logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sbi Rewards Scam: ಎಸ್​ಬಿಐ ಬ್ಯಾಂಕ್ ಗ್ರಾಹಕರೇ ಎಚ್ಚರ; ರಿವಾರ್ಡ್ಸ್ ಮೆಸೇಜ್ ಕಳ್ಸಿ ವಂಚಿಸ್ತಾರೆ ಹುಷಾರ್!

SBI Rewards Scam: ಎಸ್​ಬಿಐ ಬ್ಯಾಂಕ್ ಗ್ರಾಹಕರೇ ಎಚ್ಚರ; ರಿವಾರ್ಡ್ಸ್ ಮೆಸೇಜ್ ಕಳ್ಸಿ ವಂಚಿಸ್ತಾರೆ ಹುಷಾರ್!

Prasanna Kumar P N HT Kannada

Nov 03, 2024 10:08 PM IST

google News

PIB fact check has in a social media post warned users that the fraudsters are using a 'SBI rewards' scam to dupe unsuspecting customers.

  • PIB Fact Checks: ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ಹೆಸರು ಬಳಸಿ ವಂಚಿಸುತ್ತಿರುವ ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬಂದಿವೆ. ಎಸ್​ಬಿಐ ಬ್ಯಾಂಕ್​ನಂತೆಯೇ ರಿವಾರ್ಡ್ಸ್ ಮೆಸೇಜ್ ಕಳುಹಿಸಿ ವಂಚಿಸುತ್ತಿದ್ದಾರೆ.

PIB fact check has in a social media post warned users that the fraudsters are using a 'SBI rewards' scam to dupe unsuspecting customers.
PIB fact check has in a social media post warned users that the fraudsters are using a 'SBI rewards' scam to dupe unsuspecting customers. (PIB Fact Check via X (Twitter))

ಪಿಐಬಿ ಫ್ಯಾಕ್ಟ್ ಚೆಕ್: ಇತ್ತೀಚೆಗೆ ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅದರಂತೆ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ (State Bank of India) ಹೆಸರು ಬಳಸಿಕೊಂಡು ವಂಚಿಸುತ್ತಿರುವ ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬಂದಿವೆ. ಎಸ್​ಬಿಐ ಬ್ಯಾಂಕ್​ನಿಂದ ರಿವಾರ್ಡ್ಸ್ ಬಂದಿರುವ ರೀತಿ ಮೆಸೇಜ್ ಕಳುಹಿಸಿ ವಂಚಿಸುತ್ತಿದ್ದಾರೆ. ಹೀಗಾಗಿ, ಗ್ರಾಹಕರು ಎಚ್ಚರ ವಹಿಸಬೇಕು ಎಂದು ಸರ್ಕಾರದ ಪ್ರೆಸ್​ ಇನ್ಫರ್​ಮೇಷನ್ ಬ್ಯೂರೋ (PIB) ಸೂಚಿಸಿದೆ. ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪಿಐಬಿ, ಬ್ಯಾಂಕ್ ಗ್ರಾಹಕರು ಅಪರಿಚಿತ ಫೈಲ್​ಗಳನ್ನು ಎಂದಿಗೂ ಡೌನ್​ಲೋಡ್ ಮಾಡಿಕೊಳ್ಳಬೇಡಿ ಅಥವಾ ಲಿಂಕ್​​ಗಳನ್ನು ಕ್ಲಿಕ್ ಮಾಡಬೇಡಿ ಎಂದು ಎಚ್ಚರಿಸಿದೆ.

ಪಿಐಬಿ ಫ್ಯಾಕ್ಟ್​ಚೆಕ್ ತನ್ನ ಎಕ್ಸ್​​​ನಲ್ಲಿ ಬ್ಯಾಂಕ್ ಬಳಕೆದಾರರನ್ನು ಎಚ್ಚರಿಸಿದೆ. ‘ಜಾಗರೂಕರಾಗಿರಿ!!️ ಎಸ್​ಬಿಐ ರಿವಾರ್ಡ್​​ಗಳನ್ನು ರಿಡೀಮ್ ಮಾಡಲು ಎಪಿಕೆ ಫೈಲ್ ಅನ್ನು ಡೌನ್ ಲೋಡ್ ಮಾಡಲು ಮತ್ತು ಇನ್​ಸ್ಟಾಲ್​ ನಿಮಗೆ ಸಂದೇಶ ಬಂದಿದೆಯೇ?’ ಒಂದು ವೇಳೆ ಬಂದಿದ್ದರೆ ಎಚ್ಚರ. ಏಕೆಂದರೆ ಎಸ್​ಬಿಐ ಬ್ಯಾಂಕ್​ ಎಂದಿಗೂ ಎಸ್ಎಂಎಸ್ ಅಥವಾ ವಾಟ್ಸಾಪ್ ಮೂಲಕ ಲಿಂಕ್​ಗಳನ್ನು ಅಥವಾ ಎಪಿಕೆ ಫೈಲ್​ಗಳನ್ನು ಡೌನ್​ಲೋಡ್ ಅಥವಾ ಇನ್​ಸ್ಟಾಲ್ ಮಾಡಲು ಕಳುಹಿಸುವುದಿಲ್ಲ. ಅಪರಿಚಿತ ಫೈಲ್​​ಗಳನ್ನು ಎಂದಿಗೂ ಡೌನ್​ಲೋಡ್​ ಮಾಡಬೇಡಿ ಅಥವಾ ಅಂತಹ ಲಿಂಕ್​​ಗಳ ಮೇಲೆ ಕ್ಲಿಕ್ ಮಾಡಬೇಡಿ ಎಂದು ಸೂಚನೆ ನೀಡಿದೆ.

ವಂಚನೆ ತಡೆಗೆ ಎಐ ಪರಿಚಯ

ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಹಣಕಾಸು ವಂಚನೆಯ ಬಗ್ಗೆ ಗ್ರಾಹಕರನ್ನು ಎಚ್ಚರಿಸಲು ಕೃತಕ ಬುದ್ಧಿಮತ್ತೆ (Artificial intelligence) ಸಿಸ್ಟಮ್​ ಪರಿಚಯಿಸಲು ಮುಂದಾಗಿದೆ. ಬ್ಯಾಂಕ್​ ಖಾತೆಗಳಿಗೆ ಕನ್ನ ಹಾಕುವುದು ಸೇರಿದಂತೆ ವಿವಿಧ ರೀತಿಯ​ ವಂಚನೆಗಳು ನಡೆಯದಂತೆ ಎಐ (AI) ನೋಡಿಕೊಳ್ಳುತ್ತದೆ. ಅನುಮಾನಾಸ್ಪದ ವಹಿವಾಟುಗಳಿಗೆ ಕಡಿವಾಣ ಹಾಕುತ್ತದೆ. ಆ ಮೂಲಕ ಗ್ರಾಹಕರ ಖಾತೆಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಆರ್​​ಬಿಐ ಅಂಗ ಸಂಸ್ಥೆಯಾದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇನ್ನೋವೇಶನ್ ಹಬ್ (RBIH) ಈಗಾಗಲೇ ಮ್ಯೂಲ್ ಹಂಟರ್​ ಎಐ, ಕೃತಕ ಬುದ್ದಿಮತ್ತೆ ಮತ್ತು ಯಂತ್ರ ಕಲಿಕೆ (AI/ML) ಮಾದರಿ ಅಭಿವೃದ್ಧಿಪಡಿಸಿದೆ. ಇದು ವಂಚಕರ ಪತ್ತೆ ನೆರವಾಗುತ್ತದೆ.

120.3 ಕೋಟಿ ರೂಪಾಯಿ ವಂಚನೆ

ಭಾರತದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಅತ್ಯಾಧುನಿಕ ಮೋಸದ ಯೋಜನೆಗಳಿಂದಾಗಿ ಜನರು ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಸರ್ಕಾರ ವರದಿಯಲ್ಲಿ ತಿಳಿಸಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತೀಯರು ಡಿಜಿಟಲ್ ವಂಚನೆಗಳಲ್ಲಿ ಸುಮಾರು 120.3 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ. ದೂರಸಂಪರ್ಕ ಇಲಾಖೆ (DOT) ಕಳೆದ ತಿಂಗಳು ತನ್ನ ‘ಅಂತಾರಾಷ್ಟ್ರೀಯ ನಕಲಿ ಕರೆಗಳ ತಡೆಗಟ್ಟುವಿಕೆ ವ್ಯವಸ್ಥೆಯನ್ನು’ ಪ್ರಾರಂಭಿಸಿದೆ. ಇದು ಭಾರತೀಯ ನಂಬರ್​​ಗಳನ್ನು ತಪ್ಪಾಗಿ ಪ್ರದರ್ಶಿಸುವ ಸ್ಪ್ಯಾಮ್ ಅಂತಾರಾಷ್ಟ್ರೀಯ ಕರೆಗಳನ್ನು ಪತ್ತೆ ಹಚ್ಚುತ್ತದೆ ಮತ್ತು ನಿರ್ಬಂಧಿಸುತ್ತದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ