logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್ ಆಯ್ಕೆ ಬಹುತೇಕ ಖಚಿತ: ಹೃದಯಪೂರ್ವಕ ಅಭಿನಂದನೆ ಗೆಳೆಯ ಎಂದ ಪ್ರಧಾನಿ ನರೇಂದ್ರ ಮೋದಿ

ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್ ಆಯ್ಕೆ ಬಹುತೇಕ ಖಚಿತ: ಹೃದಯಪೂರ್ವಕ ಅಭಿನಂದನೆ ಗೆಳೆಯ ಎಂದ ಪ್ರಧಾನಿ ನರೇಂದ್ರ ಮೋದಿ

Umesha Bhatta P H HT Kannada

Nov 06, 2024 03:26 PM IST

google News

ಫ್ರಾನ್ಸ್‌ನಲ್ಲಿ ನಡೆದಿದ್ದ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕಾದ ಮುಂದಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಂತಸದ ಕ್ಷಣ.

    • US Election 2024 ಅಮೆರಿಕಾದ ಮುಂದಿನ ಅಧ್ಯಕ್ಷರಾಗಿ ತಮ್ಮ ಗೆಳೆಯ ಡೊನಾಲ್ಡ್‌ ಟ್ರಂಪ್‌ ಅವರು ಆಯ್ಕೆಯಾಗುವುದು ಖಚಿತವಾದ ಬೆನ್ನಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಟ್ರಂಪ್‌ ಅವರನ್ನು ಆತ್ಮೀಯವಾಗಿ ಅಭಿನಂದಿಸಿದ್ದಾರೆ.
ಫ್ರಾನ್ಸ್‌ನಲ್ಲಿ ನಡೆದಿದ್ದ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕಾದ ಮುಂದಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಂತಸದ ಕ್ಷಣ.
ಫ್ರಾನ್ಸ್‌ನಲ್ಲಿ ನಡೆದಿದ್ದ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕಾದ ಮುಂದಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಂತಸದ ಕ್ಷಣ.

us election results 2024: ಅಮೆರಿಕದ ಅಧ್ಯಕ್ಷರಾಗಿ ಭಾರತದ ಹಿತೈಷಿ ಡೊನಾಲ್ಡ್‌ ಟ್ರಂಪ್‌ ಅವರು ಆಯ್ಕೆಯಾಗುವುದು ಖಚಿತವಾಗುತ್ತಿದ್ದಂತೆ ಅವರ ದಶಕದ ಗೆಳೆಯ ಹಾಗೂ ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಡೊನಾಲ್ಡ್‌ ಟ್ರಂಪ್‌ ಅವರು ಭಾರೀ ಮುನ್ನಡೆ ಸಾಧಿಸಿ ಇನ್ನೇನು ಗೆಲುವಿನ ಹೊಸ್ತಿಲಿನಲ್ಲಿ ಇದ್ದಾರೆ ಎನ್ನುವುದು ತಿಳಿಯುತ್ತಿದ್ದಂತೆ ನರೇಂದ್ರ ಮೋದಿ ಅವರು ಟ್ರಂಪ್‌ ಅವರನ್ನು ಅಭಿನಂದಿಸಿದರು. ಸಾಮಾಜಿಕ ಮಾಧ್ಯಮ ಎಕ್ಸ್‌ ಮೂಲಕ ಟ್ರಂಪ್‌ ಅವರನ್ನು ಆತ್ಮೀಯವಾಗಿ ಅಭಿನಂದಿಸಿದ ಮೋದಿ ಅವರು ಅವರೊಂದಿಗೆ ಕೆಲವು ಛಾಯಾಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮೋದಿ ಅವರು ಅಭಿನಂದನೆ ಸಲ್ಲಿಸುತ್ತಿದ್ದಂತೆ ಮೆಚ್ಚುಗೆ ಸೂಚಿಸಿ ಇನ್ನೂ ಹಲವರು ಅಭಿನಂದನೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಟ್ರಂಪ್‌ಗೆ ಸಲ್ಲಿಸಿದ್ದಾರೆ.

ಮೋದಿ ಅಭಿನಂದನೆ ಹೀಗಿದೆ

ಹೃತ್ಪೂರ್ವಕ ಅಭಿನಂದನೆಗಳು ನನ್ನ ಸ್ನೇಹಿತ ಡೊನಾಲ್ಡ್‌ ಟ್ರಂಪ್‌. ನಿಮ್ಮ ಐತಿಹಾಸಿಕ ಚುನಾವಣಾ ವಿಜಯ ಖುಷಿ ತಂದಿದೆ. ನಿಮ್ಮ ಹಿಂದಿನ ಅವಧಿಯ ಯಶಸ್ಸಿನ ಮೇಲೆ ಇನ್ನಷ್ಟು ಪ್ರಗತಿದಾಯಕವಾಗಿ ಕೆಲಸ ಮಾಡಿ. ಈಗಾಗಲೇ ನೀವೇ ಸಹಾಯ ಹಸ್ತ ಚಾಚಿರುವಂತೆ ಭಾರತ-ಯುಎಸ್ ಸಮಗ್ರ ಜಾಗತಿಕ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸೋಣ. ನಮ್ಮ ಸಹಯೋಗವನ್ನು ಅಮೆರಿಕಾದೊಂದಿಗೆ ನವೀಕರಿಸಲು ನಾನು ಎದುರು ನೋಡುತ್ತಿದ್ದೇನೆ. ಒಟ್ಟಾಗಿ, ನಮ್ಮ ಜನರ ಸುಧಾರಣೆಗಾಗಿ ಮತ್ತು ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ಕೆಲಸ ಮಾಡೋಣ.

ಮೋದಿ ಅವರ ಈ ಅಭಿನಂದನೆಗೆ ಭಾರೀ ಮೆಚ್ಚುಗೆಯೂ ವ್ಯಕ್ತವಾಗಿದ್ದು. ಲಕ್ಷಾಂತರ ಮಂದಿ ಇದನ್ನು ಇಷ್ಟಪಟ್ಟಿದ್ದಾರೆ.

ಗಮನ ಸೆಳೆವ ಫೋಟೋಗಳು

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಡೊನಾಲ್ಡ್‌ ಟ್ರಂಪ್‌ ಅವರನ್ನು ಅಭಿನಂದಿಸಿ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌ ಜತೆಗೆ ಕೆಲವು ಫೋಟೋಗಳನ್ನೂ ಜೋಡಿಸಿದ್ದಾರೆ.

ಅದರಲ್ಲಿ ಟ್ರಂಪ್‌ ಅವರು ಭಾರತಕ್ಕೆ ಬಂದಾಗ ಅವರನ್ನು ಬರ ಮಾಡಿಕೊಂಡಿದ್ದು. ಅವರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿರುವ ಫೋಟೋವನ್ನು ಪ್ರಧಾನಿ ನರೇಂದ್ರ ಮೋದಿ ಶೇರ್‌ ಮಾಡಿದ್ದಾರೆ.

ಅದರಲ್ಲೂ ಫ್ರಾನ್ಸ್‌ನಲ್ಲಿ ನಡೆದಿದ್ದ ಶೃಂಗಸಭೆಯಲ್ಲಿ ಮೋದಿ ಹಾಗೂ ಟ್ರಂಪ್‌ ಮುಖಾ ಮುಖಿಯಾಗಿರುವುದು. ಇಬ್ಬರೂ ಚರ್ಚಿಸುತ್ತಲೇ ಕೆಲವು ವಿಷಯದಲ್ಲಿ ನಗೆಯುಕ್ಕಿಸಿರುವ ಚಿತ್ರವೂ ಗಮನ ಸೆಳಯುತ್ತಿದೆ.

ಇದಲ್ಲದೇ ಮೋದಿ ಅವರು ಅಮೆರಿಕಾಕ್ಕೆ ಹೋಗಿದ್ಧಾಗ ಅಲ್ಲಿ ಭಾರತೀಯ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡುವ ಸನ್ನಿವೇಶದಲ್ಲಿ ಟ್ರಂಪ್‌ ಜತೆಗೆ ಹೆಜ್ಜೆ ಹಾಕಿರುವುದು. ಭಾರತೀಯರತ್ತ ಕೈಬೀಸುತ್ತಾ ಬರುತ್ತಿರುವ ಚಿತ್ರವು ವೈರಲ್‌ ಆಗಿದೆ.

ದಶಕದ ಸಂಬಂಧ

ಮೋದಿ ಹಾಗೂ ಟ್ರಂಪ್‌ ನಡುವೆ ಒಂದು ದಶಕಕ್ಕೂ ಅಧಿಕ ಕಾಲದಿಂದ ನಂಟಿದೆ. ನರೇಂದ್ರ ಮೋದಿ ಅವರು 2014 ರಲ್ಲಿ ಪ್ರಧಾನಿಯಾಗಿ ಮೂರನೇ ಅವಧಿಗೂ ಮುಂದುವರೆದಿದ್ದಾರೆ.

2016ರಲ್ಲಿ ಅಮೆರಿಕಾದ ಅಧ್ಯಕ್ಷರಾಗಿ ಮೊದಲ ಬಾರಿಗೆ ಆಯ್ಕೆಯಾದ ಡೊನಾಲ್ಡ್‌ ಟ್ರಂಪ್‌ ನಂತರ ಭಾರತದೊಂದಿಗೆ ನಿಕಟ ಸಂಬಂಧ ಬೆಳೆಸಿದರು. ಅದರಲ್ಲೂ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಒಪ್ಪಂದಕ್ಕೆ ಒತ್ತು ನೀಡಲಾಯಿತು. ಟ್ರಂಪ್‌ ಭಾರತಕ್ಕೆ ಬಂದರೆ, ಮೋದಿ ಅಮೆರಿಕಾಕ್ಕೂ ಹೋಗಿ ಬಂದರು.

ಎರಡನೇ ಬಾರಿ ಟ್ರಂಪ್‌ ಸೋತರೂ ಮೋದಿ ಜತೆಗೆ ಉತ್ತಮ ಒಡನಾಟವಿತ್ತು. ಈಗ ಮತ್ತೆ ಗೆದ್ದಿರುವುದರಿಂದ ಖುಷಿಯಾದ ಪ್ರಧಾನಿ ಮೋದಿ ಮೊದಲಿಗರಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ