ಕೇಂದ್ರ ಬಜೆಟ್ 2024; ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ರೂಪಾಯಿ ಅನುದಾನ, ಕೃಷಿ ವಲಯಕ್ಕೆ ಕೇಂದ್ರದ ಕೊಡುಗೆ
Jul 23, 2024 04:49 PM IST
ಕೇಂದ್ರ ಬಜೆಟ್ 2024; ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ರೂಪಾಯಿ ಅನುದಾನ, ಕೃಷಿ ವಲಯಕ್ಕೆ ಕೇಂದ್ರದ ಕೊಡುಗೆಯ ವಿವರ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಕೇಂದ್ರ ಬಜೆಟ್ 2024 25 ಅನ್ನು ಲೋಕಸಭೆಯಲ್ಲಿ ಮಂಡಿಸಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಜುಲೈ 23) ಕೇಂದ್ರ ಬಜೆಟ್ 2024 (Union Budget 2024) ಮಂಡಿಸಿದರು. ಇದರಲ್ಲಿ ಅವರು ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ರೂಪಾಯಿ ಅನುದಾನ ಘೋಷಿಸಿದರು. ಕೃಷಿ ವಲಯಕ್ಕೆ ಕೇಂದ್ರದ ಕೊಡುಗೆಗಳ ವಿವರ ಇಲ್ಲಿದೆ.
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಜುಲೈ 23) ಕೇಂದ್ರ ಬಜೆಟ್ 2024 25 (Union Budget 2024 25) ಅನ್ನು ಲೋಕಸಭೆಯಲ್ಲಿ ಮಂಡಿಸಿದರು. ಈ ಸಂದರ್ಭದಲ್ಲಿ ಕೇಂದ್ರ ವಿತ್ತ ಸಚಿವರು ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ರೂಪಾಯಿ ಅನುದಾನ ಹಂಚಿಕೆಯನ್ನು ಮಾಡುತ್ತಿರುವುದಾಗಿ ಘೋಷಿಸಿದರು.
ಇದಲ್ಲದೆ, 32 ಕ್ಷೇತ್ರಗಳು ಮತ್ತು ತೋಟಗಾರಿಕೆ ಬೆಳೆಗಳಿಗೆ ಹೊಸ 109 ಅಧಿಕ ಇಳುವರಿ, ಹವಾಮಾನ ಸ್ಥಿತಿಸ್ಥಾಪಕ ಬೀಜಗಳನ್ನು ಸರ್ಕಾರ ಬಿಡುಗಡೆ ಮಾಡಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದರು.
"ಕೃಷಿ ಕ್ಷೇತ್ರದ ಆಟೋಮೊಬೈಲ್‌ಗಳಿಗೆ - ವಿಶೇಷವಾಗಿ ಆರಂಭಿಕ ಮಟ್ಟದ ದ್ವಿಚಕ್ರ ವಾಹನಗಳು ಮತ್ತು ಟ್ರಾಕ್ಟರ್‌ಗಳಿಗೆ ಸಂಬಂಧಿಸಿದ ಗ್ರಾಮೀಣರ ಬೇಡಿಕೆಗೆ ಇದು ನೆರವಾಗಲಿದೆ ಎಂದು ಅವರು ವಿವರಿಸಿದರು.
ಮುಂದಿನ 2 ವರ್ಷಗಳಲ್ಲಿ, ಪ್ರಮಾಣೀಕರಣ ಮತ್ತು ಬ್ರ್ಯಾಂಡಿಂಗ್ ಬೆಂಬಲದೊಂದಿಗೆ 1 ಕೋಟಿ ರೈತರನ್ನು ನೈಸರ್ಗಿಕ ಕೃಷಿಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. 32 ಕ್ಷೇತ್ರ ಮತ್ತು ತೋಟಗಾರಿಕಾ ಬೆಳೆಗಳ ಹೊಸ 109 ಹೆಚ್ಚು ಇಳುವರಿ ಮತ್ತು ಹವಾಮಾನ ಸ್ಥಿತಿಸ್ಥಾಪಕ ತಳಿಗಳನ್ನು ರೈತರ ಕೃಷಿಗಾಗಿ ಬಿಡುಗಡೆ ಮಾಡಲಾಗುತ್ತದೆ… ಎಂದು ಅವರು ಬಜೆಟ್ ಭಾಷಣದಲ್ಲಿ ತಿಳಿಸಿದರು.
ಕೇಂದ್ರವು ರಾಜ್ಯಗಳ ಸಹಭಾಗಿತ್ವದಲ್ಲಿ ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಉತ್ತೇಜಿಸುತ್ತದೆ. ಆದರೆ ಜನ್ ಸಮರ್ಥ್ ಆಧಾರಿತ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಐದು ರಾಜ್ಯಗಳಲ್ಲಿ ಪರಿಚಯಿಸಲಾಗುವುದು ಎಂದು 2024-25 ರ ಕೇಂದ್ರ ಬಜೆಟ್ ಮಂಡಿಸುತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಕೇಂದ್ರ ಬಜೆಟ್ 2024 -25; ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ 4 ಮುಖ್ಯ ವಿಚಾರ
1) ಕೃಷಿ ಸಂಶೋಧನೆಯ ಪರಿವರ್ತನೆ - ಉತ್ಪಾದಕತೆಯನ್ನು ಹೆಚ್ಚಿಸುವ ಮತ್ತು ಹವಾಮಾನ ಸ್ಥಿತಿಸ್ಥಾಪಕ ಪ್ರಭೇದಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಲು ಕೃಷಿ ಸಂಶೋಧನಾ ಸೆಟಪ್‌ನ ಸಮಗ್ರ ವಿಮರ್ಶೆ.
2) ರಾಷ್ಟ್ರೀಯ ಸಹಕಾರ ನೀತಿ - ಸಹಕಾರಿ ಕ್ಷೇತ್ರದ ವ್ಯವಸ್ಥಿತ, ಕ್ರಮಬದ್ಧ ಮತ್ತು ಸರ್ವತೋಮುಖ ಅಭಿವೃದ್ಧಿಗಾಗಿ ರಾಷ್ಟ್ರೀಯ ಸಹಕಾರ ನೀತಿ ಸಿದ್ಧಪಡಿಸುವುದು
3ಿ) ಕೃಷಿಯಲ್ಲಿ ಸ್ವಾವಲಂಬನೆ- ಆತ್ಮನಿರ್ಭರತಾ ಉಪಕ್ರಮದ ಪ್ರಕಾರ, ಎಣ್ಣೆ ಬೀಜಗಳಾದ ಸಾಸಿವೆ, ಕಡಲೆಕಾಯಿ, ಎಳ್ಳು, ಸೋಯಾಬೀನ್ ಮತ್ತು ಸೂರ್ಯಕಾಂತಿಗಳಿಗೆ ಒತ್ತು
4) ತರಕಾರಿ ಉತ್ಪಾದನೆ ಮತ್ತು ಪೂರೈಕೆ ಜಾಲ - ತರಕಾರಿ ವಲಯದಲ್ಲಿ ತರಕಾರಿ ಉತ್ಪನ್ನಗಳ ಸಂಗ್ರಹಣೆ ಮತ್ತು ಮಾರುಕಟ್ಟೆಗಾಗಿ ತರಕಾರಿ ಪೂರೈಕೆ ಜಲಾಗಳಿಗಾಗಿ ಎಫ್‌ಪಿಒಗಳು, ಸಹಕಾರಿ ಸಂಸ್ಥೆಗಳು ಮತ್ತು ಸ್ಟಾರ್ಟ್‌ಅಪ್‌ಗಳ ಮೂಲಕ ಮಾರ್ಕೆಟಿಂಗ್ ನಡೆಸುವುದು.
ಕೇಂದ್ರ ಬಜೆಟ್ 2024; ಕೃಷಿ ಚಟುವಟಿಕೆಗೆ ಉತ್ತೇಜನ, 3 ಮುಖ್ಯ ವಿಷಯಗಳು
ನೈಸರ್ಗಿಕ ಕೃಷಿ: ಮುಂದಿನ 2 ವರ್ಷಗಳಲ್ಲಿ ಪ್ರಮಾಣೀಕರಣ ಮತ್ತು ಬ್ರ್ಯಾಂಡಿಂಗ್ ಮೂಲಕ ದೇಶಾದ್ಯಂತ 1 ಕೋಟಿ ರೈತರನ್ನು ನೈಸರ್ಗಿಕ ಕೃಷಿಗೆ ಪ್ರಾರಂಭಿಸಲಾಗುವುದು. 10,000 ಅಗತ್ಯ ಆಧಾರಿತ ಜೈವಿಕ ಇನ್‌ಪುಟ್ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಸಿಗಡಿ ಉತ್ಪಾದನೆ ಮತ್ತು ರಫ್ತು: ಸಿಗಡಿ ಸಾಕಾಣಿಕೆ, ಸಂಸ್ಕರಣೆ ಮತ್ತು ರಫ್ತಿಗೆ ನಬಾರ್ಡ್ ಮೂಲಕ ಹಣಕಾಸಿನ ನೆರವು ನೀಡಿ ಸುಗಮಗೊಳಿಸಲಾಗುತ್ತದೆ.
ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ: ರೈತರು ಮತ್ತು ಅವರ ಜಮೀನುಗಳ ವ್ಯಾಪ್ತಿಗೆ 3 ವರ್ಷಗಳಲ್ಲಿ ಡಿಜಿಲಟ್ ಸಾರ್ವಜನಿಕ ಮೂಲಸೌಕರ್ಯ ನಿರ್ಮಿಸಲಾಗುವುದು. 400 ಜಿಲ್ಲೆಗಳಲ್ಲಿ ಡಿಜಿಟಲ್ ಬೆಳೆ ಸಮೀಕ್ಷೆ ನಡೆಯಲಿದೆ. ಜನ ಸಮರ್ಥ್ ಆಧಾರಿತ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ ವಿತರಣೆ ಕೂಡ ಮಾಡಲಾಗುವುದು ಎಂದು ಕೇಂದ್ರ ಬಜೆಟ್ ಭಾಷಣದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್. ತಾಜಾ ವಿದ್ಯಮಾನ ಮತ್ತು ಬಜೆಟ್ ವಿವರಣೆ, ರಾಜಕೀಯ ವಿಶ್ಲೇಷಣೆಗಳಿಗಾಗಿ kannada.hindustantimes.com/nation-and-world ಕ್ಕೆ ಭೇಟಿ ನೀಡಿ.)