logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Attack On Tigress: ಅಸ್ಸಾಂನಲ್ಲಿ ಜನರ ಮೇಲೆ ದಾಳಿ ಮಾಡಿದ ಹುಲಿಗೆ ಪ್ರತಿದಾಳಿ; ಜನರ ಏಟಿನಿಂದ ಕುರುಡಾದ 3 ವರ್ಷದ ಹುಲಿ

Attack on Tigress: ಅಸ್ಸಾಂನಲ್ಲಿ ಜನರ ಮೇಲೆ ದಾಳಿ ಮಾಡಿದ ಹುಲಿಗೆ ಪ್ರತಿದಾಳಿ; ಜನರ ಏಟಿನಿಂದ ಕುರುಡಾದ 3 ವರ್ಷದ ಹುಲಿ

Umesha Bhatta P H HT Kannada

Nov 24, 2024 01:08 PM IST

google News

ಅಸ್ಸಾಂನಲ್ಲಿ ಜನರ ದಾಳಿಗೆ ತುತ್ತಾಗಿ ಕಣ್ಣಿನ ಭಾಗಕ್ಕೆ ಏಟು ತಿಂದ ಮೂರು ವರ್ಷದ ಹೆಣ್ಣು ಹುಲಿ.

    • Attack on Tigress: ಅಸ್ಸಾಂನ ಕಾಮಾಕ್ಯ ಮೀಸಲು ಅರಣ್ಯ ಪ್ರದೇಶ ಭಾಗದಲ್ಲಿ ಹೆಣ್ಣು ಹುಲಿ ಮೇಲೆ ಗ್ರಾಮಸ್ಥರು ದಾಳಿ ಮಾಡಿದ್ದರಿಂದ ದೃಷ್ಟಿಯನ್ನೇ ಕಳೆದುಕೊಂಡ ಘಟನೆ ವರದಿಯಾಗಿದೆ.
ಅಸ್ಸಾಂನಲ್ಲಿ ಜನರ ದಾಳಿಗೆ ತುತ್ತಾಗಿ ಕಣ್ಣಿನ ಭಾಗಕ್ಕೆ ಏಟು ತಿಂದ ಮೂರು ವರ್ಷದ ಹೆಣ್ಣು ಹುಲಿ.
ಅಸ್ಸಾಂನಲ್ಲಿ ಜನರ ದಾಳಿಗೆ ತುತ್ತಾಗಿ ಕಣ್ಣಿನ ಭಾಗಕ್ಕೆ ಏಟು ತಿಂದ ಮೂರು ವರ್ಷದ ಹೆಣ್ಣು ಹುಲಿ.

ದೆಹಲಿ: ಕಾಡಿನಿಂದ ಹೊರ ಬಂದು ಜನರ ಮೇಲೆ ದಾಳಿ ಮಾಡುತ್ತಿದ್ದ ಮೂರು ವರ್ಷದ ಹೆಣ್ಣು ಹುಲಿ ಮೇಲೆ ಜನರು ಆಕ್ರೋಶಗೊಂಡ ಮರು ದಾಳಿ ಮಾಡಿದ್ದರಿಂದ ಹುಲಿ ಕಣ್ಣು ಕಳೆದುಕೊಂಡಿದೆ. ತೀವ್ರವಾಗಿ ಗಾಯಗೊಂಡಿರುವ ಹುಲಿಯನ್ನು ಸೆರೆ ಹಿಡಿದು ಚಿಕಿತ್ಸೆಗೆ ಒಳಪಡಿಸಲಾಗಿದೆ. ಹುಲಿ ದೇಹದ ಭಾಗಗಳಿಗೆ ಏಟು ಬಿದ್ದಿದೆ. ಅಲ್ಲದೇ ಕಣ್ಣಿನ ಭಾಗಕ್ಕೂ ಭಾರೀ ಗಾತ್ರದ ಕೋಲುಗಳಿಂದ ಹೊಡೆದ ಪರಿಣಾಮವಾಗಿ ಏಟು ಬಿದ್ದಿದೆ. ಬಹುತೇಕ ಹುಲಿ ದೃಷ್ಟಿ ಕಳೆದುಕೊಂಡಿದೆ. ಇದರಿಂದ ಹುಲಿಯನ್ನು ಮೃಗಾಲಯ ಇಲ್ಲವೇ ಪುನರ್ವಸತಿ ಕೇಂದ್ರದಲ್ಲಿ ಇರಿಸಲು ಯೋಜಿಸಲಾಗುತ್ತಿದೆ. ಈ ಘಟನೆ ನಡೆದಿರುವುದು ಈಶಾನ್ಯ ರಾಜ್ಯಗಳಲ್ಲಿ ಒಂದಾದ ಅಸ್ಸಾಂನಲ್ಲಿ.

ಅಸ್ಸಾಂನ ನಾಗಾಂವ್ ಜಿಲ್ಲೆಯ ಕಾಮಾಕ್ಯ ಮೀಸಲು ಅರಣ್ಯದಿಂದ ಹೊರಬಂದ ಮೂರು ವರ್ಷದ ರಾಯಲ್ ಬಂಗಾಳ ಹುಲಿಯ ಮೇಲೆ ನೂರಾರು ಗ್ರಾಮಸ್ಥರು ದಾಳಿ ನಡೆಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ (ಟಿಒಐ) ವರದಿಯ ಪ್ರಕಾರ, ದಾಳಿಯು ಅಸಹಾಯಕ ಪ್ರಾಣಿಯನ್ನು ತೀವ್ರವಾಗಿ ಗಾಯಗೊಳಿಸಿದೆ ಮತ್ತು ಬಹುತೇಕ ಕುರುಡರನ್ನಾಗಿ ಮಾಡಿದೆ, ಇದರಿಂದಾಗಿ ಹುಲಿ ತನ್ನ ಉಳಿದ ಜೀವನವನ್ನು ಸೆರೆಯಲ್ಲಿ ಕಳೆಯಬೇಕಾಗಬಹುದು ಎಂದು ಪಶುವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಆಗಿದ್ದಾದರೂ ಏನು

ನಾಗಾಂವ್‌ ಜಿಲ್ಲೆ ಅರಣ್ಯದಿಂದ ಸುತ್ತುವರೆದಿದ್ದು ಈ ಭಾಗದಲ್ಲಿ ವನ್ಯಜೀವಿ ಮಾನವ ಸಂಘರ್ಷ ಪ್ರಕರಣಗಳು ಅಧಿಕವಾಗಿವೆ. ಮೂರು ವರ್ಷದ ಹುಲಿಯು ಆರು ತಿಂಗಳಿನಿಂದ ಈ ಭಾಗದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಅರಣ್ಯದಂಚಿನ ಹಳ್ಳಿಗಳಲ್ಲಿ ಹಲವರು ನೋಡಿದ್ದರು. ಆದರೆ ಹುಲಿ ಯಾರ ಮೇಲೂ ದಾಳಿ ಮಾಡಿರಲಿಲ್ಲ. ಹುಲಿ ದಾಳಿಯ ಕೆಲವು ದಿನಗಳ ಮೊದಲು ಈ ಪ್ರದೇಶದಲ್ಲಿ ಪರಿಚಿತವಾಗಿತ್ತು, ಕೆಲವು ಗ್ರಾಮಸ್ಥರು ಇದನ್ನು "ಸೌಮ್ಯ ದೈತ್ಯ" ಎಂದು ಉಲ್ಲೇಖಿಸುತ್ತಿದ್ದರು.

ಈಗ ದಾಳಿ

ನವೆಂಬರ್‌ ತಿಂಗಳಿನಲ್ಲಿ ಇದೇ ಹುಲಿ ಕೆಲವು ಭಾಗಗಳಲ್ಲಿ ಜಾನುವಾರುಗಳ ಮೇಲೆ ದಾಳಿ ಮಾಡಿದ ಮಾಹಿತಿ ಬಂದಿತ್ತು. ಅರಣ್ಯ ಇಲಾಖೆಯೂ ಹುಲಿಯನ್ನು ಕಾಡಿಗಟ್ಟಲು ಪ್ರಯತ್ನಿಸಿದ್ದರೂ ಆಗಿರಲಿಲ್ಲ. ಮೂರು ದಿನದ ಹಿಂದೆ ವಸತಿ ಪ್ರದೇಶಗಳಲ್ಲೂ ಇದೇ ಹುಲಿ ಕಾಣಿಸಿಕೊಂಡಿತ್ತು. ಈ ವೇಳೆ ಸ್ಥಳೀಯರು ಆಕ್ರೋಶಗೊಂಡ ಹುಲಿಯ ಮೇಲೆ ದಾಳಿ ಮಾಡಲು ಯತ್ನಿಸಿದರೂ ತಪ್ಪಿಸಿಕೊಂಡರೂ ಬಿಡದೇ ಅಟ್ಟಾಡಿಸಿದ್ದರು. ಜನರಿಂದ ಏಟು ತಿಂದ ಹುಲಿ ತಪ್ಪಿಸಿಕೊಂಡಿತ್ತು.

ಹುಲಿ ಜೀವಕ್ಕೆ ಅಪಾಯವಿದೆ ಎಂದು ಅರಿತ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ಸೆರೆ ಹಿಡಿಯಲು ಸತತ ಕಾರ್ಯಾಚರಣೆ ನಡೆಸಿದ್ದರು. ಗ್ರಾಮಸ್ಥರು ಕಲ್ಲುಗಳು ಮತ್ತು ಕೋಲುಗಳನ್ನು ಬಳಸಿ ನಡೆಸಿದ ದಾಳಿಯು ಎಷ್ಟು ಹಿಂಸಾತ್ಮಕವಾಗಿತ್ತೆಂದರೆ, ಹುಲಿ ತಪ್ಪಿಸಿಕೊಳ್ಳುವ ಹತಾಶ ಪ್ರಯತ್ನದಲ್ಲಿ ನದಿಗೆ ಹಾರಿತು. ನಂತರ ಅದನ್ನು ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಕಾಜಿರಂಗದ ವನ್ಯಜೀವಿ ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರಕ್ಕೆ (CWRC) ಸಾಗಿಸಲಾಯಿತು.ಅತಿಯಾದ ಕ್ರೌರ್ಯದ ದಾಳಿಯಹೊರತಾಗಿಯೂ, ಹುಲಿಯು ಬದುಕುಳಿದಿತ್ತು. ಅಂತಿಮವಾಗಿ ಸುಮಾರು 17 ಗಂಟೆಗಳ ನಂತರ ಅರಣ್ಯಾಧಿಕಾರಿಗಳು ರಕ್ಷಿಸಿದರು.

ಪ್ರವಾಹ ಬಳಿಕ ದರ್ಶನ

ಈ ಹುಲಿಯು ಗ್ರಾಮಸ್ಥರಿಗೆ ಅಥವಾ ಅವರ ಜಾನುವಾರುಗಳಿಗೆ ಯಾವುದೇ ಅಪಾಯವನ್ನುಂಟು ಮಾಡಿಲ್ಲ. ಆದಾಗ್ಯೂ, ಮಾನವ ವಸಾಹತುಗಳ ಬಳಿ, ವಿಶೇಷವಾಗಿ ಜುಲೈ ಪ್ರವಾಹದ ನಂತರ ಅದರ ನಿರಂತರ ಚಲನೆಯು ಸ್ಥಳೀಯ ಜನರಲ್ಲಿ ಭಯವನ್ನು ಹುಟ್ಟುಹಾಕಿದೆ. ಪ್ರವಾಹದ ನಂತರ, ಕಂದಾಯ ಗ್ರಾಮಗಳ ಕಡೆಗೆ ಬೀದಿ ಹುಲಿಗಳ ಚಲನೆ ಹೆಚ್ಚಾಗಿದೆ, ಇದು ಉದ್ವಿಗ್ನತೆಯನ್ನು ಹೆಚ್ಚಿಸಿದೆ ಎಂದುವಲಯ ಅರಣ್ಯಾಧಿಕಾರಿ ಬಿಭೂತಿ ಮಜುಂದಾರ್ ವಿವರಿಸಿದರು.

ಈ ನಡುವೆ ಹುಲಿಗೆ ಚಿಕಿತ್ಸೆ ನೀಡುವ ವೇಳೆ ಕಣ್ಣಿಗೆ ಗಾಯವಾಗಿರುವುದು ಕಂಡು ಬಂದಿದೆ. ರಾಯಲ್‌ ಬೆಂಗಾಲ್‌ ಹುಲಿ ದೃಷ್ಟಿದೋಷ ಉಂಟಾಗಿದೆ. ಹುಲಿ ಮೇಲೆ ದಾಳಿ ಮಾಡಿದ ಹಲವರ ವಿರುದ್ದ ಮೊಕದ್ದಮೆ ದಾಖಲಾಗಿದ್ದು, ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ.

ಹುಲಿಯ ಎರಡೂ ಕಣ್ಣುಗಳಿಗೆ ತೀವ್ರ ಹಾನಿಯಾಗಿದೆ ಎಂದು ಸಿಡಬ್ಲ್ಯೂಆರ್ಸಿಯ ಉಸ್ತುವಾರಿ ಡಾ.ಭಾಸ್ಕರ್ ಚೌಧರಿ ದೃಢಪಡಿಸಿದ್ದಾರೆ. ಎಡಗಣ್ಣಿಗೆ ಸಂಪೂರ್ಣವಾಗಿ ಹಾನಿಯಾಗಿದೆ ಎಂದು ತೋರುತ್ತದೆ. ಇದಲ್ಲದೆ, ಅದರ ತಲೆ ಮತ್ತು ಆಂತರಿಕ ಗಾಯಗಳಾಗಿವೆ" ಎಂದು ಅವರು ಹೇಳಿದರು. ಕಣ್ಣಿನ ಗಾಯಗಳು ಸುಧಾರಿಸದಿದ್ದರೆ, ಪ್ರಾಣಿಯನ್ನು ಮತ್ತೆ ಕಾಡಿಗೆ ಬಿಡುವುದು ಅಸಾಧ್ಯ ಎಂದು ಡಾ.ಚೌಧರಿ ಹೇಳುತ್ತಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ