Zoos Of Karnataka ಕರ್ನಾಟಕದಲ್ಲಿ ನೀವು ಕುಟುಂಬ ಸಮೇತರಾಗಿ ಭೇಟಿ ನೀಡಬಹುದಾದ 10 ಮೃಗಾಲಯಗಳು ಯಾವುದು
- ಕರ್ನಾಟಕದಲ್ಲಿರುವುದು 10 ಮೃಗಾಲಯಗಳು. ಅದರಲ್ಲಿ ಮೈಸೂರು, ಬೆಂಗಳೂರು, ಹಂಪಿ ಮೃಗಾಲಯ ದೊಡ್ಡವು. ಉಳಿದವೂ ಈಗ ಬದಲಾಗಿವೆ. ಮಂಗಳೂರು ಮೃಗಾಲಯ ಮಾತ್ರ ಟ್ರಸ್ಟ್ ಹಿಡಿತದಲ್ಲಿದ್ದರೆ, ಉಳಿದವು ಕರ್ನಾಟಕ ಮೃಗಾಲಯ ಪ್ರಾಧಿಕಾರ ನಿರ್ವಹಣೆಯಲ್ಲಿವೆ. ಆಯಾ ಊರಿಗೆ ಪ್ರವಾಸ ಹೋದಾಗ ಮೃಗಾಲಯಕ್ಕೂ ಕುಟುಂಬದೊಂದಿಗೆ ಭೇಟಿ ನೀಡಿ ಬನ್ನಿ. ಇವುಗಳ ಮಾಹಿತಿ ಇಲ್ಲಿದೆ.
- ಕರ್ನಾಟಕದಲ್ಲಿರುವುದು 10 ಮೃಗಾಲಯಗಳು. ಅದರಲ್ಲಿ ಮೈಸೂರು, ಬೆಂಗಳೂರು, ಹಂಪಿ ಮೃಗಾಲಯ ದೊಡ್ಡವು. ಉಳಿದವೂ ಈಗ ಬದಲಾಗಿವೆ. ಮಂಗಳೂರು ಮೃಗಾಲಯ ಮಾತ್ರ ಟ್ರಸ್ಟ್ ಹಿಡಿತದಲ್ಲಿದ್ದರೆ, ಉಳಿದವು ಕರ್ನಾಟಕ ಮೃಗಾಲಯ ಪ್ರಾಧಿಕಾರ ನಿರ್ವಹಣೆಯಲ್ಲಿವೆ. ಆಯಾ ಊರಿಗೆ ಪ್ರವಾಸ ಹೋದಾಗ ಮೃಗಾಲಯಕ್ಕೂ ಕುಟುಂಬದೊಂದಿಗೆ ಭೇಟಿ ನೀಡಿ ಬನ್ನಿ. ಇವುಗಳ ಮಾಹಿತಿ ಇಲ್ಲಿದೆ.
(1 / 10)
ಮೈಸೂರು ಚಾಮರಾಜೇಂದ್ರ ಮೃಗಾಲಯ-ಕರ್ನಾಟಕ ಅತ್ಯಂತ ಹಳೆಯ ಮೃಗಾಲಯ. ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್ ಅನ್ನು 1892 ರಲ್ಲಿ ಸ್ಥಾಪಿಸಲಾಯಿತು. ಚಾಮರಾಜೇಂದ್ರ ಒಡೆಯರ್ ಅವರ ಆಸಕ್ತಿಯಿಂದ ಪ್ರಾಣಿ ಮನೆ ಈಗ ವಿಶ್ವದ ಪ್ರಮುಖ ಮೃಗಾಲಯವಾಗಿ ಮಾರ್ಪಟ್ಟಿದೆ. ಬಗೆಬಗೆಯ ಪ್ರಾಣಿ, ಪಕ್ಷಿಗಳ ಸಂಗ್ರಹಾಲಯವಿದು. ಮೈಸೂರಿನ ಹೃದಯ ಭಾಗದಲ್ಲಿರುವ 117.41 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿರುವ ಇಲ್ಲಿ ಜಿರಾಫೆ, ಚಿಂಪಾಂಜಿ ವಿಶೇಷ ಆಕರ್ಷಣೆ. ಪಕ್ಕದಲ್ಲೇ ಕಾರಂಜಿಕೆರೆಯೂ ಇದ್ದು, ಇದೂ ಕೂಡ ವಿಶೇಷ ಆಕರ್ಷಣೆಯೇ. (pic: purviraj)
(2 / 10)
ಬೆಂಗಳೂರು ಬನ್ನೇರಘಟ್ಟ ಮೃಗಾಲಯ-ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನವು ನಗರದಿಂದ ದಕ್ಷಿಣಕ್ಕೆ ಸುಮಾರು 22 ಕಿಮೀ ದೂರದಲ್ಲಿದೆ. 732 ಹೆಕ್ಟೇರ್‌ಗಳನ್ನು ಒಳಗೊಂಡಿರುವ ವಿಶಾಲ ಉದ್ಯಾನ. ಸಿಂಹ, ಹುಲಿ, ಚಿರತೆ ಸಫಾರಿಯೂ ಬನ್ನೇರಘಟ್ಟ ಉದ್ಯಾನದಲ್ಲಿದೆ. ಈಗಲೂ ಅರಣ್ಯದ ರೀತಿಯಲ್ಲಿಯೇ ಭೂ ಪ್ರದೇಶವನ್ನು ಉಳಿಸಿಕೊಂಡು ಅವುಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಭಿನ್ನ ಸಫಾರಿಯೊಂದಿಗೆ ಒಂದು ದಿನ ಇಲ್ಲಿ ಕಳೆಯಲು ಉತ್ತಮ ತಾಣ.
(3 / 10)
ಮಂಗಳೂರು ಡಾ.ಶಿವರಾಮ ಕಾರಂತಪಿಲಿಕುಳ ಉದ್ಯಾನ-ಮಂಗಳೂರಿನ ಶಿವರಾಮ ಕಾರಂತ ಪಿಲಿಕುಳ ಉದ್ಯಾನವು ಈಗಲೂ ಪ್ರತ್ಯೇಕ ಟ್ರಸ್ಟ್‌ನ ಅಡಿ ಕಾರ್ಯನಿರ್ವಹಿಸುತ್ತದೆ. ಮಂಗಳೂರು ನಗರದೊಳಗಿನ ಉದ್ಯಾನದಲ್ಲಿ ಹುಲಿ ಸಹಿತ ಹಲವು ಪ್ರಾಣಿಗಳು ಇಲ್ಲಿನ ಅಕರ್ಷಣೆ. ಪಿಲಿಕುಳದಲ್ಲಿ ಮಹತ್ವದ ಜೈವಿಕ ಉದ್ಯಾನವನವನ್ನು ಸ್ಥಾಪಿಸಲಾಗಿದ್ದು, ಪಶ್ಚಿಮ ಘಟ್ಟಗಳ ವನ್ಯಜೀವಿ ಪ್ರಭೇದಗಳ ಮೇಲೆ ಹೆಚ್ಚಿನ ಗಮನವನ್ನು ಹೊಂದಿದೆ. ಉದ್ಯಾನವನವು 82 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿದೆ.
(4 / 10)
ಹಂಪಿ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯ-ವಿಜಯನಗರ ಜಿಲ್ಲೆಯ ಹಂಪಿಗೆ ಹೊಂದಿಕೊಂಡಂತೆ ಕಮಲಾಪುರದಲ್ಲಿದೆ ಉತ್ತರ ಕರ್ನಾಟಕದ ಅತ್ಯಂತ ವಿಶಾಲ ಮೃಗಾಲಯ. ಅಟಲ್ ಬಿಹಾರಿ ವಾಜಪೇಯಿ ಮೃಗಾಲಯವು ಕಮಲಾಪುರದಿಂದ 5 ಕಿಮೀ ದೂರದಲ್ಲಿರುವ ಬಿಳಿಕಲ್ ಪಶ್ಚಿಮ ಮೀಸಲು ಅರಣ್ಯ ಪ್ರದೇಶದಲ್ಲಿದೆ ಏಳು ವರ್ಷದ ಹಿಂದೆ ಉದ್ಘಾಟನೆಗೊಂಡಿರುವ ಈ ಮೃಗಾಲಯವನ್ನು 141.59 ಹೆಕ್ಟೇರ್ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ. ಇಲ್ಲಿ ಜಿರಾಫೆ, ಹುಲಿ ಸಹಿತ ಪ್ರಮುಖ ಪ್ರಾಣಿಗಳಿವೆ. ಮೃಗಾಲಯಕ್ಕಾಗಿ ಉತ್ತರ ಕರ್ನಾಟಕ ಭಾಗದವರು ಮೈಸೂರಿಗೆ ಬರುವ ಅಗತ್ಯವೇ ಇಲ್ಲ.
(5 / 10)
ಶಿವಮೊಗ್ಗ ತ್ಯಾವರೇ ಕೊಪ್ಪ ಹುಲಿ ಸಿಂಹಧಾಮ-ಮಲೆನಾಡು ಭಾಗದ ಪ್ರಮುಖ ಪ್ರವಾಸಿ ಆಕರ್ಷಣೆ ತ್ಯಾವರೇ ಕೊಪ್ಪ. ತ್ಯಾವರೆಕೊಪ್ಪ ಸಿಂಹ ಮತ್ತು ಹುಲಿ ಸಫಾರಿ ದಶಕಗಳಿಂದ ಜನಪ್ರಿಯ. ಶಿವಮೊಗ್ಗದಿಂದ ಸಾಗರಕ್ಕೆ ಹೋಗುವ ಮಾರ್ಗದ 10 ಕಿಮೀ ದೂರದಲ್ಲಿ 250 ಹೆಕ್ಟೇರ್ ವಿಸ್ತೀರ್ಣ ಹೊಂದಿರುವ ವಿಶಾಲ ಮೃಗಾಲಯವಿದು. ಸಫಾರಿಯಲ್ಲಿ 4 ಸಿಂಹಗಳು, 7 ಹುಲಿಗಳಿವೆ. ಕಾಡಿನ ರೂಪದಲ್ಲಿಯೇ ಇರುವ ಇಲ್ಲಿ ಸಫಾರಿ ಮಾಡುವುದೇ ಚೆಂದ.
(6 / 10)
ಗದಗ ಬಿಂಕದಕಟ್ಟಿ ಮೃಗಾಲಯ-ಉತ್ತರ ಕರ್ನಾಟಕದ ಮತ್ತೊಂದು ಪ್ರಮುಖ ಮೃಗಾಲಯ. ಹುಬ್ಬಳ್ಳಿ- ಬಳ್ಳಾರಿ ಹೆದ್ದಾರಿಯ ಗದಗ ನಗರದ ಹೊರ ವಲಯದಲ್ಲಿರುವ ಬಿಂಕದಕಟ್ಟಿ ಮಿನಿ ಮೃಗಾಲಯವನ್ನು 1972 ರಲ್ಲಿ ಸ್ಥಾಪಿಸಲಾಯಿತು, ಮಿನಿ ಮೃಗಾಲಯದ ವಿಸ್ತೀರ್ಣ 16.01 ಹೆಕ್ಟೇರ್. ಮೊದಲೆಲ್ಲಾ ಸಣ್ಣ ಪುಟ್ಟ ಪ್ರಾಣಿ, ಪಕ್ಷಿ ಬಿಟ್ಟರೆ ಇಲ್ಲಿ ಆಕರ್ಷಣೆಯೇ ಇರಲಿಲ್ಲ. ಈಗ ಗದಗ ಮೃಗಾಲಯದಲ್ಲಿ ಹುಲಿ ಕೂಡ ಇದೆ. ಇದನ್ನು ನಾಲ್ಕೈದು ವರ್ಷದ ಹಿಂದೆ ಅಭಿವೃದ್ದಿಪಡಿಸಿ ಪ್ರವಾಸಿ ಸ್ನೇಹಿಯಾಗಿ ರೂಪಿಸಲಾಗಿದೆ.
(7 / 10)
ಚಿತ್ರದುರ್ಗ ಅಡು ಮಲ್ಲೇಶ್ವರ ಮೃಗಾಲಯ-ಚಿತ್ರದುರ್ಗದ ಆಡುಮಲ್ಲೇಶ್ವರ ಮಿನಿ ಮೃಗಾಲಯವನ್ನು 1987 ರಲ್ಲಿ ಸ್ಥಾಪಿಸಲಾಯಿತು. ಅದರ ಒಟ್ಟು ವಿಸ್ತೀರ್ಣ 8.5 ಹೆಕ್ಟೇರ್. ಚಿತ್ರದುರ್ಗ ದ ಐತಿಹಾಸಿಕ ಕೋಟೆ ಸಮೀಪದಲ್ಲಿಯೇ ಮೃಗಾಲಯವಿದೆ. ಇಲ್ಲಿಗೂ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಕರಡಿ ಸಹಿತ ಹಲವು ಬಗೆಯ ಪ್ರಾಣಿಗಳು ಇಲ್ಲಿನ ವಿಶೇಷ.
(8 / 10)
ಬೆಳಗಾವಿ ಕಿತ್ತೂರು ರಾಣಿ ಚನ್ನಮ್ಮ ಮೃಗಾಲಯ -ಬೆಳಗಾವಿಯ ಮಿನಿ ಮೃಗಾಲಯ ಎಂದು ಕರೆಯಲ್ಪಡುವ ಕಿತ್ತೂರು ರಾಣಿ ಚೆನ್ನಮ್ಮ ನಿಸರ್ಗಧಾಮವನ್ನು 1989 ರಲ್ಲಿ ಭೂತ ರಾಮನಹಟ್ಟಿಯಲ್ಲಿ ಸ್ಥಾಪಿಸಲಾಯಿತು. ಬೆಳಗಾವಿ ನಗರದಿಂದ 12 ಕಿಮೀ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ 31.68 ಹೆಕ್ಟೇರ್ ಪ್ರದೇಶದಲ್ಲಿದೆ. ಈ ಮೃಗಾಲಯವನ್ನೂ ಅಭಿವೃದ್ದಿಪಡಿಸುವ ಚಟುವಟಿಕೆಗಳು ಶುರುವಾಗಿವೆ.
(9 / 10)
ದಾವಣಗೆರೆ ಇಂದಿರಾ ಪ್ರಿಯದರ್ಶನಿ ಮೃಗಾಲಯ-ಮಧ್ಯ ಕರ್ನಾಟಕದ ದಾವಣಗೆರೆಗೆ ಹೊಂದಿಕೊಂಡಿರುವ ಮೃಗಾಲಯವಿದು. ಮಿನಿ ಮೃಗಾಲಯ ಇಂದಿರಾ ಪ್ರಿಯದರ್ಶಿನಿ ಪ್ರಾಣಿ ಸಂಗ್ರಹಾಲಯವನ್ನು ದಾವಣಗೆರೆಯಿಂದ ಬೆಂಗಳೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿ ನಂ.4 ರ ಪಕ್ಕದಲ್ಲಿರುವ ಆನಗೋಡಿನಲ್ಲಿ 1993 ರಲ್ಲಿ 20 ಹೆಕ್ಟೇರ್ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ. ಇದು ದಾವಣಗೆರೆ ನಗರದಿಂದ ಸುಮಾರು 18 ಕಿಮೀ ದೂರದಲ್ಲಿದ್ದು, ವಿಭಿನ್ನ ಪ್ರಾಣಿಗಳ ಸಂಗ್ರಹದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಇತರ ಗ್ಯಾಲರಿಗಳು