Kangana Ranaut: ನಾನೇನಾದ್ರೂ ಅಮೆರಿಕನ್ ಆಗಿದ್ರೆ ನನ್ನ ಆಯ್ಕೆ ಇವರಾಗಿರ್ತಿದ್ರು; ಸಂಸದೆ ಕಂಗನಾ ರನೌತ್ ನೇರ ಮಾತು
ಬಾಲಿವುಡ್ ನಟಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೆ ಕಂಗನಾ ರನೌತ್ ತಾನು ಅಮೇರಿಕದ ಪ್ರಜೆಯಾಗಿದ್ದರೆ ಯಾರಿಗೆ ಮತ ಹಾಕುತ್ತಿದ್ದೆ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ನೇರವಾಗಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಬಗ್ಗೆ ಮಾತನಾಡಿದ ಕಂಗಲಾ ರನೌತ್ ತನ್ನ ಆಯ್ಕೆ ಯಾರು ಎಂಬುದನ್ನು ತಿಳಿಸಿದ್ದಾರೆ. ಕಂಗನಾ ಭಾರತೀಯ ಪ್ರಜೆಯಾಗಿದ್ದು, ನವೆಂಬರ್ 5 ರಂದು 2024 ರ ಯುಎಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ ಇದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೂ ತನಗೆ ಅವಕಾಶ ಇದ್ದರೆ ತಾನು ಯಾರನ್ನು ಆಯ್ಕೆ ಮಾಡುತ್ತಿದ್ದೆ ಎಂಬುದನ್ನು ಬಹಿರಂಗ ಪಡಿಸಿದ್ದಾರೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಎರಡನೇ ಅವಧಿಗೆ ನಾನು ಆಯ್ಕೆ ಮಾಡುತ್ತಿದ್ದೆ ಎಂದಿದ್ದಾರೆ.
ಕಂಗನಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಟ್ರಂಪ್ ಅವರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ವರ್ಷದ ಆರಂಭದಲ್ಲಿ ಡೊನಾಲ್ಡ್ ಟ್ರಂಪ್ ಅವರ ಮೇಲೆ ನಡೆದ ಗುಂಡಿನ ದಾಳಿಯ ಚಿತ್ರವಾಗಿದ್ದು ಆ ಫೋಟೋವನ್ನು ಶೇರ್ ಮಾಡಿಕೊಂಡಿದ್ಧಾರೆ. ಆ ಪೋಟೋವನ್ನು ಶೇರ್ ಮಾಡಿ ನಾನು ಡೊನಾಲ್ಡ್ ಟ್ರಂಪ್ ಅವರಿಗೆ ಓಟ್ ಮಾಡುತ್ತಿದ್ದೆ ಎಂದು ಬರೆದುಕೊಂಡಿದ್ದಾರೆ. ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹೊಗಳಿದ್ದಾರೆ. ಆ ಘಟನೆಯ ಬಗ್ಗೆಯೂ ಬರೆದುಕೊಂಡಿದ್ದಾರೆ.
ಚುನಾವಣಾ ಫಲಿತಾಂಶಗಳ ಘೋಷಣೆಗೆ ಮುಂಚಿತವಾಗಿ ಎರಡನೇ ಅವಧಿಗೆ ಅವರನ್ನು ಯಾರನ್ನು ಆಯ್ಕೆ ಮಾಡುತ್ತಿದ್ದೆ ಎನ್ನುವುದನ್ನು ಹೇಳಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳೂ ಸಹ ಬಂದಿದೆ. ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವರು ಈ ಫೋಟೋ ಹಂಚಿಕೊಂಡಿದ್ದಾರೆ. ತಾನು ಅಮೆರಿಕದ ಪ್ರಜೆಯಾಗಿದ್ದರೆ ಟ್ರಂಪ್‌ಗೆ ಮತ ಹಾಕುತ್ತೇನೆಯೇ ಹೊರತು ಕಮಲಾ ಹ್ಯಾರಿಸ್‌ಗೆ ಅಲ್ಲ ಎಂದು ನೇರವಾಗಿ ಹೇಳಿಕೊಂಡಿದ್ದಾರೆ. ಆದರೆ ಯಾರು ಗೆದ್ದಿದ್ದಾರೆ ಎಂದು ಕಾದು ನೋಡಬೇಕಿದೆ.
ಜುಲೈ 13 ರಂದು, ಪೆನ್ಸಿಲ್ವೇನಿಯಾದಲ್ಲಿ ನಡೆದ ಪ್ರಚಾರದ ಸಂದರ್ಭದಲ್ಲಿ ಬಂದೂಕುಧಾರಿಯೊಬ್ಬ ಟ್ರಂಪ್ ಮೇಲೆ ಗುಂಡು ಹಾರಿಸಿ ಅವರನ್ನು ಕೊಲ್ಲಲು ಪ್ರಯತ್ನ ಮಾಡಿದ್ದರು. ಆದರೂ ಮತ್ತೆ ಅದೇ ಸಾರ್ವಜನಿಕ ವೇದಿಕೆಯಲ್ಲಿ ನಿಂತು ಟ್ರಂಪ್ ಮಾತನಾಡಿದ್ದರು. ಆ ಸಂದರ್ಭದಲ್ಲಿ ಅವರ ಕಿವಿಗೆ ಪೆಟ್ಟಾಗಿತ್ತು.
ಮತ ಎಣಿಕೆಯ ಫಲಿತಾಂಶ ಏನಾಗಲಿದೆ?
ಇಡೀ ವಿಶ್ವದ ಗಮನ ಸೆಳೆದಿರುವ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ 2024ರ ಮತ ಎಣಿಕೆ ಚಟುವಟಿಕೆ ಬುಧವಾರ ಬೆಳಿಗ್ಗೆಯಿಂದಲೇ ಚುರುಕುಗೊಂಡಿದೆ. ಆರಂಭಿಕ ಹಂತದಲ್ಲಿ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮುನ್ನಡೆ ಸಾಧಿಸಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯೂ ಆಗಿರುವ ಭಾರತೀಯ ಹಿನ್ನೆಲೆಯ ಕಮಲಾ ಹ್ಯಾರಿಸ್ ಹಿನ್ನಡೆಯಲ್ಲಿದ್ಧಾರೆ. ಆದರೆ ಇದುವರೆಗೆ ಸಂಪೂರ್ಣ ಫಲಿತಾಂಶ ಲಭ್ಯವಾಗಿಲ್ಲ.