logo
ಕನ್ನಡ ಸುದ್ದಿ  /  ಜೀವನಶೈಲಿ  /  Sbi So Recruitment 2022 Apply: ಎಸ್‌ಬಿಐ ಸ್ಪೆಷಲಿಸ್ಟ್‌ ಕೇಡರ್‌ನಲ್ಲಿ ಭರ್ಜರಿ ನೇಮಕ, 714 ಹುದ್ದೆಗಳಿಗೆ ಅರ್ಜಿ ಆಹ್ವಾನ

Sbi So Recruitment 2022 Apply: ಎಸ್‌ಬಿಐ ಸ್ಪೆಷಲಿಸ್ಟ್‌ ಕೇಡರ್‌ನಲ್ಲಿ ಭರ್ಜರಿ ನೇಮಕ, 714 ಹುದ್ದೆಗಳಿಗೆ ಅರ್ಜಿ ಆಹ್ವಾನ

Praveen Chandra B HT Kannada

Sep 01, 2022 02:34 PM IST

SBI SO Recruitment 2022: ಎಸ್‌ಬಿಐ ಸ್ಪೆಷಲಿಸ್ಟ್‌ ಕೇಡರ್‌ನಲ್ಲಿ ಭರ್ಜರಿ ನೇಮಕ, 714 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪರೀಕ್ಷೆ ಇಲ್ಲ, ಸಂದರ್ಶನ ಮಾತ್ರ

    • SBI SO Recruitment 2022: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯದಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ವಿಶೇಷ ಅವಕಾಶ. ಎಸ್‌ಬಿಐ ಸ್ಪೆಷಲಿಸ್ಟ್‌ ಕೇಡರ್‌ನಲ್ಲಿ ವಿವಿಧ ಕಾಯಂ ಮತ್ತು ಗುತ್ತಿಗೆ ಆಧರಿತ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆನ್‌ಲೈನ್‌ಲ್ಲಿ ಮಾತ್ರ ಅವಕಾಶವಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ, ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಅಧಿಸೂಚನೆ ಪಿಡಿಎಫ್‌ ಸೇರಿದಂತೆ ಹೆಚ್ಚಿನ ವಿವರ ಮುಂದೆ ನೀಡಲಾಗಿದೆ.
SBI SO Recruitment 2022: ಎಸ್‌ಬಿಐ ಸ್ಪೆಷಲಿಸ್ಟ್‌ ಕೇಡರ್‌ನಲ್ಲಿ ಭರ್ಜರಿ ನೇಮಕ, 714 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪರೀಕ್ಷೆ ಇಲ್ಲ, ಸಂದರ್ಶನ ಮಾತ್ರ
SBI SO Recruitment 2022: ಎಸ್‌ಬಿಐ ಸ್ಪೆಷಲಿಸ್ಟ್‌ ಕೇಡರ್‌ನಲ್ಲಿ ಭರ್ಜರಿ ನೇಮಕ, 714 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪರೀಕ್ಷೆ ಇಲ್ಲ, ಸಂದರ್ಶನ ಮಾತ್ರ

SBI SO Recruitment 2022: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯದಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ವಿಶೇಷ ಅವಕಾಶ. ಎಸ್‌ಬಿಐ ಸ್ಪೆಷಲಿಸ್ಟ್‌ ಕೇಡರ್‌ನಲ್ಲಿ ವಿವಿಧ ಕಾಯಂ ಮತ್ತು ಗುತ್ತಿಗೆ ಆಧರಿತ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆನ್‌ಲೈನ್‌ಲ್ಲಿ ಮಾತ್ರ ಅವಕಾಶವಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ, ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಅಧಿಸೂಚನೆ ಪಿಡಿಎಫ್‌ ಸೇರಿದಂತೆ ಹೆಚ್ಚಿನ ವಿವರ ಮುಂದೆ ನೀಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಡೈಪರ್ ಹಾಕುವುದರಿಂದ ಹಿಡಿದು ನಿದ್ರೆ ಮಾಡಿಸುವರೆಗೆ; ಕೊಲಂಬಿಯಾದಲ್ಲಿ ಪುರುಷರಿಗಿದೆ ಮಕ್ಕಳ ಕಾಳಜಿ ವಹಿಸುವ ತರಬೇತಿ ಶಾಲೆ

ಹೊಟ್ಟೆ ತಂಪಾಗಿಸುವ ಕಲ್ಲಂಗಡಿ ಹಣ್ಣಿನ 8 ಅದ್ಭುತ ಆರೋಗ್ಯ ಪ್ರಯೋಜನಗಳು; ವಸಡಿನ ಸಮಸ್ಯೆಗೂ ಉತ್ತಮ

Iron Box Cleaning: ಜಿಡ್ಡು, ಕಲೆಗಳಿಂದ ಕೂಡಿದ ಸ್ಟೀಮ್ ಐರನ್‌ ಬಾಕ್ಸ್‌ ಸ್ವಚ್ಛಗೊಳಿಸುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾಹಿತಿ

ತ್ವಚೆಯ ಬಗ್ಗೆ ಅತಿಯಾಗಿ ಕಾಳಜಿ ವಹಿಸುವ ಮುನ್ನ ಇರಲಿ ಎಚ್ಚರ: ಮುಖದ ಸೌಂದರ್ಯವನ್ನೇ ಹಾಳುಮಾಡುತ್ತದೆ ಈ ಕೆಟ್ಟ ಅಭ್ಯಾಸಗಳು

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಆಗಸ್ಟ್‌ 31, 2022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್‌ 20, 2022

ಅರ್ಜಿ ಸಲ್ಲಿಸಲು ಲಿಂಕ್‌: ಇಲ್ಲಿ ಕ್ಲಿಕ್‌ ಮಾಡಿ

ಡೇಟಾ ಸೈನ್ಸ್‌ ಹುದ್ದೆಗಳು

ಮ್ಯಾನೇಜರ್‌ (ಡೇಟಾ ಸೈಂಟಿಸ್ಟ್‌- ಸ್ಪೆಷಲಿಸ್ಟ್)-‌ 11, ಡೆಪ್ಯೂಟಿ ಮ್ಯಾನೇಜರ್‌-5, ಸಿಸ್ಟಮ್‌ ಆಫೀಸರ್‌ (ಸ್ಪೆಷಲಿಸ್ಟ್‌- ಡೇಟಾಬೇಸ್‌, ಅಪ್ಲಿಕೇಷನ್‌ ಅಡ್ಮಿನಿಸ್ಟ್ರೇಷನ್‌, ಸಿಸ್ಟಮ್‌ ಅಡ್ಮಿನಿಸ್ಟ್ರೇಷನ್‌-3 ಸೇರಿದಂತೆ ಒಟ್ಟು 19 ಹುದ್ದೆಗಳಿವೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 24 ವರ್ಷ ಮತ್ತು ಗರಿಷ್ಠ 32 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಉದ್ಯೋಗ ಸ್ಥಳ: ನವ ಮುಂಬಯಿ. ಆಯ್ಕೆ ಪ್ರಕ್ರಿಯೆ: ಶಾರ್ಟ್‌ಲಿಸ್ಟಿಂಗ್‌ ಮತ್ತು ಇಂಟಾರಾಕ್ಷನ್‌. ಅಂದ್ರೆ, ಸೂಕ್ತವೆನಿಸಿದ ಅರ್ಜಿಗಳನ್ನು ಆಯ್ಕೆ ಮಾಡಿಕೊಂಡು ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.

ನೋಟಿಫಿಕೇಷನ್‌ ಡೌನ್‌ಲೋಡ್‌ ಮಾಡಿಕೊಳ್ಳಿ

ಗುತ್ತಿಗೆ ಆಧರಿತ 665 ಹುದ್ದೆಗಳು

ಎಸ್‌ಬಿಐಯು ಪ್ರತ್ಯೇಕ ಅಧಿಸೂಚನೆಯಲ್ಲಿ ಗುತ್ತಿಗೆ ಆಧರಿತ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಮ್ಯಾನೇಜರ್‌ (ಬಿಸ್ನೆಸ್‌ ಪ್ರೊಸೆಸ್‌)- 1, ಸೆಂಟ್ರಲ್‌ ಆಪರೇಷನ್‌ ಟೀಮ್‌ ಸಫೋರ್ಟ್‌-2, ಮ್ಯಾನೇಜರ್‌ (ಬಿಸ್ನೆಸ್‌ ಪ್ರೊಸೆಸ್‌)-2, ಪ್ರಾಜೆಕ್ಟ್‌ ಡೆವಲಪ್‌ಮೆಂಟ್‌ ಮ್ಯಾನೇಜರ್‌ (ಬಿಸ್ನೆಸ್‌)- 2, ರಿಲೇಷನ್‌ಶಿಪ್‌ ಮ್ಯಾನೇಜರ್‌- 335, ಇನ್ವೆಸ್ಟ್‌ಮೆಂಟ್‌ ಆಫೀಸರ್‌- 52, ಸೀನಿಯರ್‌ ರಿಲೇಷನ್‌ಶಿಪ್‌ ಮ್ಯಾನೇಜರ್‌- 142, ರಿಲೇಷನ್‌ಶಿಪ್‌ ಮ್ಯಾನೇಜರ್‌ - team lead- 37, ರೀಜನಲ್‌ ಹೆಡ್‌- 12 ಮತ್ತು ಕಸ್ಟಮರ್‌ ರಿಲೇಷನ್‌ಶಿಪ್‌ ಎಕ್ಸಿಕ್ಯುಟಿವ್‌-75 ಹುದ್ದೆಗಳಿವೆ. ಒಟ್ಟು 665 ಹುದ್ದೆಗಳಿದ್ದು, ಕೆಲವು ಹುದ್ದೆಗಳು ಮುಂಬಯಿಯಲ್ಲಿ ಮತ್ತು ಇನ್ನುಳಿದ ಹುದ್ದೆಗಳು ದೇಶಾದ್ಯಂತ ಇರುವ ಎಸ್‌ಬಿಐ ಬ್ಯಾಂಕ್‌ ಕಚೇರಿಗಳಲ್ಲಿ ಇರಲಿದೆ.

ಆಯ್ಕೆ ಪ್ರಕ್ರಿಯೆ: ಶಾರ್ಟ್‌ಲಿಸ್ಟಿಂಗ್‌, ಪರ್ಸನಲ್‌/ಫೋನ್‌/ವಿಡಿಯೋ ಇಂಟರ್‌ವ್ಯೂ ಮತ್ತು ಸಿಟಿಸಿ ಚೌಕಾಶಿ. ಗುತ್ತಿಗೆ ಅವಧಿ: 5 ವರ್ಷಗಳು.

ನೋಟಿಫಿಕೇಷನ್‌ ಡೌನ್‌ಲೋಡ್‌ ಮಾಡಿಕೊಳ್ಳಿ

ಇನ್ನೊಂದು ಅಧಿಸೂಚನೆ- 30 ಹುದ್ದೆ

ಇದೇ ರೀತಿ ಇನ್ನೊಂದು ಅಧಿಸೂಚನೆಯಲ್ಲಿ ಡೆಪ್ಯೂಟಿ ಮ್ಯಾನೇಜರ್‌, ಸೀನಿಯರ್‌ ಸ್ಪೆಷಲಿಸ್ಟ್‌ ಎಕ್ಸಿಕ್ಯುಟಿವ್‌, ಅಸಿಸ್ಟೆಂಟ್‌ ಮ್ಯಾನೇಜರ್‌ ಇತ್ಯಾದಿ 30 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ ಏನು?

ಆಯಾ ಹುದ್ದೆಗಳಿಗೆ ತಕ್ಕಂತೆ ಬಿಇ/ಬಿಟೆಕ್‌, ಎಂಸಿಎ, ಎಂಟೆಕ್‌, ಎಂಎಸ್ಸಿ, ಎಂಇ, ಡೇಟಾ ಸೈನ್ಸ್‌, ಎಂಬಿಎ, ಪಿಜಿಡಿಎಂ, ಯಾವುದೇ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಬಯಸಲಾಗಿದೆ. ಬಹುತೇಕ ಎಲ್ಲಾ ಹುದ್ದೆಗಳಿಗೂ ಸಂಬಂಧಪಟ್ಟ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಬಯಸಲಾಗಿದೆ.

ಅರ್ಜಿ ಸಲ್ಲಿಕೆ

ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಬೇರೆ ಯಾವುದೇ ವಿಧಾನದಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅರ್ಜಿ ಶುಲ್ಕ ಮತ್ತು ಇಂಟಿಮೇಷನ್‌ ಶುಲ್ಕ 750 ರೂ. ಇರುತ್ತದೆ. ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಡಿ ಅಭ್ಯರ್ಥಿಗಳು ಶುಲ್ಕ ಪಾವತಿಸಬೇಕಾಗಿಲ್ಲ.

ಪ್ರತಿಯೊಂದು ಅಧಿಸೂಚನೆಯನ್ನು ಡೌನ್‌ಲೋಡ್‌ ಮಾಡಿಕೊಂಡು ಎಚ್ಚರಿಕೆಯಿಂದ ಓದಿ ಅರ್ಜಿ ಸಲ್ಲಿಸಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು