logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Viral News: ಅಕ್ರಮ ಮದ್ಯ ನಾಶ ಮಾಡುತ್ತಿರುವ ಪೊಲೀಸರ ಕಣ್ಣೆದುರಲ್ಲೇ ಬಾಟಲಿ ಕದ್ದು ಓಡಿದ ಜನರು; ಇಲ್ಲಿದೆ ನೋಡಿ ವೈರಲ್ ವಿಡಿಯೋ

Viral News: ಅಕ್ರಮ ಮದ್ಯ ನಾಶ ಮಾಡುತ್ತಿರುವ ಪೊಲೀಸರ ಕಣ್ಣೆದುರಲ್ಲೇ ಬಾಟಲಿ ಕದ್ದು ಓಡಿದ ಜನರು; ಇಲ್ಲಿದೆ ನೋಡಿ ವೈರಲ್ ವಿಡಿಯೋ

Suma Gaonkar HT Kannada

Sep 11, 2024 08:35 AM IST

google News

ಸಾಂದರ್ಭಿಕ ಚಿತ್ರ

    • ಆಂಧ್ರಪ್ರದೇಶದ ಗುಂಟೂರಿನಲ್ಲಿ ಸಾಮೂಹಿಕ ಮದ್ಯ ಲೂಟಿ ನಡೆದಿದೆ. ಅದರಲ್ಲೂ ಆಶ್ಚರ್ಯ ಎಂದರೆ ಇದೆಲ್ಲವೂ ಪೊಲೀಸರ ಮುಂದೆ ನಡೆದಿದೆ. ಜನರಿಂದ ಮದ್ಯ ತಪ್ಪಿಸಿ ನಾಶ ಮಾಡಲು ಪೊಲೀಸರು ಪರದಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಆಂಧ್ರಪ್ರದೇಶದ ಗುಂಟೂರಿನಲ್ಲಿ ಅಕ್ರಮ ಮದ್ಯವನ್ನು ನಾಶಮಾಡಲು ಪೊಲೀಸರು ಮುಂದಾಗಿದ್ದರು. ರಸ್ತೆಯಲ್ಲಿ ಕೆಲ ಮದ್ಯದ ಬಾಟಲಿಗಳನ್ನು ಇಟ್ಟು ಅದನ್ನು ಒಡೆದು ಹಾಕಲು ಆರಂಭ ಮಾಡಿದ್ದರು. ಆದರೆ ಅದೇ ಸಂದರ್ಭದಲ್ಲಿ ತಂಡೋಪ ತಂಡವಾಗಿ ಜನರು ಗುಂಪು ಗುಂಪಲ್ಲಿ ಆ ಸ್ಥಳಕ್ಕೆ ಬಂದು ಬಾಟಲಿಗಳನ್ನು ಎತ್ತಿಕೊಳ್ಳಲು ಆರಂಭಿಸಿದರು. ಇದನ್ನು ಕಂಡು ಪೊಲೀಸರು ಮತ್ತೆ ಕಂಗಾಲಾದರು. ಈ ವಿಡಿಯೋ ಒಂದು ವೈರಲ್ ಆಗಿದೆ. ಯಾವ ಕಾರಣಕ್ಕಾಗಿ ಈ ರೀತಿ ಮಾಡಲಾಯಿತು ಎಂಬ ವಿವರ ಈ ಕೆಳಗಿದೆ ಗಮನಿಸಿ.

ವಿಲೇವಾರಿ ಮಾಡಲು ಡಂಪಿಂಗ್ ಯಾರ್ಡ್‌ನಲ್ಲಿ ಸಾವಿರಾರು ಮದ್ಯದ ಬಾಟಲಿಗಳನ್ನು ಪೋಲಿಸರು ಸಾಲಾಗಿ ನಿಲ್ಲಿಸಿದಾಗ, ಜನಸಂದಣಿ ಉಂಟಾಯಿತು. ಈ ಘಟನೆಯನ್ನು ಸೆರೆ ಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಈಗ ವೈರಲ್ ಆಗಿರುವ ವೀಡಿಯೊದಲ್ಲಿ ಜನರು ಬಾಟಲಿಗಳನ್ನು ಕಸಿದುಕೊಳ್ಳಲು ಗುಂಪುಗೂಡುತ್ತಿರುವುದನ್ನು ನೀವು ನೋಡಬಹುದು. ಪೊಲೀಸರು ಅವರನ್ನು ಓಡಿಸಲು ಪ್ರಯತ್ನಿಸುತ್ತಿದ್ದಾರೆ ಆದರೂ ಜನ ಕೇಳುತ್ತಿಲ್ಲ. ಅಕ್ರಮ ಮದ್ಯವನ್ನು ಹತ್ತಿಕ್ಕಲು ತಂದಿರುವ ಜೆಸಿಬಿ ಮತ್ತು ಅಲ್ಲಿನ ಗದ್ದಲವೂ ಈ ವಿಡಿಯೋದಲ್ಲಿ ಸೆರೆಯಾಗಿದೆ.

ಆಂಧ್ರಪ್ರದೇಶದ ಗುಂಟೂರಿನಲ್ಲಿ ಈ ಘಟನೆ ನಡೆದಿದೆ. ಡಂಪಿಂಗ್ ಯಾರ್ಡ್‌ನಲ್ಲಿ 50 ಲಕ್ಷ ರೂ ಮೌಲ್ಯದ ಮದ್ಯವನ್ನು ವಿನಾಶ ಮಾಡಲಾಗಿದೆ. ಈ ಸಮಯದಲ್ಲಿ ಕೆಲವು ಯುವಕರು ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡಿದ್ದಾರೆ. ಕೈಗೆ ಸಿಕ್ಕ ಬಾಟಲಿಯನ್ನು ಎತ್ತಿಕೊಂಡು ಓಡಿ ಹೋಗುವ ದೃಷ್ಯಗಳು ನಿಮಗೆ ಈ ವಿಡಿಯೋದಲ್ಲಿ ಕಾಣ ಸಿಗುತ್ತದೆ.

ವೀಡಿಯೊವನ್ನು ಹಂಚಿಕೊಳ್ಳುವಾಗ ಐಎಎನ್ಎಸ್ ಸುದ್ದಿ ಸಂಸ್ಥೆ ಈ Xನಲ್ಲಿ ಮಾಹಿತಿ ಹಂಚಿಕೊಂಡಿದೆ. ಆ ವಿಡಿಯೋ ಹೀಗಿದೆ

ಸಾಮೂಹಿಕ ಮದ್ಯ ಲೂಟಿ ನಡೆದಿರುವುದು ಇದೇ ಮೊದಲಲ್ಲ. ಈ ವರ್ಷದ ಜುಲೈನಲ್ಲಿಒಂದು ಮದ್ಯ ಸಾಗಿಸುತ್ತಿರುವ ಗಾಡಿಯಿಂದ ಬಿದ್ದಾಗಲೂ ಜನರು ಇದೇ ರೀತಿ ಮಾಡಿದ್ದರು. ಆಗ ಒಂದೊಂದು ಬಾಕ್ಸ್‌ ಸಮೇತ ಜನರು ಎತ್ತಿಕೊಂಡು ಪರಾರಿಯಾಗಿದ್ದರು ಎಂದು ಹೇಳಲಾಗಿದೆ. ವಾಹನದ ಒಟ್ಟು 110 ಬಾಕ್ಸ್‌ಗಳಲ್ಲಿ 30 ಬಾಕ್ಸ್‌ ಮಾಯವಾಗಿತ್ತು.

ರಾಜ್‌ಪುರ ಚುಂಗಿಯಲ್ಲಿ ನೆಲೆಸಿರುವ ಸಂದೀಪ್ ಯಾದವ್ ಅವರು ಮಿಟವಾಲಿ ಗ್ರಾಮದಲ್ಲಿ ಮದ್ಯದಂಗಡಿ ನಡೆಸುತ್ತಿದ್ದರು. ಅವರು ಗಾಡಿಯಲ್ಲಿ ಒಂದು ಕಡೆಯಿಂದ ಅವರ ಅಂಗಡಿಗೆ ಸಾಗಿಸುವಾಗ ಒಟ್ಟು 110 ಬಾಕ್ಸ್‌ಗಳನ್ನು ಸಾಗಿಸಲಾಗುತ್ತಿತ್ತು, ಆದರೆ ದುರದೃಷ್ಟವಶಾತ್, 30 ಬಾಕ್ಸ್‌ಗಳು ದಾರಿಯುದ್ದಕ್ಕೂ ಬಿದ್ದಿವೆ. ಸ್ಥಳೀಯರು ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡಿದ್ದರು. ಬಿದ್ದ ಪೆಟ್ಟಿಗೆಗಳೊಂದಿಗೆ ಪರಾರಿಯಾಗಿದ್ದರು.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ