೆಚ್ಚು ಅಧಿಕಾರ ಅನುಭವಿಸಿದ ಪಕ್ಷ. ಬಾಬುಲಾಲ್‌ ಮರಾಂಡಿ ಮೊದಲ ಸಿಎಂ. ಆನಂತರ ಅರ್ಜುನ ಮುಂಡಾ ಮೂರು ಬಾರಿ ಸಿಎಂ ಆಗಿ ಹೆಚ್ಚು ಅವಧಿಗೆ ಸಿಎಂ ಆದವರು. ಕೇಂದ್ರದಲ್ಲಿ ಈಗ ಸಚಿವ. 

ಮಧು ಕೋಡಾ ಸಿಎಂ ಆಗಿದ್ದಾಗಲೇ ಭ್ರಷ್ಟಾಚಾರಕ್ಕೆ ಸಿಲುಕಿ ಬಂಧನಕ್ಕೆ ಒಳಗಾಗಿದ್ದವರು. 

ಈ ಹಿಂದೆ ಸಿಎಂ ಆಗಿದ್ದ ರಘುಬರ್‌ದಾಸ್‌ ಈಗ ರಾಜ್ಯಪಾಲ. ಈ ಬಾರಿ ಮತ್ತೆ ಬಾಬುಲಾಲ್‌ ಮರಾಂಡಿ ನೇತೃತ್ವದಲ್ಲಿಯೇ ಬಿಜೆಪಿ ಚುನಾವಣೆ ಎದುರಿಸುತ್ತಿದೆ. 

ಪ್ರಮುಖ ಅಭ್ಯರ್ಥಿಗಳು ಯಾರಿದ್ದಾರೆ

ಎರಡನೇ ಹಂತದ ಪ್ರಮುಖ ಅಭ್ಯರ್ಥಿಗಳೆಂದರೆ ಧನ್ವಾರದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಾಬುಲಾಲ್ ಮರಾಂಡಿ, ಜಾರ್ಖಂಡ್ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ, ಬಿಜೆಪಿಯ ಅಮರ್ ಕುಮಾರ್ ಬೌರಿ, ಚಂದಂಕಿಯಾರಿಯಿಂದ; ಮತ್ತು ಸಿಲ್ಲಿಯಿಂದ ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ (ಎಜೆಎಸ್‌ಯು) ಅಧ್ಯಕ್ಷ ಸುಧೇಶ್ ಮಹತೋ. ಕಣದಲಲಿದ್ದಾರೆ. ಒಟ್ಟು 81 ವಿಧಾನಸಭೆ ಕ್ಷೇತ್ರದ ಜಾರ್ಖಂಡ್‌ನಲ್ಲಿ ಅಧಿಕಾರ ಹಿಡಿಯಲು 41 ಸ್ಥಾನಗಳ ಬಹುಮತ ಪಡೆಯಬೇಕು. ಈ ಬಾರಿ ಬಿಜೆಪಿ ಅಧಿಕಾರಿ ಹಿಡಿಯುವ ಉಮೇದಿನಲ್ಲಿದ್ದರೆ, ಜೆಎಂಎಂ ಕೂಡ ಇನ್ನೊಮ್ಮೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎನ್ನುವ ಪ್ರಯತ್ನದಲ್ಲಿದ್ದಾರೆ. ನವೆಂಬರ್‌ 23ರಂದೇ ಜಾರ್ಖಂಡ್‌ನಲ್ಲಿ ಮತ ಎಣಿಕೆ ನಡೆಯಲಿದೆ.

 

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ