ಗುಲಾಬಿ ಹೂವಿನ ಪಕೋಡಾ ತಿಂದಿದ್ದೀರಾ? ಬೀದಿಬದಿ ವ್ಯಾಪಾರಿಯ ಹೊಸ ಡಿಶ್‌ಗೆ ಇಂಟರ್ನೆಟ್‌ನಲ್ಲಿ ಮಿಶ್ರಪ್ರತಿಕ್ರಿಯೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಗುಲಾಬಿ ಹೂವಿನ ಪಕೋಡಾ ತಿಂದಿದ್ದೀರಾ? ಬೀದಿಬದಿ ವ್ಯಾಪಾರಿಯ ಹೊಸ ಡಿಶ್‌ಗೆ ಇಂಟರ್ನೆಟ್‌ನಲ್ಲಿ ಮಿಶ್ರಪ್ರತಿಕ್ರಿಯೆ

ಗುಲಾಬಿ ಹೂವಿನ ಪಕೋಡಾ ತಿಂದಿದ್ದೀರಾ? ಬೀದಿಬದಿ ವ್ಯಾಪಾರಿಯ ಹೊಸ ಡಿಶ್‌ಗೆ ಇಂಟರ್ನೆಟ್‌ನಲ್ಲಿ ಮಿಶ್ರಪ್ರತಿಕ್ರಿಯೆ

Viral Video: ಬೀದಿ ಬದಿ ವ್ಯಾಪಾರಿಯೊಬ್ಬರು ಗುಲಾಬಿ ಹೂಗಳ ಪಕೋಡಾ ಮಾಡಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಜನರು ನಿಜಕ್ಕೂ ತಿನ್ನುತ್ತಾರಾ ಎಂಬ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ.

ಗುಲಾಬಿ ಹೂವಿನ ಪಕೋಡಾ ತಿಂದಿದ್ದೀರಾ? ಬೀದಿಬದಿ ವ್ಯಾಪಾರಿಯ ಹೊಸ ಡಿಶ್‌ ನೆಟ್ಟಿಗರು ಹೀಗಂದ್ರು
ಗುಲಾಬಿ ಹೂವಿನ ಪಕೋಡಾ ತಿಂದಿದ್ದೀರಾ? ಬೀದಿಬದಿ ವ್ಯಾಪಾರಿಯ ಹೊಸ ಡಿಶ್‌ ನೆಟ್ಟಿಗರು ಹೀಗಂದ್ರು

ಭಾರತದಲ್ಲಿ ಬೀದಿಬದಿ ಆಹಾರಗಳಲ್ಲಿನ ವೈವಿಧ್ಯತೆಗೆ ಏನೇನೂ ಕೊರತೆ ಇಲ್ಲ. ಸಾವಿರಾರು ಬಗೆಯ ರುಚಿರುಚಿಯ ಆಹಾರಗಳನ್ನು ರಸ್ತೆಬದಿಯಲ್ಲಿ ಸವಿಯಬಹುದು. ಇದೇ ವೇಳೆ ದಿನಕ್ಕೊಂದು ಬಗೆಯ ಆಹಾರಗಳು ಹುಟ್ಟಿಕೊಳ್ಳುತ್ತವೆ. ಇವೆಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸೃಜನಶೀಲತೆಯ ಪ್ರತಿರೂಪ. ಇದೀಗ ಬೀದಿಬದಿ ಸಿದ್ಧವಾಗುವ ಆಹಾರಗಳ ಪಟ್ಟಿಗೆ ಮತ್ತೊಂದು ಹೊಸ ಡಿಶ್ ಸೇರ್ಪಡೆಯಾಗಿದೆ. ಈ ವಿಡಿಯೋ ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುವುದಷ್ಟೇ ಅಲ್ಲದೆ ಬಿಸಿ ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ.

ಫೋಟೋ ನೋಡಿದಾಗ ಈ ಹೊಸ ಡಿಶ್ ಕುರಿತು ನಿಮಗೆ ಸುಳಿವು ಸಿಕ್ಕಿರಬಹುದು. ಇದು ಗುಲಾಬಿ ಹೂವಿನ ಪಕೋಡಾ. ಕೇಳೋಕೆ ವಿಚಿತ್ರವಾಗಿದೆ. ಆದರೆ ಈ ಡಿಶ್‌ ಮಾಡಿರೋದು ಮಾತ್ರ ಸತ್ಯ. ಅದರ ವಿಡಿಯೋ ಕೂಡಾ ನಿಮ್ಮ ಕಣ್ಣ ಮುಂದಿದೆ. ವಿಡಿಯೋ ನೋಡಿದ ಜನರು ಅಚ್ಚರಿ ವ್ಯಕ್ತಪಡಿಸಿದ್ದು ಒಂದೆಡೆಯಾದರೆ, ಇನ್ನೂ ಕೆಲವು ಜನರು ಇದೆಂತಾ ಡಿಶ್‌ ಎಂದು ಬೀದಿಬದಿ ವ್ಯಾಪಾರಿಯನ್ನು ಬೈದಿದ್ದಾರೆ.

ಓಮ್ನಿವಿಯಮ್ ಮೀಡಿಯಾ (@blessedindianfoodie) ಬ್ಲೆಸ್ಡ್ ಇಂಡಿಯನ್ ಫುಡ್ ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಬೀದಿಬದಿ ಆಹಾರ ಮಾರಾಟಗಾರ ಗುಲಾಬಿ ಪಕೋಡಾ ತಯಾರಿಸುವುದನ್ನು ನೋಡಬಹುದು. ಈ ವಿಡಿಯೋ ಎಲ್ಲಿದ್ದು ಎಂಬುದು ಬಹಿರಂಗಗೊಂಡಿಲ್ಲ. ಆದರೆ, ಇನ್‌ಸ್ಟಾಗ್ರಾಮ್‌ಗೆ ಜುಲೈನಲ್ಲಿ ಅಪ್ಲೋಡ್‌ ಮಾಡಿದಂದಿನಿಂದ ಈ ವಿಡಿಯೋವನ್ನು 61 ಮಿಲಿಯನ್ ಜನರು ವೀಕ್ಷಿಸಿದ್ದಾರೆ.

ಸಾಮಾನ್ಯವಾಗಿ ಗುಲಾಬಿ ಮಾತ್ರವಲ್ಲದೆ ಹೂಗಳಿಂದ ಪಕೋಡಾ ಸೇರಿದಂತೆ ಆಹಾರ ತಯಾರಿ ಹೊಸತು. ಹೀಗಾಗಿ ಗುಲಾಬಿ ಪಕೋಡ ಕೂಡಾ ಅಸಾಂಪ್ರದಾಯಿಕ ಅಡುಗೆಯಾಗಿದೆ. ಗುಲಾಬಿ ಹೂವಿನ ಕಾಂಡವನ್ನು ಕತ್ತರಿಸಿ ಅದನ್ನು ಕಡಲೆ ಹಿಟ್ಟಿನಲ್ಲಿ ಅದ್ದಿ ಅದು ಗರಿಗರಿಯಾಗುವವರೆಗೆ ಎಣ್ಣೆಗೆ ಹಾಕಿ ಡೀಪ್ ಫ್ರೈ ಮಾಡಲಾಗುತ್ತದೆ. ಪಕೋಡವನ್ನು ಬಿಸಿಬಿಸಿ ಸರ್ವ್‌ ಮಾಡಲಾಗುತ್ತದೆ. ಜನರ ಕೂಡಾ ಇದನ್ನು ತಿನ್ನುತ್ತಿರುವುದನ್ನು ದೃಶ್ಯದಲ್ಲಿ ನೋಡಬಹುದು.

ಇಂಟರ್ನೆಟ್‌ನಲ್ಲಿ ಗಮನಸೆಳೆದ ವಿಡಿಯೋ

ವೈರಲ್ ವಿಡಿಯೋ ಆಹಾರ ಉತ್ಸಾಹಿಗಳ ಗಮನ ಸೆಳೆದಿದೆ. ಇದೇ ವೇಳೆ ಹಲವರು ನೆಗೆಟಿವ್‌ ಪ್ರತಿಕ್ರಿಯೆ ನೀಡಿದ್ದಾರೆ. ಕೀಟನಾಶಕಗಳು ಮಾತ್ರವಲ್ಲದೆ ವಿವಿಧ ರಸಗೊಬ್ಬರಗಳನ್ನು ಹಾಕಿ ಬೆಳೆಯುವ ಗುಲಾಬಿ ಹೂಗಳಿಂದ ಮಾಡುವ ಪಕೋಡ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹಲವರು ಹೇಳಿಕೊಂಡಿದ್ದಾರೆ.

ಪ್ರಿಯಾ ರಾವ್ ಎಂಬ ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿ, “ಜನರು ಇದನ್ನು ನಿಜವಾಗಿಯೂ ತಿನ್ನುತ್ತಾರೆ ಎಂಬುದನ್ನು ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ. ಈ ರಾಸಾಯನಿಕಗಳು ಎಷ್ಟು ಹಾನಿಕಾರಕ ಎಂಬುದು ಅವರಿಗೆ ತಿಳಿದಿದೆಯೇ? ಇದು ವಿಲಕ್ಷಣ ತಿಂಡಿ ಮಾತ್ರವಲ್ಲ, ಅಪಾಯಕಾರಿ ಕೂಡಾ ಹೌದು” ಎಂದಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.